KSRTC New Bus: ಶಬರಿಮಲೆಗೆ ಹೊಸ ವೊಲ್ವೋ ಬಸ್ ವ್ಯವಸ್ಥೆ, ಟಿಕೆಟ್ ದರ, ನಿಲ್ದಾಣಗಳು
ಬೆಂಗಳೂರು, ನವೆಂಬರ್ 13: ಕರ್ನಾಟಕದ ಪ್ರಯಾಣಿಕರಿಗೆ ಹಾಗೂ ಕೇರಳ ರಾಜ್ಯ ಶಬರಿಮಲೆಗೆ ಪ್ರತಿ ವರ್ಷ ತೆರಳುವ ಭಕ್ತರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಖುಷಿ ಸುದ್ದಿ ನೀಡಿದೆ. ರಾಜ್ಯ ರಾಜಧಾನಿ ಬೆಂಗಳೂರಿನಿಂದ ಶಬರಿಮಲೆಗೆ ಕೆಎಸ್‌ಆರ್‌ಟಿಸಿಯಿಂದ ಹೊಸ ವೋಲ್ವೋ ಬಸ್ ಸೇವೆ ಕಾರ್ಯಾಚರಣೆ ನಡೆಸಲಿದೆ. ಬಸ್ ಸೇವೆ, ದಿನಾಂಕ, ನಿಲ್ದಾಣ ಹಾಗೂ ಮಾರ್ಗಗಳ ಮಾಹಿತಿ ಇಲ್ಲಿದೆ.
ಬೆಂಗಳೂರಿನಿಂದ ನೇರವಾಗಿ ಪಂಪಾ, ಶಬರಿಮಲೆ ಮಾರ್ಗವಾಗಿ ನೀಲಕ್ಕಲ್‌ವರೆಗೆ ಈ ಕೆಎಸ್‌ಆರ್‌ಟಿಸಿ ಬಸ್ ಸಂಚರಿಸಲಿದೆ. ನವೆಂಬರ್ 29ರಂದು ಈ ಬಸ್ ಸೇವೆ ನೀಡಲಿದೆ. ರಾಜ್ಯದಲ್ಲಿ ಇದೇ ಮೊದಲ ಭಾರಿಗೆ ಹೊಸದಾಗಿ ಬೆಂಗೂರಿನಿಂದ ಶಬರಿಮಲೆಗೆ ಬಸ್ ಸೌಲಭ್ಯ ಕಲ್ಪಿಸಲಾಗಿದೆ ಎನ್ನಲಾಗಿದೆ.

ಪ್ರಯಾಣಿಕರು ನವೆಂಬರ್ ನವೆಂಬರ್ 29ರಂದು ಶಾಂತಿನಗರ ಬಸ್‌ನಿಲ್ದಾಣದಿಂದ ಮಧ್ಯಾಹ್ನ 01.50 ಗಂಟೆಗೆ ಪ್ರಯಾಣ ಆರಂಭಿಸುತ್ತದೆ. ನೀಲಕ್ಕಲ್ (ಪಂಪಾ, ಶಬರಿಮಲೆಗೆ) ಅದೇ ದಿನ ಸಂಜೆ 06.45ಕ್ಕೆ ತಲುಪಲಿದೆ. ಇದಾದ ನಂತರ ಮರಳಿ ಅಲ್ಲಿಂದ ಅದೇ ದಿನ ಸಂಜೆ 06 ಗಂಟೆಗೆ ಬಿಟ್ಟು, ಮಳೆ ರಾತ್ರಿ 10 ಗಂಟೆಗೆ ತಲುಪಲಿದೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ..
ಬೆಂಗಳೂರು-ಶಬರಿಮಲೆ ಬಸ್ ಟಿಕೆಟ್ ದರ 1700/- ಎಂದು KSRTC ಮಾಹಿತಿ ನೀಡಿದೆ. ಈ ಬಸ್‌ವ್ಯವಸ್ಥೆಯಿಂದ ಶಬರಿಮಲೆಗೆ ಮಂಡಲ ಪೂಜೆಗೆ ತೆರಳುವ ಮಾಲಾಧಾರಿಗಳಿಗೆ ಅನುಕೂಲವಾಗಲಿದೆ.
ಶಬರಿಮಲೆಗೆ ಮೂರು ತಿಂಗಳು ರೈಲು ಸಂಚಾರ
ಇನ್ನೂ ಕರ್ನಾಟಕ ಸಾರಿಗೆ ಇಲಾಖೆ ಮಾತ್ರವಲ್ಲದೇ, ನೈಋತ್ಯ ರೈಲ್ವೆಯು ಸಹ ಮಾಲೆ ಹಾಕುವ ಭಕ್ತಾಧಿಗಳು ಸೇರಿದಂತೆ ಶಬರಿಮಲೆಗೆ ದರ್ಶನಕ್ಕೆ ತೆರಳುವವರನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಮೂರು ತಿಂಗಳ ವಿಶೇಷ ರೈಲುಗಳನ್ನು ಓಡಿಸಲಿದೆ. ಪ್ರತಿ ವಾರಕ್ಕೆ ಒಂದರಂತೆ ಸಾಪ್ತಾಹಿಕ ರೈಲು ಬೆಂಗಳೂರಿನ ಸರ್.ಎಂ.ವಿಶ್ವೇಶ್ವರಯ್ಯ ನಿಲ್ದಾಣದಿಂದ ತೆಳಲಿದೆ.
ಬೆಂಗಳೂರಿನಿಂದ ಕೇರಳದ ಕೊಚುವೆಲ್ಲಿ ನಿಲ್ದಾಣಕ್ಕೆ ಮೂರು ತಿಂಗಳಲ್ಲಿ ಎರಡು ದಿಕ್ಕಿನಲ್ಲಿ ಒಟ್ಟು 24 ಟ್ರಿಪ್‌ಗಳನ್ನು ಹೊಡೆಯಲಿದೆ. ಪ್ರಯಾಣಿಕರು ಬೆಂಗಳೂರು-ಕೊಚುವೆಲ್ಲಿ ಎಕ್ಸ್‌ಪ್ರೆಸ್ ರೈಲುಗಳು (ಸಂಖ್ಯೆ 06083/06084) ಸಂಚರಿಸಲಿವೆ ಎಂದು ನೈಋತ್ಯ ರೈಲ್ವೆಯು ಪ್ರಕಟಣೆಯಲ್ಲಿ ತಿಳಿಸಿದೆ.












Click it and Unblock the Notifications