KSRTC: ನಿಗಮದಿಂದ 20 ಬೊಲೆರೋ ವಾಹನ ಪರಿಚಯ, ಅವುಗಳದ್ದೇನು ಕೆಲಸ?

ಬೆಂಗಳೂರು, ಡಿಸೆಂಬರ್ 22: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KARTC) ವ್ಯಾಪ್ತಿಯಲ್ಲಿ ಉತ್ತಮ ಕಾರ್ಯಾಚರಣೆಗಾಗಿ, ಅಪಘಾತಗಳ ಸಂದರ್ಭದಲ್ಲಿ ತುರ್ತು ಸ್ಪಂದನೆಗಾಗಿ ಮತ್ತು ಬ್ಲಾಕ್ ಸ್ಪಾಟ್‌ಗಳ ಬಗ್ಗೆ ನೈಜ ಸಮಯದ ಎಚ್ಚರಿಕೆ ನೀಡಲು ಸಾರಿಗೆ ಇಲಾಖೆ 20 ಬೊಲೆರೋ ವಾಹನಗಳನ್ನು ರಾಜ್ಯಕ್ಕೆ ಪರಿಚಯಿಸಿದೆ.

ನಿಗಮ ವ್ಯಾಪ್ತಿಯ ಅಪಘಾತ ಪರಿಹಾರ ನಿಧಿಯಿಂದ ಹಣ ಪಡೆದಿರುವ ಈ ವಾಹನಗಳಿಗೆ ನಿಗಮದ ಅಧ್ಯಕ್ಷ ಎಂ.ಚಂದ್ರಪ್ಪ ಅವರು ಇತ್ತಿಚೆಗೆ ಚಾಲನೆ ನೀಡಿದರು. ಬಸ್‌ಗಳು ಓಡಾಡುವಾಗ ಅಹಿತಕರ ಘಟನೆಗಳು ನಡೆದರೆ ಅಪಘಾತ ಸಂಭವಿಸಿದ ಸ್ಥಳಗಳಿಗೆ ತ್ವರಿತವಾಗಿ ತಲುಪಲು ಸಾಧ್ಯವಾಗುತ್ತದೆ.

 KSRTC Introduced 20 Bolero Vehicle for Driver Safety, Other Operations under KSRTC

ಕೆಎಸ್‌ಆರ್‌ಟಿಸಿ ವ್ಯಾಪ್ತಿಯಲ್ಲಿ ಅಪಘಾತ ಪೀಡಿತ ಸ್ಥಳಗಳ ಬಗ್ಗೆ ಚಾಲಕರಿಕೆ ಎಚ್ಚರಿಕೆ ತಿಳಿಸಲು ಸಹ ಈ ಬೊಲೆರೋ ವಾಹನಗಳನ್ನು ಬಳಕೆ ಮಾಡಲಾಗುತ್ತದೆ ಎಂದು ಚಂದ್ರಪ್ಪ ಅವರು ಮಾಹಿತಿ ನೀಡಿದರು.

ಇದೇ ಉದ್ದೇಶಕ್ಕಾಗಿ ಎಂಟು ವರ್ಷಗಳ ಹಿಂದೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಒಟ್ಟು 16 ವಾಹನಗಳನ್ನು ಸೇರ್ಪಡೆಗೊಳಿಸಿತ್ತು. ಇದೀಗ ಬೇಡಿಕೆ ಮತ್ತು ಅಗತ್ಯತೆ ಅನುಗುಣವಾಗಿ ಮತ್ತೆ ಹೊಸದಾಗಿ ಹಲವು ವಾಹನಗಳನ್ನು ಸೇರ್ಪಡೆ ಮಾಡಿಕೊಂಡಿದೆ.

ಚಾಲಕ, ಸಿಬ್ಬಂದಿ ಸುರಕ್ಷತೆಗೆ ಇವು ಪೂರಕ

ಇದೇ ವೇಳೆ ಮಾತನಾಡಿದ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ ಅನ್ಬುಕುಮಾರ್ ಅವರು, ಬಸ್ ಪ್ರಯಾಣಿಕರು ಮತ್ತು ಚಾಲಕ ಸಿಬ್ಬಂದಿಯ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ನಿಗಮದ ಆದ್ಯತೆ ಆಗಿದೆ. ಈ ಕಾರಣಕ್ಕಾಗಿ ಬೊಲೆರೋ ವಾಹನಗಳು ನಿಗಮದ ವ್ಯಾಪ್ತಿಗೆ ಸೇರಿಸಿಕೊಳ್ಳಲಾಗಿದೆ ಎಂದರು.

ಸಂಭವನೀಯ ಅಪಘಾತಗಳನ್ನು ತಪ್ಪಿಸಲು ಮುಂದಿನ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಈ ಬೊಲೆರೊ ಸಹಕಾರಿಯಾಗಲಿವೆ. ಬಿಬಿಎಂಪಿ ಪಾಲಿಕೆಯ 16 ವಿಭಾಗಗಳಲ್ಲಿ ಜೀಪುಗಳು 24x7 ಕಾರ್ಯನಿರ್ವಹಿಸಲಿವೆ. ಕೋಟ್ಯಂತರ ರೂಪಾಯಿ ಉಳಿಸಲು ಜೀಪ್‌ಗಳನ್ನು ಸಮಯಕ್ಕೆ ಅಗತ್ಯಕ್ಕೆ ತಕ್ಕಂತೆ ಬಳಸಿಕೊಳ್ಳಲಾಗುವುದು ನಿಗಮದ ಅಧಿಕಾರಿಯೊಬ್ಬರು ತಿಳಿಸಿದರು.

ಕಲ್ಯಾಣ ಕರ್ನಾಟಕ ಸಾರಿಗೆ ನೌಕರರಿಗೆ ಬಂಪರ್

ಕರ್ನಾಟಕ ರಾಜ್ಯ ಸಾರಿಗೆ ಇಲಾಖೆಯು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (KKRTC) ಸಿಬ್ಬಂದಿಗೆ ಅನುಕೂಲವಾಗುವಂತೆ ಒಟ್ಟು 1,20 ಕೋಟಿ ರೂಪಾಯಿ ಅಪಘಾತ ವಿಮೆ ಜಾರಿಗೆ ತಂದಿದೆ. ಈ ಮೂಲಕ ದೇಶದಲ್ಲಿ ಇದೇ ಮೊದಲ ಬಾರಿಗೆ ಇಂತದೊಂದು ವಿಮೆ ಸಾರಿಗೆ ನೌಕರರಿಗೆ ಸಿಗುತ್ತಿದೆ.

ಅಪಘಾತ, ಸಾವು ನೋವಿನ ಸಂದರ್ಭದಲ್ಲಿ ಈ ಕೆಕೆಆರ್‌ಟಿಸಿ ಸಿಬ್ಬಂದಿಯ ಅವರ ಅವಲಂಬಿತರಿಗೆ ಸಿಗುತ್ತದೆ. ಈ ಸಲುವಾಗಿ ಯುನಿಯನ್ ಬ್ಯಾಂಕ್ ಜೊತೆಗೆ ಸಾರಿಗೆ ಇಲಾಖೆ ಒಪ್ಪಂದ ಮಾಡಿಕೊಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+