KSRTC e-bus; ಡಿಸೆಂಬರ್‌ನಿಂದ ಸಂಚಾರ, ಮಾರ್ಗಗಳು

ಬೆಂಗಳೂರು, ನವೆಂಬರ್ 29; ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಎಲೆಕ್ಟ್ರಿಕ್ ಬಸ್‌ಗಳ ಸಂಚಾರಕ್ಕೆ ಸಿದ್ಧವಾಗಿದೆ. ಬೆಂಗಳೂರು ನಗರದಿಂದ 5 ಮಾರ್ಗಗಳಲ್ಲಿ ಬಸ್‌ಗಳು ಸಂಚಾರ ನಡೆಸಲಿವೆ.

ಬೆಂಗಳೂರು ನಗರದಲ್ಲಿ ಈಗಾಗಲೇ ಬಿಎಂಟಿಸಿ ಎಲೆಕ್ಟ್ರಿಕ್ ಬಸ್‌ಗಳನ್ನು ಓಡಿಸುತ್ತಿದೆ. ಈಗ ಕೆಎಸ್ಆರ್‌ಟಿಸಿ ವಿವಿಧ ನಗರಗಳಿಗೆ ಬಸ್‌ಗಳನ್ನು ಓಡಿಸಲಿದೆ. ಇದಕ್ಕಾಗಿ ಚಾರ್ಜಿಂಗ್ ಸ್ಟೇಷನ್‌ಗಳನ್ನು ಸಹ ನಿರ್ಮಾಣ ಮಾಡಲಾಗುತ್ತಿದೆ.

ಮೊದಲ ಹಂತದಲ್ಲಿ ಕೆಎಸ್ಆರ್‌ಟಿಸಿ ಬೆಂಗಳೂರು-ಮೈಸೂರು ನಡುವೆ ಎಲೆಕ್ಟ್ರಿಕ್ ಬಸ್‌ಗಳನ್ನು ಓಡಿಸಲಿದೆ. ಡಿಸೆಂಬರ್‌ 15ರಿಂದ ಬಸ್ ಸಂಚಾರ ಆರಂಭಿಸಲು ತೀರ್ಮಾನಿಸಲಾಗಿದೆ. ಇದಕ್ಕಾಗಿ ಅಗತ್ಯ ಸಿದ್ಧತೆ ಮಾಡಲಾಗುತ್ತಿದೆ.

ಹೈದರಾಬಾದ್ ಮೂಲದ ಒಲೆಕ್ಟ್ರಾ ಗ್ರೀನ್‌ಟೆಕ್ ಲಿ. ಮೊದಲ ಹಂತದಲ್ಲಿ ಬಸ್‌ಗಳನ್ನು ಕೆಎಸ್ಆರ್‌ಟಿಸಿಗೆ ಒದಗಿಸಲಿದೆ. ಡಿಸೆಂಬರ್ ಅಂತ್ಯದ ವೇಳೆಗೆ 25 ಇ-ಬಸ್‌ಗಳು ನಿಗಮಕ್ಕೆ ಸೇರ್ಪಡೆಯಾಗಲಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕೆಎಸ್‌ಆರ್‌ಟಿಗೆ ಸೇರುತ್ತಿರುವ ಎಲೆಕ್ಟ್ರಿಕ್ ಬಸ್ 12 ಮೀಟರ್ ಉದ್ದವಿರಲಿದೆ, ಸಂಪೂರ್ಣ ಹವಾನಿಯಂತ್ರಿತವಾಗಿದೆ. ಈ ಬಸ್‌ಗಳಲ್ಲಿ 43 ಸೀಟುಗಳು ಇರಲಿದ್ದು, ಒಮ್ಮೆ ಫುಲ್ ಚಾರ್ಜ್ ಮಾಡಿದ ಬಳಿಕ ಬಸ್‌ಗಳು 250 ರಿಂದ 300 ಕಿ. ಮೀ. ತನಕ ಸಂಚಾರ ನಡೆಸಲಿವೆ.

ಎಷ್ಟು ಎಲೆಕ್ಟ್ರಿಕ್ ಬಸ್‌ಗಳು ಬರಲಿವೆ?

ಎಷ್ಟು ಎಲೆಕ್ಟ್ರಿಕ್ ಬಸ್‌ಗಳು ಬರಲಿವೆ?

ಕೆಎಸ್ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ. ಅನುಬ್ ಕುಮಾರ್ ಈ ಕುರಿತು ಮಾತನಾಡಿದ್ದಾರೆ. "ಡಿಸೆಂಬರ್‌ 31ರ ವೇಳೆಗೆ 25 ಬಸ್‌ಗಳು ಸಿಗುವ ನಿರೀಕ್ಷೆ ಇದೆ. ಉಳಿದ 25 ಬಸ್‌ಗಳು 2023ರ ಫೆಬ್ರವರಿ 15ರೊಳಗೆ ಸಿಗಲಿವೆ" ಎಂದು ಹೇಳಿದ್ದಾರೆ. ಮೊದಲ ಹಂತದಲ್ಲಿ ಬೆಂಗಳೂರು-ಮೈಸೂರು ನಡುವೆ ಬಸ್ ಸಂಚಾರ ಆರಂಭಿಸಲು ಕೆಎಸ್ಆರ್‌ಟಿಸಿ ತೀರ್ಮಾನಿಸಿದೆ. ಡಿಸೆಂಬರ್‌ನಲ್ಲಿ ಉಭಯ ನಗರಗಳ ನಡುವೆ ಜನರು ಎಲೆಕ್ಟ್ರಿಕ್ ಬಸ್‌ನಲ್ಲಿ ಸಂಚಾರ ನಡೆಸಬಹುದಾಗಿದೆ.

5 ಮಾರ್ಗವನ್ನು ಗುರುತಿಸಿರುವ ಕೆಎಸ್‌ಆರ್‌ಟಿಸಿ

5 ಮಾರ್ಗವನ್ನು ಗುರುತಿಸಿರುವ ಕೆಎಸ್‌ಆರ್‌ಟಿಸಿ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಬೆಂಗಳೂರಿನಿಂದ ಐದು ಮಾರ್ಗದಲ್ಲಿ ಎಲೆಕ್ಟ್ರಿಕ್ ಬಸ್‌ಗಳ ಸಂಚಾರ ಆರಂಭಿಸಲಿದೆ. ಬೆಂಗಳೂರು-ಮೈಸೂರು, ಬೆಂಗಳೂರು-ವಿರಾಜಪೇಟೆ, ಬೆಂಗಳೂರು-ಮಡಿಕೇರಿ, ಬೆಂಗಳೂರು-ದಾವಣಗೆರೆ, ಬೆಂಗಳೂರು-ಶಿವಮೊಗ್ಗ ಮಾರ್ಗವನ್ನು ಗುರುತಿಸಲಾಗಿದೆ. ಬಸ್‌ಗಳು ನಿಗಮಕ್ಕೆ ಸೇರಿದ ಬಳಿಕ ಮತ್ತೊಮ್ಮೆ ಪರಿಶೀಲಿಸಿ ಮಾರ್ಗ ಅಂತಿಮಗೊಳಿಸಲಾಗುತ್ತದೆ.

ಈ ಬಸ್‌ಗಳ ನಿರ್ವಹಣೆಯನ್ನು ಕಂಪನಿಯೇ ನೋಡಿಕೊಳ್ಳಲಿದೆ. ಒಮ್ಮೆ ಚಾರ್ಜ್ ಮಾಡಿದ ಬಸ್‌ 250 ರಿಂದ 300 ಕಿ. ಮೀ. ತನಕ ಸಂಚಾರ ನಡೆಸಲಿವೆ. ಇದನ್ನು ಗಮನದಲ್ಲಿಟ್ಟುಕೊಂಡು ಕೆಎಸ್ಆರ್‌ಟಿಸಿ ಮಾರ್ಗಗಳ ಯೋಜನೆ ತಯಾರು ಮಾಡಿದೆ.

ಚಾರ್ಜಿಂಗ್ ಸ್ಟೇಷನ್ ನಿರ್ಮಾಣ

ಚಾರ್ಜಿಂಗ್ ಸ್ಟೇಷನ್ ನಿರ್ಮಾಣ

ಕೆಎಸ್‌ಆರ್‌ಟಿಸಿ ಎಲೆಕ್ಟ್ರಿಕ್ ಬಸ್‌ಗಳನ್ನು ಬೆಂಗಳೂರಿನ ಮೆಜೆಸ್ಟಿಕ್‌ ಬಸ್ ನಿಲ್ದಾಣದಿಂದ ಓಡಿಸಲು ತೀರ್ಮಾನಿಸಿದೆ. ಇದಕ್ಕಾಗಿ ಬಸ್‌ ಚಾರ್ಜಿಂಗ್ ಸ್ಟೇಷನ್‌ಗಳನ್ನು ಆರಂಭಿಸುತ್ತಿದೆ. ಇದೇ ರೀತಿ ಮೈಸೂರು, ವಿರಾಜಪೇಟೆ, ಮಡಿಕೇರಿ, ದಾವಣಗೆರೆ, ಶಿವಮೊಗ್ಗದಲ್ಲಿಯೂ ಚಾರ್ಜಿಂಗ್ ಸ್ಟೇಷನ್‌ ನಿರ್ಮಾಣ ಮಾಡಲಾಗುತ್ತಿದೆ.

ಬಿ. ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ, ಲಕ್ಷ್ಮಣ ಸವದಿ ಸಾರಿಗೆ ಸಚಿವರಾಗಿದ್ದಾಗ ಕೆಎಸ್‌ಆರ್‌ಟಿಸಿ ಎಲೆಕ್ಟ್ರಿಕ್ ಬಸ್‌ಗಳ ಪ್ರಾಯೋಗಿಕ ಸಂಚಾರವನ್ನು ಸಹ ಮಾಡಿದೆ. ಬಳಿಕ ಬಸ್ ಒದಗಿಸಲು ಟೆಂಡರ್ ನೀಡಲಾಗಿತ್ತು.

ಯುರೋಪಿಯನ್ ಮಾದರಿ ಬಸ್‌ಗಳು

ಮತ್ತೊಂದು ಕಡೆ ಕೆಎಸ್‌ಆರ್‌ಟಿಸಿ ಎಲೆಕ್ಟ್ರಿಕ್ ಬಸ್‌ಗಳ ಜೊತೆ ಬಿಎಸ್‌-6 ಮಲ್ಪಿ ಆಕ್ಸೆಲ್ ಸ್ಲೀಪರ್ 20 ಬಸ್‌ಗಳನ್ನು ನಿಗಮಕ್ಕೆ ಸೇರಿಸಿಕೊಳ್ಳುತ್ತಿದೆ. ಬಸ್‌ಗಳು 15 ಮೀಟರ್ ಉದ್ದವಿದೆ. ಹವಾನಿಯಂತ್ರಿತ ಬಸ್‌ಗಳು ಯುರೋಪಿಯನ್ ಮಾದರಿಯದ್ದಾಗಿವೆ.

ಕೆಎಸ್‌ಆರ್‌ಟಿಸಿ ಈ ಬಸ್‌ಗಳ ಸಂಚಾರಕ್ಕೆ ಬ್ರಾಂಡ್‌ ನೇಮ್, ಟ್ಯಾಗ್‌ ಲೈನ್‌ ಹಾಗೂ ಗ್ರಾಫಿಕ್ ವಿನ್ಯಾಸಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಉತ್ತಮ ಬ್ರಾಂಡ್ ನೇಮ್, ಟ್ಯಾಗ್ ಲೈನ್ ಹಾಗೂ ಗ್ರಾಫಿಕ್ ವಿನ್ಯಾಸಕ್ಕೆ ಬಹುಮಾನ ನೀಡಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+