ಕೆಎಸ್ಆರ್‌ಟಿಸಿ ಮಾಸಿಕ ಪಾಸು ದರ ಹೆಚ್ಚಳ
ಬೆಂಗಳೂರು, ನವೆಂಬರ್ 04 : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಯಾವುದೇ ಸುಳಿವು ನೀಡದೆ ಮಾಸಿಕ ಪಾಸುಗಳ ದರವನ್ನು ಏಕಾಏಕಿ ಹೆಚ್ಚಿಸಿದೆ. ಸಾಮಾನ್ಯ ಮತ್ತು ವೇಗದೂತ ಬಸ್ಸುಗಳಿಗೆ ಪ್ರತ್ಯೇಕ ಪಾಸುಗಳನ್ನು ಮಾಡಲಾಗಿದೆ.
ಬಿಎಂಟಿಸಿ ಹೊರತು ಪಡಿಸಿ ಇತರ ರಸ್ತೆ ಸಾರಿಗೆ ನಿಗಮಗಳ ಮಾಸಿಕ ಬಸ್ ಪಾಸ್ ದರಗಳನ್ನು ಕೆಎಸ್ಆರ್‌ಟಿಸಿ ಹೆಚ್ಚಳ ಮಾಡಿದ್ದು ನವೆಂಬರ್ 1ರಿಂದಲೇ ನೂತನ ದರಗಳು ಜಾರಿಗೆ ಬಂದಿವೆ. ಎರಡು ವರ್ಷದಿಂದ ದರ ಹೆಚ್ಚಳ ಮಾಡಿರಲಿಲ್ಲ. ಆದ್ದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಸಮರ್ಥನೆ ನೀಡಿದ್ದಾರೆ. [ಶೀಘ್ರದಲ್ಲೇ ಕೆಎಸ್ಆರ್ ಟಿಸಿ ನೌಕರರ ವರ್ಗಾವಣೆ]

ಹಿಂದೆ ಸಾಮಾನ್ಯ ಮತ್ತು ವೇಗದೂತ ಬಸ್ಸುಗಳಿಗೆ ಒಂದೇ ಪಾಸ್ ಸಾಕಾಗಿತ್ತು. ಆದರೆ, ಈಗ ಪ್ರತ್ಯೇಕ ಪಾಸುಗಳ ವ್ಯವಸ್ಥೆ ಮಾಡಲಾಗಿದೆ. ಮಾಸಿಕ ಪಾಸುಗಳ ದರಗಳಲ್ಲಿ ಶೇ 20 ರಿಂದ 30ರಷ್ಟು ಏರಿಕೆಯಾಗಿದೆ. [ksrtc ಬಯೋ ಬಸ್ ಉಪಯೋಗಗಳು]
ನೂತನ ದರ : ಬೆಂಗಳೂರು-ಮೈಸೂರು 3,200. ಬೆಂಗಳೂರು-ತುಮಕೂರು 2,650. ಬೆಂಗಳೂರು-ಚಿಕ್ಕಬಳ್ಳಾಪುರ 2,150. ಬೆಂಗಳೂರು-ಕೋಲಾರ 2,750.
ಹಂತಗಳಲ್ಲಿ ದರ ಏರಿಕೆ : 1 ರಿಂದ 5ನೇ ಹಂತದ ತನಕ ಹೆಚ್ಚಳ ಮಾಡಿರುವ ಸಾಮಾನ್ಯ ಮತ್ತು ವೇಗದೂತ ಬಸ್ಸಿನ ಮಾಸಿಕ ಪಾಸುಗಳ ದರಗಳು.
ಸಾಮಾನ್ಯ ಬಸ್ : 1 ನೇ ಹಂತ 360 ರೂ., 2ನೇ ಹಂತ 600, 3ನೇ ಹಂತ 880, 4ನೇ ಹಂತ 1000, 5ನೇ ಹಂತ 1,120 ರೂ.
ವೇಗದೂತ ಬಸ್ : 1 ನೇ ಹಂತ 400 ರೂ., 2ನೇ ಹಂತ 600, 3ನೇ ಹಂತ 1000, 4ನೇ ಹಂತ 1,320, 5ನೇ ಹಂತ 1,320 ರೂ.












Click it and Unblock the Notifications