ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

KSRTC Electric Bus: ಜ.16 ರಿಂದ ಬೆಂಗಳೂರು-ಮೈಸೂರು ಮಧ್ಯೆ ಮೊದಲ ಅಂತರ್ ಜಿಲ್ಲಾ ಬಸ್ ಸಂಚಾರ

|
Google Oneindia Kannada News

ಬೆಂಗಳೂರು, ಜನವರಿ 13: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC)ದ ಮೊದಲ ಅಂತರ್ ಜಿಲ್ಲಾ ಎಲೆಕ್ಟ್ರಿಕ್ ಬಸ್ ಬೆಂಗಳೂರಿನಿಂದ ಮೈಸೂರಿಗೆ ಇದೇ ಜನವರಿ 16ರಂದು ಸೋಮವಾರ ಸಂಚಾರ ಆರಂಭಿಸಲಿದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಮಹತ್ವಪೂರ್ಣ ಎಲೆಕ್ಟ್ರಿಕ್ ಬಸ್ ಪರಿಚಯಿಸುವ ಯೋಜನೆಯಡಿ ಒಟ್ಟು 50ಬಸ್‌ಗಳನ್ನು ಸಂಚಾರ ಬಿಡಲು ಚಿಂತನೆ ನಡೆಸಿದೆ. ಅದರ ಭಾಗವಾಗಿ ಬೆಂಗಳೂರು-ಮೈಸೂರು ಎರಡು ನಗರಗಳ ನಡುವೆ ಅಂತರ್‌ಜಿಲ್ಲಾ ಕೆಎಸ್‌ಆರ್‌ಟಿಸಿ ಇವಿ ಪವರ್ ಪ್ಲಸ್ (EV Power Plus) ಸಂಚರಿಸಲಿದೆ ಎಂದು ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.

ಸುಮಾರು 40ಕ್ಕೂ ಹೆಚ್ಚು ಆಸನಗಳನ್ನು ಹೊಂದಿರುವ ನೀಲಿ ವರ್ಣದ ಎಸಿ ಸಹಿತ ಇವಿ ಪವರ್ ಪ್ಲಸ್ (EV Power Plus Bus) ಬಸ್ ರಾಜ್ಯ ರಾಜಧಾನಿ ಹಾಗೂ ಉದ್ಯಾನ ನಗರಿ ಬೆಂಗಳೂರಿನಿಂದ ಸಾಂಸ್ಕೃತಿಕ ಮತ್ತು ಅರಮನೆ ನಗರಿ ಮೈಸೂರು ನಗರಕ್ಕೆ ಕಾರ್ಯಾಚರಣೆ ಆರಂಭಿಸಲು ದಿನಗಣನೆ ಶುರುವಾಗಿದೆ. ಇದು ಈ ಭಾಗದ ಪ್ರಮಾಣಿಕರಿಗೆ ಹೆಚ್ಚು ಅನುಕೂಲವಾಗಲಿದೆ. ಮುಖ್ಯವಾಗಿ ರಾಜ್ಯಾದ್ಯಂತ ಭವಿಷ್ಯದಲ್ಲಿ ಪರಿಸರ ಸ್ನೇಹಿ ಬಸ್‌ಗಳ ಕಾರ್ಯಾಚರಣೆ ಚಿಂತನೆಗೆ, ಯೋಜನೆ ರೂಪಿಸಲು ಇದು ನಾಂದಿ ಹಾಡಲಿದೆ.

 KSRTC First Inter-District Bus Service Bengaluru-Mysuru EV Power Plus will start from Jan.16

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗವು ಅಂತರ್ ಜಿಲ್ಲಾ ಸಂಚಾರಕ್ಕೆ 50 ಎಲೆಕ್ಟ್ರಿಕ್ ಬಸ್ (Electric Bus)ಗಳನ್ನು ರಸ್ತೆಗಿಳಿಸುವುದಾಗಿ ಹೇಳಿಕೊಂಡಿದೆ. ಆದಷ್ಟು ಶೀಘ್ರವೇ ಇಷ್ಟು ಬಸ್‌ಗಳು ಸೇವೆಗೆ ತರಲಾಗುವುದು ಎಂದು ಈ ಹಿಂದೆ ತಿಳಿಸಿತ್ತು.

ವಿವಿಧೆಡೆ ಶೀಘ್ರವೇ 50 ಇವಿ ಪವರ್ ಪ್ಲಸ್ ಸಂಚಾರ

ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಸಾರಿಗೆ ಸಚಿವ ಬಿ.ಶ್ರೀರಾಮುಲು ಅವರು ಅಂತರ್ ನಗರ ಹವಾನಿಯಂತ್ರಿತ ವಿದ್ಯುತ್ ಬಸ್‌ನ ಪ್ರಾಯೋಗಿಕ ಸಂಚಾರಕ್ಕೆ ಹಸಿರು ನಿಶಾನೆ ತೋರಿಸಿದ್ದರು. ಕೇಂದ್ರ ಸರ್ಕಾರವು 'ಮೇಕ್ ಇನ್ ಇಂಡಿಯಾ' ವಿದ್ಯುತ್ ಬಸ್ ಫೇಮ್-2 ಯೋಜನೆಯಡಿ 50 ಅಂತರ್ ನಗರ ಎಸಿ ವಿದ್ಯುತ್ ಚಾಲಿತ ಬಸ್‌ಗಳನ್ನು ಆದಷ್ಟು ಶೀಘ್ರವೇ ಸೇವೆ ನೀಡಲಿವೆ. ಇದಾದ ಬಳಿಕ ಸಾರ್ವಜನಿಕರು ಒಂದು ನಗರದಿಂದ ಮತ್ತೊಂದು ನಗರಕ್ಕೆ ಪರಿಸರ ಸ್ನೇಹಿ ಎಲೆಕ್ಟ್ರಿಕ್ ಬಸ್‌ಗಳಲ್ಲಿ ಸಂಚರಿಸಲು ಅನುಕೂಲವಾಗಲಿದೆ ಎಂದ ಸಚಿವರು ತಿಳಿಸಿದ್ದರು.

 KSRTC First Inter-District Bus Service Bengaluru-Mysuru EV Power Plus will start from Jan.16

ಸಾರ್ವಜನಿಕರಿಂದ 'ಇವಿ ಪವರ್ ಪ್ಲಸ್' ನಲ್ಲಿ ಅತ್ಯುತ್ತಮ ಅನುಭವ ಪಡೆಯಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದೆ. ಜೊತೆಗೆ ಭವಿಷ್ಯದಲ್ಲಿ 'ಇವಿ ಪವರ್ ಪ್ಲಸ್' ಬಸ್‌ಗಳು ಬೆಂಗಳೂರಿನಿಂದ ಮೈಸೂರಿನ ಜೊತೆಗೆ ಬೆಂಗಳೂರುನಿಂದ- ಮಡಿಕೇರಿ, ಬೆಂಗಳೂರಿನಿಂದ-ವಿರಾಜಪೇಟೆ, ಬೆಂಗಳೂರಿನಿಂದ- ದಾವಣಗೆರೆ, ಬೆಂಗಳೂರಿನಿಂದ- ಶಿವಮೊಗ್ಗ ಹಾಗೂ ಬೆಂಗಳೂರಿನಿಂದ -ಚಿಕ್ಕಮಗಳೂರು ನಗರಗಳಿಗೆ ಸಂಚರಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಚಾರ್ಜಿಂಗ್ ಪಾಯಿಂಟ್‌ ಸ್ಥಾಪನೆ

ಈ ಎಲೆಕ್ಟ್ರಿಕ್ ಬಸ್‌ಗಳಿಗೆ ಚಾರ್ಚಿಂಗ್ ಕೇಂದ್ರವನ್ನು ಈಗಾಗಲೇ ಬೆಂಗಳೂರು ಹಾಗೂ ಮೈಸೂರಿನಲ್ಲಿ ನಿರ್ಮಿಸಲಾಗಿದೆ. ಮಡಿಕೇರಿ, ವಿರಾಜಪೇಟೆ, ದಾವಣಗೆರೆ, ಶಿವಮೊಗ್ಗ ಹಾಗೂ ಚಿಕ್ಕಮಗಳೂರಲ್ಲಿ ಇವಿ ಚಾರ್ಚಿಂಗ್ ಕೇಂದ್ರ ಸ್ಥಾಪಿಸಲಾಗುತ್ತಿದೆ. ಕಾಮಗಾರಿ ಪ್ರಗತಿಯಲ್ಲಿದೆ ಎಂದು ನಿಗಮ ಮಾಹಿತಿ ನೀಡಿದೆ.

English summary
Karnataka State Road Transport Corporation (RSRTC) first inter-district EV Power Plus bus service between Bengaluru and Mysuru will start from January 16.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X