KSRTC: ಸಾರಿಗೆ ನಿಮಗದ ಆದಾಯ ಸೋರಿಕೆ ಪತ್ತೆ! 7,32,495 ರೂ. ದಂಡ ಸಂಗ್ರಹ

ಬೆಂಗಳೂರು, ಮೇ 10: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ತನ್ನ ಸೇವೆ, ಹೊಸ ಹೊಸ ಉಪಕ್ರಮಗಳಿಂದ ಸಾಕಷ್ಟು ಹೆಸರು ಮಾಡಿದೆ. ಪ್ರಯಾಣಿಕರಿಗೆ ಆರಾಮದಾಯಕ, ಸುರಕ್ಷಿತ ಸಾರಿಗೆ ಸೇವೆ ನೀಡುತ್ತಿದೆ. ಇತ್ತ ರಹಿತ ಪ್ರಕರಣಗಳ ಬಗ್ಗೆಯು ಮಾಹಿತಿ ಲಭ್ಯವಾಗಿದೆ. ಕಳೆದ ಒಂದೇ ತಿಂಗಳಲ್ಲಿ ಕೆಎಸ್‌ಆರ್‌ಸಿಟಿ ಬಸ್‌ಗಳಲ್ಲಿ ಟಿಕೆಟ್ ಇಲ್ಲದೇ ಪ್ರಯಾಣ ಮಾಡಿದ ಸಾವಿರಾರು ಮಂದಿಯಿಂದ ಸುಮಾರು 07ಲಕ್ಷಕ್ಕೂ ಅಧಿಕ ಮೊತ್ತವು ದಂಡ ರೂಪದಲ್ಲಿ ಸಂಗ್ರಹವಾಗಿದೆ.

ರಾಜ್ಯದಲ್ಲಿ ಕಳೆದ ಏಪ್ರಿಲ್ ಒಂದೇ ತಿಂಗಳಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ತನ್ನ ತನಿಖಾ ತಂಡಗಳಿಂದ ತಪಾಸಣಾ ಕಾರ್ಯವನ್ನು ಚುರುಕುಗೊಳಿಸಿತ್ತು. ಪರಿಣಾಮವಾಗಿ ಕೆಎಸ್‌ಆರ್‌ಟಿಸಿ ನಿಗಮದಡಿ ಸಂಚರಿಸುವ ಬಸ್‌ಗಳಲ್ಲಿ 43,244 ವಾಹನಗಳ ತನಿಖೆ ಮಾಡಲಾಗಿತ್ತು. ಈ ವೇಳೆ ಬರೋಬ್ಬರಿ 3882 ಪ್ರಕರಣಗಳನ್ನು ಪತ್ತೆ ಹಚ್ಚಿಲಾಯಿತು. ಈ ಪ್ರಕರಣಗಳೆಲ್ಲವು ಟಿಕೆಟ್ ರಹಿತವಾಗಿ ಸಂಚರಿಸುತ್ತಿದ್ದ ಪ್ರಯಾಣಿಕರೇ ಆಗಿದ್ದಾರೆ.ಅದರಲ್ಲಿ 3780 ಟಿಕೆಟ್ ರಹಿತ ಪ್ರಯಾಣಿಕರಿಂದ 7,32,495/-ರೂಗಳನ್ನು ದಂಡದ ರೂಪದಲ್ಲಿ ವಸೂಲಿ ಮಾಡಲಾಗಿದೆ ಎಂದು ಶನಿವಾರ ಕೆಎಸ್‌ಆರ್‌ಟಿಸಿ ಮಾಹಿತಿ ನೀಡಿದೆ.

KSRTC Detected Ticketless 3780 Cases in Past April Collect Rs 7 32 Lakh Fine

ನಿಗಮದ ಆದಾಯದಲ್ಲಿ ಸೋರಿಕೆ ಪತ್ತೆ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ನಿಗಮದ ಆದಾಯದಲ್ಲಿ ಸೋರಿಕೆ ಆಗುತ್ತಿದೆ 97,576 ರೂಗಳನ್ನು ತನಿಖಾಧಿಕಾರಿಗಳು ಕಂಡು ಕೊಂಡಿದ್ದಾರೆ. ಅಂದರೆ ಹೀಗೆ ಟಿಕೆಟ್ ಇಲ್ಲದೇ ಪ್ರಯಾಣ ಮಾಡುವ ಮೂಲಕ ಸುಮಾರು ಒಂದು ಲಕ್ಷ ರೂಪಾಯಿ ಸೋರಿಕೆ ಆಗಿದ್ದು ಕಾರ್ಯಾಚರಣೆಯಲ್ಲಿ ಪತ್ತೆ ಆಗಿದೆ. ಸಾರಿಗೆ ಇಲಾಖೆಯು ತಪ್ಪಿತಸ್ಥರ ವಿರುದ್ಧ ಇಲಾಖಾ ರೀತ್ಯಾ ಸೂಕ್ತ ಶಿಸ್ತಿನ ಕ್ರಮವನ್ನು ಜರುಗಿಸಿದೆ.

ಶಕ್ತಿ ಯೋಜನೆ ಜಾರಿಯಲ್ಲಿ ಮಹಿಳೆಯರಿಗೆ ಮಾತ್ರವೇ ಸಾರಿಗೆ ಬಸ್‌ಗಳಲ್ಲಿ ಟಿಕೆಟ್ ಪಡೆದು ಉಚಿತವಾಗಿ ಪ್ರಯಾಣಿಸಲು ಅವಕಾಶ ಇದೆ. ಆದ್ದರಿಂದ ಸಾರ್ವಜನಿಕ ಪ್ರಯಾಣಿಕರು, ಬಸ್ಸಿನಲ್ಲಿ ಪ್ರಯಾಣಿಸುವಾಗ ಸರಿಯಾದ ಟಿಕೆಟ್/ ಪಾಸ್ ಪಡೆದು ಪ್ರಯಾಣ ಮಾಡುವಂತೆ, ನಿಗಮವು ಪುರುಷ ಪ್ರಯಾಣಿಕರಿಗೆ ಮನವಿ ಮಾಡಿಕೊಂಡಿದೆ. ಶಕ್ತಿ ಯೋಜನೆ ಜಾರಿ ಯಲ್ಲಿರುವ ಕಾರಣ ಟಿಕೆಟ್ ಇಲ್ಲದೇ ಪ್ರಯಾಣ ಮಾಡಿರುವುದು ಬಹತೇಕ ಪುರುಷರೇ ಎಂದು ತಿಳಿಯುತ್ತದೆ.

ಈ ಟಿಕೆಟ್ ರಹಿತ ಪ್ರಕರಣ ಮಾತ್ರವಲ್ಲದೇ ಇತ್ತೀಚೆಗೆ ಬಸ್‌ನಲ್ಲಿ ನಿವಾರ್ಹಕರಿಂದ ಅಸಭ್ಯ ವರ್ತನೆ, ಮಹಿಳಾ ಪ್ರಯಾಣಿಕರಿಗೆ ಸಹ ಪ್ರಯಾಣಿಕರಿಂದ ಕಿರುಕುಳ ನಡೆದ ಬಗ್ಗೆ ವಿಡಿಯೋ ವೈರಲ್ ಆಗಿದ್ದವು. ಆಗಲೂ ಸಾರಿಗೆ ಇಲಾಖೆ ಸೂಕ್ತ ಕ್ರಮ ಜರುಗಿಸುವ ಮೂಲಕ ನಿಗಮ ಸಾರಿಗೆಯಲ್ಲಿ ಸುರಕ್ಷತೆಯನ್ನು ಖಚಿತಪಡಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+