ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಎಸ್ಆರ್‌ಟಿಸಿ ಬಸ್‌ನಲ್ಲಿ ಸಂಚಾರ ನಡೆಸುವ ಕಾರ್ಮಿಕರಿಗೆ ಸೂಚನೆಗಳು

|
Google Oneindia Kannada News

ಬೆಂಗಳೂರು, ಮೇ 03: ಲಾಕ್ ಡೌನ್ ಘೋಷಣೆಯಾದ ಬಳಿಕ ನಗರಗಳಲ್ಲಿ ಸಿಲುಕಿರುವ ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ತೆರಳಲು ಕೆಎಸ್ಆರ್‌ಟಿಸಿ ಬಸ್ ವ್ಯವಸ್ಥೆ ಮಾಡಲಾಗಿದೆ. ಬೆಂಗಳೂರಿನಿಂದ ಭಾನುವಾರ ಬೆಳಗ್ಗೆ 10ರಿಂದ ಬಸ್‌ಗಳ ಸಂಚಾರ ಆರಂಭವಾಗಿದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್‌ಟಿಸಿ) ಕಾರ್ಮಿಕರಿಗಾಗಿ ಕೆಂಪೇಗೌಡ ಬಸ್ ನಿಲ್ದಾಣ (ಮೆಜೆಸ್ಟಿಕ್) ನಿಂದ ಬಸ್ಸುಗಳನ್ನು ಕಾರ್ಯಚರಣೆ ಮಾಡುತ್ತಿದೆ. ಮೆಜೆಸ್ಟಿಕ್‌ನ ಬಿಎಂಟಿ‌ಸಿ ಬಸ್ ನಿಲ್ದಾಣದಿಂದ ಬಸ್‌ಗಳು ಸಂಚಾರ ನಡೆಸಲಿವೆ.

ತಿರುಪತಿ ದೇವಾಲಯದಲ್ಲಿ ಕೆಲಸ ಕಳೆದುಕೊಂಡ 1,300 ಕಾರ್ಮಿಕರು ತಿರುಪತಿ ದೇವಾಲಯದಲ್ಲಿ ಕೆಲಸ ಕಳೆದುಕೊಂಡ 1,300 ಕಾರ್ಮಿಕರು

ಸಾಮಾಜಿಕ ಅಂತರವನ್ನು ಕಾಪಾಡಲು ಅನುಕೂಲವಾಗುತ್ತದೆ ಎಂಬ ಕಾರಣಕ್ಕೆ ಬಿಎಂಟಿಸಿ ಬಸ್ ನಿಲ್ದಾಣ ಆಯ್ದುಕೊಳ್ಳಲಾಗಿದೆ. ಈ ಬಸ್ ವ್ಯವಸ್ಥೆಯೂ ಕೆಂಪು ವಲಯ ಹೊರತು ಪಡಿಸಿ ಬೇರೆ ಸ್ಥಳಗಳಿಗೆ ಬೆಳಗ್ಗೆ 10 ರಿಂದ ಸಂಜೆ 6 ಗಂಟೆಯ ತನಕ ಸಂಚಾರ ನಡೆಸಲಿದೆ.

ವೇತನ ಕಡಿತ, ಕೆಲಸದಿಂದ ಕಿತ್ತು ಹಾಕಿದರೆ ಕಾರ್ಮಿಕರು ದೂರು ಕೊಡಿ ವೇತನ ಕಡಿತ, ಕೆಲಸದಿಂದ ಕಿತ್ತು ಹಾಕಿದರೆ ಕಾರ್ಮಿಕರು ದೂರು ಕೊಡಿ

ಕೆಎಸ್ಆರ್‌ಟಿಸಿ ಬಸ್‌ಗಳಲ್ಲಿ ಸಂಚಾರ ನಡೆಸುವ ಕಾರ್ಮಿಕರಿಗಾಗಿ ಕೆಲವು ಮಾರ್ಗಸೂಚಿಗಳನ್ನು ನೀಡಿದೆ. ಕಾರ್ಮಿಕರು ಯಾವುದೇ ಆತಂಕಕ್ಕೆ ಒಳಗಾಗಬಾರದು, ಸೂಕ್ತ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಲು ಸಹಕರಿಸಬೇಕು ಎಂದು ಮನವಿ ಮಾಡಲಾಗಿದೆ.

ವಾವ್! ಕ್ವಾರಂಟೈನ್ ಕೇಂದ್ರದಲ್ಲಿ ಸುಮ್ಮನೆ ಕೂರಲಿಲ್ಲ ಈ ಕಾರ್ಮಿಕರುವಾವ್! ಕ್ವಾರಂಟೈನ್ ಕೇಂದ್ರದಲ್ಲಿ ಸುಮ್ಮನೆ ಕೂರಲಿಲ್ಲ ಈ ಕಾರ್ಮಿಕರು

ಮಾರ್ಗಸೂಚಿಗಳ ವಿವರ ಇಲ್ಲಿದೆ

ಮಾರ್ಗಸೂಚಿಗಳ ವಿವರ ಇಲ್ಲಿದೆ

ಕೆ‌ಎಸ್ಆರ್‌ಟಿಸಿ‌ ಭಾನುವಾರ ಬೆಳಗ್ಗೆ 10 ರಿಂದ ಸಂಜೆ 6 ಗಂಟೆಯ ತನಕ ಕಾರ್ಮಿಕರಿಗಾಗಿ ವಿಶೇಷ ಬಸ್‌ಗಳನ್ನು ಓಡಿಸಲಿದೆ. ಕೆಂಪೇಗೌಡ ಬಸ್ ನಿಲ್ದಾಣ (ಮೆಜೆಸ್ಟಿಕ್) ನಿಂದ ಬಸ್ ಹೊರಡಲಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಅನುಕೂಲವಾಗುವಂತೆ ಬಿಎಂಟಿಸಿ ಬಸ್ ನಿಲ್ದಾಣದಿಂದ ಬಸ್ ಸಂಚಾರ ನಡೆಸಲಿದೆ. ಬಸ್ ವ್ಯವಸ್ಥೆಯು ಕೆಂಪು ವಲಯ ಹೊರತು ಪಡಿಸಿ ಬೇರೆ ಸ್ಥಳಗಳಿಗೆ ಮಾತ್ರ ಇರುತ್ತದೆ.

ಮೂರು ದಿನಗಳ ಕಾಲ ಉಚಿತ ಪ್ರಯಾಣ

ಮೂರು ದಿನಗಳ ಕಾಲ ಉಚಿತ ಪ್ರಯಾಣ

ವಲಸೆ ಕಾರ್ಮಿಕರು ಸಂಚಾರ ನಡೆಸುವಾಗ ದುಪ್ಪಟ್ಟು ಹಣ ನೀಡಬೇಕಾಗುತ್ತದೆ ಎಂಬ ಸುದ್ದಿ ಹಬ್ಬಿತ್ತು. ಪ್ರತಿಪಕ್ಷಗಳು ಸಹ ಇದನ್ನು ಖಂಡಿಸಿದ್ದವು. ಕೆಪಿಸಿಸಿ ಕಾರ್ಮಿಕರ ಬಳಿ ಹಣ ಕೇಳಬೇಡಿ ಎಂದು 1 ಕೋಟಿ ರೂ. ಚೆಕ್‌ ಅನ್ನು ಕೆಎಸ್ಆರ್‌ಟಿಸಿಗೆ ನೀಡಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಸೂಚನೆಯಂತೆ ಮೂರು ದಿನಗಳ ಕಾಲ ಉಚಿತವಾಗಿ ಕಾರ್ಮಿಕರನ್ನು ಕರೆದುಕೊಂಡು ಹೋಗಲಾಗುತ್ತದೆ.

ಕಾರ್ಮಿಕರಿಗೆ ಆತಂಕ ಬೇಡ

ಕಾರ್ಮಿಕರಿಗೆ ಆತಂಕ ಬೇಡ

ತಮ್ಮ ಊರುಗಳಿಗೆ ತೆರಳುವ ಕಾರ್ಮಿಕರು ಯಾವುದೇ ಆತಂಕಕ್ಕೆ ಒಳಗಾಗಬಾರದು. ಸೂಕ್ತ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಲು ಸಹಕರಿಸಬೇಕು ಎಂದು ಕೆಎಸ್ಆರ್‌ಟಿಸಿ ಮನವಿ ಮಾಡಿದೆ. ಬಸ್ಸುಗಳ ನಿರಂತರ ಪೂರೈಕೆ ಇರುತ್ತದೆ. ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ. ಬಸ್ಸುಗಳಿಗೆ ತೆರಳುವ ಮುನ್ನ ಆರೋಗ್ಯ ಪರಿಶೀಲನೆ ‌ನಡೆಸಿ, ಸಂಪೂರ್ಣ ಮಾಹಿತಿಯನ್ನು ದಾಖಲಿಸುವ ವ್ಯವಸ್ಥೆ ಮಾಡಲಾಗಿದೆ ಇದಕ್ಕೆ ಸಹಕರಿಸಬೇಕು. ಬಸ್ಸುಗಳ ನಿರ್ಗಮನದ ಮಾಹಿತಿಯನ್ನು ಸಂಬಂಧಪಟ್ಟ. ನಿಗಮದ ವಿಭಾಗಗಳಿಗೆ ಹಾಗೂ ಜಿಲ್ಲಾಡಳಿತಕ್ಕೆ ನೀಡಲಾಗುತ್ತಿದೆ.

ಹೋಂ ಕ್ವಾರಂಟೈನ್‌ ಮಾಹಿತಿ

ಹೋಂ ಕ್ವಾರಂಟೈನ್‌ ಮಾಹಿತಿ

ಬೆಂಗಳೂರಿನಿಂದ ಹೊರಟ ಬಸ್‌ ಮಾರ್ಗ ಮಧ್ಯೆ ಯಾವುದೇ ಪ್ರಯಾಣಿಕರನ್ನು ಇಳಿಸುವುದಿಲ್ಲ. ನಿಗದಿತ ಬಸ್ ನಿಲ್ದಾಣಗಳಲ್ಲಿಯೇ ಇಳಿಸಲಾಗುತ್ತದೆ. ಅಲ್ಲಿ ಅವರಿಗೆ ಮತ್ತೊಮ್ಮೆ ಜಿಲ್ಲಾಡಳಿತದಿಂದ ಆರೋಗ್ಯ ತಪಾಸಣೆ‌ ನಡೆಸಿ ಹೋಂ ಕ್ವಾರಂಟೈನ್‌ಗೆ ಸಂಬಂಧಪಟ್ಟ ಮಾಹಿತಿ‌ ನೀಡಲಾಗುತ್ತದೆ. ಭಾನುವಾರ ಪ್ರತಿ‌ ಗಂಟೆಗೊಮ್ಮೆ ಬಸ್ ಕಾರ್ಯಚರಣೆಯ ಮಾಹಿತಿಯನ್ನು ಸಂಬಂಧಪಟ್ಟ ಜಿಲ್ಲಾಡಳಿತಕ್ಕೆ ನೀಡಲಾಗುತ್ತದೆ.

English summary
Workers and poor wage labourers allowed to travel in KSRTC buses free of charge from the district centers and Bengaluru to their hometowns in Karnataka for three days from May 3, 2020. Here are the guidelines for the workers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X