ಚಿಕ್ಕಮಗಳೂರಿನಲ್ಲಿ ಪಲ್ಟಿಯಾದ ಬಸ್: 20 ಜನರಿಗೆ ಗಂಭೀರ ಗಾಯ
ಚಿಕ್ಕಮಗಳೂರು, ಜೂನ್ 15: ಚಿಕ್ಕಮಗಳೂರಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕೆಎಸ್ ಆರ್ ಟಿಸಿ ಸ್ಲೀಪರ್ ಬಸ್ಸು ಪಲ್ಟಿಯಾದ ಪರಿಣಾಮ 20 ಜನ ಗಂಭೀರವಾಗಿ ಗಾಯಗೊಂಡಿದ್ದಾರೆ.
ಬೆಂಗಳೂರಿನಿಂದ ಶೃಂಗೇರಿಗೆ ತೆರಳುತ್ತಿದ್ದ ಬಸ್ಸು, ಇಂದು ಬೆಳಗ್ಗಿನ ಜಾವ 5:30 ರ ಹೊತ್ತಿಗೆ ಎನ್ ಆರ್ ಪುರ ತಾಲೂಕಿನ ಗುಡ್ಡೆಹಳ್ಳದ ಸಮೀಪ ಅಪಘಾತಕ್ಕೀಡಾಗಿದೆ. ಅತಿಯಾದ ಮಳೆಯಿಂದ ರಸ್ತೆ ಹಾಳಾಗಿದ್ದು, ಬಸ್ಸು ಚಾಲಕನ ನಿಯಂತ್ರಣ ತಪ್ಪಿ ಎರಡು ಪಲ್ಟಿ ಹೊಡೆದಿದೆ. ಅದೃಷ್ಟವಶಾತ್ ಯಾವುದೇ ಜೀವಹಾನಿ ಸಂಭವಿಸಿಲ್ಲ.

ಈ ಬಸ್ಸಿನಲ್ಲಿ ಬಿಜೆಪಿಯ ಮಾಧ್ಯಮ ಸಲಹೆಗಾರರರಾದ ಎಸ್ ಶಾಂತಾರಾಮ್ ಮತ್ತು ಹೊಸ ದಿಗಂತ ದಿನಪತ್ರಿಕೆಯ ಮಾಜಿ ಸಂಪಾದಕ ದು ಗು ಲಕ್ಷ್ಮಣ ಅವರೂ ಪ್ರಯಾಣಿಸುತ್ತಿದ್ದರು. ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಗಾಯಾಳುಗಳನ್ನು ಎನ್ ಆರ್ ಪುರ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.












Click it and Unblock the Notifications