ಲೈಂಗಿಕ ಕಿರುಕುಳ ಪ್ರಕರಣ : ಕಮಲಾಕರ್ ಆತ್ಮಹತ್ಯೆ

ಕುಮುಟಾ ಡಿಪೋದಲ್ಲಿ ಕಂಡಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಕಮಲಾಕರ್ ಬಾಡಾ ಗ್ರಾಮದ ಅಪ್ರಾಪ್ತೆ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿದ್ದರು. ಕಮಲಾಕರ್ ವಿರುದ್ಧ ಬಾಲಕಿಯ ಪೋಷಕರು ಏ.17ರಂದು ದೂರು ದಾಖಲಿಸಿದ್ದರು. ಎಫ್ಐಆರ್ ದಾಖಲಿಕೊಂಡ ಪೊಲೀಸರು ವಿಚಾರಣೆ ನಡೆಸುತ್ತಿದ್ದರು.
ಆದರೆ, ಶನಿವಾರ ಯಲ್ಲಾಪುರದ ಸಂಬಂಧಿಸಿಕರ ಮನೆಯಲ್ಲಿದ್ದ ಕಮಲಾಕರ್, ಅಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಆದ್ದರಿಂದ ವಿಚಾರಣೆಗೆ ಹಿನ್ನಡೆ ಉಂಟಾಗಿದ್ದು, ಸತ್ಯ ಕಮಲಾಕರ್ ಜೊತೆಗೆ ನಾಶವಾಗಿದೆ.
ಬಾಲಕಿ ಚೇತರಿಕೆ : ಬಸ್ ಕಂಡಕ್ಟರ್ ಕಮಲಾಕರ್ ತನಗೆ ಲೈಂಗಿಕ ಕಿರುಕಳ ನೀಡುತ್ತಿದ್ದಾನೆ ಎಂದು ಆರೋಪಿಸಿ ಬಾಲಕಿ ಮೂರು ದಿನಗಳ ಹಿಂದೆ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಳು. ತೀವ್ರ ಸುಟ್ಟಗಾಯಗಳಾಗಿದ್ದ ಆಕೆ ಕುಮುಟಾದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾಳೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕಿ ಪೊಲೀಸರಿಗೆ ಶುಕ್ರವಾರ ಹೇಳಿಕೆ ನೀಡಿ, ಕಮಲಾಕರ್ ತನಗೆ ಲೈಂಗಿಕ ಕಿರುಕುಳ ನೀಡಿದ್ದು ನಿಜ ಎಂದಿದ್ದಳು. ಆದರೆ, ಇಂದು ಆರೋಪಿ ಕಮಲಾಕರ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪ್ರಕರಣದಿಂದ ಮನನೊಂದು ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications