ಕೆಎಸ್‌ಆರ್‌ಟಿಸಿ ಬಸ್ ಅಪಘಾತ, ನಾಲ್ಕು ಸಾವು
ಚಿಕ್ಕಮಗಳೂರು, ಸೆ.4 : ಎರಡು ಕೆಎಸ್ಆರ್‌ಟಿಸಿ ಬಸ್ಸುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ, ನಾಲ್ವರು ಸಾವನ್ನಪ್ಪಿದ ಘಟನೆ ಚಿಕ್ಕಮಗಳೂರಿನಲ್ಲಿ ಗುರುವಾರ ಬೆಳಗ್ಗೆ ನಡೆದಿದೆ. ಅಪಘಾತದಲ್ಲಿ 20 ಪ್ರಯಾಣಿಕರು ಗಾಯಗೊಂಡಿದ್ದು, ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಚಿಕ್ಕಮಗಳೂರಿನ ಹಿರೇಗೌಜಾ ಬಳಿ ಇಂದು ಬೆಳಗ್ಗೆ ಈ ಅಪಘಾತ ಸಂಭವಿಸಿದೆ. ಎರಡು ಬಸ್ಸುಗಳು ಮುಖಾಮುಖಿ ಡಿಕ್ಕಿ ಹೊಡೆದಿದ್ದರಿಂದ ಅಪಘಾತ ನಡೆದಿದೆ. ಈ ಸಂದರ್ಭದಲ್ಲಿ ಬಸ್ಸಿನ ಹಿಂದೆ ಬರುತ್ತಿದ್ದ ಲಾರಿಯು ಬಸ್ಸಿಗೆ ಡಿಕ್ಕಿ ಹೊಡೆದಿದ್ದರಿಂದ ಸರಣಿ ಅಪಘಾತ ನಡೆದಿದೆ.

ಈ ಅಪಘಾತದಿಂದಾಗಿ ನಾಲ್ವರು ಸ್ಥಳದಲ್ಲಿ ಸಾವನ್ನಪ್ಪಿದ್ದು, 20 ಪ್ರಯಾಣಿಕರು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಚಿಕ್ಕಮಗಳೂರಿನ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇವರಲ್ಲಿ ನಾಲ್ವರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. [ಓಣಂಗಾಗಿ ಕೆಎಸ್ಆರ್ ಟಿಸಿ ವಿಶೇಷ ಬಸ್]
ಸಖರಾಯಣಪಟ್ಟಣ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅತಿವೇಗ ಅಪಘಾತಕ್ಕೆ ಕಾರಣವಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು, ತನಿಖೆ ಮುಂದುವರೆಸಿದ್ದಾರೆ.
ವಿವಾದಾತ್ಮಕ ದೇವಾಲಯ ಸ್ಫೋಟ : ಕುಣಿಗಲ್ ತಾಲೂಕಿನ ಅಮೃತೂರು ಹೋಬಳಿ ಪಡುವಗೆರೆ ಗ್ರಾಮದ ಶ್ರೀ ಕೊಲ್ಲಾಪುರದಮ್ಮ ಗ್ರಾಮದೇವತೆ ದೇವಾಲಯವನ್ನು ದುಷ್ಕರ್ಮಿಗಳು ಬುಧವಾರ ಸ್ಫೋಟಿಸಿದ್ದಾರೆ. ಜಿಲೆಟಿನ್ ಬಳಸಿ ಸಿಡಿಮದ್ದು ಸಿಡಿಸಿ, ದೇವಾಲಯವನ್ನು ಸ್ಫೋಟಿಸಲಾಗಿದೆ. ಸಿಡಿಮದ್ದು ಸಿಡಿದ ಶಬ್ದಕ್ಕೆ ಗ್ರಾಮಸ್ಥರು ಎಚ್ಚರಗೊಂಡು ದೇವಾಲಯದ ಬಳಿ ಬಂದಾಗ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
ದೇವಾಲಯದ ಗರ್ಭಗುಡಿಯ ಎಡಭಾಗದಲ್ಲಿ ಸ್ಫೋಟದಿಂದಾಗಿ ಗೋಡೆ ಕಲ್ಲುಗಳು ಸುಮಾರು 20 ಮೀಟರ್‍ನಷ್ಟು ಸಿಡಿದಿದ್ದು, ಗೋಡೆ ಬಿರುಕು ಬಿಟ್ಟಿದೆ. ಕಳೆದ 7 ವರ್ಷಗಳಿಂದಲೂ ಈ ಗ್ರಾಮದಲ್ಲಿ ಎರಡು ರಾಜಕೀಯ ಬಣಗಳ ನಡುವೆ ದೇವಾಲಯಕ್ಕಾಗಿ ವಿವಾದ ನಡೆಯುತ್ತಿದೆ.












Click it and Unblock the Notifications