KSRTC: "ಅಂಬಾರಿ ಉತ್ಸವ" ಎಂದು ಹೆಸರು ಸೂಚಿಸಿದ ವ್ಯಕ್ತಿಗೆ 10,000 ರೂ. ನಗದು ಬಹುಮಾನ
ಕೆಸ್‌ಆರ್‌ಟಿಸಿಯ ನೂತನ ಮಲ್ಟಿ ಆಕ್ಸೆಲ್ ಬಿಎಸ್ 4 -9600 ಸ್ಲೀಪರ್ ಬಸ್‌ಗೆ ಅಂಬಾರಿ ಉತ್ಸವ ಎಂದು ಹೆಸರು ನೀಡಿದ ವ್ಯಕ್ತಿಗೆ ನಗದು ಬಹುಮಾನ ನೀಡಲಾಗಿದೆ. ಹಾಗಾದರೆ ನಗದು ಬಹುಮಾನ ಪಡೆದ ವ್ಯಕ್ತಿ ಯಾವ ಊರಿನವರು, ಅವರ ಹೆಸರೇನು ಎಂದು ಇಲ್ಲಿ ತಿಳಿಯಿರಿ
ಬೆಂಗಳೂರು, ಫೆಬ್ರವರಿ, 22: ಕೆಎಸ್‌ಆರ್‌ಟಿಸಿಯು ಇತ್ತೀಚೆಗಷ್ಟೇ ನೂತನವಾಗಿ ತಯಾರಾದ ಹೊಸ ಬಸ್‌ಗಳಿಗೆ ಬ್ರಾಂಡ್, ಹೆಸರು ಸೂಚಿಸುವಂತೆ ಜನರ ತೀರ್ಮಾನಕ್ಕೆ ಬಿಟ್ಟಿತ್ತು. ಹಾಗೆಯೇ ಆಕರ್ಷಕವಾದ ಹೆಸರು, ಟ್ಯಾಗ್‌ಲೈನ್ ಕೊಟ್ಟವರಿಗೆ ನಗದು ಬಹುಮಾನ ನೀಡಲಾಗುವುದು ಎಂದು ಘೋಷಣೆ ಮಾಡಿತ್ತು. ಇದೀಗ ವ್ಯಕ್ತಿಯೊಬ್ಬರು ನೂತನ ಬಸ್‌ಗೆ "ಅಂಬಾರಿ ಉತ್ಸವ" ಎಂದು ಹೆಸರು ಸೂಚಿಸಿ 10 ಸಾವಿರ ನಗು ಬಹುಮಾನವನ್ನು ಪಡೆದಿದ್ದಾರೆ. ಹಾಗಾದರೆ ನಗದು ಬಹುಮಾನವನ್ನು ಪಡೆದ ವ್ಯಕ್ತಿಯ ಹೆಸರೇನು, ಯಾವ ಮೂಲದವರು ಎಂದು ಇಲ್ಲಿ ನೀಡಲಾಗಿದೆ ಗಮನಿಸಿ.
2 ತಿಂಗಳ ಹಿಂದೆಯೇ ನೂತನ ಬಸ್‌ಗಳಿಗೆ ಹೆಸರು, ಬ್ರಾಂಡ್, ಟ್ಯಾಗ್‌ಲೈನ್ ಸೂಚಿಸಲು ಜನರ ತೀರ್ಮಾನಕ್ಕೆ ಬಿಡಲಾಗಿತ್ತು. ಇಲ್ಲಿಯವರೆಗೂ ಈ ಸ್ಪರ್ಧೆಯಲ್ಲಿ ಲೆಕ್ಕವಿಲ್ಲದಷ್ಟು ಜನರು ಹೆಸರು ಸೂಚಿಸಿದ್ದಾರೆ. ಆದರೆ ಇಲ್ಲೊಬ್ಬ ವ್ಯಕ್ತಿಯೊಬ್ಬರು ಇವೆರಲ್ಲರಿಗಿಂತಲೂ ಅತ್ಯುತ್ತಮವಾದ ಹೆಸರನ್ನು ನೀಡಿ 10 ಸಾವಿರ ರೂಪಾಯಿ ನಗದು ಬಹುಮಾನವನ್ನು ತನ್ನದಾಗಿಸಿಕೊಂಡಿದ್ದಾರೆ. ಈ ಸ್ಪರ್ಧೆಯಲ್ಲಿ ನಗದು ಗೆಲ್ಲಲು ತಲೆ ಉಪಯೋಗಿಸಬೇಕಾಗಿತ್ತು ಅಷ್ಟೇ. ಹಾಗೆಯೇ "ಈ" ವ್ಯಕ್ತಿ ತಲೆ ಉಪಯೋಗಿಸಿ ಅತ್ಯಾಕರ್ಷಕ ಹೆಸರನ್ನು ನೀಡಿ ಗಮನ ಸೆಳೆದಿದ್ದಾರೆ.
Ambaari Utsava Buses Test Drive pic.twitter.com/JEqowKSuWq
— KSRTC (@KSRTC_Journeys) February 21, 2023

"ಅಂಬಾರಿ ಉತ್ಸವ"- ಬಸ್‌ನ ಹೆಸರು
ಚಿಕ್ಕನಾಯಕನಹಳ್ಳಿ ತಾಲೂಕಿನ ಹೊನ್ನೆಬಾಗಿಯ ಎಚ್.ಎಸ್. ಮಧುಕರ್ ಎನ್ನುವವರು ಕೆಎಸ್‌ಆರ್‌ಟಿಸಿಯ ವೋಲ್ವೋ ಮಲ್ಟಿ ಆಕ್ಸೆಲ್ ಬಿಎಸ್ 4 -9600 ಸ್ಲೀಪರ್ ಬಸ್ಸುಗಳಿಗೆ "ಅಂಬಾರಿ ಉತ್ಸವ" ಎಂದು ಹೆಸರು ಸೂಚಿಸಿದ್ದಾರೆ. ಎಚ್.ಎಸ್. ಮಧುಕರ್ ಅವರು ಬ್ರ್ಯಾಂಡಿಂಗ್ ನೇಮ್ ಸ್ಪರ್ಧಿಗಳಲ್ಲಿ ವಿಜೇತರಾಗಿ ಗಮನ ಸೆಳೆದಿದ್ದು, ನಿಗಮದಿಂದ 10 ಸಾವಿರ ರೂಪಾಯಿ ನಗದು ಬಹುಮಾನವನ್ನು ತಮ್ಮದಾಗಿಸಿಕೊಂಡಿದ್ದಾರೆ.

"ಸಂಭ್ರಮದ ಪ್ರಯಾಣ" - ಟ್ಯಾಗ್‌ಲೈನ್
ಎಚ್.ಎಸ್.ಮಧುಕರ್ ಎನ್ನುವವರು "ಅಂಬಾರಿ ಉತ್ಸವ" ಎಂದು ಹೆಸರು ಸೂಚಿಸಿದ್ದರು. "ಅಂಬಾರಿ ಉತ್ಸವ" ಹೆಸರನ್ನು ಅಂತಿಮವಾಗಿ ಆಯ್ಕೆ ಮಾಡಿಕೊಂಡಿದ್ದ ಸಾರಿಗೆ ಸಂಸ್ಥೆಯು 15 ವೋಲ್ವೋ ಸ್ಲೀಪರ್ ಕೋಚ್ ಬಸ್‌ಗಳ ಸಂಚಾರಕ್ಕೆ ಚಾಲನೆಯನ್ನು ನೀಡಿತು. ವೋಲ್ವೋ ಇನ್ನು ಮಲ್ಟಿ ಆಕ್ಸೆಲ್ ಬಿಎಸ್ 4 -9600 ಸ್ಲೀಪರ್ ಬಸ್ಸುಗಳಿಗೆ "ಸಂಭ್ರಮದ ಪ್ರಯಾಣ" ಎನ್ನುವ ಟ್ಯಾಗ್‌ಲೈನ್ ನೀಡಿ ನಗದು ಬಹುಮಾನವನ್ನು ತನ್ನದಾಗಿಸಿಕೊಂಡಿದ್ದಾರೆ. ಬೆಂಗಳೂರಿನ ಮೀನಾ ರವೀಂದ್ರ ಎನ್ನುವ ಮಹಿಳೆ ಆತ್ಯಾಕರ್ಷಕ ಟ್ಯಾಗ್‌ಲೈನ್ ನೀಡಿ ನಗದು ಬಹುಮಾನವನ್ನು ಗೆದಿದ್ದಾರೆ.

ಖಾಸಗಿ ಬಸ್‌ಗಳಿಗೆ ಸವಾಲಾದ KSRTC
ಇನ್ನು ಇತ್ತೀಚಿನ ದಿನಗಳಲ್ಲಿ ಜನರು ದೂರದ ಊರುಗಳಿಗೆ ಆರಾಮವಾಗಿ ಪ್ರಯಾಣ ಮಾಡಲು ಖಾಸಗಿ ಸ್ಲೀಪರ್ ಬಸ್‌ಗಳನ್ನೇ ಅವಲಂಬಿಸಿದ್ದರು. ಖಾಸಗಿ ಬಸ್‌ಗಳು ಅತ್ಯಾಕರ್ಷಕ, ಹಾಗೂ ಎಸಿ, ನಾನ್ ಎಸಿ, ಲಕ್ಸರಿ ಸೀಟ್‌ಗಳನ್ನು ಹೊಂದಿರುತ್ತವೆ. ಆದ್ದರಿಂದ ಹೆಚ್ಚಿನ ಪ್ರಯಾಣಿಕರು ಲಕ್ಸರಿ ಖಾಸಗಿ ಬಸ್‌ಗಳನ್ನು ಅವಲಂಬಿಸಿದ್ದರು. ಇದೀಗ ಕೆಎಸ್‌ಆರ್‌ಟಿಸಿಯು ಕೂಡ ತಾವು ಏನು ಕಡಿಮೆ ಇಲ್ಲ ಎನ್ನುವಂತೆ ಸ್ಲೀಪರ್ ಬಸ್ ಸೇವೆಯನ್ನು ಬಿಡುವ ಮೂಲಕ ಖಾಸಗಿ ಬಸ್‌ಗಳಿಗೆ ಸೆಡ್ಡು ಹೊಡೆದಿದೆ.

ನೂತನ ಬಸ್ ಸೇವೆ ಪ್ರಾರಂಭ
15 "ಅಂಬಾರಿ ಉತ್ಸವ" ಸ್ಲೀಪರ್ ಬಸ್ ಸೇವೆಗೆ ಮಂಗಳವಾರ ಚಾಲನೆ ನೀಡಲಾಗಿದೆ. ವಿಮಾನಯಾನ ಅನುಭವವನ್ನು ವೋಲ್ವೋ ಮಲ್ಟಿ ಆಕ್ಸೆಲ್ ಬಿಎಸ್ 4 - 9600 ಸ್ಲೀಪರ್ ಬಸ್ಸುಗಳ ಮೂಲಕ ನೀಡಲಾಗುತ್ತಿದೆ. ಅಂಬಾರಿ ಉತ್ಸವ "ಸಂಭ್ರಮದ ಪ್ರಯಾಣ" ಎನ್ನುವ ಟ್ಯಾಗ್‌ಲೈನ್ ಅನ್ನು ಹೊಂದಿದ್ದು, ಹೊಸ ಬಸ್ ಸೇವೆಯನ್ನು ಕೆಎಸ್‌ಆರ್‌ಟಿಸಿ ಪ್ರಾರಂಭಿಸಿದೆ.

ಬಸ್‌ನ ಉದ್ದ ಎಷ್ಟು?, ಇಲ್ಲಿದೆ ವಿವರ
ಸಿಎಂ ಬಸವರಾಜ ಬೊಮ್ಮಾಯಿ ಮಂಗಳವಾರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವೋಲ್ವೋ ಮಲ್ಟಿ ಆಕ್ಸೆಲ್ ಬಿಎಸ್ 4 - 9600 ಸ್ಲೀಪರ್ ಬಸ್ಸುಗಳಿಗೆ ಚಾಲನೆ ನೀಡಿದರು. ಸದ್ಯ ಕೆಎಸ್‌ಆರ್‌ಟಿಸಿ ನಿರ್ವಹಿಸುವ ಎಲ್ಲಾ ಸ್ಲೀಪರ್ ಕೋಚ್‌ಗಳಿಗಿಂತ ಅತ್ಯುತ್ತಮ ಸೌಕರ್ಯ ಹೊಂದಿರುವ ಬಸ್ ಇದಾಗಿದೆ. ಇ ಬಸ್‌ನಲ್ಲಿ ವಿಮಾನದಂತಹ ಪ್ರಯಾಣದ ಅನುಭವವನ್ನು ಪಡೆಯಬಹುದಾಗಿದೆ. 15 ಮೀ ಉದ್ದ ಇರುವ ಈ ಬಸ್‌ನಲ್ಲಿ ಪ್ರಯಾಣ ಅತ್ಯಂತ ಸುಖಕರವಾಗಿರುತ್ತದೆ.

ಈ ಬಸ್ ಯಾವೆಲ್ಲ ಸೌಲಭ್ಯಗಳನ್ನ ಹೊಂದಿದೆ?
1. ಈ ಬಸ್‌ನಲ್ಲಿ 40 ಆಸನಗಳಿದ್ದು, ಪ್ರಯಾಣಿಕರು ಮಲಗುವ ಮತ್ತು ಕುಳಿತುಕೊಳ್ಳುವ ಉತ್ತಮ ಇನ್ ಕ್ಲಾಸ್ ಹೆಡ್ ರೂಮ್ ಸೌಲಭ್ಯವನ್ನು ಕೂಡ ಹೊಂದಿದೆ.
2. ಪಿಯು ಫೋಮ್ ಸ್ಲೀಪರ್ ಆಸನಗಳು ಇರಲಿದೆ.
3. ಬ್ಯಾಕ್ ರೆಸ್ಟ್ ಪ್ರೀಮಿಯಂ ದರ್ಜೆಯ "ಅಂಬಾರಿ ಉತ್ಸವ" ಬಸ್
ಬರ್ತ್ ಕ್ಯೂಬಿಕಲ್ ಇಂಟಿಗ್ರೇಟೆಡ್ ಪರಿಕರ, ರೀಡಿಂಗ್ ಲೈಟ್ಸ್, ಏರ್ ವೆಂಟ್ಸ್ ಅನ್ನು ಹೊಂದಿದೆ.
4. ಯುಎಸ್‌ಬಿ ಪೋರ್ಟ್, ಮೊಬೈಲ್ ಹೋಲ್ಡರ್ ಸೇರಿ ಪ್ರಯಾಣಿಕರಿಗೆ ಹಲವು ಸೌಲಭ್ಯಗಳನ್ನು ಇಲ್ಲಿ ನೀಡಲಾಗಿದೆ.
5. 12 ಸ್ಪೀಡ್ ಐ ಶಿಫ್ಟ್ ಮೆಕ್ಯಾನಿಕಲ್ ಗೇರ್ ಬಾಕ್ಸ್ ಕೂಡ ಇರಲಿವೆ.
6. ಅಡ್ವಾನ್ಸ್ ಇಂಟೆಲಿಜೆಂಟ್ ಶಿಫ್ಟಿಂಗ್ ತಂತ್ರಜ್ಞಾನ ಹೊಂದಿದೆ.
7. 9600 ಮಾದರಿಯಲ್ಲಿ ಕವಚ ಜೊತೆಗೆ ಸುಧಾರಿತ ಅಬ್ಸರ್ವರ್ ಅನ್ನು ಕೂಡ ಹೊಂದಿದೆ.
8. ಗರಿಷ್ಠ ಪ್ಯಾಸೆಂಜರ್ ಕಾರ್ಗೋ ಶೇಖರಣೆ ವ್ಯವಸ್ಥೆಯನ್ನು ಇಲ್ಲಿ ನೀಡಲಾಗಿದೆ.
9. ಉನ್ನತ ದರ್ಜೆಯ ಪರೀಕ್ಷಿತ ಮತ್ತು ಮೌಲ್ಲೀಕರಿಸಿದ ವಸ್ತುಗಳ ಬಳಕೆ
10. ಸಂಪೂರ್ಣ ಪೆನೆಲಿಂಗ್, ಬಂಡಿಂಗ್ ಪ್ರಕ್ರಿಯೆ ಕೂಡ ಇದೆ. ಹೀಗೆ ಈ "ಅಂಬಾರಿ ಉತ್ಸವ" ಬಸ್ ಪ್ರಯಾಣಿಕರ ಅನುಕೂಲತೆಗೆ ತಕ್ಕಂತೆ ಸೌಲಭ್ಯಗಳನ್ನು ಹೊಂದಿದೆ.
ಅಂಬಾರಿ ಉತ್ಸವ ಬಸ್ ತುಂಬಾ ವಿಶೇಷತೆಯನ್ನು ಹೊಂದಿದ್ದು, ಪ್ರಯಾಣಿಕರನ್ನು ತನ್ನತ್ತ ಸೆಳೆಯುತ್ತಿದೆ. ಹಾಗೆಯೇ "ಅಂಬಾರಿ ಉತ್ಸವ" ಎನ್ನುವ ಹೆಸರು ಕೂಡ ಅತ್ಯಾಕರ್ಷಕವಾಗಿದೆ. 50 ಬಸ್‌ಗಳಲ್ಲಿ 15 ಬಸ್‌ಗಳನ್ನು ರಸ್ತೆಗೆ ಇಳಿಸಲಾಗಿದ್ದು, ಇನ್ನುಳಿದ ಬಸ್‌ಗಳನ್ನು ಮುಂದಿನ ದಿನಗಳಲ್ಲಿ ಬಿಡಲಾಗುತ್ತದೆ ಎಂದು ಇಲಾಖೆ ಮಾಹಿತಿ ನೀಡಿದೆ.












Click it and Unblock the Notifications