Get Updates
Get notified of breaking news, exclusive insights, and must-see stories!

SSLC Exam 2026: ವಿದ್ಯಾರ್ಥಿಗಳಿಗೆ ಟಾಪರ್‌ಗಳ ಉತ್ತರ ಪತ್ರಿಕೆಗಳು ಸಿಗುವಂತೆ ಮಾಡಿದ ಶಿಕ್ಷಣ ಮಂಡಳಿ

ಬೆಂಗಳೂರು: ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ 2026 ಮತ್ತು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ 2026 ನಡೆಸುವ ತಯಾರಿಯಲ್ಲಿ ತೊಡಗಿರುವ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (KSEAB) ವಿದ್ಯಾರ್ಥಿಗಳಿಗೆ ಅನುಕೂಲಕರ ವಾತಾವರಣ ನಿರ್ಮಿಸುತ್ತಿದೆ. ಇದೀಗ ವಿದ್ಯಾರ್ಥಿಗಳು ಹೆಚ್ಚಿನ ಅಂಕ ಗಳಿಸಲು ಸಹಾಯವಾಗುವಂತೆ ಹಳೆಯ ಟಾಪರ್ ಗಳ ಉತ್ತರ ಪತ್ರಿಕೆ ಲಭ್ಯವಾಗುವಂತೆ ಮಾಡಿದೆ.

ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಬೋರ್ಡ್‌ ಪರೀಕ್ಷೆಗಳನ್ನು ಸೂಕ್ತವಾಗಿ ಭೇದಿಸಿ ಪ್ರತಿ ವಿಷಯಗಳಲ್ಲಿ ಗರಿಷ್ಠ ಅಂಕಗಳನ್ನು ಹೇಗೆ ಪಡೆಯಬೇಕು ಎಂಬ ಆಲೋಚನೆ, ಪ್ರಶ್ನೆ ವಿದ್ಯಾರ್ಥಿಗಳಲ್ಲಿ ಸದಾ ಕಾಡುತ್ತಿರುತ್ತದೆ. ಅವರು ಸೇರಿದಂತೆ ಎಲ್ಲ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಕಳೆದ ವರ್ಷ ಟಾಪರ್ ಆಗಿ ಹೊರ ಹೊಮ್ಮಿದ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳನ್ನು ವೆಬ್‌ಸೈಟ್‌ನಲ್ಲಿ ಮಂಡಳಿ ಒದಗಿಸಿದೆ.

KSEAB Upload Last Year SSLC PUC Toppers Paper Sheets to Boost Students Marks in Board Exam 2026

ಪ್ರತಿ ವಿಷಯದಲ್ಲಿ 3 ಟಾಪರ್ ಶೀಟ್ ಅಪ್ಲೋಡ್

ಸದರಿ ವಾರ್ಷಿಕ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ಪ್ರತಿ ವಿಷಯದಲ್ಲಿ ಪೂರ್ಣ ಅಂಕಗಳನ್ನು ಗಳಿಸುವಂತಾಗಬೇಕು. ಹೀಗಾಗಿ ಸಾರ್ವಜನಿಕವಾಗಿ ಹಳೆಯ ಉತ್ತರ ಪತ್ರಿಕೆಗಳನ್ನು ಲಭ್ಯವಾಗುವಂತೆ ಮಾಡಲಾಗಿದೆ. ವೆಬ್‌ಸೈಟ್‌ ಮೂಲೆಯಲ್ಲಿ ಅಪ್‌ಲೋಡ್ ಮಾಡಲಾಗಿದ್ದು, ವಿದ್ಯಾರ್ಥಿಗಳು ಗಮನಿಸಬಹುದು. ಪ್ರತಿಯೊಂದು ವಿಷಯದಲ್ಲಿ ತಲಾ ಮೂರು ಟಾಪರ್‌ಗಳ ಉತ್ತರ ಪತ್ರಿಕೆ ಅಪ್‌ಲೋಡ್ ಮಾಡಲಾಗಿದೆ. ಈ ನೀತಿಯನ್ನು ಪರೀಕ್ಷಾ ಮಂಡಳಿಯು 2019 ರಲ್ಲಿ ನಿಲ್ಲಿಸಿತ್ತು. ಇದೀಗ ಮತ್ತೆ ಆರಂಭಿಸಿದೆ.

ಈಗಾಗಲೇ ಮಂಡಳಿ ಮಾದರಿ ಪ್ರಶ್ನೆ ಪತ್ರಿಕೆ ಉತ್ತರ ಪತ್ರಿಕೆ ಬಿಡುಗಡೆ ಮಾಡಿತ್ತು. ಅದರ ಬೆನ್ನಲ್ಲೆ ಟಾಪರ್‌ಗಳ ಉತ್ತರ ಪತ್ರಿಕೆಗಳನ್ನು ಇಂದಿನ ಪರೀಕ್ಷಾರ್ಥಿಗಳಿಗೆ ಸ್ಪೂರ್ತಿ ಒದಗಿಸಲು, ಹೆಚ್ಚು ಅಂಕ ಗಳಿಸಲು ಪ್ರೇರಣೆ ನೀಡಲಿವೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಶಿಕ್ಷಣ ಮಂಡಳಿಯಿಂದಲೇ ಪ್ರಶ್ನೆ ಪತ್ರಿಕೆ ತಯಾರು

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಮಕ್ಕಳ ಫಲಿತಾಂಶದಲ್ಲಿ ಸುಧಾರಣೆ ತರಲು ಈ ಕ್ರಮ ಅನುಸರಿಸಿದೆ. ಈ ಬಾರಿ ಎಸ್‌ಎಸ್‌ಎಲ್‌ಸಿಗೆ ಎರಡರ ಬದಲಾಗಿ ಮೂರು ಪೂರ್ವ ತಯಾರಿ ಪರೀಕ್ಷೆಗಳನ್ನು ನಡೆಸಲಿದೆ. ದ್ವಿತೀಯ ಪಿಯುಸಿಗೆ ಬರೋಬ್ಬರಿ ಎರಡು ಪೂರ್ವ ತಯಾರಿಕೆ ಪರೀಕ್ಷೆಗಳು ನಡೆಯಲಿವೆ. ಶಿಕ್ಷಣ ಮಂಡಳಿಯೇ ಪ್ರಶ್ನೆ ಪತ್ರಿಕೆ ತಯಾರು ಮಾಡಲಿದೆ.

ಇದೇ ತಿಂಗಳು 2026 ಜನವರಿ ಮೊದಲ ಮತ್ತು ಕೊನೆಯ ವಾರಗಳಲ್ಲಿ ಮತ್ತು ಫೆಬ್ರವರಿಯಲ್ಲಿ ಎಸ್‌ಎಸ್‌ಎಲ್‌ಸಿ ಪೂರ್ವಸಿದ್ಧತಾ ಪರೀಕ್ಷೆಗಳು ಜರುಗಬಹುದು. ಅಂತಿಮ ಪೂರ್ವಸಿದ್ಧತಾ ಪರೀಕ್ಷೆಯ ನಂತರ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆಗೆ 20 ದಿನ ಸಿಗುತ್ತದೆ. ಪೂರ್ವ ತಯಾರಿಗೂ ಮಂಡಳಿ ತನ್ನ (https://kseab.karnataka.gov.in/) ವೆಬ್‌ಸೈಟ್‌ ಒದಗಿಸಿದ ಬಹು ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಸಿಸಬೇಕು. ಹಳೆಯ ಪ್ರಶ್ನೆ ಉತ್ತರ ಪತ್ರಿಕೆ ಡೌನ್‌ಲೋಡ್ ಮಾಡಿಕೊಂಡು ಓದಬಹುದು. ಪ್ರಶ್ನೆ ಪತ್ರಿಕೆಯ ನೀಲನಕ್ಷೆ ಮತ್ತು ಇತರ ಕಲಿಕಾ ಸಾಮಗ್ರಿಗಳನ್ನು ಅಧಿಕೃತ ಜಾಲತಾಣದಲ್ಲಿ ನೀಡಲಾಗಿದ್ದು, ವಿದ್ಯಾರ್ಥಿಗಳು ಕೂಲಂಕುಷವಾಗಿ ಪರಿಶೀಲಿಸಲಾಗುತ್ತದೆ.

2026 ಎಸ್‌ಎಸ್‌ಎಲ್‌ಸಿ, ಪಿಯುಸಿ ವೇಳಾಪಟ್ಟಿ

ಮಾರ್ಚ್ 18 ರಿಂದ ಏಪ್ರಿಲ್ 2 ರವರೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ನಡೆಯಲಿವೆ. ದ್ವಿತೀಯ ಪಿಯು ಪರೀಕ್ಷೆಗಳು ಫೆಬ್ರವರಿ 28 ರಿಂದ ಮಾರ್ಚ್ 17 ರವರೆಗೆ ನಡೆಯಲಿವೆ. ಈ ವರ್ಷ ಪರೀಕ್ಷೆಯ ಅರ್ಹತಾ ಅಂಕಗಳನ್ನು 35ರ ಬದಲಾಗಿ ಕೇಲವ 33ಕ್ಕೆ ಇಳಿಸಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+