2nd PUC Exam 2026: ಪ್ರಾಯೋಗಿಕ ಪರೀಕ್ಷೆ ವೇಳಾಪಟ್ಟಿ ರಿಲೀಸ್: ಮೌಲ್ಯಮಾಪನದಲ್ಲಿ ಬಾರೀ ಬದಲಾವಣೆ
ಬೆಂಗಳೂರು: ಪ್ರಸಕ್ತ ವರ್ಷದ 2026 ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ (KSEAB) ಗುಡ್ ನ್ಯೂಸ್ ನೀಡಿದೆ. ದ್ವಿತೀಯ ಪಿಯುಸಿ ಪ್ರಾಯೋಗಿಕ (Practical) ಪರೀಕ್ಷೆಯ ವೇಳಾಪಟ್ಟಿ ಬಿಡುಗಡೆ ಮಾಡಿ ಶನಿವಾರ ಸುತ್ತೋಲೆ ಹೊರಡಿಸಿದೆ. ಜನವರಿ 27 ರಿಂದ ನಡೆಯಲಿರುವ ಈ ಪರೀಕ್ಷೆಗಳ ಸಂಪೂರ್ಣ ಜವಾಬ್ದಾರಿ ಹೊಣೆಯನ್ನು ಆಯಾ ಜಿಲ್ಲಾ ಉಪನಿರ್ದೇಶಕರಿಗೆ ವಹಿಸಿದೆ. ಅಲ್ಲದೇ ಈ ಬಾರಿ ಮೌಲ್ಯಮಾಪನದಲ್ಲಿ ಭಾರೀ ಬದಲಾವಣೆ ಮಾಡಿರುವುದಾಗಿ ತಿಳಿಸಿದೆ.
ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆಗಳನ್ನು ಜಿಲ್ಲಾ ಮಟ್ಟದಲ್ಲಿ ಆಯಾ ಜಿಲ್ಲಾ ಉಪನಿರ್ದೇಶಕರ ನೇತೃತ್ವದಲ್ಲಿ ಪ್ರತಿ ವರ್ಷ ನಡೆಸಿದಂತೆ ಪ್ರಾಯೋಗಿಕ ಪರೀಕ್ಷೆ- 2026 ಸಹ ಜನವರಿ 27 ಫೆಬ್ರವರಿ 14ರವರೆಗೆ ನಡೆಸಲಾಗುವುದು ಎಂದು ರಾಜ್ಯ ಸರ್ಕಾರ ಶಿಕ್ಷಣ ಇಲಾಖೆ ಹೊರಡಿಸಿದ ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ವಿದ್ಯಾರ್ಥಿಗಳು ಪ್ರಾಯೋಗಿಕ ಪರೀಕ್ಷೆಗಳಲ್ಲಿ ಹೆಚ್ಚು ಅಂಕಗಳನ್ನು ಪಡೆದು ತಾತ್ವಿಕ ಪರೀಕ್ಷೆಯಲ್ಲಿ ಕಡಿಮೆ ಅಂಕಗಳನ್ನು ಪಡೆಯುವುದು ಇಲಾಖೆ ಗಮನಕ್ಕೆ ಬಂದಿದೆ. ಹೀಗಾಗಿ ಪ್ರಾಯೋಗಿಕ ಪರೀಕ್ಷೆಗಳ ಮೌಲ್ಯಮಾಪನ ಪಾರದರ್ಶಕತೆ ಬಗ್ಗೆ ಅನುಮಾನ ವ್ಯಕ್ತವಾಗುತ್ತಿದೆ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ 2025-26ರ ಪ್ರಾಯೋಗಿಕ ಪರೀಕ್ಷೆಗಳನ್ನು ಹಲವು ಕಟ್ಟುನಿಟ್ಟಿನ ಕ್ರಮಗಳಡಿ ನಡೆಸುವಂತೆ ಜಿಲ್ಲಾ ಉಪ ನಿರ್ದೇಶಕರುಗಳಿಗೆ ನಿರ್ದೇಶಿಸಲಾಗಿದೆ. ಲೋಪದೋಷಗಳಾದರೆ ಕ್ರಮ ಜರುಗಿಸಲಿದೆ. ಈ ಸಂಬಂಧ ಜಿಲ್ಲಾ ಉಪ ನಿರ್ದೇಶಕರಿಗೆ ಒಂದಷ್ಟು ಜವಾಬ್ದಾರಿ ನೀಡಿದೆ. ಅವುಗಳೇನು?
ಜಿಲ್ಲಾ ಉಪನಿರ್ದೇಶಕರ ಕರ್ತವ್ಯ-ಜವಾಬ್ದಾರಿ
* 2026ನೇ ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆಗಳನ್ನು ಮಂಡಳಿ ನಿಗದಿಪಡಿಸಿದ ಪರೀಕ್ಷಾ ಕೇಂದ್ರಗಳಲ್ಲೇ, ಜಿಲ್ಲಾ ಮಟ್ಟದ ವೇಳಾಪಟ್ಟಿಯಂತೆ ಸೂಕ್ತ ಅವಧಿಯಲ್ಲಿ ನಡೆಸಬೇಕು.
* ಪ್ರತಿ ಜಿಲ್ಲೆಯಲ್ಲಿ ಪ್ರತಿ ವಿಷಯಕ್ಕೆ ಒಬ್ಬ ವಿಜ್ಞಾನ ಪ್ರಾಂಶುಪಾಲರನ್ನು ಸಂಚಾಲಕರಾಗಿ ಹಾಗೂ ಗರಿಷ್ಠ ಇಬ್ಬರು ಹಿರಿಯ ವಿಜ್ಞಾನ ಉಪನ್ಯಾಸಕರನ್ನು ಸದಸ್ಯರಾಗಿ ಒಳಗೊಂಡ ಜಿಲ್ಲಾ ಪ್ರಾಯೋಗಿಕ ಪರೀಕ್ಷಾ ಸಮಿತಿಯನ್ನು ರಚಿಸಬೇಕು.
* ವಿದ್ಯಾರ್ಥಿ ತಂಡಗಳ ವೇಳಾಪಟ್ಟಿ ಪ್ರಕಟಿಸಿದ ನಂತರ ಯಾವ ಕಾರಣಕ್ಕೂ ತಂಡ ಅಥವಾ ಸಮಯ ಬದಲಾವಣೆಗೆ ಅವಕಾಶ ನೀಡಬಾರದು.
* ಪ್ರಾಯೋಗಿಕ ಪರೀಕ್ಷಕರಾಗಿ ಮಂಡಳಿಯ ಮೌಲ್ಯಮಾಪಕರ ಪೋರ್ಟಲ್ ನಲ್ಲಿ ನೋಂದಣಿ ಹೊಂದಿರುವ ಹಾಗೂ ಮೌಲ್ಯಮಾಪಕರ ಕೋಡ್ ಇರುವ ಉಪನ್ಯಾಸಕರನ್ನೇ ನೇಮಿಸಬೇಕು.
* ಆಂತರಿಕ ಪರೀಕ್ಷಕರ ಲಭ್ಯತೆ ಇಲ್ಲದಿದ್ದಲ್ಲಿ, ಆ ಕೇಂದ್ರಕ್ಕೆ ಇಬ್ಬರು ಬಾಹ್ಯ ಪರೀಕ್ಷಕರನ್ನು ನೇಮಕ ಮಾಡಬೇಕು.
* ಜಿಲ್ಲಾ ಸಮಿತಿಯು ಎಲ್ಲಾ ಪರೀಕ್ಷಾ ಕೇಂದ್ರಗಳ ವೇಳಾಪಟ್ಟಿಯನ್ನು ತಯಾರಿಸಿ, ಆಂತರಿಕ ಮತ್ತು ಬಾಹ್ಯ ಪರೀಕ್ಷಕರನ್ನು ಮಂಡಲಿ ನಿಯಮಾನುಸಾರ ಪಾರದರ್ಶಕವಾಗಿ ನೇಮಿಸಬೇಕು.
* ಒಂದು ಪರೀಕ್ಷಾ ಕೇಂದ್ರದಲ್ಲಿ ಒಬ್ಬ ಆಂತರಿಕ ಪರೀಕ್ಷಕರನ್ನು ಗರಿಷ್ಠ ನಾಲ್ಕು ದಿನಗಳು ಅಥವಾ 12 ತಂಡಗಳಿಗೆ ಮಾತ್ರ ನಿಯೋಜಿಸಬೇಕು.
* ಆಂತರಿಕ ಹಾಗೂ ಬಾಹ್ಯ ಪರೀಕ್ಷಕರ ನೇಮಕಾತಿ ಪಟ್ಟಿಯನ್ನು ಕಡ್ಡಾಯವಾಗಿ ಜಂಟಿ ನಿರ್ದೇಶಕರು (ಪಿಯು ಪರೀಕ್ಷೆ), ಕೆಎಸ್‌ಇಎಬಿಗೆ ಸಲ್ಲಿಸಬೇಕು.
* ಸೂಕ್ಷ್ಮ ಹಾಗೂ ಅನುದಾನ ರಹಿತ ಕಾಲೇಜುಗಳ ಪರೀಕ್ಷಾ ಕೇಂದ್ರಗಳಿಗೆ ಸರ್ಕಾರಿ/ಅನುದಾನಿತ ಕಾಲೇಜಿನ ಪ್ರಾಂಶುಪಾಲರು ಅಥವಾ ಹಿರಿಯ ವಿಜ್ಞಾನ ಉಪನ್ಯಾಸಕರನ್ನು ಮುಖ್ಯ ಅಧೀಕ್ಷಕರಾಗಿ ನೇಮಿಸಬೇಕು.
* ಅನುದಾನ ರಹಿತ ಕಾಲೇಜುಗಳಿಗೆ ಸರ್ಕಾರಿ ಅಥವಾ ಅನುದಾನಿತ ಪಿಯು ಕಾಲೇಜುಗಳ ಉಪನ್ಯಾಸಕರನ್ನೇ ಬಾಹ್ಯ ಪರೀಕ್ಷಕರಾಗಿ ನೇಮಕ ಮಾಡಬೇಕು.
* ಬಾಹ್ಯ ಪರೀಕ್ಷಕರ ನೇಮಕದಲ್ಲಿ ಮೊದಲ ಆದ್ಯತೆಯನ್ನು ಸರ್ಕಾರಿ, ನಂತರ ಅನುದಾನಿತ ಕಾಲೇಜುಗಳ ಉಪನ್ಯಾಸಕರಿಗೆ ನೀಡಬೇಕು.
* ಪ್ರಾಯೋಗಿಕ ಪರೀಕ್ಷೆಗಳನ್ನು ಪಠ್ಯಕ್ರಮದಲ್ಲಿರುವ ಎಲ್ಲಾ ಪ್ರಯೋಗಗಳನ್ನು ಒಳಗೊಂಡಂತೆ ನಡೆಸುವಂತೆ ಮುಖ್ಯ ಅಧೀಕ್ಷಕರಿಗೆ ಸೂಚಿಸಿ, ಅವರಿಂದ ದೃಢೀಕರಣ ಪಡೆಯಬೇಕು.
* ಪ್ರತಿ ನಿತ್ಯದ ಪರೀಕ್ಷೆಗೆ ಆಂತರಿಕ ಹಾಗೂ ಬಾಹ್ಯ ಪರೀಕ್ಷಕರು ಪರೀಕ್ಷೆ ಆರಂಭಕ್ಕೆ ಕನಿಷ್ಠ ಒಂದು ಗಂಟೆ ಮುಂಚಿತವಾಗಿ ಹಾಜರಾಗಬೇಕು.
* ಪರೀಕ್ಷಾ ಅಂಕಗಳನ್ನು ಕೇಂದ್ರಗಳಿಂದಲೇ ಆನ್‌ಲೈನ್ ಮೂಲಕ ಮಂಡಲಿ ಸರ್ವರ್‌ಗೆ ಸಲ್ಲಿಸಿ, ಪ್ರವೇಶ ಪತ್ರಗಳನ್ನು ಪಿಯು ಪೋರ್ಟಲ್‌ನಿಂದ ಮುದ್ರಿಸಿ ವಿದ್ಯಾರ್ಥಿಗಳಿಗೆ ವಿತರಿಸುವ ವ್ಯವಸ್ಥೆ ಮಾಡಬೇಕು.
-
ಶಾಲಾ ಮಕ್ಕಳ ಮೊಬೈಲ್ ಬಳಕೆ ನಿರ್ಬಂಧ: 'ಡಿಜಿಟಲ್ ಕರಡು ನೀತಿ' ಬಿಡುಗಡೆಗೊಳಿಸಿದ ರಾಜ್ಯ ಸರ್ಕಾರ -
UPSC ಪೂರ್ವಭಾವಿ ಪರೀಕ್ಷೆ ಮುಗಿದ ತಕ್ಷಣವೇ ಕೀ ಉತ್ತರಗಳ ಬಿಡುಗಡೆಗೆ ಕೇಂದ್ರ ಸರ್ಕಾರದ ನಿರ್ಧಾರ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Yami Gautam: ಕನ್ನಡದಲ್ಲೇ ಧುರಂಧರ್ ನಿರ್ದೇಶಕನ ಪತ್ನಿ ಯಾಮಿ ಗೌತಮ್ ಮೊದಲ ಸಿನಿಮಾ, ಸ್ಟಾರ್ ಹೀರೋ ಜೊತೆ ಚೊಚ್ಚಲ ನಟನೆ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ












Click it and Unblock the Notifications