KRS Dam: ಪ್ರಾರಂಭವಾಗುತ್ತಿದೆ ಬೇಸಿಗೆ: ಪ್ರಮುಖ ಜಲಾಶಯಗಳ ನೀರಿನ ಮಟ್ಟ ಎಷ್ಟಿದೆ?
ರಾಜ್ಯದಲ್ಲಿ ಬೇಸಿಗೆ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಫೆಬ್ರವರಿಯಲ್ಲೇ ರಾಜ್ಯದಲ್ಲಿ ವಾಡಿಕೆಗಿಂತ ಹೆಚ್ಚಿನ ತಾಪಮಾನ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಈಗಾಗಲೇ ಬಿಸಿಲು ಹೆಚ್ಚಾಗಿದ್ದು ಬೇಸಿಗೆಯ ಆರಂಭದ ಮುನ್ಸೂಚನೆ ಸಿಕ್ಕಿದೆ. ಕಳೆದ ವರ್ಷ ರಾಜ್ಯದಲ್ಲಿ ಉತ್ತಮ ಮಳೆಯಾಗಿದ್ದರಿಂದ ರಾಜ್ಯದ ಬಹುತೇಕ ಜಲಾಶಯಗಳು ಭರ್ತಿಯಾಗಿದ್ದವು.
ಡಿಸೆಂಬರ್ ಕೊನೆಯವರೆಗೂ ರಾಜ್ಯದಲ್ಲಿ ಮಳೆಯಾಗಿದ್ದರಿಂದ ಜಲಾಶಯಗಳು ವರ್ಷದ ಕೊನೆಯವರೆಗೂ ಗರಿಷ್ಠ ಮಟ್ಟದ ನೀರಿನ ಸಂಗ್ರಹವನ್ನು ಹೊಂದಿದ್ದವರು. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ರಾಜ್ಯದ ಜಲಾಶಯಗಳಲ್ಲಿ ಈಗಲೂ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹವಾಗಿದೆ.

ರಾಜ್ಯದ ಪ್ರಮುಖ ಜಲಾಶಯಗಳ ಒಟ್ಟಾರೆ ನೀರಿನ ಸಂಗ್ರಹ ಸಾಮರ್ಥ್ಯ 895.62 ಟಿಎಂಸಿ ಆಗಿದ್ದು, ಸದ್ಯ ಎಲ್ಲಾ ಜಲಾಶಯಗಳು ಸೇರಿ ಒಟ್ಟು 530.10 ಟಿಎಂಸಿ ನೀರು ಸಂಗ್ರಹದಲ್ಲಿದೆ. ಕಳೆದ ವರ್ಷ ಫೆಬ್ರವರಿ 20ರಂದು ಜಲಾಶಯಗಳ ಒಟ್ಟಾರೆ ನೀರಿನ ಸಂಗ್ರಹ 331.08 ಟಿಎಂಸಿ ಇತ್ತು. ಹಾಗಾದರೆ ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಎಷ್ಟಿದೆ ಎನ್ನುವ ಮಾಹಿತಿ ಇಲ್ಲಿದೆ.
ಪ್ರಮುಖ ಜಲಾಶಯಗಳ ನೀರಿನ ಮಟ್ಟ
ಲಿಂಗನಮಕ್ಕಿ ಜಲಾಶಯ
ಗರಿಷ್ಠ ನೀರಿನ ಮಟ್ಟ : 554 ಮೀಟರ್/ 151.75 ಟಿಎಂಸಿ
ಇಂದಿನ ನೀರಿನ ಮಟ್ಟ: 547.36 ಮೀಟರ್ / 86.14 ಟಿಎಂಸಿ
ಒಳಹರಿವು: 474 ಕ್ಯೂಸೆಕ್ಸ್
ಹೊರಹರಿವು: 8368 ಕ್ಯೂಸೆಕ್ಸ್
ಸೂಪಾ ಜಲಾಶಯ
ಗರಿಷ್ಠ ನೀರಿನ ಮಟ್ಟ : 564 ಮೀಟರ್/ 145.33 ಟಿಎಂಸಿ
ಇಂದಿನ ನೀರಿನ ಮಟ್ಟ: 549.99 ಮೀಟರ್ / 91.46 ಟಿಎಂಸಿ
ಒಳಹರಿವು: 0
ಹೊರಹರಿವು: 7086 ಕ್ಯೂಸೆಕ್ಸ್
ವಾರಾಹಿ ಜಲಾಶಯ
ಗರಿಷ್ಠ ನೀರಿನ ಮಟ್ಟ : 594.36 ಮೀಟರ್/ 31.10 ಟಿಎಂಸಿ
ಇಂದಿನ ನೀರಿನ ಮಟ್ಟ: 587.32 ಮೀಟರ್ / 19 ಟಿಎಂಸಿ
ಒಳಹರಿವು: 0
ಹೊರಹರಿವು: 1635 ಕ್ಯೂಸೆಕ್ಸ್
ಹಾರಂಗಿ ಜಲಾಶಯ
ಗರಿಷ್ಠ ನೀರಿನ ಮಟ್ಟ : 2859.00 ಅಡಿ / 8.50 ಟಿಎಂಸಿ
ಇಂದಿನ ನೀರಿನ ಮಟ್ಟ: 2837.00 ಅಡಿ / 3.855 ಟಿಎಂಸಿ
ಒಳಹರಿವು: 130 ಕ್ಯೂಸೆಕ್ಸ್
ಹೊರಹರಿವು: 100 ಕ್ಯೂಸೆಕ್ಸ್
ಹೇಮಾವತಿ ಜಲಾಶಯ
ಗರಿಷ್ಠ ನೀರಿನ ಮಟ್ಟ: 2922 ಅಡಿ / 37.10 ಟಿಎಂಸಿ
ಇಂದಿನ ನೀರಿನ ಮಟ್ಟ: 2901.91 ಅಡಿ / 20.955 ಟಿಎಂಸಿ
ಒಳಹರಿವು: 117 ಕ್ಯೂಸೆಕ್ಸ್
ಹೊರಹರಿವು: 280 ಕ್ಯೂಸೆಕ್ಸ್
ಕೆಆರ್ ಎಸ್ ಜಲಾಶಯ
ಗರಿಷ್ಠ ನೀರಿನ ಮಟ್ಟ: 124.80 ಅಡಿ / 49.45ಟಿಎಂಸಿ
ಇಂದಿನ ನೀರಿನ ಮಟ್ಟ: 115.40 ಅಡಿ / 37.512 ಟಿಎಂಸಿ
ಒಳಹರಿವು: 215 ಕ್ಯೂಸೆಕ್ಸ್
ಹೊರಹರಿವು: 4293 ಕ್ಯೂಸೆಕ್ಸ್
ಕಬಿನಿ ಜಲಾಶಯ
ಗರಿಷ್ಠ ನೀರಿನ ಮಟ್ಟ : 2284 ಅಡಿ / 19.52 ಟಿಎಂಸಿ
ಇಂದಿನ ನೀರಿನ ಮಟ್ಟ: 2276.28 ಅಡಿ / 14.971 ಟಿಎಂಸಿ
ಒಳಹರಿವು: 77 ಕ್ಯೂಸೆಕ್ಸ್
ಹೊರಹರಿವು: 1650 ಕ್ಯೂಸೆಕ್ಸ್
ಭದ್ರಾ ಜಲಾಶಯ
ಗರಿಷ್ಠ ನೀರಿನ ಮಟ್ಟ : 2158 ಅಡಿ / 71.54 ಟಿಎಂಸಿ
ಇಂದಿನ ನೀರಿನ ಮಟ್ಟ: 2143 ಅಡಿ / 53.96 ಟಿಎಂಸಿ
ಒಳಹರಿವು: 60 ಕ್ಯೂಸೆಕ್ಸ್
ಹೊರಹರಿವು: 3729 ಕ್ಯೂಸೆಕ್ಸ್
ತುಂಗಭದ್ರಾ ಜಲಾಶಯ
ಗರಿಷ್ಠ ನೀರಿನ ಮಟ್ಟ : 1633 ಅಡಿ / 105.79 ಟಿಎಂಸಿ
ಇಂದಿನ ನೀರಿನ ಮಟ್ಟ: 1610.66 ಅಡಿ / 38.89 ಟಿಎಂಸಿ
ಒಳಹರಿವು: 0
ಹೊರಹರಿವು: 9043 ಕ್ಯೂಸೆಕ್ಸ್
ಘಟಪ್ರಭಾ ಜಲಾಶಯ
ಗರಿಷ್ಠ ನೀರಿನ ಮಟ್ಟ : 2175 ಅಡಿ / 51.00 ಟಿಎಂಸಿ
ಇಂದಿನ ನೀರಿನ ಮಟ್ಟ: 2140.32 ಅಡಿ / 27.20 ಟಿಎಂಸಿ
ಒಳಹರಿವು: 0
ಹೊರಹರಿವು: 5742 ಕ್ಯೂಸೆಕ್ಸ್
ಮಲಪ್ರಭಾ ಜಲಾಶಯ
ಗರಿಷ್ಠ ನೀರಿನ ಮಟ್ಟ : 2079.50 ಅಡಿ / 37.73 ಟಿಎಂಸಿ
ಇಂದಿನ ನೀರಿನ ಮಟ್ಟ: 2063.41 ಅಡಿ / 19.46 ಟಿಎಂಸಿ
ಒಳಹರಿವು: 0
ಹೊರಹರಿವು: 2241 ಕ್ಯೂಸೆಕ್ಸ್
ಆಲಮಟ್ಟಿ ಜಲಾಶಯ
ಗರಿಷ್ಠ ನೀರಿನ ಮಟ್ಟ : 519.60 ಮೀಟರ್ / 123.08 ಟಿಎಂಸಿ
ಇಂದಿನ ನೀರಿನ ಮಟ್ಟ: 514.48 ಮೀಟರ್ / 58.81 ಟಿಎಂಸಿ
ಒಳಹರಿವು: 0
ಹೊರಹರಿವು: 13559 ಕ್ಯೂಸೆಕ್ಸ್
ನಾರಾಯಣಪುರ ಜಲಾಶಯ
ಗರಿಷ್ಠ ನೀರಿನ ಮಟ್ಟ : 492.25 ಮೀಟರ್ / 33.31 ಟಿಎಂಸಿ
ಇಂದಿನ ನೀರಿನ ಮಟ್ಟ: 491.04 ಮೀಟರ್ / 28.13 ಟಿಎಂಸಿ
ಒಳಹರಿವು: 11128 ಕ್ಯೂಸೆಕ್ಸ್
ಹೊರಹರಿವು: 10423 ಕ್ಯೂಸೆಕ್ಸ್
ವಾಣಿ ವಿಲಾಸ ಸಾಗರ
ಗರಿಷ್ಠ ನೀರಿನ ಮಟ್ಟ : 2140 ಅಡಿ / 30.42 ಟಿಎಂಸಿ
ಇಂದಿನ ನೀರಿನ ಮಟ್ಟ: 2140 ಅಡಿ / 29.76 ಟಿಎಂಸಿ
ಒಳಹರಿವು: 0 ಕ್ಯೂಸೆಕ್ಸ್
ಹೊರಹರಿವು: 705 ಕ್ಯೂಸೆಕ್ಸ್












Click it and Unblock the Notifications