ಆಸ್ತಿ ಅಕ್ರಮ ತಡೆಗೆ ಲ್ಯಾಂಡ್ ಬೀಟ್ ವ್ಯವಸ್ಥೆ ಜಾರಿ ಎಂದ ಸಚಿವ ಕೃಷ್ಣಭೈರೇಗೌಡ
ರಾಜ್ಯ ಕಾಂಗ್ರೆಸ್ ಸರ್ಕಾರವು ಆಸ್ತಿ ವಿಚಾರದಲ್ಲಿ ಮತ್ತೊಂದು ಮಹತ್ವದ ಬದಲಾವಣೆಗೆ ಮುಂದಾಗಿದೆ. ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಇ ಖಾತಾ, ಬಿ ಖಾತಾ ಹಾಗೂ ರಿಜಿಸ್ಟ್ರೇಷನ್ ವಿಚಾರದಲ್ಲಿ ಕೆಲವೊಂದು ಪ್ರಮುಖ ಬದಲಾವಣೆಗಳನ್ನು ರಾಜ್ಯ ಸರ್ಕಾರವು ಜಾರಿ ಮಾಡಿದೆ. ಇದೀಗ ಆಸ್ತಿ ವಿಚಾರದಲ್ಲಿ ಪ್ರಮುಖವಾಗಿ ಲ್ಯಾಂಡ್ ಬೀಟ್ ಎನ್ನುವ ವ್ಯವಸ್ಥೆಯನ್ನು ಜಾರಿ ಮಾಡುವುದಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಈ ಸಂಬಂಧ ಕಂದಾಯ ಸಚಿವ ಕೃಷ್ಣಭೈರೇಗೌಡ ಅವರು ಮಾಹಿತಿ ನೀಡಿದ್ದಾರೆ.
ಆಸ್ತಿಗಳ ಸಂರಕ್ಷಣೆ ಹಾಗೂ ಆಸ್ತಿ ಮಾರಾಟದಲ್ಲಿ ಅವ್ಯವಹಾರವನ್ನು ತಪ್ಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರವು ಹಲವು ಕ್ರಮಗಳನ್ನು ಅನುಸರಿಸುತ್ತಿದೆ. ಇದೀಗ ಅಧಿಕಾರಿಗಳಿಗೆ ಬಿಸಿ ಮುಟ್ಟಿಸುವುದರೊಂದಿಗೆ ಆಸ್ತಿಯ ವಿಚಾರದಲ್ಲಿ ಮತ್ತೊಂದು ಬದಲಾವಣೆಯನ್ನು ಜಾರಿ ಮಾಡುವುದಕ್ಕೆ ರಾಜ್ಯ ಸರ್ಕಾರ ನಿರ್ಧರಿಸಿದೆ. ಸರ್ಕಾರಿ ಅಧಿಕಾರಿಗಳು ಸಹ ಆಸ್ತಿ ರಿಜಿಸ್ಟ್ರೇಷನ್ ವಿಚಾರದಲ್ಲಿ ಮೋಸ ಮಾಡುತ್ತಿದ್ದು. ಇದೀಗ ಇದಕ್ಕೆ ಕಡಿವಾಣ ಹಾಕುವುದಕ್ಕೆ ಸರ್ಕಾರ ಮುಂದಾಗಿದೆ. ಕೆಲವು ನಕಲಿ ದಾಖಲೆಗಳನ್ನು ಸೃಷ್ಟಿಸಿ ಸರ್ಕಾರಿ ಭೂಮಿಯನ್ನು ಕಬಳಿಸುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಅಲ್ಲದೇ ಆಸ್ತಿ ರಿಜಿಸ್ಟ್ರೇಷನ್ ವಿಚಾರದಲ್ಲೂ ಮೋಸ ಆಗುತ್ತಿದ್ದು ಇದನ್ನು ತಪ್ಪಿಸುವುದಕ್ಕೆ ಲ್ಯಾಂಡ್ ಬೀಟ್ ವ್ಯವಸ್ಥೆ ಜಾರಿ ಮಾಡುವುದಕ್ಕೆ ಸರ್ಕಾರ ಮುಂದಾಗಿದೆ.

ಬೆಂಗಳೂರಿನಲ್ಲಿ 3 ವರ್ಷಗಳಲ್ಲಿ ಸರ್ಕಾರಿ ಭೂಮಿ ಅತಿಕ್ರಮಣಕ್ಕೆ ಸಂಬಂಧಿಸಿದಂತೆ ಒಟ್ಟು 272 ದೂರುಗಳು ದಾಖಲಾಗಿವೆ. ಯಲಹಂಕದಿಂದಲೇ 77 ದೂರುಗಳು ದಾಖಲಾಗಿವೆ. ಈ ರೀತಿ ಸ್ವೀಕರಿಸಿದ ಒಟ್ಟು ದೂರುಗಳಲ್ಲಿ ಇದೀಗ 132 ಎಕರೆ ಅತಿಕ್ರಮಣಗಳನ್ನು ತೆರವು ಮಾಡಲಾಗಿದೆ. ಶನಿವಾರ ಮತ್ತು ಭಾನುವಾರ ಕೂಡ ಅತಿಕ್ರಮಣ ತೆರವು ಅಭಿಯಾನಗಳನ್ನು ನಡೆಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಕೃಷ್ಣಭೈರೇಗೌಡ ಅವರು ಹೇಳಿದ್ದಾರೆ.
ಕರ್ನಾಟಕದಲ್ಲಿ ಕೆಲವು ಸರ್ಕಾರಿ ಅಧಿಕಾರಿಗಳು ಸಹ ಈ ಅಕ್ರಮದಲ್ಲಿ ಶಾಮೀಲು ಆಗುತ್ತಿದ್ದಾರೆ. ಕೆಲವರು ನಕಲಿ ಭೂ ದಾಖಲೆಗಳನ್ನು ಸೃಷ್ಟಿ ಮಾಡುತ್ತಿರುವ ಆರೋಪಗಳು ಕೇಳಿ ಬಂದಿವೆ. ಅಧಿಕಾರಿಗಳು ಅತಿಕ್ರಮಣದ ವಿಷಯಗಳಿಗೆ ಸಂಬಂಧಿಸಿದಂತೆ ಕೋರ್ಟ್‌ನಿಂದ ನೋಟಿಸ್ ಬರುವ ವರೆಗೂ ಯಾವುದೇ ಪ್ರತಿಕ್ರಿಯೆಯನ್ನು ಸಹ ಕೊಡುವುದಿಲ್ಲ. ಪ್ರಕರಣಗಳು ಕೋರ್ಟ್‌ನ ನಿಂದನೆಗೆ ಆಹ್ವಾನ ನೀಡುವ ಮಟ್ಟಕ್ಕೆ ಹೋದಾಗ ಎಚ್ಚರಗೊಳ್ಳುತ್ತಾರೆ ಎಂದು ಅವರು ಹೇಳಿದ್ದಾರೆ.
ಸರ್ಕಾರಿ ಭೂಮಿ ಹಾಗೂ ಆಸ್ತಿಗಳ ವಿಚಾರದಲ್ಲಿ ಕೆಲವೊಂದು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿರುವುದಾಗಿ ಹೇಳಲಾಗಿದೆ. ಆಸ್ತಿಗಳಲ್ಲಿ ಅಕ್ರಮವನ್ನು ತಪ್ಪಿಸುವ ಉದ್ದೇಶದಿಂದ ಒಂದು ವರ್ಷ ಒಳಗಾಗಿ ಲ್ಯಾಂಡ್ ಬೀಟ್ ವ್ಯವಸ್ಥೆಯನ್ನು ಜಾರಿ ಮಾಡಲಾಗುವುದು. ಇದರಲ್ಲಿ ಜಿಯೋ-ಫೆನ್ಸಿಂಗ್ ಮಾಡುವ ಮೂಲಕ ಸರ್ಕಾರಿ ಭೂಮಿಯನ್ನು ಗುರುತಿಸುವುದು ಹಾಗೂ ಅತಿಕ್ರಮಣಗಳನ್ನು ತಪ್ಪಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಸರ್ಕಾರವು ಆಸ್ತಿ ವಿಚಾರದಲ್ಲಿ ಕೆಲವೊಂದು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿದೆ. ಅದರಲ್ಲಿ ಸರ್ಕಾರಿ ಜಾಗಗಳ ಸಂರಕ್ಷಣೆಯೂ ಒಂದಾಗಿದೆ. ಇದರ ನಡುವೆ ಇ ಖಾತಾ ಹಾಗೂ ಬಿ ಖಾತಾ ನೀಡುವುದು ಸಹ ಜೋರಾಗಿ ನಡೆದಿದೆ. ರಾಜ್ಯದಲ್ಲಿ ಬಿ ಖಾತಾ ನೀಡುವುದಕ್ಕೆ ಮೂರು ತಿಂಗಳುಗಳ ಗಡುವು ನೀಡಲಾಗಿದೆ. ಇದೀಗ ಈ ಗಡುವಿನ ಅರ್ಧ ಅವಧಿ ಮುಕ್ತಾಯವಾದಂತೆ ಆಗಿದೆ.












Click it and Unblock the Notifications