KPSC ಅಕ್ರಮಕ್ಕೆ ಲೋಕಸಭೆಯಲ್ಲಿ ಸಂಸದ ತೇಜಸ್ವಿ ಸೂರ್ಯ ವಾಗ್ದಾಳಿ; ಕಾಂಗ್ರೆಸ್‌ನಿಂದ ತಿರುಗೇಟು!
KPSC: ಕರ್ನಾಟಕ ಕಾಂಗ್ರೆಸ್ ಸರ್ಕಾರವು ಇಬ್ಬಗೆಯ ನೀತಿ ಅನುಸರಿಸುತ್ತಿದೆ ಎಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರು ವಾಗ್ದಾಳಿ ನಡೆಸಿದ್ದಾರೆ. ಲೋಕಸಭೆಯಲ್ಲಿ ಮಾತನಾಡಿರುವ ಸಂಸದ ತೇಜಸ್ವಿ ಸೂರ್ಯ ಅವರು, ಕರ್ನಾಟಕ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮಾನ್ಯ ಮುಖ್ಯಮಂತ್ರಿಗಳೇ! ದೆಹಲಿಗೆ ಬಂದು ನ್ಯಾಯದ ನಾಟಕವಾಡುವ ನಿಮಗೆ, ಕರ್ನಾಟಕದಲ್ಲಿ KPSC ಯನ್ನು ಬಟಾಬಯಲಾಗಿ 'ಹರಾಜು ಮಾರುಕಟ್ಟೆ' ಮಾಡಿರುವುದು ಅನ್ಯಾಯ ಅಂತ ಅನ್ನಿಸುವುದಿಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ.
80 ಲಕ್ಷ ರೂಪಾಯಿ ಚೆಲ್ಲಿದವರಿಗೆ ಮಾತ್ರ ಸರ್ಕಾರಿ ಹುದ್ದೆ ಎನ್ನುವುದಾದರೆ, ಹಗಲಿರುಳು ಕಷ್ಟಪಟ್ಟು ಓದುವ ಬಡವರ ಮತ್ತು ಶ್ರಮಜೀವಿಗಳ ಮಕ್ಕಳ ಭವಿಷ್ಯವೇನು? ಅವರ ಅರ್ಹತೆಗೆ ನಿಮ್ಮ ಸರ್ಕಾರದ ದರಪಟ್ಟಿಯಲ್ಲಿ ಬೆಲೆಯೇ ಇಲ್ಲವೇ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರೇ ಕೇವಲ KPSC ಅಧ್ಯಕ್ಷರ ಅಮಾನತಿನಿಂದ ಈ ಬೃಹತ್ ಅಕ್ರಮದ ಕಳಂಕ ಮುಚ್ಚಿಹೋಗುತ್ತದೆಯೇ, ಕಾಂಗ್ರೆಸ್ ಸರ್ಕಾರದ ನಿಗದಿತ ದರಪಟ್ಟಿಯಲ್ಲಿ ಕೇವಲ ಶ್ರೀಮಂತರ ಮಕ್ಕಳಿಗೆ ಮಾತ್ರ ಅವಕಾಶವೇ, ಲಕ್ಷಾಂತರ ನಿರುದ್ಯೋಗಿ ಯುವಕರ ಕಣ್ಣೀರು ಮತ್ತು ಅವರ ಕುಟುಂಬಗಳ ಭವಿಷ್ಯದ ಜೊತೆ ಚೆಲ್ಲಾಟವಾಡಬೇಡಿ ಎಂದು ಸಂಸದ ತೇಜಸ್ವಿ ಸೂರ್ಯ ಅವರು ಎಚ್ಚರಿಸಿದ್ದಾರೆ.

ನನಗೆ ಗಣಿತ ವಿಷಯದಲ್ಲಿ ಹೆಚ್ಚು ಆಸಕ್ತಿ ಇರಲಿಲ್ಲ. ಆದರೂ ಅದನ್ನು ಕಡ್ಡಾಯವಾಗಿ ಓದಬೇಕಾಯಿತು. ಕಾಲೇಜು ದಿನಗಳಲ್ಲಿ ನನಗೆ ರಸಾಯನಶಾಸ್ತ್ರ, ಭೌತಶಾಸ್ತ್ರದ ಜೊತೆಗೆ ಇತಿಹಾಸ ಮತ್ತು ಅರ್ಥಶಾಸ್ತ್ರ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇತ್ತು. ಆದರೆ, ಆಗ ಹಲವು ವಿಷಯಗಳ ಆಯ್ಕೆ ಇರಲಿಲ್ಲ. ಅಂದಿನ ಕಾಂಗ್ರೆಸ್ ಆಡಳಿತ ಅವಧಿಯಲ್ಲಿ ಇಂದಿನಂತೆ Multi-disciplinary ಶಿಕ್ಷಣ ವ್ಯವಸ್ಥೆ ಇರಲಿಲ್ಲ. ವಿದ್ಯಾರ್ಥಿಗಳಿಗೆ ತಮ್ಮ ಆಸಕ್ತಿಯ ವಿಷಯಗಳನ್ನು ಆಯ್ಕೆ ಮಾಡಿಕೊಂಡು ಓದುವ ಸ್ವಾತಂತ್ರ್ಯವೂ ಇರಲಿಲ್ಲ ಎಂದು ಸಂಸದ ತೇಜಸ್ವಿ ಸೂರ್ಯ ಅವರು ವಾಗ್ದಾಳಿ ನಡೆಸಿದ್ದಾರೆ.
KPSC: ಕರ್ನಾಟಕ ಕಾಂಗ್ರೆಸ್‌ನಿಂದ ತಿರುಗೇಟು
ಇನ್ನು ಸಂಸದ ತೇಜಸ್ವಿ ಸೂರ್ಯ ಅವರ ವಿರುದ್ಧ ಕರ್ನಾಟಕ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ. ಅರೆರೆ ತೇಜಸ್ವಿ ಸೂರ್ಯ ಅವರೇ ಅರ್ಧ ಸತ್ಯವನ್ನಷ್ಟೇ ಏಕೆ ನುಡಿಯುತ್ತೀರಿ, ಪೂರ್ಣ ಸತ್ಯವನ್ನೇ ಹೇಳಿ. ನೀವು ಹೇಳಿದಂತೆ ಕೆಪಿಎಸ್‌ಸಿ ಸಂಪೂರ್ಣವಾಗಿ ಭ್ರಷ್ಟಾಚಾರದ ಕೂಪವಾಗಿದೆ. ಆದರೆ ಕಳೆದ 3 ವರ್ಷಗಳಿಂದ ಮಾತ್ರವಲ್ಲ. ಕಳೆದ ಐದು ವರ್ಷಗಳಿಂದ ಎಂಬುದು ಮರೆತು ಹೋಯಿತೇ. ಕೆಪಿಎಸ್‌ಸಿ ಈ ಮಟ್ಟಕ್ಕೆ ಹದಗೆಡಲು ನಿಮ್ಮ ಸರ್ಕಾರದ್ದೇ ಸಿಂಹಪಾಲು ಇರುವುದನ್ನು ಹೇಳಬೇಕಲ್ಲವೇ?
ಕೆಪಿಎಸ್ ಸಿ ಅಧ್ಯಕ್ಷ ಸ್ಥಾನಕ್ಕೆ ಶಿವಶಂಕರಪ್ಪ ಸಾಹುಕಾರ ಅವರನ್ನು ಅಧ್ಯಕ್ಷರನ್ನಾಗಿ ಮಾಡಿದ್ದು ನೀವೇ ಅಲ್ಲವೇ? ಇತರೆ ಪ್ರಮುಖ ಸದಸ್ಯರು ಆಯ್ಕೆಯಾಗಿದ್ದು ನಿಮ್ಮ ಸರ್ಕಾರದ ಅವಧಿಯಲ್ಲಿ ಅಲ್ಲವೇ? ಇನ್ನು ಭ್ರಷ್ಟ ಅಧ್ಯಕ್ಷರ ರಕ್ಷಣೆಗೆ ನ್ಯಾಯಾಲಯದಲ್ಲಿ ವಾದ ಮಾಡುತ್ತಿರುವವರು, ನ್ಯಾಯಾಧೀಶರಿಂದ ಮಂಗಳಾರತಿ ಎತ್ತಿಸಿಕೊಂಡವರು ನಿಮ್ಮವರೇ ಅಲ್ಲವೇ? ಕೆಪಿಎಸ್‌ಸಿ ಭ್ರಷ್ಟಾಚಾರವನ್ನು ಕಾಂಗ್ರೆಸ್ ತಲೆಗೆ ಕಟ್ಟಿ, ನೀಟ್ ಅಕ್ರಮದಲ್ಲಿ ಹೋಗಿರುವ ಮಾನವನ್ನು ಉಳಿಸಿಕೊಳ್ಳುವ ದುರ್ಗತಿ ಬಂದಿದೆಯೇ ಎಂದು ಕರ್ನಾಟಕ ಕಾಂಗ್ರೆಸ್ ಪ್ರಶ್ನೆ ಮಾಡಿದೆ.


Click it and Unblock the Notifications
