KPSC Recruitment: KAS 384 ಹುದ್ದೆಗಳ ನೇಮಕಾತಿಗೆ ಪರೀಕ್ಷೆ, ಪ್ರವೇಶ ಪತ್ರ ಬಿಡುಗಡೆ, ಪರಿಶೀಲನೆ ಅಪ್ಡೇಟ್ಸ್
ಬೆಂಗಳೂರು, ಡಿಸೆಂಬರ್ 05: ಕರ್ನಾಟಕ ಲೋಕಸೇವಾ ಆಯೋಗವು ( KPSC) ವಿವಿಧ ಇಲಾಖೆಗಳ ವ್ಯಾಪ್ತಿಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ ಇದೇ ಡಿಸೆಂಬರ್ 29ರಂದು ಪರೀಕ್ಷೆ ನಿಗದಿ ಮಾಡಿದೆ. ಒಟ್ಟು 384 ಗೆಜೆಟೆಡ್ ಪ್ರಬೋಷನ್ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ. ಈ ಪರೀಕ್ಷೆಗೆ ಸಂಬಂಧಿಸಿದಂತೆ ಪ್ರವೇಶ ಪತ್ರ ಬಿಡುಗಡೆ, ಡೌನ್‌ಲೋಡ್ ಹಾಗೂ ನಿರೀಕ್ಷಿತ ಕಟ್ ಆಫ್ ಅಂಕಗಳ ಅಪ್ಡೇಟ್ ಮಾಹಿತಿ ಇಲ್ಲಿದೆ.
ಕರ್ನಾಟಕ ಲೋಕಸೇವಾ ಆಯೋಗವು (KPSC) ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಗೆಜೆಟೆಡ್ ಪ್ರಬೋಷನ್ ಹುದ್ದೆಗಳ ಅಡಿಯಲ್ಲಿ ಗ್ರೂಪ್ 'ಎ' ಮತ್ತು ಗ್ರೂಪ್ 'ಬಿ' ಹುದ್ದೆಗಳ ನೇಮಕಾತಿಗೆ ಪರೀಕ್ಷೆ ಆಯೋಜಿಸಿದೆ. ಅಭ್ಯರ್ಥಿಗಳು ತಹಶೀಲ್ದಾರ್, ಸಹಾಯಕ ನಿರ್ದೇಶಕ ಸೇರಿದಂತೆ ವಿವಿಧ ಇಲಾಖೆಗಳ ವ್ಯಾಪ್ತಿಯ ಹುದ್ದೆಗಳಿಗೆ ಸೇರುವ ಸಂಬಂಧ ಪರೀಕ್ಷೆ ಎದುರಿಸಲಿದ್ದಾರೆ.

ಕೆಪಿಎಸ್‌ಸಿಯು ಕೆಎಎಸ್ ಪರೀಕ್ಷೆ ನಡೆಸಲು ಇದೇ ವರ್ಷ ಮಾರ್ಚ್, ಏಪ್ರಿಲ್ ತಿಂಗಳಲ್ಲಿ ಅರ್ಜಿಯನ್ನು ಆಹ್ವಾನಿಸಲಾಗಿತ್ತು. ಅದರಂತೆ ಡಿಸೆಂಬರ್ ಅಂತ್ಯಕ್ಕೆ ಪರೀಕ್ಷೆ ನಡೆಯಲಿದೆ. ಸದ್ಯ ಪರೀಕ್ಷೆಯು ಸಮೀಪಿಸುತ್ತಿದ್ದು, ಹಾಲ್‌ಟಿಕೆಟ್ (ಪ್ರವೇಶ ಪತ್ರ) ಬಿಡುಗಡೆ ಯಾವಾಗ ಎಂದು ಅಭ್ಯರ್ಥಿಗಳು ತಲೆಕೆಡಿಸಿಕೊಂಡಿದ್ದಾರೆ.
KPSC KAS ಪರೀಕ್ಷೆ, ನೇಮಕಾತಿ ಪೂರ್ಣ ಮಾಹಿತಿ
ನೇಮಕಾತಿ ಸಂಸ್ಥೆ: ಕರ್ನಾಟಕ ಲೋಕಸೇವಾ ಆಯೋಗವು (KPSC)
ಪರೀಕ್ಷೆ ಹೆಸರು: ಕರ್ನಾಟಕ ಆಡಳಿತಸೇವೆ (KAS)
ಒಟ್ಟು ಹುದ್ದೆಗಳು: 384
ಅರ್ಜಿ ಆಹ್ವಾನ ದಿನಾಂಕ: ಮಾರ್ಗ 14ರಿಂದ ಏಪ್ರಿಲ್ 15
ಪರೀಕ್ಷೆ ದಿನಾಂಕ: ಡಿಸೆಂಬರ್
ಪರೀಕ್ಷೆಗಳೂ: ಪ್ರಿಲಿಮ್‌ನರಿ, ಮೇನ್ಸ್, ಇಂಟರ್‌ವ್ಯೂವ್
ಹಾಲ್‌ಟಿಕೆಟ್ ಬಿಡುಗಡೆ ಅಪ್ಡೇಟ್ಸ್
KAS ಪರೀಕ್ಷೆಯು 29 ಡಿಸೆಂಬರ್ ಜರುಗಲಿದೆ. ಪರೀಕ್ಷಾ ಕೇಂದ್ರ, ಸಮಯ, ಅಭ್ಯರ್ಥಿ ಹೆಸರು, ನೋಂದಣಿ ಸಂಖ್ಯೆ ಸೇರಿದಂತೆ ಎಲ್ಲ ಮಾಹಿತಿ ಒಳಗೊಂಡ ಪ್ರವೇಶ ಪತ್ರವನ್ನು ಕೆಪಿಎಸ್‌ಸಿ ಬಿಡುಗಡೆ ಮಾಡಲಿದೆ. ಮುಂಚಿತವಾಗಿಯೇ ಡೌನ್‌ಲೋಡ್ ಮಾಡಿಕೊಂಡು, ವಿವರಗಳನ್ನು ಪರಿಶೀಲಿಸಲಿಕೊಳ್ಳಬೇಕು. ಪರೀಕ್ಷೆ ದಿನದಂದು ಕಡ್ಡಾಯಾವಾಗಿ ಒಯ್ಯಬೇಕು.
ಸದ್ಯ ಹಾಲ್ ಟಿಕೆಟ್ ಪರೀಕ್ಷೆಯ ನಾಲ್ಕದಿಂದ ಹತ್ತು ದಿನಗಳ ಮೊದಲು ಬಿಡುಗಡೆ ಆಗುವ ಸಾಧ್ಯತೆ ಇದೆ. ಅಭ್ಯರ್ಥಿಗಳಿಗೆ https://kpsc.kar.nic.in/ ನಲ್ಲಿ ಬಿಡುಗಡೆಗೊಳ್ಳುವ ಹಾಲ್‌ಟಿಕೆಟ್ ಲಭ್ಯವಾಗಲಿದೆ.
ಹಾಲ್‌ಟಿಕೆಟ್ ಡೌನ್‌ಲೋಡ್ ಹೇಗೆ?
ಅಭ್ಯರ್ಥಿಗಳು ಮೊದಲು kpsc.kar.nic.in ವೆಬ್‌ಸೈಟ್‌ಗೆ ಭೇಟಿ ನೀಡಬೇಕು. ಬಳಿಕ ಅಲ್ಲಿ ಮುಖಪುಟದಲ್ಲಿ ಕಾಣುವ "ಕೆಎಎಸ್ ಹಾಲ್ ಟಿಕೆಟ್ 2024" ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಅಗತ್ಯವಿರುವ ಜನ್ಮ ದಿನಾಂಕ ಹಾಗೂ ನೋಂದಣಿ ಸಂಖ್ಯೆ ನಮೂದಿಸಿ ಲಾಗಿನ್ ಆಗಬೇಕು. ಸಬ್ಮಿಟ್ ಕೊಡುತ್ತಿದ್ದಂತೆ ಪರದೆ ಮೇಲೆ ನಿಮ್ಮ ಹಾಲ್ ಟಿಕೆಟ್ ಕಾಣಿಸುತ್ತದೆ. ಬಳಿಕ ಅದನ್ನು ಡೌನ್‌ಲೋಡ್ ಮಾಡಿ, ಪ್ರಿಂಟ್ ಪಡೆದುಕೊಳ್ಳಬೇಕು ಎಂದು ಕೆಪಿಎಸ್‌ಸಿ ತಿಳಿಸಿದೆ.












Click it and Unblock the Notifications