ಕಾಂಗ್ರೆಸ್ ತೊರೆದಿದ್ದ ಕೆ.ಪಿ.ನ೦ಜು೦ಡಿ ಬಿಜೆಪಿಗೆ ಅಧಿಕೃತ ಸೇರ್ಪಡೆ
ಬೆಂಗಳೂರು, ಜೂನ್ 26: ಕಾಂಗ್ರೆಸ್ ತೊರೆದಿದ್ದ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ಅಧ್ಯಕ್ಷ ಹಾಗೂ ಚಿನ್ನದ ಉದ್ಯಮಿ ಕೆ.ಪಿ.ನ೦ಜು೦ಡಿ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ತಮ್ಮ ಅಭಿಮಾನಿಗಳೊ೦ದಿಗೆ ಇ೦ದು ಅವರು ಅಧಿಕೃತವಾಗಿ ಭಾರತೀಯ ಜನತಾ ಪಾರ್ಟಿಗೆ ಸೇರಿಕೊ೦ಡರು. ಮಾಜಿ ಮುಖ್ಯಮ೦ತ್ರಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನಂಜುಂಡಿಯವರಿಗೆ ಪಕ್ಷದ ಧ್ವಜ ನೀಡುವ ಮೂಲಕ ಹಾರ್ದಿಕವಾಗಿ ಪಕ್ಷಕ್ಕೆ ಬರಮಾಡಿಕೊ೦ಡರು.

ಈ ಸ೦ದರ್ಭದಲ್ಲಿ ಕೇ೦ದ್ರ ಸಚಿವರಾದ ಅನ೦ತ ಕುಮಾರ್, ಸದಾನ೦ದಗೌಡ ಮತ್ತು ಹಿರಿಯ ನಾಯಕರುಗಳಾದ ಶೋಭಾ ಕರ೦ದ್ಲಾಜೆ, ಸಿ.ಟಿ.ರವಿ, ರಾಮಚ೦ದ್ರಗೌಡ ಮು೦ತಾದವರು ಉಪಸ್ಥಿತರಿದ್ದರು.
ಕಾಂಗ್ರೆಸ್ ಗಾಗಿ ವಿಶ್ವಕರ್ಮ ಸಮುದಾಯವನ್ನು ಒಂದುಗೂಡಿಸಿದ್ದೇನೆ ಎಂದು ಪ್ರತಿಪಾದಿಸುತ್ತಾ ಬಂದ ಚಿನ್ನದ ಉದ್ಯಮಿ ಕೆ.ಪಿ ನಂಜುಂಡಿ ಕೆಲವು ದಿನಗಳ ಹಿಂದೆ ಕಾಂಗ್ರೆಸ್ ಬಿಡುವುದಾಗಿ ಘೋಷಣೆ ಮಾಡಿ ನಂತರ ಬಿಜೆಪಿ ಸೇರುವುದಾಗಿ ತಿಳಿಸಿದ್ದರು.

ವಿಶ್ವಕರ್ಮ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ನೀಡದ್ದಕ್ಕೆ ಬೇಸರದಿಂದ ತಾನು ಕಾಂಗ್ರೆಸ್ ಬಿಡುವುದಾಗಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಪಿ. ನಂಜುಂಡಿ ಹೇಳಿದ್ದರು. ಇದೀಗ 'ಅವರ' ವಿಶ್ವಕರ್ಮ ಸಮುದಾಯಕ್ಕೆ ಬಿಜೆಪಿ ಪ್ರಾತಿನಿಧ್ಯ ನೀಡುತ್ತೋ ಕಾದು ನೋಡಬೇಕಾಗಿದೆ.












Click it and Unblock the Notifications