ವೈರಲ್ ಸುದ್ದಿ: 24 ವಿದ್ಯಾರ್ಥಿಗಳಿಗೆ ಸ್ವಂತ ಖರ್ಚಿನಲ್ಲಿ ವಿಮಾನ ಪ್ರವಾಸ ಮಾಡಿಸಿದ ಮುಖ್ಯ ಶಿಕ್ಷಕ
ಕೊಪ್ಪಳ: ಡಿಸೆಂಬರ್ 27: ರಾಜ್ಯದ ಸರ್ಕಾರಿ ಶಾಲೆಯೊಂದರ ಮಕ್ಕಳಿಗೆ ಮುಖ್ಯೋಪಾಧ್ಯಾಯರು ಸ್ವಂತ ಲಕ್ಷಾಂತರ ರೂಪಾಯಿ ಖರ್ಚಿನಲ್ಲಿ ವಿಮಾನಯಾನದ ಅವಕಾಶ ಕಲ್ಪಿಸುವ ಮೂಲಕ ವಿದ್ಯಾರ್ಥಿಗಳ ಪಠ್ಯೇತರ ಕನಸುಗಳನ್ನು ನನಸಾಗಿಸಿದ್ದಾರೆ. ಮೊದಲ ಬಾರಿಗೆ ವಿಮಾನ ಏರಿದ ಖುಷಿ ಮಕ್ಕಳ ಮೊಗದಲ್ಲಿ ರಾರಾಜಿಸಿತು. ಕೊಪ್ಪಳ ಜಿಲ್ಲೆಯ ಬಹದ್ದೂರುಬಂಡಿ ಗ್ರಾಮದ ಈ ಸರ್ಕಾರಿ ಶಾಲಾ ಶಿಕ್ಷಕರ ಈ ಕಾರ್ಯಕ್ಕೆ ಭರಪೂರ ಮೆಚ್ಚುಗೆ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಸುದ್ದಿ ವೈರಲ್ ಆಗುತ್ತಿದೆ.
ಕೊಪ್ಪಳ ಜಿಲ್ಲೆಯ ಬಹದ್ದುರಬಂಡಿ ಗ್ರಾಮದ ಸರ್ಕಾರಿ ಶಾಲೆಯ 24 ಮಕ್ಕಳು ಆಗಸದಲ್ಲಿ ಹಾರಾಡಿ ನಲಿದರು. ವಿಮಾನಯಾನದ ಅದ್ಭುತ ಕ್ಷಣ ಅನುಭವಿಸಿ ಸಂತಸಪಟ್ಟರು. ಶಾಲೆಯ ಮುಖ್ಯೋಪಾಧ್ಯಾಯ ಬೀರಪ್ಪ ಅಂಡಗಿ ಅವರು ಡಿಸೆಂಬರ್ 26 ಶುಕ್ರವಾರ ಈ ವಿಮಾನಯನ ಪ್ರಯಾಣ ಆಯೋಜಿಸಿದ್ದರು. ಮಕ್ಕಳ ಭಷಿಷ್ಯದ ಏಳಿಗೆಗೆ ಜೊತೆಗೆ ಅವರ ವಿಮಾನ ಹಾರಾಟದ ಕನಸಿಗೂ ನೀರೆರೆದಿದ್ದಕ್ಕೆ ಪೋಷಕರು ಅವರಿಗೆ ಧನ್ಯವಾದ ತಿಳಿಸಿದ್ದಾರೆ. ನೆಟ್ಟಿಗರು ಅಂಡಗಿ ಅವರಿಗೆ ಸೆಲ್ಯೂಟ್ ಹೊಡೆದಿದ್ದಾರೆ.

ಮುಖ್ಯೋಪಾಧ್ಯಾಯರು ಇದಕ್ಕೆಂದೆ ವಿವಿಧ ಮೂಲಗಳಿಂದ ಸುಮಾರು 5 ಲಕ್ಷ ರೂ.ಗಳನ್ನು ಹೊಂದಿಸಿದರು. ಆ ಹಣದಲ್ಲಿ ವಿದ್ಯಾರ್ಥಿಗಳ ವಿಮಾನಯಾನ ಪ್ರವಾಸ ಆಯೋಜಿಸಿದರು. ಈ ವಿಮಾನವು ತೋರಣಗಲ್ಲಿನ ಜಿಂದಾಲ್ ವಿಮಾನ ನಿಲ್ದಾಣದಿಂದ ಮಕ್ಕಳನ್ನು ಬೆಂಗಳೂರಿಗೆ ಕರೆತಂದರು. ವಿಮಾನ ಹೊರಡುವ ಮುನ್ನ ಸಂಸದ ರಾಜಶೇಖರ್ ಹಿಟ್ನಾಳ್ ಅವರು ವಾಯು ಪ್ರಯಾಣಕ್ಕೆ ಚಾಲನೆ ಕೊಟ್ಟರು. ಅಲ್ಲದೇ ಮುಖ್ಯೋಪಾಧ್ಯಾಯರು ಗ್ರಾಮೀಣ ಶಿಕ್ಷಣಕ್ಕೆ ನೀಡುವ ಆದ್ಯತೆ, ಸಮರ್ಪಣೆ ಭಾವವನ್ನು ಶ್ಲಾಘಿಸಿದರು.
ಮಕ್ಕಳನ್ನು ಬಿಳ್ಕೊಟ್ಟ ಪೋಷಕರು ಭಾವುಕ
ವಿಮಾನ ಏರುತ್ತಿದ್ದಂತೆ ವಿದ್ಯಾರ್ಥಿಗಳು ತಮ್ಮ ಬೋರ್ಡಿಂಗ್ ಪಾಸ್‌ಗಳನ್ನು ಹಿಡಿದು ತಮ್ಮ ಆಸನಗಳಲ್ಲಿ ಕೂತ ಫೋಟೋಗಳನ್ನು ಬಳ್ಳಾರಿ ಟ್ವಿಟ್ಜ್ (@TweetzBallari) ಎಕ್ಸ್ ಹ್ಯಾಂಡಲ್‌ನಲ್ಲಿ ಹಂಚಿಕೊಳ್ಳಲಾಗಿದೆ. ಈ ದೃಶ್ಯಗಳ ಜೊತೆಗೆ ಮಕ್ಕಳನ್ನು ಬಿಳ್ಕೊಡಲು ಏರ್‌ಪೋರ್ಟ್‌ಗೆ ಬಂದಿದ್ದ ಪೋಷಕರು, ಗ್ರಾಮಸ್ಥರಲು ಭಾವುಕರಾಗಿದ್ದು ಕಂಡು ಬಂತು. ಪೋಷಕರು ವಿಮಾನಯಾನ ಮಾಡಿದ್ದಾರೋ ಇಲ್ಲವೋ ಗೊತ್ತಿಲ್ಲ. ಆದರೆ ಮಕ್ಕಳ ಆಸೆ ನೆರವೇರಿಸಿದ ಅಂಡಗಿ ಅವರಿಗೆ ಕೃತಜ್ಞತೆ ಸಲ್ಲಿಸಿದರು.
ಮಕ್ಕಳು ಸೇರಿ 40 ಮಂದಿ ಪ್ರಯಾಣ
ಈ ವಿದ್ಯಾರ್ಥಿಗಳಲ್ಲಿ 5 ರಿಂದ 8 ನೇ ತರಗತಿಯವರೆಗೆ ತಲಾ ನಾಲ್ವರು ವಿದ್ಯಾರ್ಥಿಗಳು ಇದ್ದರು. ದೈಹಿಕ ಶಿಕ್ಷಕರು ನಡೆಸಿದ ವಿಶೇಷ ಪರೀಕ್ಷೆಯ ಅರ್ಹತೆ ಪಡೆದವರನ್ನು ವಿಮಾನಯಾನಕ್ಕೆ ಆಯ್ಕೆ ಮಾಡಲಾಗಿತ್ತು. ಈ ವಿದ್ಯಾರ್ಥಿಗಳ ಜೊತೆಗೆ, ಶಿಕ್ಷಕರು, ಮಧ್ಯಾಹ್ನದ ಊಟದ ಅಡುಗೆಯವರು ಮತ್ತು ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ (SDMC) ಸದಸ್ಯರು ಸಹ ಪ್ರವಾಸದ ಭಾಗವಾದರು. ಮಕ್ಕಳು ಸೇರಿ ಒಟ್ಟು 40 ಪ್ರಯಾಣಿಕರನ್ನು ಹೊತ್ತ ವಿಮಾನ ಬಳ್ಳಾರಿಯಿಂದ ಬೆಂಗಳೂರಿಗೆ ಹಾರಿತು.
#Koppal In an inspiring gesture, govt school headmaster Birappa Andagi sponsored a flight trip to #Bengaluru for 24 students from Bahadurbandi village many flying for the first time.
— Ballari Tweetz (@TweetzBallari) December 26, 2025
Spending nearly ₹5 lakh from his own pocket he proved education is about giving wings to… pic.twitter.com/3ob2pn7PD6
ಮಕ್ಕಳು ಶಿಕ್ಷಕರಿಗೆ ದೇವರಿದ್ದಂತೆ..!
ಗ್ರಾಮೀಣ ಹಿನ್ನೆಲೆವುಳ್ಳ ಮಕ್ಕಳು ಇಂತಹ ವಿಶಿಷ್ಟ ಅನುಭವವನ್ನು ಹೊಂದಬೇಕು. ವಿದ್ಯಾರ್ಥಿಗಳ ಕಣ್ಣಲ್ಲಿ ಇಂತಹ ಅದ್ಭತ ಕ್ಷಣ ಅನುಭವಿಸುವುದನ್ನು ಕಾಣುವುದೇ ನನಗೆ ಸಂತೋಷ ನೀಡುತ್ತದೆ. ಈ ಶಾಲೆಯಲ್ಲಿ ನಾನು ಮುಖ್ಯೋಪಾಧ್ಯಾಯರಾಗಿ ಅಧಿಕಾರ ವಹಿಸಿಕೊಂಡ ದಿನವೇ ಇಂಥದ್ದೊಂದು ಪ್ರವಾಸ ಕಾರ್ಯಕ್ರಮ ನಡೆಸುವುದಾಗಿ ಭರವಸೆ ನೀಡಿದ್ದೆ. ಅದರಂತೆ ಇಂದು ಆ ಘೋಷಣೆ ಪೂರ್ಣಗೊಳಿಸಿದ್ದೇನೆ ಎಂದು ಅಂಡಗಿ ಅವರು ಹೇಳಿದರು.
ವಿದ್ಯಾರ್ಥಿಗಳು ಶಿಕ್ಷಕರಿಗೆ ದೇವರಂತೆ ಎಂದು ಅಂಡಗಿ ಅವರು ಅಭಿಪ್ರಾಯಪಟ್ಟರು. ಈ ಮಕ್ಕಳಲ್ಲಿ ಭವಿಷ್ಯದ ಒಬ್ಬ ವೈಮಾನಿಕ ತಜ್ಞ ಅಡಗಿರಬಹುದು, ಅಧಿಕಾರಿ ಇರಬಹುದು, ಇಲ್ಲವೇ ಅತ್ಯುನ್ನತ ಹುದ್ದೆಯನ್ನು ಅಲಂಕರಿಸವವರು ಇರಬಹುದು ಎಂದರು. ನನ್ನ ವಿದ್ಯಾರ್ಥಿಗಳಿಗಾಗಿ ಇಂತಹ ಪ್ರವಾಸ ಆಯೋಜಿಸುವುದು ನನಗೆ ವೃತ್ತಿ ತೃಪ್ತಿ ನೀಡುತ್ತದೆ ಎಂದು ತಿಳಿಸಿದ್ದಾರೆಂದು 'ಡೆಕ್ಕನ್ ಕ್ರೋನಿಕಲ್' ವರದಿ ಮಾಡಿದೆ.
-
Yami Gautam: ಕನ್ನಡದಲ್ಲೇ ಧುರಂಧರ್ ನಿರ್ದೇಶಕನ ಪತ್ನಿ ಯಾಮಿ ಗೌತಮ್ ಮೊದಲ ಸಿನಿಮಾ, ಸ್ಟಾರ್ ಹೀರೋ ಜೊತೆ ಚೊಚ್ಚಲ ನಟನೆ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ












Click it and Unblock the Notifications