Kodimata Sri: ಸಿ.ಎಂ ಬದಲಾವಣೆ - ರಾಜ್ಯ ರಾಜಕೀಯದ ಬಗ್ಗೆ ಸ್ಫೋಟಕ ಭವಿಷ್ಯ ನುಡಿದ ಕೋಡಿಮಠ ಶ್ರೀಗಳು

Kodimata Sri: ಕರ್ನಾಟಕ ರಾಜಕೀಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಚರ್ಚೆ ಹಾಗೂ ಸಂಪುಟ ಪುನರ್ ರಚನೆಯ ಬಗ್ಗೆ ಸೇರಿದಂತೆ ಹಲವು ವಿಷಯಗಳು ಚರ್ಚೆ ಆಗುತ್ತಿವೆ. ಈ ರೀತಿ ಪ್ರಮುಖ ವಿಷಯಗಳು ಚರ್ಚೆ ಆಗುತ್ತಿರುವಾಗಲೇ ಕೋಡಿಮಠ ಸಂಸ್ಥಾನದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು ಸ್ಫೋಟಕ ಭವಿಷ್ಯವೊಂದನ್ನು ಹೇಳಿದ್ದಾರೆ. ಕೋಡಿಮಠ ಶ್ರೀಗಳು ಪ್ರಮುಖ ಇಬ್ಬರು ರಾಜಕೀಯ ನಾಯಕರ ಸಾವಿನ ಬಗ್ಗೆ ಭವಿಷ್ಯ ನುಡಿದಿದ್ದಾರೆ.

ಕರ್ನಾಟಕದ ರಾಜಕೀಯದಲ್ಲಿ ಹಲವು ಮಹತ್ವದ ಬೆಳವಣಿಗೆಗಳು ನಡೆದಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೊಸ ದಾಖಲೆಯನ್ನು ಬರೆದಿದ್ದಾರೆ. ಕರ್ನಾಟಕದ ಸುದೀರ್ಘ ಅವಧಿಯ ಮುಖ್ಯಮಂತ್ರಿಗಳಲ್ಲಿ ಸಿದ್ದರಾಮಯ್ಯ ಅವರು ಈಗ ಅಗ್ರಸ್ಥಾನದಲ್ಲಿ ಇದ್ದಾರೆ. ಈ ನಡುವೆ ಅವರು ಮುಖ್ಯಮಂತ್ರಿ ಹುದ್ದೆಯಿಂದ ಇಳಿಯಲಿದ್ದು, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಮುಂದಿನ ಮುಖ್ಯಮಂತ್ರಿ ಆಗಲಿದ್ದಾರೆ ಎನ್ನುವ ವಿಚಾರವು ಕಳೆದ ಒಂದು ವರ್ಷದಿಂದಲೂ ಚರ್ಚೆ ಆಗುತ್ತಿದೆ. ಇದೀಗ ಸಂಕ್ರಾಂತಿ ಕ್ರಾಂತಿ ವಿಚಾರ ಚರ್ಚೆ ನಡೆಯುತ್ತಿರುವಾಗಲೇ ಪ್ರಮುಖ ವಿಷಯವೊಂದರ ಹಾಗೂ ರಾಜ್ಯ ರಾಜಕೀಯದ ಬಗ್ಗೆ ಕೋಡಿ ಶ್ರೀಗಳು ಮಹತ್ವದ ಭವಿಷ್ಯವೊಂದನ್ನು ನುಡಿದಿದ್ದಾರೆ.

Kodimath Sri made explosive predictions about change of CM and Karnataka state politics

ಕರ್ನಾಟಕದ ರಾಜ್ಯ ರಾಜಕೀಯದಲ್ಲಿ ಕುರ್ಚಿ ಚರ್ಚೆ ಹಾಗೂ ಸಂಪುಟ ಪುನರ್ ರಚನೆ ಅಥವಾ ವಿಸ್ತರಣೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಗಂಭೀರವಾದ ಚರ್ಚೆಗಳು ನಡೆಯುತ್ತಿವೆ. ಇದೀಗ ಕೋಡಿಮಠ ಸಂಸ್ಥಾನದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗ ಸ್ಫೋಟಕ ಭವಿಷ್ಯ ನುಡಿದಿದ್ದು, ಇಬ್ಬರು ಮಹಾ ನಾಯಕರ ಸಾವಿನ ಸೂಚನೆ ಕೊಟ್ಟಿದ್ದಾರೆ.

ರಾಜಕೀಯ ಬದಲಾವಣೆ ಕಷ್ಟ

ಇನ್ನು ಕರ್ನಾಟಕದಲ್ಲಿ ಈಗ ಇರುವ ರಾಜಕೀಯ ಪರಿಸ್ಥಿತಿಯಲ್ಲಿ ಬದಲಾವಣೆ ಕಷ್ಟ, ಕಷ್ಟ . ಬದಲಾವಣೆ ಸಾಧ್ಯವೇ ಇಲ್ಲ ಎಂಬ ಪರಿಸ್ಥಿತಿ ಇದೆ ಎಂದು ಕೋಡಿ ಶ್ರೀಗಳು ಹೇಳಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ನಡುವಿನ ಕುರ್ಚಿ ಕಾದಾಟ ಬಗ್ಗೆ ಮಾತನಾಡಿರುವ ಕೋಡಿ ಶ್ರೀಗಳು ಈ ಬಾರಿಯೂ ಸಹ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಬಜೆಟ್ ಮಂಡಿಸಲಿದ್ದಾರೆ. ರಾಜ್ಯದ ಭಂಡಾರ ಬಜೆಟ್ ಅಂತ ಕರೆಯುತ್ತೇವೆ. ಆ ಬಜೆಟ್ ಆಗಬೇಕು. ಯುಗಾದಿವರೆಗೂ ಬದಲಾವಣೆ ಆಗೋದು ಕಷ್ಟವಿದೆ ಎಂದು ಭವಿಷ್ಯ ನುಡಿದಿದ್ದಾರೆ.

ಹಾಲುಮತ ಸಮಾಜದವರ ಕೈಯಿಗೆ ಅಧಿಕಾರ ಬಂದ್ರೆ ಬಿಡಿಸಿಕೊಳ್ಳುವುದು ಕಷ್ಟ. ಯಾಕಂದ್ರೆ ವಿಜಯನಗರ ಸಾಮ್ರಾಜ್ಯವನ್ನು ಕಟ್ಟಿದ ಹಕ್ಕ-ಬುಕ್ಕರು ಕೂಡ ಹಾಲುಮತದವರ. ಛತ್ರಪತಿ ಶಿವಾಜಿ ಹಾಗೂ ಕಾಶಿಯ ವಿಶ್ವನಾಥ ದೇವರ ರಾಣಿ ಅಹಲ್ಯಾಭಾಯಿಯಂತಹ ಮಹನೀಯರು ಸಹ ಹಾಲುಮತಕ್ಕೆ ಸೇರಿದವರು. ಹೀಗಾಗಿ ಹಾಲುಮತ ಪ್ರಾಚೀನ ಸಮಾಜವಾಗಿದೆ. ದೈವಗೊಳ್ಳುವ ಸಮಾಜ, ಆ ಸಮಾಜದ ಮೊಟ್ಟ ಮೊದಲ ಸಿಎಂ ಸಿದ್ದರಾಮಯ್ಯ. ಹಾಲುಮತ ಸಮಾಜಕ್ಕೆ ಅಧಿಕಾರ ಸಿಕ್ಕಿದೆ, ಅವರನ್ನ ಇಳಿಸೋದು ಕಷ್ಟ ಎಂದು ಕೋಡಿಶ್ರೀ ಮತ್ತೆ ನುಡಿದಿದ್ದಾರೆ.

ಅವರು / ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಬಿಟ್ಟು ಕೊಟ್ರೆ ಬೇರೆಯವರು ಮುಖ್ಯಮಂತ್ರಿ ಆಗಬಹುದು. ಸಿದ್ದರಾಮಯ್ಯ ಸಿಎಂ ಸ್ಥಾನವನ್ನ ಬಿಟ್ಟು ಕೊಡುವುದಿಲ್ಲ, ಇಳಿಯೋದು ಸಹ ಇಲ್ಲ. ಯುಗಾದಿ ಕಳೆದ ಮೇಲೆ ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ಹೇಳುವುದಾಗಿಯೂ ಕೋಡಿಶ್ರೀಗಳು ಹೇಳಿದ್ದಾರೆ. ಡಿಸಿಎಂ ಡಿಕೆ ಶಿವಕುಮಾರ್ ಅವರು ನಮಗೆ ಬಹಳ ಬೇಕಾದವರು. ಪರಿಚಯಸ್ಥರು ಎಂದ ಕೋಡಿಶ್ರೀ ಅವರು, ಡಿಕೆಶಿ ಬಗ್ಗೆ ಈಗ ಹೇಳುವ ಪ್ರಸಂಗ ಇಲ್ಲ ಎಂದು ಹೇಳಿದ್ದಾರೆ. ಅಲ್ಲದೇ ನಮ್ಮ ದೇಶಕ್ಕೆ ಅಪಾಯವಿದೆ. ಸಾವು - ನೋವು ಹೆಚ್ಚಾಗುವ ಲಕ್ಷಣ ಇದೆ. ಇಬ್ಬರು ಮಹಾ ವ್ಯಕ್ತಿಗಳು ಸಾವನ್ನಪ್ಪುವ ಲಕ್ಷಣಗಳು ಕಾಣುತ್ತಿದೆ ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+