ಚಂದ್ರಯಾನ-3: ನಿಜವಾಯ್ತು ಕೋಡಿಶ್ರೀ ಭವಿಷ್ಯ

ಬೆಂಗಳೂರು, ಆಗಸ್ಟ್ 23: ಜಗತ್ತು, ರಾಜಕಾರಣ, ಪರಿಸರ ಕುರಿತು ಕೋಡಿಮಠದ ಶ್ರಿ ಶಿವಾನಂದ ಸ್ವಾಮೀಜಿಗಳು ಭವಿಷ್ಯ ಹೇಳುತ್ತಾರೆ. ಅದರಲ್ಲಿ ಒಂದಷ್ಟು ವಿಚಾರಗಳು ನಿಜವಾಗಿವೆ. ಇದೀಗ ಭಾರತೀಯ ಬಾಹ್ಯಾಕಾಶ ಸಂಶೋಧಾನ ಸಂಸ್ಥೆ (ISRO) ಮತ್ತು ಚಂದ್ರಯಾನ 3 ಕುರಿತು ಕೋಡಿಮಠದ ಶ್ರೀ ಶಿವಾನಂದ ಸ್ವಾಮೀಜಿಗಳು ಹೇಳಿದ ಭವಿಷ್ಯ ನಿಜವಾಗಿದೆ.

ಚಂದ್ರನ ಮೇಲೆ ಕಾಲಿಡುತ್ತಿರುವ ಮೂರು ದೇಶಗಳ ನಂತರ 4ನೇ ದೇಶ ಹಾಗೂ ಚಂದ್ರನ ದಕ್ಷಿಣ ಭಾಗದ ಮೇಲ್ಮೈನಲ್ಲಿ ಕಾಲಿಟ್ಟ ಮೊದಲ ದೇಶ ಭಾರತ. ಚಂದ್ರಯಾನ 3 ಯಶಸ್ವಿಯಾಗಿದೆ. ಇಸ್ರೋ ವಿಜ್ಞಾನಿಗಳು ಹೊಸ ಮೈಲುಗಲ್ಲು ಸಾಧಿಸಿದ್ದಾರೆ. ಇದಕ್ಕು ಮೊದಲೇ ಕೋಡಿಶ್ರೀಗಳು ಭವಿಷ್ಯ ನುಡಿದಿದ್ದರು.

Kodi Sri Swamijis Prediction About Successful Chandrayaan 3 Came True

ಇಸ್ರೋ ಉಡಾವಣೆ ಮಾಡಿರುವ ಚಂದ್ರಯಾನ 3 ಯಶಸ್ವಿ ಆಗಲಿದೆ ಎಂದು ಭವಿಷ್ಯ ನುಡಿದಿದ್ದರು. ಇದು ಇಸ್ರೋ ವಿಜ್ಞಾನಿಗಳು ಸೇರಿದಂತೆ ಭವಿಷ್ಯವಾಣಿ ನಂಬುವ ಅನೇಕ ನಾಗರಿಕರ ಮೊಗದಲ್ಲಿ ಮಂದಹಾಸ ಮೂಡುವಂತೆ ಮಾಡಿತ್ತು. ಅದರ ಬೆನ್ನಲ್ಲೆ ಶ್ರೀಗಳ ಭವಿಷ್ಯವಾಣಿಯಂತೆ ಇಸ್ರೋ ವಿಜ್ಞಾನಿಗಳು ಚಂದ್ರನ ಮೇಲೆ ಉಪಗ್ರಹ ಇಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಚಂದ್ರಯಾನ 3 ಕುರಿತು ಭವಿಷ್ಯ ನುಡಿದ ಜೊತೆ ಜೊತೆಗೆ ಪ್ರಕೃತಿ, ಭೂಕಂಪ ಕುರಿತು ಶ್ರೀಗಳು ಮಾತನಾಡಿದ್ದರು. ಜಾಗತಿಕವಾಗಿ ಕೆಲವು ತಲ್ಲಣಗಳು ನಡೆಯಲಿವೆ. ಮಾನವ ಭಗವಂತನನ್ನು ಮರೆಯುತ್ತಿದ್ದಾನೆ. ದೇವರು ಮರೆತವರಿಗೆ ತೊಂದರೆ ಕಾದಿದೆ ಎಂದರು.

Kodi Sri Swamijis Prediction About Successful Chandrayaan 3 Came True

ಸಾವು ನೋವು ಏರಿಕೆ, ವಿಶಾನಿಲ ಬೀಸುವ ಸಾಧ್ಯತೆ

ಶ್ರಾವಣ ಮಧ್ಯಭಾಗದಲ್ಲಿ ವ್ಯಾಪಕ ಮಳೆ ಸುರಿಯಲಿದೆ. ಭೂಕಂಪನದಂತಹ ಅನಾಹುತಗಳು ಸಂಭವಿಸಲಿವೆ. ಸಾವು ನೋವುಗಳ ಸಂಖ್ಯೆ ಹೆಚ್ಚಾಗಲಿದೆ. ಜಗತ್ತಿನಲ್ಲಿ ಯುದ್ಧದ ಪರಿಸ್ಥಿತಿ ಉಂಟಾಗುವ ಸಾಧ್ಯತೆಗಳು ಇವೆ.

ಜಗತ್ತಿನಲ್ಲಿ ವಿಶಾನಿಲ ಬೀಸುವ ಪ್ರಸಂಗ ನಡೆಯಲಿದ್ದು, ವಿಶ್ವದಾದ್ಯಂತ ಇದು ವ್ಯಾಪಿಸಲಿದೆ. ಈ ವಿಶಾನಿಲದ ದುಷ್ಪರಿಣಾಮ ನಮ್ಮ ದೇಶ ಭಾರತದ ಮೇಲೂ ಉಂಟಾಗಲಿದೆ. ಎಂದು ಕೋಡಿಶ್ರೀಗಳು ಹೇಳಿದ್ದರು. ಇದರಿಂದ ಮಾರಕ ವೈರಸ್‌ ಕಾಯಿಲೆಗಳು ಮತ್ತ ವಕ್ಕರಿಸಲಿವೆಯೇ ಎಂಬ ಆತಂಕ ಜಗತ್ತನ್ನು ಕಾಡುತ್ತಿದೆ.

ಇನ್ನೂ ಅತ್ಯಧಿಕ ಮಳೆ ಸುರಿಯುವುದರಿಂದ ಕನಿಷ್ಠ ಎರಡು ದೇಶಗಳು ವಿಪರೀತ ತೊಂದರೆ ಅನುಭವಿಸಲಿವೆ. ಮುಂಗಾರು ಎಲ್ಲಡೆ ಮುಂದುವರಿಯಲಿದೆ ಎಂದಿದ್ದರು. ಮುಂದೆ ಕರ್ನಾಟಕ ಮಹಿಳಾ ಸಿಎಂ ಕಾಣಲಿದೆ ಎಂದು ಹೇಳಿದ್ದ ಶ್ರೀಗಳು ರಾಜಕರಣ ಬಗ್ಗೆ ಅಥವಾ ಮುಂಬರಲಿರುವ ಲೋಕಸಭಾ ಚುನಾವಣೆ ಕುರಿತು ಉತ್ತರಿಸಲಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+