Kodi Mutt Swamiji Prediction: ಕರ್ನಾಟಕ ಅಪಾಯದಿಂದ ಪಾರಾಗಲು ಪರಿಹಾರ ಕ್ರಮ ಏನು?-ಕೋಡಿಮಠ ಶ್ರೀಗಳು ಹೇಳಿದ್ದೇನು?
Kodi Mutt Swamiji Prediction: ಕೋಡಿಮಠದ ಶ್ರೀಗಳು ಆಗಾಗ ರಾಜ್ಯ, ದೇಶ, ರಾಜಕೀಯ ನಾಯಕರ ಬಗ್ಗೆ ಸ್ಫೋಟಕ ಭವಿಷ್ಯವನ್ನು ನುಡಿಯುತ್ತಲೇ ಇರುತ್ತಾರೆ. ಹಾಗೆಯೇ ಇದೀಗ ಮುಂದೆ ಮುನುಷ್ಟರ ಜೀವನದಲ್ಲಿ ಏನೆಲ್ಲ ಬದಲಾವಣೆಗಳು ಆಗಲಿವೆ ಅಂತಲೂ ಭಯಾನಕ ಭವಿಷ್ಯವೊಂದನ್ನು ನುಡಿದಿದ್ದಾರೆ. ಇನ್ನು ಕರ್ನಾಟಕ ಅಪಾಯದಿಂದ ತಪ್ಪಿಸಿಕೊಳ್ಳಬೇಕೆಂದರೆ ಇದಕ್ಕೆ ಪರಿಹಾರ ಮಾರ್ಗ ಏನು ಅಂತಲೂ ಹೇಳಿದ್ದಾರೆ.ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿರಾಜೇಂದ್ರ ಸ್ವಾಮೀಜಿ ಸ್ಫೋಟಕ ಭವಿಷ್ಯ ನುಡಿದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಲವು ದೇಶಗಳು ಜಲಪ್ರಳಯದಿಂದ ಮುಳುಗಿ ಹೋಗಿ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳಲಿವೆ. ಮತ್ತೊಂದೆಡೆ ರೈತರಿಗೆ ಈ ಮಳೆಯ ಕಾರಣದಿಂದ ತುಂಬಾ ನಷ್ಟಗಳು ಕೊಡ ಸಂಭವಿಸಲಿದೆ. ಮತ್ತೆ ಮನುಷ್ಯರು ಅಸ್ತಿತ್ವ ಕಳೆದುಕೊಂಡು ರಸ್ತೆಯಲ್ಲಿ ಬಿದ್ದು ಸಾಯುತ್ತಾರೆ ಎಂದು ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿರಾಜೇಂದ್ರ ಸ್ವಾಮೀಜಿ ಸ್ಫೋಟಕ ಭವಿಷ್ಯ ನುಡಿದಿದ್ದಾರೆ.

ಈ ವರ್ಷ ಅಂದರೆ 2024ರಲ್ಲಿ ಬಿಸಿಯಾದ ಜಾಗ ಪ್ರಳಯ ಆಗುತ್ತದೆ. ತಂಪಾಗಿರುವ ಪ್ರದೇಶದಲ್ಲೆಲ್ಲ ಬಿಸಿಯಾಗಿ ಬರಗಾಲದ ವಾತಾವರಣ ನಿರ್ಮಾಣವಾಗುತ್ತದೆ. ಕರ್ನಾಟಕ ಸಮಸ್ಯೆಯಿಂದ ತಪ್ಪಿಸಿಕೊಳ್ಳಲು ಅಧಿಕಾರದಲ್ಲಿ ಇರುವವರು ಮುಂಜಾಗ್ರತೆ ಕ್ರಮ ತೆಗೆದುಕೊಂಡರೆ ಈ ಎಲ್ಲಾ ಸಮಸ್ಯೆಯಿಂದ ಬಚಾವ್ ಆಗಬಹುದು ಎಂದು ಹೇಳಿದ್ದಾರೆ.
ಶ್ರಾವಣ ಮಾಸದ ಬಗ್ಗೆ ಭವಿಷ್ಯ: ಕ್ರೋಧಿನಾಮ ಸಂವತ್ಸರದಲ್ಲಿ ಅವಾಂತರಗಳೇ ಹೆಚ್ಚು ಎಂದು ಹೇಳಿದ್ದ 20 ದಿನಗಳಲ್ಲೇ ಕೇರಳದ ವಯನಾಡಿನಲ್ಲಿ ಭಾರೀ ಭೂಕುಸಿತ ಸಂಭವಿಸಿ 400ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದರು. ಬಳಿಕ ಈ ಬಗ್ಗೆ ನಾನು ಮೊದಲೇ ಭವಿಷ್ಯ ನುಡಿದಿದ್ದೆ ಎಂದು ಕೋಡಿಮಠದ ಶ್ರೀ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಹೇಳಿದ್ದರು. ಈಗ ಶ್ರಾವಣ ಮಾಸ ಶುರುವಾಗಿದೆ. ಇಡೀ ಕರ್ನಾಟಕದಲ್ಲಿ ಹಬ್ಬದ ಋತುವನ್ನು ಸಂಭ್ರಮದಿಂದಲೇ ಆಚರಣೆ ಮಾಡಿದ್ದಾರೆ.
ಶ್ರಾವಣ ಮಾಸದ ಮೊದಲ ಹಬ್ಬವಾದ ನಾಗರ ಪಂಚಮಿಯನ್ನು ಶುಕ್ರವಾರ (ಆಗಸ್ಟ್ 09) ನಾಡಿನೆಲ್ಲೆಡೆ ಸಂಭ್ರಮದಿಂದ ಆಚರಣೆ ಮಾಡಿದ್ದು, ಈ ನಡುವೆ ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಜಲಕಂಟಕ, ಅಗ್ನಿಕಂಟಕ ಹಾಗೂ ವಾಯು ಕಂಟಕಗಳು ಮತ್ತಷ್ಟು ಹೆಚ್ಚಾಗಲಿವೆ. ಈ ಕುರಿತು ಎಚ್ಚರಿಕೆಯಿಂದ ಇರಬೇಕೆಂದು ಹೇಳಿದ್ದಾರೆ.
ಇದು ಶ್ರಾವಣ ಮಾಸ, ಹಬ್ಬದ ಋತು ಅಗಿದ್ದು, ಎಚ್ಚರಿಕೆಯಿಂದ ಇರಬೇಕು. ಈ ಮಾಸದಲ್ಲಿ ಅವಘಡಗಳು ಸಂಭವಿಸಲಿದೆ ಎಂದು ಭಯಾನಕ ಭವಿಷ್ಯ ನುಡಿದಿದ್ದಾರೆ. ಈ ಮಾಸದಲ್ಲಿ ಗುರುಗಳು ಶಿಷ್ಯರಾಗುತ್ತಾರೆ, ಶಿಷ್ಯರು ಗುರುಗಳಾಗುತ್ತಾರೆ. ಹೆಣ್ಣುಮಕ್ಕಳ ಪ್ರಾಬಲ್ಯ ಹೆಚ್ಚಾಗಲಿದೆ. ರಾಜ್ಯದಲ್ಲಿ ಅತಿವೃಷ್ಟಿ ಆಗುವ ಸಾಧ್ಯತೆ ಹೆಚ್ಚಾಗಿ ಕಾಣುತ್ತಿದೆ. ಕ್ರೋಧಿನಾಮ ಸಂವತ್ಸರ ಇದಾಗಿರುವ ಕಾರಣ ದೇಶದಲ್ಲಿ ಜಲ, ಅಗ್ನಿ ಹಾಗೂ ವಾಯು ಕಂಟಕಗಳ ಸಂಖ್ಯೆ ಹೆಚ್ಚಾಗಹುದು ಎಂದು ಹೇಳಿದ್ದಾರೆ.












Click it and Unblock the Notifications