ಕಿಚ್ಚ ಸುದೀಪ್ ವಿರುದ್ಧ ಬೇಸರ ವ್ಯಕ್ತಪಡಿಸಿದ ಸಚಿವ ಕೆಎನ್ ರಾಜಣ್ಣ: ಕಾರಣವೇನು?
ಕರ್ನಾಟಕ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ನಟ ಕಿಚ್ಚ ಸುದೀಪ್ ಬಿಜೆಪಿ ಪರವಾಗಿ ಪ್ರಚಾರ ಮಾಡಿದ್ದಕ್ಕೆ ಪರ-ವಿರೋಧ ವ್ಯಕ್ತವಾಗಿತ್ತು. ಆದರೂ, ಕಿಚ್ಚ ಸುದೀಪ್ ಹಲವು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಮಾಡಿದ್ದರು. ಈಗ ಸಚಿವ ಕೆ.ಎನ್. ರಾಜಣ್ಣ ನಟ ಸುದೀಪ್ ವಿರುದ್ಧ ಬೇಸರ ಹೊರಹಾಕಿದ್ದಾರೆ.
ಕೆಎನ್ ರಾಜಣ್ಣ ಮತ್ತು ಸುದೀಪ್ ಒಂದೇ ಸಮುದಾಯದವಾಗಿದ್ದು, ತಮ್ಮ ಕ್ಷೇತ್ರದಲ್ಲಿ ತಮ್ಮ ವಿರುದ್ಧವೇ ಸುದೀಪ್ ಪ್ರಚಾರ ಮಾಡಿದ್ದು ಸಚಿವ ಕೆ.ಎನ್. ರಾಜಣ್ಣ ಅವರ ಬೇಸರಕ್ಕೆ ಕಾರಣವಾಗಿದೆ. "ಇಬ್ಬರೂ ಅಭ್ಯರ್ಥಿಗಳು ಒಂದೇ ಸಮುದಾಯದವರು ಸ್ಪರ್ಧೆ ಮಾಡಿದಾಗ, ನಮ್ಮ ವಿರುದ್ಧ ಸ್ಪರ್ಧೆ ಮಾಡಿದ್ದಕ್ಕೆ ಬೇಸರವಾಗಿದೆ. ಇನ್ನು ಮುಂದೆ ಅರ್ಥ ಮಾಡಿಕೊಂಡು ಮುಂದುವರೆಯಲಿ" ಎಂದು ಸಲಹೆ ನೀಡಿದರು.

ದಾವಣಗೆರೆಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, "ಕಿಚ್ಚ ಸುದೀಪ್ ಅವರು ನನ್ನ ವಿರುದ್ಧವೇ ಭಾಷಣ ಮಾಡಿದ್ದಾರೆ. ಸಾಮಾನ್ಯ ಕ್ಷೇತ್ರದಲ್ಲಿ ಪ್ರಚಾರ ಮಾಡಿದ್ದರೆ ಸುಮ್ಮನಾಗಬಹುದಿತ್ತು, ಆದರೆ ಪರಿಶಿಷ್ಠ ಪಂಗಡಕ್ಕೆ ಮೀಸಲಾದ ಕ್ಷೇತ್ರದಲ್ಲಿಯೂ ಅವರು ಪ್ರಚಾರ ಮಾಡಿದ್ದು ನೋವಾಗಿದೆ. ಒಂದೇ ಸಮುದಾಯದ ಇಬ್ಬರು ಸ್ಪರ್ಧೆ ಮಾಡಿದಾಗ ಒಬ್ಬರ ಪರವಾಗಿ ನಿಂತು ಪ್ರಚಾರ ಮಾಡಿದರು. ಇದರಿಂದ ನಮಗೆಲ್ಲಾ ಬೇಸರವಾಗಿದೆ" ಎಂದರು.
ಪ್ರತಿಭಾನ್ವಿತ ನಟ ಈ ರೀತಿ ಮಾಡಬಾರದು
ಒಂದೇ ಸಮುದಾಯದವರು ಒಂದೇ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದಾಗ ಇಬ್ಬರ ಪರವಾಗಿ ಪ್ರಚಾರ ಮಾಡುವುದು ನಟನ ಭವಿಷ್ಯದ ಮೇಲೆ ಪರಿಣಾಮ ಬೀರಲಿದೆ. ಅವರಿಗೆ ಅನುಭವ ಕಡಿಮೆ ಇದೆ, ಶ್ರೇಷ್ಠ ನಟನಾಗಲು ಅವಕಾಶ ಇದೆ, ಆದ್ದರಿಂದ ಅರ್ಥ ಮಾಡಿಕೊಂಡು ಮುಂದುವರೆಯಬೇಕು ಎಂದರು.
ಬ್ರಾಹ್ಮಣರ ವಿರುದ್ಧ ಕೆಎನ್ ರಾಜಣ್ಣ ಟೀಕೆ
ಬ್ರಾಹ್ಮಣರ ವಿರುದ್ಧ ಕೂಡ ಕೆಎನ್ ರಾಜಣ್ಣ ಮಾತನಾಡಿದ್ದು ಅವರು ದೇವರ ಪೂಜೆಗೆ ಒಂದು ಊದುಗಡ್ಡಿಯೂ ತರುವುದಿಲ್ಲ ಎಂದು ಹೇಳಿದ್ದಾರೆ. "ಇತ್ತೀಚಿನ ದಿನಗಳಲ್ಲಿ ಬ್ರಾಹ್ಮಣರು ಹೋಮ ಹವನ ಕಡಿಮೆ ಮಾಡಿದ್ದು, ಶೂದ್ರರೇ ಹೆಚ್ಚಾಗಿ ಹೋಮ, ಹವನ ಮಾಡುತ್ತಿದ್ದಾರೆ. ಅವರು ಒಂದು ರೂಪಾಯಿ ಖರ್ಚು ಮಾಡಿ ಹೂವ, ಊದುಬತ್ತಿ ತರಲ್ಲ, ಬೇರೆಯವರು ತಂದಿದ್ದರಲ್ಲಿ ಪೂಜೆ ಮಾಡ್ತಾರೆ, ಹೀಗೆ ಹೇಳಿದರೆ ನಾನು ಬ್ರಾಹ್ಮಣರ ವಿರೋಧಿ ಅಂತ ಅಲ್ಲ, ಇದು ನಾನು ಹೇಳಿದ್ದಲ್ಲ ನನ್ನ ಸ್ನೇಹಿತರು ಹೇಳಿದ್ದು ಎಂದರು.
ಮೇಲ್ವರ್ಗ ಎಂದು ಕರೆಯಬೇಡಿ
ನಾನು ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದು, ನನ್ನ ಕ್ಷೇತ್ರದಲ್ಲಿ ವಾಲ್ಮೀಕಿ ಸಮುದಾನ ನನಗೆ ಮತ ಹಾಕಿದ್ದಾರೆ. ಮೇಲ್ವರ್ಗ ಎಂದು ಕರೆಯಬೇಡಿ, ಮುಂದುವರೆದ ವರ್ಗ ಎಂದು ಬಳಸಿ, ನಾವು ಕೆಳವರ್ಗದವರಾ? ನಾವು ಯಾವುದರಲ್ಲೂ ಕಡಿಮೆ ಇಲ್ಲ, ಕೆಳವರ್ಗ ಅಲ್ಲ, ಅವರು ಮೇಲಿನಿಂದ ಬಂದಿಲ್ಲ, ಅವರು ನಮ್ಮಂತೆ ಬಂದವರು, ಮುಂದುವರಿದವರು, ಹಿಂದುಳಿದವರು ಅಂತ ಮಾತ್ರ ಕರೀಬೇಕು ಎಂದು ಹೇಳಿದರು.
-
ಹಿಂದುಳಿದ, ದುರ್ಬಲ ವರ್ಗದ ಮಕ್ಕಳಿಗೆ ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಶೇ. 25 ರಷ್ಟು ಉಚಿತ ಪ್ರವೇಶಕ್ಕೆ ಅರ್ಜಿ ಆಹ್ವಾನ -
ಮಾರ್ಚ್ 23ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಮಾರ್ಚ್ 24ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ












Click it and Unblock the Notifications