KMF: ದಸರಾ ಹಬ್ಬದಲ್ಲಿ ಸ್ವೀಟ್ಸ್ ಮಾರಾಟದಲ್ಲಿ ಹೊಸ ದಾಖಲೆ: ದೀಪಾವಳಿಗೂ ಹೆಚ್ಚು ಬೇಡಿಕೆ, ಅಂಕಿ-ಅಂಶಗಳು

ಬೆಂಗಳೂರು, ನವೆಂಬರ್ 10: ಪ್ರತಿ ಭಾರಿ ಹಬ್ಬಗಳ ಸಂದರ್ಭಗಳಲ್ಲಿ ಸಿಹಿ ತಿಂಡಿಗಳಿಗೆ ಬೇಡಿಕೆ ಅತ್ಯಧಿಕ ಪ್ರಮಾಣದಲ್ಲಿ ಏರಿಕೆ ಆಗುತ್ತದೆ. ಸದರಿ ದೀಪಾವಳಿ ಹಬ್ಬದಲ್ಲೂ ಸಿಹಿ ತಿಂಡಿಗಳಿಗೆ ಭಾರೀ ಏರಿಕೆ ಆಗಿದ್ದು, ಅಗತ್ಯದಷ್ಟು ಪೂರೈಸಲು 'ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಒಕ್ಕೂಟ' (KMF) ಸಜ್ಜಾಗಿದೆ. ಈ ಮಂಡಳಿ ಕಳೆದ ದಸರಾ ಹಬ್ಬದಲ್ಲಿ ಎಷ್ಟು ಟನ್ ಸಿಹಿ ತಿನಿಸು ಮಾರಾಟ ಮಾಡಿದೆ ಎಂಬುದರ ಲೆಕ್ಕ ಇಲ್ಲಿದೆ.

ಈ ವರ್ಷದ ದಸರಾ ಹಬ್ಬದಲ್ಲಿ ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಒಕ್ಕೂಟ (KMF) ಒಟ್ಟು 400 ಮೆಟ್ರಿಕ್ ಟನ್‌ಗಳಷ್ಟು ಸಿಹಿ ತಿಂಡಿಗಳನ್ನು ಮಾರಾಟ ಮಾಡಿದೆ. ಈ ಮೂಲಕ ಹಿಂದೆಂದೂ ಮಾಡಿರದೇ ಸಾರ್ವಕಾಲಿಕ ದಾಖಲೆಯನ್ನು ಮಾಡಿದೆ. ಹಬ್ಬದ ಆಸುಪಾಸಿನ 15 ದಿನಗಳಲ್ಲಿ ಕೆಎಂಎಫ್ ಮೊದಲಿಗಿಂತ ಹೆಚ್ಚು ಸಿಹಿ ಮಾರಾಟ ಮಾಡಿದೆ. ಇದರಲ್ಲಿ ಮೈಸೂರು ಪಾಕ್ ಮತ್ತು ನಂದಿನಿ ಪೇಡಾ ಹೆಚ್ಚು ಮಾರಾಟವಾಗಿದೆ ಎಂದು ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ ವರದಿ ಮಾಡಿದೆ.

KMF Sells 4 Lakh KG Sweet in Dasara Festival: More Demanded in Diwali 2023

ಇದೇ ಮಹಾಮಂಡಳವು ಈ ಹಿಂದಿನ ವರ್ಷಗಳಲ್ಲಿ ಈ ಹಬ್ಬದಲ್ಲಿ 180 ಮೆಟ್ರಿಕ್ ಟನ್ (MT) ಮತ್ತು 200 MT ಯಷ್ಟು ಸಿಹಿ ತಿಂಡಿ ಮಾರಾಟ ಮಾಡುತ್ತಿತ್ತು. ಇದೀಗ ಗರಿಷ್ಠ ಮಟ್ಟ ಮೀರಿ ಮಾರಾಟ ಮಾಡಿದೆ. ಈ ಸಿಹಿತಿಂಡಿಗಳಲ್ಲಿ ಮೈಸೂರು ಪಾಕ್ ಹೆಚ್ಚು ಮಾರಾಟವಾಗಿದೆ. ಸದ್ಯ ದೀಪಾವಳಿಗೆ ದಿನಗಣನೆ ಆರಂಭವಾಗಿದ್ದು, ಈ ಹಬ್ಬಕ್ಕೂ ಅತೀ ಹೆಚ್ಚಿನ ಸಿಹಿತಿಂಡಿಗಳನ್ನು ಮಾರಾಟ ಮಾಡಲು ಒಕ್ಕೂಟ ತಯಾರಾಗಿದೆ.

ಪ್ರಸಿದ್ಧ ಬ್ರ್ಯಾಂಡ್ ನಂದಿನಿ ಅಡಿಯಲ್ಲಿ ಕೆಎಂಎಫ್ ವಿವಿಧ ಉತ್ಪನ್ನಗಳನ್ನು ಮಾರಾಟ ಮಾಡುತ್ತಾ ಬಂದಿದೆ. ಈ ಪೈಕಿ ಜನರಿಗೆ ಸಿಹಿ ತಿಂಡಿಗಳನ್ನು ಬೇಡಿಕೆಯಷ್ಟು ಪೂರೈಸಿ ಜನಪ್ರಿಯತೆ ಪಡೆದಿದೆ. ಕೆಲವು ಸಿಹಿ ವಿಧಗಳಲ್ಲಿ ಮೈಸೂರು ಪಾಕ್, ಕುಂದಾ, ಚಾಕೊಲೇಟ್ ಬರ್ಫಿ, ಧಾರವಾಡ ಪೇಡಾ, ಬೇಸನ್ ಲಾಡೂ, ಜಾಮೂನ್, ತೆಂಗಿನಕಾಯಿ ಬರ್ಫಿ, ಡ್ರೈ ಫ್ರೂಟ್ ಬರ್ಫಿ ಸೇರಿದಂತೆ ನಾನಾ ಬಗೆಯ ಸಿಹಿ ರುಚಿಗಳನ್ನು ಕೆಎಂಎಫ್ ಗ್ರಾಹಕರಿಗೆ ಉಣಬಡಿಸಿದೆ.

KMF Sells 4 Lakh KG Sweet in Dasara Festival: More Demanded in Diwali 2023

'ಮೈಸೂರು ಪಾಕ್-ನಂದಿನಿ ಪೇಡಾ' ಜಾಸ್ತಿ ಮಾರಾಟ

ಈ ವರ್ಷದ ದಸರಾ ಹಬ್ಬದ ಋತುವಿನಲ್ಲಿ ಸುಮಾರು 15 ದಿನಗಳವರೆಗೆ ಸಿಹಿ ತಿಂಡಿ ಮಾರಾಟ ಮಾಡಿದ್ದೇವೆ. ಒಟ್ಟು 400 ಮೆಟ್ರಿಕ್ ಟನ್ (ಸುಮಾರು 4 ಲಕ್ಷ ಕೆಜಿ) ಸಿಹಿ ತಿಂಡಿ ಮಾರಾಟವಾಗಿದೆ ಎಂದು ಹೆಸರು ಹೇಳಲು ಇಚ್ಛಿಸದ ಕೆಎಂಎಫ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಪೈಕಿ 'ಮೈಸೂರು ಪಾಕ್' ಮತ್ತು 'ನಂದಿನಿ ಪೇಡಾ' ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗಿದೆ.

ಏತನ್ಮಧ್ಯೆ, ಕೆಎಂಎಫ್ ಈಗ ದೀಪಾವಳಿ ಸಮಯದಲ್ಲಿ ಇದೇ ರೀತಿಯ ಮಾರಾಟಕ್ಕೆ ಸಜ್ಜಾಗಿದೆ. ಬೃಹತ್ ಆದೇಶಗಳನ್ನು ತೆಗೆದುಕೊಳ್ಳಲು ಇದು ಅಧಿಕಾರಿಗಳನ್ನು ನೇಮಿಸಿದೆ, ಅದನ್ನು ರಿಯಾಯಿತಿ ದರದಲ್ಲಿ ನೀಡಲಾಗುವುದು. 20 ಕೆಜಿಗಿಂತ ಹೆಚ್ಚಿನ ಬೃಹತ್ ಆರ್ಡರ್‌ಗಳಿಗೆ ರಿಯಾಯಿತಿ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+