Nandini Ghee Price : ನಂದಿನಿ ಸ್ವೀಟ್, ತುಪ್ಪದ ಬೆಲೆ ಏರಿಕೆ ಮಾಡಿದ ಕೆಎಂಎಫ್
ಬೆಂಗಳೂರು, ಡಿಸೆಂಬರ್ 09; ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತ (ಕೆಎಂಎಫ್) ಹಾಲಿನ ದರ ಏರಿಕೆ ಬಳಿಕ ಸಿಹಿ ತಿಂಡಿಗಳು, ತುಪ್ಪದ ದರವನ್ನು ಏರಿಕೆ ಮಾಡಿದೆ.
ಹಾಲಿನಿಂದ ತಯಾರು ಮಾಡುವ ಎಲ್ಲಾ ಉತ್ಪನ್ನಗಳ ಬೆಲೆಯಲ್ಲಿ ಏರಿಕೆ ಮಾಡಲಾಗಿದೆ. ಶೇ 5ರಿಂದ 15ರ ತನಕ ದರಗಳು ಏರಿಕೆಯಾಗಿವೆ. ಹಾಲು, ಮೊಸರು ದರ ಏರಿದಾಗಲೇ ಇತರ ಉತ್ಪನ್ನಗಳ ದರಗಳ ಏರಿಕೆ ಸುಳಿವು ಸಿಕ್ಕಿತ್ತು.
ನವೆಂಬರ್ 24ರಂದು ಹಾಲು ಮತ್ತು ಮೊಸರಿನ ದರದಲ್ಲಿ 2 ರೂ. ಏರಿಕೆ ಮಾಡಲಾಗಿತ್ತು. ದರ ಏರಿಕೆಯ ಸಂಪೂರ್ಣ ಲಾಭವನ್ನು ರೈತರಿಗೆ ನೀಡಲಾಗುತ್ತದೆ ಎಂದು ಕೆಎಂಎಫ್ ಹೇಳಿತ್ತು.

ಹಾಲು, ಮೊಸರು ದರಗಳನ್ನು ಏರಿಸಿದ ಬಳಿಕ ಈಗ ಹಾಲಿನಿಂದ ತಯಾರು ಮಾಡುವ ಸಿಹಿತಿಂಡಿಗಳು, ತುಪ್ಪದ ದರವನ್ನು ಏರಿಕೆ ಮಾಡಲಾಗಿದೆ.
ಏರಿಕೆಯಾ ದರದ ವಿವರ; ಕೆಎಂಎಫ್ ಒಂದು ಕೆಜಿ ತುಪ್ಪದ ದರವನ್ನು 520 ರಿಂದ 610ಕ್ಕೆ ಏರಿಕೆ ಮಾಡಿ ಆದೇಶ ಹೊರಡಿಸಲಾಗಿದೆ. ಪೇಡ 250 ಗ್ರಾಂ 150 ರಿಂದ 140 ರೂಪಾಯಿ ಏರಿಕೆ ಮಾಡಲಾಗಿದೆ.
ಮೈಸೂರ್ ಪಾಕ್ 250 ಗ್ರಾಂ 115 ರೂ. ನಿಂದ 160 ರೂ. ಎರಿಕೆ ಮಾಡಲಾಗಿದೆ. ಕೋವಾ 200 ಗ್ರಾಂ 90 ರಿಂದ 100 ರೂ. ಗೆ ಏರಿಕೆ ಮಾಡಲಾಗಿದೆ. ಜಾಮೂನ್ ಅರ್ಧ ಕೆಜಿ ಟಿನ್ 105 ರಿಂದ 135 ರೂ.ಗೆ ಏರಿಕೆಯಾಗಿದೆ.

ಫ್ಲೇವರ್ಡ್ ಮಿಲ್ಕ್ ದರ 20 ರಿಂದ 25 ರೂಪಾಯಿ ಏರಿಕೆ ಮಾಡಲಾಗಿದೆ. ನಂದಿನಿ ಐಸ್ ಕ್ರೀಂನ ಪ್ರತಿ ಪ್ಯಾಕೇಟ್ ಮೇಲೂ 5 ರೂ. ಏರಿಕೆ ಮಾಡಲಾಗಿದೆ. ಪನ್ನೀರ್ ಪ್ರತಿ ಕೆಜಿಗೆ 20 ರೂ. ಏರಿಕೆ ಮಾಡಲಾಗಿದೆ.
ನವೆಂಬರ್ 21ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೆಎಂಎಫ್ ಅಧಿಕಾರಿಗಳ ಜೊತೆ ಹಾಲಿನ ದರ ಏರಿಕೆ ಬಗ್ಗೆ ಸಭೆ ನಡೆಸಿದ್ದರು. ರಾಜ್ಯದ ಮತ್ತು ನೆರೆಯ ರಾಜ್ಯದ ಹಾಲಿನ ದರಗಳ ಮಾಹಿತಿ ಪಡೆದಿದ್ದರು. ರೈತರಿಗೆ ಯಾವುದೇ ಸಮಸ್ಯೆ ಆಗಬಾರದು ಎಂದು ಸೂಚನೆ ನೀಡಿದ್ದರು. ಆದರೆ ಈ ಸಭೆಯ ಬಳಿಕ ದರಗಳನ್ನು ಏರಿಕೆ ಮಾಡಲಾಗಿತ್ತು.












Click it and Unblock the Notifications