ಹಾಲಿನ ದರ 4 ರೂ ಏರಿಕೆ, ಎಲ್ಲಿ ದರ ಎಷ್ಟಿದೆ?
ಬೆಂಗಳೂರು, ಜನವರಿ 05 : ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಳ (ಕೆಎಂಎಫ್) ನಂದಿನಿ ಹಾಲಿನ ದರವನ್ನು ಲೀಟರ್ಗೆ 4 ರೂ. ಹೆಚ್ಚಿಸಿದೆ. ಜನವರಿ 5ರಿಂದ ರಾಜ್ಯಾದ್ಯಂತ ನೂತನ ದರ ಜಾರಿಗೆ ಬಂದಿದೆ. ಲೀಟರ್ ಮೊಸರಿನ ದರವನ್ನು 2 ರೂ. ಹೆಚ್ಚಿಸಲಾಗಿದೆ.
ಪ್ರಸ್ತುತ ಇರುವ ಪ್ಯಾಕಿಂಗ್ ವಸ್ತುಗಳ ದಾಸ್ತಾನು ಮುಗಿಯುವ ತನಕ ಹಾಲಿನ ಪ್ಯಾಕೆಟ್ಗಳ ಮೇಲೆ ಹಳೆಯ ದರ ಮುದ್ರಿತವಾಗಿರುತ್ತದೆ. ಆದರೆ, ಜನವರಿ 5ರಿಂದಲೇ ನೂತನ ದರ ಜಾರಿಯಲ್ಲಿರುತ್ತದೆ ಎಂದು ಕೆಎಂಎಫ್ ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿದೆ. [ಹೊಸವರ್ಷದ ಶುಭಾಶಯ, ಹಾಲಿನ ದರ 4 ರು. ಏರಿಕೆ!]
ಹಾಲಿನ ದರ ಪ್ರತಿ ಲೀಟರ್ಗೆ 4 ರೂ. ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಹೋಟೆಲ್ಗಳಲ್ಲಿ ಕಾಫಿ, ಟೀ ಬೆಲೆಗಳು ಹೆಚ್ಚಾಗುವ ಸಾಧ್ಯತೆ ಇದೆ. ಆಯಾ ಹೋಟೆಲ್ಗಳ ನಿರ್ವಹಣೆ ಆಧಾರದ ಮೇಲೆ 1 ರಿಂದ 2 ರೂ. ದರ ಹೆಚ್ಚಳವಾಗಬಹುದು ಎಂದು ಬೃಹತ್ ಬೆಂಗಳೂರು ಹೋಟೆಲ್ಗಳ ಸಂಘದ ಅಧ್ಯಕ್ಷ ಚಂದ್ರಶೇಖರ ಹೆಬ್ಬಾರ ಅವರು ತಿಳಿಸಿದ್ದಾರೆ.

ಪರಿಷ್ಕೃತ ಹಾಲಿನ ದರ ಪ್ರಮುಖ ನಗರಗಳಲ್ಲಿ
ಬೆಂಗಳೂರು : ಟೋನ್ಡ್ (33 ರೂ.), ಶುಭಂ ಸ್ಟ್ಯಾಂಡರ್ಡ್ (39 ರೂ.), ಸಮೃದ್ಧಿ (42 ರೂ.), ಸ್ಪೆಷಲ್ (39 ರೂ.), ಮೊಸರು 500 ಗ್ರಾಂ (20 ರೂ.) [ಲೀಟರ್ ಹಾಲಿಗೆ 30 ರು. ಕೊಟ್ಟರೆ ಸಾಕು: ರೇವಣ್ಣ]
ತುಮಕೂರು : ಟೋನ್ಡ್ (33), ಶುಭಂ ಸ್ಟ್ಯಾಂಡರ್ಡ್ (39), ಸಮೃದ್ಧಿ (42 ), ಸ್ಪೆಷಲ್ (39 ), ಮೊಸರು (20 ರೂ.)
ದಕ್ಷಿಣ ಕನ್ನಡ : ಟೋನ್ಡ್ 34, ಶುಭಂ ಸ್ಟ್ಯಾಂಡರ್ಡ್ (40), ಸಮೃದ್ಧಿ (42), ಮೊಸರು (19 ರೂ)
ಧಾರವಾಡ : ಟೋನ್ಡ್ (34), ಶುಭಂ ಸ್ಟ್ಯಾಂಡರ್ಡ್ (39), ಸ್ಪೆಷಲ್ (39), ಮೊಸರು (20)
ಬೆಳಗಾವಿ : ಟೋನ್ಡ್ (34), ಶುಭಂ ಸ್ಟ್ಯಾಂಡರ್ಡ್ (40), ಸಮೃದ್ಧಿ (39)
-
Puneeth Rajkumar Birthday: ಇಂದು ನಟ ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬ; ಅಭಿಮಾನಿಗಳಿಂದ ವಿಶೇಷ ನಮನ, ಶುಭಾಶಯಗಳ ಮಹಾಪೂರ -
ಮಾರ್ಚ್ 17ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಮಂಗಳೂರಿಗೆ ಬರಲಿದೆ 26,000 ಟನ್ LPG ತೈಲ ಹೊತ್ತ 'ಶಿವಾಲಿಕ್' ಹಡಗು -
Ugadi 2026: ಹಬ್ಬದ ಕಳೆ ಹೆಚ್ಚಿಸುವ ಸುಂದರ ರಂಗೋಲಿಗಳು; ಸರಳ, ಚುಕ್ಕಿ ಹಾಗೂ ಬಣ್ಣದ ರಂಗೋಲಿ ಐಡಿಯಾ ಇಲ್ಲಿದೆ -
ಔಷಧಿ ಪೂರೈಸುವ ಕೆಸ್ಎಂಸಿಎಲ್ಗೆ ಐಎಎಸ್ ಅಧಿಕಾರಿ ಮುಖ್ಯಸ್ಥ, ಇ-ಔಷಧಿ ಸಾಫ್ಟವೇರ್ ಜಾರಿ: ದಿನೇಶ್ ಗುಂಡೂರಾವ್ -
ಮಗುವನ್ನ ಸಾಕಲು ಹಣ ಬೇಕಾದ್ರೆ ಯಾರ ಜೊತೆ ಬೇಕಿದ್ರೂ ಮಲಗುವೆ: ಬಿಗ್ಬಾಸ್ ಖ್ಯಾತಿಯ ಚಂದ್ರಿಕಾ ದೀಕ್ಷಿತ್ -
Karnataka Weather: ಬೆಂಗಳೂರು ಸೇರಿದಂತೆ ರಾಜ್ಯದ 17 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
ಸಿನಿಮಾ ಕಥೆಗೆ ವಿರುದ್ಧವಾಗಿ ಕುಂಭಮೇಳ ಮೊನಾಲಿಸಾ ಮದುವೆ, 10 ಕೋಟಿ ರೂ. ಸಾಲ ಮಾಡಿದ್ದೇನೆ: ನಿರ್ದೇಶಕ ಸನೋಜ್ ಮಿಶ್ರಾ ಆತಂಕ -
"ಕೆಡಿ" ಸಿನಿಮಾದ ಹಾಡು ಅಶ್ಲೀಲವಾಗಿದ್ರೆ ಕೂಡಲೇ ಎಲ್ಲ ಕಡೆ ತೆರವು ಮಾಡಿ: ಸೆನ್ಸಾರ್ ಮಂಡಳಿಗೆ ಕೇಂದ್ರ ಸರ್ಕಾರ ಸೂಚನೆ -
Byadagi Chilli: ಕರ್ನಾಟಕದ ಕೆಂಪು ಚಿನ್ನ ಬ್ಯಾಡಗಿ ಮೆಣಸಿನಕಾಯಿಗೆ ಹೊಸ ಸಂಕಷ್ಟ, ರೈತರು ಕಂಗಾಲು -
ಸರಕು ಖಾಲಿಯಾಯ್ತಾ ಪ್ರೇಮ್, ಇಡೀ ದೇಶದ ಮುಂದೆ ಕನ್ನಡಿಗರು ತಲೆತಗ್ಗಿಸುವಂತೆ ಮಾಡಿದಿರಿ: ಸೆರಗ ಸರ್ಸೆ ಹಾಡಿಗೆ ವಿರೋಧ -
Bengaluru Second Airport: ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ: ದೆಹಲಿಯಲ್ಲಿ ಕೇಂದ್ರ ಸಚಿವರ ಭೇಟಿಯಾದ ಡಿ.ಕೆ.ಶಿವಕುಮಾರ್












Click it and Unblock the Notifications