ಯಾರಿಗೆ ಒಲಿಯಿತು 25,00,00,000 ರೂಪಾಯಿ ಕೇರಳ ಲಾಟರಿ? Kerala Lottery
ಹಣ.. ಕಾಸು.. ದುಡ್ಡು... ಇದು ಇಲ್ಲ ಅಂದ್ರೆ ಜೀವನ ನರಕ ಅನ್ನೋದು ಪ್ರತಿಯೊಬ್ಬ ಮನುಷ್ಯ ಕೂಡ ಅರ್ಥ ಮಾಡಿಕೊಂಡಿದ್ದಾನೆ. ಅಕಸ್ಮಾತ್ ದುಡ್ಡು ಮುಖ್ಯ ಅಲ್ಲ ಅಂತಾ ಹೇಳುವ ಜನರು ಕೂಡ ಕಾಸು ಕಂಡರೆ ಬಾಯಿ ಬಾಯಿ ಬಿಡುತ್ತಾರೆ. ಅದರಲ್ಲೂ ಇಂಡಿಯಾದಲ್ಲಿ ಹಣ ಒಂದು ಇದ್ದರೆ ಏನು ಬೇಕಾದರೂ ಆಗಿಬಿಡಬಹುದು ಅನ್ನೋ ಭ್ರಮೆ ಹಲವರಲ್ಲಿ ಇದೆ. ದುಡ್ಡು ಜೀವನ ನಡೆಸಲು ಬೇಕು, ಆದರೆ ದುಡ್ಡೇ ಜೀವನ ಅಲ್ಲ... ಅಂತಾ ಫಿಲಾಸಪಿ ಹೇಳುವವರು ಕೂಡ ಇದ್ದಾರೆ. ಹೀಗಿದ್ದಾಗಲೇ, ಯಾರಿಗೆ ಒಲಿಯಿತು 25,00,00,000 ರೂಪಾಯಿ ಕೇರಳ ಲಾಟರಿ?
25 ಕೋಟಿ ರೂಪಾಯಿ ಲಾಟರಿ.. ನಿಮ್ಮ ಜೀವನದಲ್ಲಿ ಈ ರೀತಿಯ ಸುದ್ದಿ ಕೇಳಿದರೆ ಆಗ ನಿಮಗೆ ಹೇಗೆ ಆಗಬೇಡ ಹೇಳಿ? ಹೌದು, ಇಂತಹದೊಂದು ಘಟನೆ ಪ್ರತಿವರ್ಷ ಕೂಡ ಬಂದೇ ಬರುತ್ತದೆ. ಅದರಲ್ಲೂ ಈ ಸುದ್ದಿ ಕೇಳಿ ಬರುವುದು ನಮ್ಮ ಕರ್ನಾಟಕ ರಾಜ್ಯದಲ್ಲಿ ಅಲ್ಲ, ಈ ಸುದ್ದಿ ಕೇಳಿ ಬರುವುದು ಕರ್ನಾಟಕದ ಪಕ್ಕದ ರಾಜ್ಯ ಕೇರಳದಲ್ಲಿ. ಅಂದಹಾಗೆ ಈ ಬಾರಿ ಕೂಡ ಕೇರಳದ ಲಾಟರಿ ಲಕ್ಷ್ಮೀ ಬಡ ವ್ಯಕ್ತಿಯ ಮನೆಗೆ ಒಲಿದು ಬಂದಿದ್ದಾಳೆ. ಓಣಂ ಹಬ್ಬದ ಹಿನ್ನೆಲೆಯಲ್ಲಿ ಕೇರಳದಲ್ಲಿ ನಡೆಸುವ ಬಂಪರ್ ಲಾಟರಿ ಶರತ್ ನಾಯರ್ ಎಂಬ ವ್ಯಕ್ತಿಗೆ ಒಲಿದಿದೆ.

ಲಾಟರಿಯಲ್ಲಿ ಇಪ್ಪತ್ತೈದು ಕೋಟಿ ಬಹುಮಾನ!
ಕೇರಳ ಲಾಟರಿ ಪೈಕಿ ಓಣಂ ಬಂಪರ್ ಅತಿದೊಡ್ಡ ಪ್ರಶಸ್ತಿ ಮೊತ್ತ ಹೊಂದಿರುವ ಲಾಟರಿ ಆಗಿದ್ದು, ಹೀಗೆ ಜೀವನದಲ್ಲಿ ಒಮ್ಮೆಯಾದರೂ ಕೇರಳ ಲಾಟರಿ ಗೆಲ್ಲಬೇಕು ಎಂಬುದು ಪ್ರತಿಯೊಬ್ಬರ ಆಸೆ ಆಗಿರುತ್ತದೆ. ಆದರೆ ಅದೃಷ್ಟ ಅನ್ನೋದು ಎಲ್ಲರಿಗೂ ಒಲಿದು ಬರುವುದಿಲ್ಲ. ಅದೇ ರೀತಿಯಾಗಿ ಇದೀಗ ಕೇರಳದ ಬಡ ವ್ಯಕ್ತಿಗೆ ಅದೃಷ್ಟ ಒಲಿದು ಬಂದಿದ್ದು, ಈ ಮೂಲಕ ಬರೋಬ್ಬರಿ ಇಪ್ಪತ್ತೈದು ಕೋಟಿ ರೂಪಾಯಿ ಬಹುಮಾನ ಗೆದ್ದಿದ್ದಾರೆ ಶರತ್ ನಾಯರ್ ಎಂಬ ವ್ಯಕ್ತಿ.
ಕೇರಳ ಲಾಟರಿಗೆ ಸಖತ್ ಡಿಮ್ಯಾಂಡ್!
ಒಟ್ನಲ್ಲಿ ಕೇರಳ ಲಾಟರಿ ಇಡೀ ಇಂಡಿಯಾ ಪೂರ್ತಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದು, ಪ್ರತಿಬಾರಿ ಕೂಡ ಬಡವರಿಗೆ ಈ ಲಾಟರಿ ಒಲಿದು ಬರುತ್ತದೆ ಎಂಬುದೇ ವಿಶೇಷವಾಗಿದೆ. ಹೀಗಾಗಿ ಕೇರಳ ಲಾಟರಿ ಖರೀದಿ ಮಾಡಲು ಇಂಡಿಯಾ ಪೂರ್ತಿ ಭಾರಿ ಡಿಮ್ಯಾಂಡ್ ಇದ್ದು, ಇದೇ ಕಾರಣಕ್ಕೆ ಅಂತಾ ಕೇರಳ ಟ್ರಿಪ್ ಹೋಗಿ ಬರುವವರು ಕುಡ ಹೆಚ್ಚಾಗಿದೆಯೇ ಇದ್ದಾರೆ!












Click it and Unblock the Notifications