KEA Seat Blocking Scam: ಕೆಸಿಇಟಿ-2025ರ ಸಲುವಾಗಿ ಮಹತ್ವದ ನೀರ್ಣಯಕ್ಕೆ ಬಂದ ಕೆಇಎ

ಬೆಂಗಳೂರು, ನವೆಂಬರ್ 15: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಸೀಟಿ ಬ್ಲಾಕಿಂಗ್ ದಂಧೆ ತಡೆಯಲು ನಾನಾ ಕಸರತ್ತು ನಡೆಸುತ್ತಿದೆ. ಇದೀಗ ಖಾಸಗಿ ಕಾಲೇಜುಗಳ ಜೊತೆಗೆ ಮಾಡಿಕೊಂಡು ಪ್ರಮುಖ ಒಪ್ಪಂದದಲ್ಲಿ ಎರಡು ಷರತ್ತುಗಳನ್ನು ಶಿಫಾರಸು ಮಾಡಿದೆ. ಇದಕ್ಕೆ ಅಳವಡಿಕೆಗೆ ರಾಜ್ಯ ಸರ್ಕಾರವನ್ನು ಕೋರಿದ್ದು, ಇದರಿಂದ ಸೀಟು ಹಂಚಿಕೆಯಲ್ಲಿನ ಅಕ್ರಮ ತಡೆಯಲು ಭವಿಷ್ಯ ಒಳಿತಿಗೆ ಸಹಾಯವಾಗುತ್ತದೆ ಎಂದು ಪ್ರಾಧಿಕಾರ ಹೇಳಿದೆ.

ಕೆಸಿಇಟಿ ಸೀಟು ಬ್ಲಾಕಿಂಗ್ ದಂಧೆಯಲ್ಲಿ ವಿದ್ಯಾರ್ಥಿಗಳ ಪಾತ್ರ ಇಲ್ಲವೆಂದು ಗೊತ್ತಾಗುತ್ತಿದ್ದಂತೆ ಕೆಇಎ ಉನ್ನತ ತನಿಖೆಗೆ ಮುಂದಾಗಿತ್ತು. ಹಾಲಿ ವ್ಯವಸ್ಥೆಯಲ್ಲಿ ಬದಲಾವಣೆ ತರಲು ಮುಂದಾಗಿತ್ತು. ಮೊನ್ನೆಯಷ್ಟೆ ಸೀಟು ಬ್ಲಾಕಿಂಗ್ ದಂಧೆ ವಿರುದ್ಧ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಕೆಇಎ ದೂರು ದಾಖಲಿಸಿತ್ತು.

KEA Seat Blocking Scam KEA Intrested to Implement two Condition in Agreement of Pv Clleges

ಇದೀಗ ಖಾಲಿ ಇರುವ ಎಲ್ಲಾ ಸರ್ಕಾರಿ ಕೆಸಿಇಟಿಯ ಕೋಟಾ ಸೀಟುಗಳನ್ನು ಪ್ರಾಧಿಕಾರದಿಂದಲೇ ಮೂಲಕ ಭರ್ತಿ ಆಗಬೇಕು. ಕಾಮೆಡ್-ಕೆ ಮೊದಲ ಸುತ್ತಿನ ಕೆಸಿಇಟಿ ಕೋಟಾದ ಹಂಚಿಕೆ ಪೂರ್ಣಗೊಳಿಸಿದ ಬಳಿಕ ಅಭ್ಯರ್ಥಿಗಳ ಪ್ರವೇಶ ಪ್ರಕ್ರಿಯೆ ನಡೆಸಬೇಕು ಎಂದು ಎರಡು ಷರತ್ತುಗಳನ್ನು ಶಿಫಾರಸು ಮಾಡಿದೆ. ಇವುಗಳ ಈಗಾಗಲೇ ಖಾಸಗಿ ಕಾಲೆಗಳುಗಳ ಜೊತೆಗೆ ಕೆಇಎ ಮಾಡಿಕೊಂಡ ಒಪ್ಪಂದದಲ್ಲಿ ಅಳವಡಿಕೆಗೆ ಆಗಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದೆ ಎಂದು 'ಡಿಎಚ್‌' ವರದಿ ಮಾಡಿದೆ.

ಪ್ರಾಧಿಕಾರವು ಉನ್ನತ ಶಿಕ್ಷಣ ಇಲಾಖೆಗೆ ಷರತ್ತುಗಳ ಕುರಿತು ವರದಿ ಸಲ್ಲಿಸಿದೆ. ಅದರಲ್ಲಿ 2025ರಲ್ಲಿ ನಡೆಯುವು ಕೆಸಿಇಟಿ ಸೀಟು ಹಂಚಿಕೆ ವೇಳೆ ಈ ಹಿಂದೆ ನಡೆದಂತಹ ಅಕ್ರಮ ಘಟನೆಗಳು, ಸೀಟು ಬ್ಲಾಕಿಂಗ್ ಎದುರಾಗದಂತೆ ತಡೆಯಲು ಒಪ್ಪಂದದಲ್ಲಿ ಎರಡು ಷರತ್ತುಗಳು ಜಾರಿಯಾಗಬೇಕು ಎಂದು ಪ್ರಾಧಿಕಾರ ಬಯಸಿದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹೇಳುವುದೇನು?

ಕರ್ನಾಟಕ ಸರ್ಕಾರ ಹಾಗೂ ಕರ್ನಾಟಕ ಅನುದಾನರಹಿತ ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳ ಸಂಘ (ಕುಪೆಕಾ) ಮಧ್ಯೆ ಒಪ್ಪಂದ ಅಸ್ತಿತ್ವದಲ್ಲಿದೆ. ಪ್ರಾಧಿಕಾರದ ಸೀಟು ಹಂಚಿಕೆ ಪ್ರಕ್ರಿಯೆಯ ಬಳಿಕವೂ ಭರ್ತಿ ಆಗದ ಸೀಟುಗಳು ಮತ್ತು ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಂಡ ಬಗ್ಗೆ ವರದಿ ನೀಡಬೇಕು. ಮ್ಯಾನೇಜ್‌ಮೆಂಟ್ ಕೋಟಾದ ಅಡಿಯಲ್ಲಿ ಕಾಲೇಜುಗಳು ಸೀಟು ಭರ್ತಿ ಮಾಡಬೇಕಿದೆ.

ಕೆಇಎ ''ಕಾರಣವಿಲ್ಲದೆ, ವೃತ್ತಿಪರ ಸಂಸ್ಥೆಗಳು ಪ್ರಾಧಿಕಾರದಿಂದ ಹಂಚಿಕೆಯಾದ ಎಲ್ಲಾ ಅಭ್ಯರ್ಥಿಗಳನ್ನು ಸೇರ್ಪಡೆಗೊಳಿಸಬೇಕು. ಕ್ಯಾಶುಯಲ್ ಸುತ್ತಿನ ಕೌನ್ಸೆಲಿಂಗ್ ನಂತರ (ಎರಡನೇ ಸುತ್ತಿನ ಬಳಿಕ) ಪ್ರಾಧಿಕಾರವೇ ಲಭ್ಯವಿರುವ ಸೀಟುಗಳ ಶಾಖೆಯವಾರು ಖಾಲಿ ಪಟ್ಟಿ ನೀಡುತ್ತದೆ. ಸಮಾಲೋಚನೆ, ಒಪ್ಪಿಗೆ ನೀಡುವ ಸಮಯದಲ್ಲಿ, ಕಾಲೇಜುಗಳು ಲಭ್ಯವಿದ್ದರೆ ಕೆಇಎ ನೀಡಿದ ಖಾಲಿ ಸೀಟುಗಳ ಪಟ್ಟಿಯನ್ನು ಸಂಬಂಧಪಟ್ಟ ಕಾಲೇಜುಗಳಿಗೆ ಕೊಡಬೇಕು ಎಂದು ಕೆಇಎ ತಿಳಿಸಿದೆ.

ರಾಜ್ಯ ಸರ್ಕಾರ ಖಾಸಗಿ ಕಾಲೇಜುಗಳ ಜತೆಗಿನ ಒಪ್ಪಂದಲ್ಲಿ ಈ ಷರತ್ತುಗಳನ್ನು ಸೇರಿಸಬೇಕು. ಇವು ಜಾರಿಗೆ ಬಂದಲ್ಲಿ ಸೀಟು ಬ್ಲಾಕಿಂಗ್ ದಂಧಗೆ ಕಡಿವಾಣ ಹಾಕಲು ಜೊತೆಗೆ ಅರ್ಹ ಬಡ ಅಭ್ಯರ್ಥಿಗಳಿಗೆ ಉತ್ತನ್ನ ವಿದ್ಯಾಭ್ಯಾಸಕ್ಕೆ ಪ್ರವೇಶ ಸಿಗಲು ಸಹಾಯ ಎಂದು ತಿಳಿಸಿದೆ.

ಉನ್ನತ ಶಿಕ್ಷಣ ಸಚಿವರು ಹೇಳಿದ್ದೇನು?

ಸದ್ಯ ಕೆಇಎ ಷರತ್ತುಗಳು, ಸೀಟು ಬ್ಲಾಕಿಂಗ್ ತಡೆ ಬಗ್ಗೆ ತೀರ್ಮಾನಿಸಿದೆ ವರದಿ ನೀಡಿದೆ. ಅದರ ಬಗ್ಗೆ ಇನ್ನೂ ಚರ್ಚೆ ನಡೆಸಬೇಕಿದೆ. ನಾವು ಎಫ್‌ಐಆರ್ ದಾಖಲಿಸಿದ್ದೇವೆ. ಪೊಲೀಸರಿಂದ ವರದಿ ಬಂದ ಬಳಿಕ ಹೆಚ್ಚಿನ ಚರ್ಚೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಮಾಹಿತಿ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+