KEA: ಯುಜಿಸಿಇಟಿ 2025 ವೃತ್ತಿಪರ ಕೋರ್ಸ್‌ಗಳ ತಾತ್ಕಲಿಕ ಫಲಿತಾಂಶ ಪ್ರಕಟ

ಬೆಂಗಳೂರು, ಆಗಸ್ಟ್ 30: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ವಿವಿಧ ವೃತ್ತಿಪರ ಕೋರ್ಸ್‌ಗಳಿಗೆ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (UGCET 2025) ಅಥವಾ ಯುಜಿ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (UGNEET 2025) ಪರೀಕ್ಷೆ ಬರೆದ ಅಭ್ಯರ್ಥಿಗಳಿಗೆ ಗುಡ್ ನ್ಯೂಸ್ ನೀಡಿದೆ. ಪ್ರಾಧಿಕಾರವು ತಾತ್ಕಲಿಕ ಫಲಿತಾಂಶವನ್ನು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಅವರು ತಿಳಿಸಿದ್ದಾರೆ.

ಇಂಜಿನಿಯರಿಂಗ್, ಆರ್ಕಿಟೆಕ್ಟರ್, ಯೋಗ ಮತ್ತು ನ್ಯಾಚುರೋಪತಿ, ಕೃಷಿ ವಿಜ್ಞಾನ, ವೆಟರಿನರಿ, ಬಿಎಸ್ಸಿ (ನರ್ಸಿಂಗ್) ಬಿ-ಫಾರ್ಮ, ಫಾರ್ಮ್-ಡಿ, ಬಿಪಿಟಿ, ಬಿಪಿಯೋ, ಆಲೈಡ್ ಹೆಲ್ತ್ ಸೈನ್ಸ್ ಮತ್ತು ಆಯುಷ್ ಕೋರ್ಸುಗಳ 2ನೇ ಸುತ್ತಿನ ತಾತ್ಕಾಲಿಕ ಫಲಿತಾಂಶವನ್ನು ನೆನ್ನೆಯಷ್ಟೇ (ಆಗಸ್ಟ್ 29) ವೆಬ್‌ಸೈಟ್‌ನಲ್ಲಿ https://cetonline.karnataka.gov.in/kea/ugcet2025 ಬಿಡುಗಡೆ ಮಾಡಿದೆ. ಪರೀಕ್ಷೆ ಬರೆದು ಪ್ರವೇಶಕ್ಕೆ ಕಾಯುತ್ತಿರುವ ಅಭ್ಯರ್ಥಿಗಳ ಪ್ರಮುಖ ದಿನಾಂಕಗಳು, ಸೂಚನೆಗಳನ್ನು ಗಮನಿಸಬೇಕು.

KEA Releases UGCET amp amp UGNEET 2025 Second Round Provisional Results check Website link

*ಎರಡನೇ ಸುತ್ತಿನ ತಾತ್ಕಾಲಿಕ ಸೀಟು ಹಂಚಿಕೆಗೆ 26-08-2025 ರ ಮಧ್ಯಾಹ್ನ 1.00 ರವರೆಗೆ ನಮೂದಿಸಿದ ಆಯ್ಕೆಗಳನ್ನು ಪರಿಗಣಿಸಲಾಗಿದೆ.

* ಇದು UGCET/UGNEET 2025 ರ ಎರಡನೇ ಸುತ್ತಿನ ಸೀಟು ಹಂಚಿಕೆಯ ತಾತ್ಕಾಲಿಕ ಫಲಿತಾಂಶವಾಗಿದೆ. ಅಭ್ಯರ್ಥಿಗಳಿಗೆ ತಾತ್ಕಾಲಿಕವಾಗಿ ಹಂಚಿಕೆಯಾಗಿರುವ ಸೀಟಿಗೆ ಶಾಲೆಯಲ್ಲಿ ಪ್ರವೇಶ ಪಡೆಯಲಾಗಿದೆ.

* ಯಾವುದಾದರೂ ನಿರ್ದಿಷ್ಟ ಆಕ್ಷೇಪಣೆಗಳಲ್ಲಿ (ಆಯ್ಕೆಗಳನ್ನು ದಾಖಲಿಸಲಾಗಿದೆ. ಆದರೆ ಎರಡನೇ ಸುತ್ತಿನ ಕಟ್‌ಆಫ್ ಬ್ಯಾಂಕ್ ಪರಿಶೀಲಿಸಲಾಗಿದೆ. ಯಾವುದೂ ಸೀಟು ಹಂಚಿಕೆಯಾಗಿಲ್ಲ) ದಿನಾಂಕ 30-08-2025 ರ ಮಧ್ಯಾಹ್ನ 100 ರೊಳಗೆ [email protected] ಗೆ ಎಲ್ಲಾ ವಿವರ ಪ್ರಾಧಿಕಾರಕ್ಕೆ ಮೇಲ್ ಮಾಡಬಹುದು.

* ಆಕ್ಷೇಪಣೆಗಳನ್ನು ಪರಿಶೀಲಿಸಿದ ನಂತರ ಎರಡನೇ ಸುತ್ತಿನ ಸೀಟು ಹಂಚಿಕೆಯ ಅಂತಿಮ ಫಲಿತಾಂಶಗಳನ್ನು ಈ ಕೆಳಗೆ ವಿವರಿಸಿರುವಂತೆ ಪ್ರಕಟಿಸಲಾಗಿದೆ. ಎಂಸಿಸಿ, ಇತ್ತೀಚೆಗೆ ಹೆಚ್ಚಿನ ಇವರು ಅಖಿಲ ಭಾರತ ವೈದ್ಯಕೀಯ ಸೀಟುಗಳ ಪ್ರವೇಶಕ್ಕೆ ವೈದ್ಯಕೀಯ ಸೀಟುಗಳು ಸೇರ್ಪಡೆಗೊಳ್ಳುವ ಕಾರಣದಿಂದ 29-08-2025 ರಂದು ಫಲಿತಾಂಶ ಪ್ರಕಟಿಸಲಾಗಿದೆ.

* ಯುಜಿ ಸಿಇಟಿ ಕೋರ್ಸುಗಳಾದ ಇಂಜಿನಿಯರಿಂಗ್, ಆರ್ಕಿಟೆಕ್ಟರ್, ಯೋಗ ಮತ್ತು ನ್ಯಾಚುರೋಪತಿ, ಕೃಷಿ ವಿಜ್ಞಾನ, ವೆಟರಿನರಿ, ಮುಂತಾದ ಕೋರ್ಸುಗಳಲ್ಲಿ ಮತ್ತು ಆಯುಷ್ ಕೋರ್ಸುಗಳಿಗೆ ಮಾತ್ರ ಯುಜಿಸಿಇಟಿ ಸುತ್ತಿನ ಅಂತಿಮ ಫಲಿತಾಂಶ ಪ್ರಕಟಿಸಲಾಗಿದೆ ಹಾಗೂ ಅಭ್ಯರ್ಥಿಗಳು ವಹಿಸಬೇಕಾದ "ಮಾರ್ಗಸೂಚಿಗಳು, ನಿಯಮಗಳ ಸೂಚನೆ" ಗಳನ್ನು ಫಲಿತಾಂಶಗಳ ಸಹಿತ ಪ್ರಕಟಿಸಲಾಗಿದೆ.

* ಯುಜಿನೀಟ್ ವೈದ್ಯಕೀಯ-ದಂತವೈದ್ಯಕೀಯ ಕೋರ್ಸುಗಳಿಗೆ ಪ್ರಾಧಿಕಾರದಲ್ಲಿ ಎರಡನೇ ಸುತ್ತಿನಲ್ಲಿ ತಾತ್ಕಾಲಿಕವಾಗಿ ಸೀಟು ಹಂಚಿಕೆ ಮಾಡಿಕೊಂಡಿದ್ದಾರೆ. ಅಭ್ಯರ್ಥಿಗಳು ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ಕ್ರಮವಹಿಸದಂತೆ ಸೂಚಿಸಲಾಗಿದೆ. ಎಂಸಿಸಿಯವರ ನಿಗದಿತ ಮುಂದಿನ ಕ್ರಮಗಳ ಬಗ್ಗೆ ಮಾಹಿತಿ ನೀಡಲಾಗುವುದು. ಹೆಚ್ಚಿನ ಮಾಹಿತಿಗೆ ಪ್ರಾಧಿಕಾರದ ವೆಬ್ ಸೈಟಿಗೆ ಭೇಟಿ ನೀಡಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+