KEA KSET Results: ಕೆಸೆಟ್ 2024 ತಾತ್ಕಾಲಿಕ ಫಲಿತಾಂಶ ಬಿಡುಗಡೆ, ಅರ್ಹತೆ ಪಡೆದವರೆಷ್ಟು, ಪರಿಶೀಲನೆ ಹೇಗೆ?
ಬೆಂಗಳೂರು, ಜನವರಿ 05: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಕಳೆದ ವರ್ಷ ನವೆಂಬರ್ 24 ರಂದು ಕರ್ನಾಟಕ ರಾಜ್ಯ ಅರ್ಹತಾ ಪ್ರವೇಶ ಪರೀಕ್ಷೆ (KSET-2024) ನಡೆಸಲಾಗಿತ್ತು. ಅದರ ಕಟ್ ಆಫ್ ಆಂಕಗಳನ್ನು ಇತ್ತೀಚೆಗೆ ಬಿಡುಗಡೆ ಮಾಡಿದ್ದ ಪ್ರಾಧಿಕಾರವು ಇದೀಗ ತಾತ್ಕಾಲಿಕ ಫಲಿತಾಂಶ ಸಹ ಬಿಡುಗಡೆ ಮಾಡಿದೆ. ಪರೀಕ್ಷೆ ಬರೆದ ಅಭ್ಯರ್ಥಿಗಳು ಕೆಳಗಡೆ ನೀಡಲಾಗಿರುವ ಲಿಂಕ್ ಮೂಲಕ ಫಲಿತಾಂಶ ಪರಿಶೀಲಿಸಬಹುದಾಗಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ವಿಜ್ಞಾನ, ವಾಣಿಜ್ಯ ಮತ್ತು ಕಲಾ ವಿಭಾಗದ ಒಟ್ಟು 41 ವಿಷಯಗಳಿಗೆ KSET-24 ಪರೀಕ್ಷೆ ನಡೆಸಿತ್ತು. ಶನಿವಾರ ಫಲಿತಾಂಶ ಪ್ರಕಟಿಸಿದ್ದು, ಒಟ್ಟು ಪರೀಕ್ಷಾರ್ಥಿಗಳಲ್ಲಿ 6,302 ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ. ಅವರೆಲ್ಲರ ನೋಂದಣಿ ಸಂಖ್ಯೆಗಳನ್ನು ಕೆಇಎ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗಿದೆ ಎಂದು ಪ್ರಾಧಿಕಾರವು ಮಾಹಿತಿ ನೀಡಿದೆ.

ಕೆ-ಸೆಟ್ ಪರೀಕ್ಷೆಗೆ ಒಟ್ಟು 1,06,433 ಮಂದಿ ನೋಂದಾಯಿಸಿಕೊಂಡಿದ್ದು, ಆ ಪೈಕಿ 89,416 ಮಂದಿ ಪರೀಕ್ಷೆಗೆ ಹಾಜರಾಗಿದ್ದರು. 6,302 ಮಂದಿ ಅರ್ಹತೆ ಪಡೆದಿದ್ದಾರೆ. ಇವರಲ್ಲಿ ಪುರಷರು 3,275 ಹಾಗೂ ಮಹಿಳೆಯರು 3,020 ಹಾಗೂ ತೃತೀಯ ಲಿಂಗಿಗಳು 7 ಮಂದಿ ಇದ್ದಾರೆ. ವಿಶೇಷ ಸಾಮರ್ಥ್ಯವುಳ್ಳ 293 ಮಂದಿಗಳು ಅರ್ಹತೆ ಪಡೆದಿದ್ದು, ಅವರನ್ನು ಈ ಪಟ್ಟಿಯಲ್ಲಿ ಸೇರಿದ್ದಾರೆ ಎಂದು ಪ್ರಾಧಿಕಾರ ತಿಳಿಸಿದೆ.
ಅಭ್ಯರ್ಥಿಗಳು ಪ್ರಾಧಿಕಾರದ ವೆಬ್‌ಸೈಟ್ https://karresults.nic.in/slindfirst_24.asp ನಲ್ಲಿ ಪರಿಶೀಲಿಸಬೇಕು. ಮೊದಲು ನಿಮ್ಮ ನೋಂದಣಿ ಸಂಖ್ಯೆ ಹಾಗೂ ಹೆಸರು ಹಾಕಿ ಸಬ್ಮಿಷನ್ ಮಾಡಿ ನಿಮ್ಮ ತಾತ್ಕಾಲಿಕ ಅಂಕಪಟ್ಟಿ ಪಡೆಯಬೇಕು.
ಅಂತಿಮ ಫಲಿತಾಂಶ ಪ್ರಕಟ ಯಾವಾಗ
ಸದ್ಯ ಪರೀಕ್ಷಾ ಪ್ರಾಧಿಕಾರವು ಕೆಸೆಟ್ ತಾತ್ಕಾಲಿಕ ಅಂಕಪಟ್ಟಿ ಪ್ರಕಟಿಸಿದೆ. ಜನವರಿ ಅಂತ್ಯದ ಹೊತ್ತಿಗೆ ಅಂತಿಮ ಫಲಿತಾಂಶ ಪ್ರಟಿಸುವ ನಿರೀಕ್ಷೆ ಇದೆ. ಅಂತಿಮ ಫಲಿತಾಂಶ ಬಿಡಗುಡೆ ಬಳಿಕ ಮುಂದಿನ ದಿನಗಳಲ್ಲಿ ಪಾಸಾದ ಅಭ್ಯರ್ಥಿಗಳು ಪ್ರಾಧಿಕಾರದ ಮುಂದಿನ ಪ್ರಕ್ರಿಯೆಗೆ ಒಳಗಾಗುತ್ತಾರೆ.
KSET 2024 ಫಲಿತಾಂಶ: ನಂತರದ ಹಂತಗಳು
ಕೆಎಸ್‌ಇಟಿಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳು ಕೆಇಎ ಮೂಲ ದಾಖಲೆ ಪರಿಶೀಲನೆಗೆ ಒಳಗಾಗಬೇಕು. ಇದು ಅರ್ಹತಾ ಮಾನದಂಡ, ಅಭ್ಯರ್ಥಿಗಳು ಸ್ವಯಂ ಆಗಿ ಘೋಷಣೆಕೊಂಡ ದಾಖಲೆಗಳ ಮೌಲ್ಯೀಕರಿಸಲಾಗುತ್ತದೆ. ನಂತರ ಉತ್ತೀರ್ಣ ಕೆಸೆಟ್ ಅಭ್ಯರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಅಭ್ಯರ್ಥಿಗಳಿಗೆ ಪ್ರಮಾಣಪತ್ರ ನೀಡುವ ಮೂಲಕ ಪ್ರ್ಯಾಧ್ಯಾಪಕ ಹುದ್ದೆಗೆ ಅರ್ಹತೆಯನ್ನು ದೃಢೀಕರಿಸುತ್ತದೆ.












Click it and Unblock the Notifications