KEA Recruitment 2026: ಉದ್ಯೋಗಕ್ಕಾಗಿ ಪಡೆದ ಜಾತಿ-ಆದಾಯ ಪ್ರಮಾಣಪತ್ರ ಕಡ್ಡಾಯ, ಅಭ್ಯರ್ಥಿಗಳಲ್ಲಿ ಹೆಚ್ಚಿದ ಗೊಂದಲ

ಕರ್ನಾಟಕ ಪರೀಕ್ಷಾ ಪ್ರಾಧಿಕಾರವೂ ವಿವಿಧ ಸರ್ಕಾರಿ ಹುದ್ದೆಗಳ ನೇಮಕಾತಿಗಳಿಗೆ ಸಂಬಂಧಿಸಿದಂತೆ ಹೊರಡಿಸುವ ಒಂದೊಂದು ನಿಯಮಗಳು ರಾಜ್ಯದ ಲಕ್ಷಾಂತರ ಉದ್ಯೋಗಾಕಾಂಕ್ಷಿಗಳಲ್ಲಿ ಗೊಂದಲವನ್ನು ಉಂಟುಮಾಡಿದೆ. ಹೌದು, ಇತ್ತೀಚೆಗೆ ಕೆಇಎ ಹೊರಡಿಸಿರುವ ನೇಮಕಾತಿ ಅಧಿಸೂಚನೆಯಲ್ಲಿ ಮೀಸಲಾತಿ ಸೌಲಭ್ಯ ಪಡೆಯಬೇಕಾದರೆ ಅಭ್ಯರ್ಥಿಗಳು ಕಡ್ಡಾಯವಾಗಿ ಉದ್ಯೋಗಕ್ಕಾಗಿಯೇ ಪಡೆದ ಜಾತಿ ಮತ್ತು ಆದಾಯ ಪ್ರಮಾಣಪತ್ರ ಸಲ್ಲಿಸಬೇಕು ಎಂದು ಸ್ಪಷ್ಟವಾಗಿ ತಿಳಿಸಿದೆ.

ಹಾಗೆಯೇ ಶೈಕ್ಷಣಿಕ ಅಥವಾ ಇತರೆ ಉದ್ದೇಶಕ್ಕೆ ಪಡೆದ ಪ್ರಮಾಣಪತ್ರವನ್ನಾ ನೇಮಕಾತಿಗೆ ಪರಿಗಣಿಸಲ್ಲ ಎಂದು ಹೇಳಿರುವುದೇ ಅಭ್ಯರ್ಥಿಗಳ ಆತಂಕಕ್ಕೆ ಕಾರಣವಾಗಿದೆ.

KEA Recruitment 2026

KEA ಹೊಸ ನೇಮಕಾತಿ ನಿಯಮವೇನು?

ಗ್ರೂಪ್-ಸಿ ವೃಂದಕ್ಕೆ ಸೇರಿದ ಗ್ರಾಮ ಆಡಳಿತ ಅಧಿಕಾರಿ (ವಿಎ), ಭೂಮಾಪಕರು (ಸರ್ವೇಯರ್), ವಸತಿ ಶಾಲೆಗಳ ಶಿಕ್ಷಕರು ಹಾಗೂ ಪೊಲೀಸ್ ಕಾನ್‌ಸ್ಟೇಬಲ್ ಹುದ್ದೆಗಳ ನೇಮಕಾತಿಯಲ್ಲಿ ಈ ಹೊಸ ನಿಯಮವನ್ನ ಕಡ್ಡಾಯ ಮಾಡಲಾಗಿದೆ. ಇದಕ್ಕೆ ಮುಖ್ಯ ಕಾರಣವೆಂದರೆ ಸರ್ಕಾರ ಈಗಾಗಲೇ ಅಭ್ಯರ್ಥಿಗಳ ಗರಿಷ್ಟ ವಯೋಮಿತಿಯಲ್ಲಿ ಐದು ವರ್ಷ ಸಡಿಲಿಕೆ ನೀಡಿದೆ. ಇದರಿಂದಾಗಿ ಅರ್ಜಿ ಸಲ್ಲಿಸುವವರ ಸಂಖ್ಯೆ ತುಂಬ ಏರಿಕೆ ಕಂಡುಬಂದಿದೆ. ಹಾಗಾಗಿ ಈ ಹೊಸ ನೀಯಮವನ್ನಾ ಕಡ್ಡಾಯಗೊಳಿಸಿದ್ದಾರೆ.

ಆದರೆ ಅಭ್ಯರ್ಥಿಗಳಲ್ಲಿ ಉಂಟಾಗಿರುವ ಗೊಂದಲ ಏನೆಂದರೆ ಅರ್ಜಿ ಸಲ್ಲಿಸಲು ಕೊಟ್ಟಿರುವ ಕೊನೆಯ ದಿನಾಂಕ ಹತ್ತಿರ ಬರುತ್ತಿದೆ. ಈ ಸಂದರ್ಭದಲ್ಲಿ, ಹೊಸ ಪ್ರಮಾಣಪತ್ರ ಹೇಗೆ ಪಡೆಯುವುದು ಎಂಬ ಪ್ರಶ್ನೆ ಕಾಡುತ್ತಿದೆ. ಹೊಸ ಜಾತಿ ಮತ್ತು ಆದಾಯ ಪ್ರಮಾಣಪತ್ರ ಪಡೆಯಲು ವಾರಗಳೇ ಬೇಕಾಗುವುದರಿಂದ, ಅಂತಿಮ ದಿನಾಂಕದೊಳಗೆ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತೋ ಇಲ್ಲವೋ ಎಂಬ ಆತಂಕವನ್ನ ಉದ್ಯೋಗಾಕಾಂಕ್ಷಿಗಳು ವ್ಯಕ್ತಪಡಿಸುತ್ತಿದ್ದಾರೆ.

ಹೊಸ ಜಾತಿ ಆದಾಯ ಪ್ರಮಾಣಪತ್ರಕ್ಕೆ ತಾಂತ್ರಿಕ ಅಡ್ಡಿ

ಸಾಮಾನ್ಯವಾಗಿ ಹೆಚ್ಚಿನ ಅಭ್ಯರ್ಥಿಗಳು ಶಾಲಾ-ಕಾಲೇಜು ವ್ಯಾಸಂಗದ ಸಂದರ್ಭದಲ್ಲಿ ಜಾತಿ ಮತ್ತು ಆದಾಯ ಪ್ರಮಾಣಪತ್ರ ಪಡೆದಿರುತ್ತಾರೆ. ಪ್ರತಿಯೊಂದು ಪ್ರಮಾಣಪತ್ರಕ್ಕೂ ನಿರ್ದಿಷ್ಟ ಆರ್‌ಡಿ ನಂಬರ್‌ ನೀಡಲಾಗಿರುತ್ತದೆ. ಆದರೆ ಇದೀಗ ಉದ್ಯೋಗಕ್ಕೆಂದೇ ಹೊಸ ಅರ್ಜಿ ಸಲ್ಲಿಸಲು ಹೋದರೆ, ತಂತ್ರಾಂಶದಲ್ಲಿ ಈಗಾಗಲೇ ಪ್ರಮಾಣಪತ್ರ ವಿತರಿಸಲಾಗಿದೆ ಎಂದು ತೋರಿಸುತ್ತಿದ್ದು, ಹೊಸ ಅರ್ಜಿಗಳನ್ನ ಸ್ವೀಕರಿಸುತ್ತಿಲ್ಲ.

ಈ ಸಮಸ್ಯೆಯಿಂದ ಪಾರಾಗಲು ಅಭ್ಯರ್ಥಿಗಳು ಮೊದಲು ತಮ್ಮ ಹಳೆಯ ಪ್ರಮಾಣಪತ್ರವನ್ನು ರದ್ದು ಮಾಡಬೇಕು. ಅದಕ್ಕಾಗಿ ತಹಶೀಲ್ದಾರ್ ಕಚೇರಿಗೆ ಅರ್ಜಿ ಸಲ್ಲಿಸಬೇಕು. ಹಳೆಯ ಜಾತಿ ಮತ್ತು ಆದಾಯ ಪ್ರಮಾಣಪತ್ರ ರದ್ದಾದ ಬಳಿಕವಷ್ಟೇ ಉದ್ಯೋಗಕ್ಕಾಗಿ ಹೊಸ ಪ್ರಮಾಣಪತ್ರಕ್ಕೆ ಅರ್ಜಿ ಸಲ್ಲಿಸಲು ಅವಕಾಶ ಸಿಗುತ್ತದೆ ಎಂದು ಕಂದಾಯ ಇಲಾಖೆಯ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.

ತಹಶೀಲ್ದಾರ್ ಕಚೇರಿಗಳಲ್ಲಿ ಫುಲ್‌ ರಶ್

ರಾಜ್ಯದಲ್ಲಿ ಸರಕಾರಿ ನೇಮಕಾತಿ ಪ್ರಕ್ರಿಯೆಗಳು ಚುರುಕಾಗಿದ್ದು, ನಾಡಕಚೇರಿ, ನೆಮ್ಮದಿ ಕೇಂದ್ರ ಹಾಗೂ ತಹಶೀಲ್ದಾರ್ ಕಚೇರಿಗಳಲ್ಲಿ ಅಭ್ಯರ್ಥಿಗಳು ತುಂಬಿ ತುಳುಕುತ್ತಿದ್ದಾರೆ. ಜಾತಿ ಮತ್ತು ಆದಾಯ ಪ್ರಮಾಣಪತ್ರಗಳ ಜೊತೆಗೆ 371(ಜೆ) ಪ್ರಮಾಣಪತ್ರ, ಗ್ರಾಮೀಣ ಮೀಸಲಾತಿ, ಕನ್ನಡ ಮಾಧ್ಯಮ ಹಾಗೂ ಅಂಗವಿಕಲ ಪ್ರಮಾಣಪತ್ರಗಳನ್ನ ಪಡೆಯಲು ಅಭ್ಯರ್ಥಿಗಳು ಕಚೇರಿಯಿಂದ ಕಚೇರಿಗೆ ಅಲೆಯುತ್ತಿದ್ದಾರೆ.

ಇದರೊಂದಿಗೆ, ಪರಿಶಿಷ್ಟ ಜಾತಿ (SC)ಗೆ ಒಳಮೀಸಲಾತಿ ಜಾರಿಯಾಗಿರುವುದರಿಂದ, ಪ್ರಸ್ತುತ ನೇಮಕಾತಿಗಳಲ್ಲಿ ಪ್ರವರ್ಗ-ಎ, ಪ್ರವರ್ಗ-ಬಿ ಮತ್ತು ಪ್ರವರ್ಗ-ಸಿ ಎಂದು ನಮೂದಿಸಿರುವ ಹೊಸ ಜಾತಿ ಪ್ರಮಾಣಪತ್ರ ಪಡೆಯುವುದು ಕೂಡ ಕಡ್ಡಾಯವಾಗಿದೆ. ಇದರಿಂದಾಗಿಯೂ ಅರ್ಜಿಗಳ ಸಂಖ್ಯೆ ದಿಢೀರ್ ಹೆಚ್ಚಾಗಿದ್ದು, ಪ್ರಮಾಣಪತ್ರ ವಿತರಣೆಯಲ್ಲಿ ವಿಳಂಬವಾಗುತ್ತಿದೆ.

ಅಧಿಕಾರಿಗಳ ಸಲಹೆ

ನಿಯಮಗಳ ಪ್ರಕಾರ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳ ಜಾತಿ ಪ್ರಮಾಣಪತ್ರಗಳು ಜೀವಿತಾವಧಿಯವರೆಗೆ ಮಾನ್ಯತೆ ಹೊಂದಿರುತ್ತವೆ. ಹಾಗೆಯೇ ಹಿಂದುಳಿದ ವರ್ಗಗಳು ಮತ್ತು ಇತರ ವರ್ಗಗಳ ಅಭ್ಯರ್ಥಿಗಳ ಜಾತಿ ಹಾಗೂ ಆದಾಯ ಪ್ರಮಾಣಪತ್ರಗಳು ಕೇವಲ 5 ವರ್ಷ ಚಾಲ್ತಿಯಲ್ಲಿರುತ್ತೆ.

ಅಭ್ಯರ್ಥಿಗಳ ಗೊಂದಲದ ಬಗ್ಗೆ ಪ್ರತಿಕ್ರಿಯಿಸಿದ ಕಂದಾಯ ಇಲಾಖೆ ಅಧಿಕಾರಿಗಳು, "ಉದ್ಯೋಗಕ್ಕಾಗಿ ಬೇರೆ ಪ್ರಮಾಣಪತ್ರ ಬೇಕಿರುವವರು ಹಳೆಯ ಪ್ರಮಾಣಪತ್ರ ರದ್ದತಿಗೆ ಅರ್ಜಿ ಸಲ್ಲಿಸಿದರೆ, ಆದಷ್ಟು ಬೇಗ ಹೊಸ ಪ್ರಮಾಣಪತ್ರ ವಿತರಿಸಲು ಕ್ರಮ ಕೈಗೊಳ್ಳಲಾಗುವುದು. ಹಾಗೆಯೇ, ಒಂದು ವೇಳೆ ಹಳೆಯ ಪ್ರಮಾಣಪತ್ರದಲ್ಲಿ ಯಾವುದೇ ನಿರ್ದಿಷ್ಟ ಉದ್ದೇಶ ನಮೂದಾಗದಿದ್ದರೆ, ಅದನ್ನೇ ನೇಮಕಾತಿ ಅರ್ಜಿಗೆ ಬಳಸಬಹುದು," ಎಂದು ಸಲಹೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+