KEA: ಆಯುಷ್ ಕೋರ್ಸ್, ವೈದ್ಯಕೀಯ ಕೋರ್ಸ್ ಅಭ್ಯರ್ಥಿಗಳಿಗೆ ಮಹತ್ವ ಲಿಂಕ್ಸ್, ಅಪ್ಡೇಟ್ಸ್ ಇಲ್ಲಿದೆ
ಬೆಂಗಳೂರು, ನವೆಂಬರ್ 12: ಯುಜಿನೀಟ್ 2025 (UGNEET 2025) ಆಯುಷ್ ಕಾಲೇಜುಗಳಲ್ಲಿ ಪದವಿ ಕೋರ್ಸುಗಳಿಗೆ ಈಗಾಗಲೇ ಪ್ರವೇಶ ಪಡೆದಿರುವ ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಮಹತ್ವದ ಸುದ್ದಿ ನೀಡಿದೆ. ಸ್ಟ್ರೇ ವೇಕೆನ್ಸಿ ಸುತ್ತಿನ ಎನ್ ಆರ್ ಐ ಸೀಟು ಹಂಚಿಕೆಯಲ್ಲಿ ಭಾಗವಹಿಸಲು ಆಸಕ್ತಿ ಹೊಂದಿದವರಿಗೆ ಆಪ್ಷನ್ ದಾಖಲಿಸಲು ಅವಕಾಶ ನೀಡಿದೆ.
ಹೌದು, ಆಯುಷ್ ಕಾಲೇಜುಗಳಲ್ಲಿ ಪದವಿ ಕೋರ್ಸುಗಳಿಗೆ ಈಗಾಗಲೇ ಪ್ರವೇಶ ಪಡೆದಿರುವವರಿಗೆ ಆಪ್ಷನ್ ದಾಖಲಿಸಲು ನವೆಂಬರ್13ರ ಸಂಜೆ 6ರವರೆಗೆ ಅವಕಾಶ ನೀಡಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಕಾರ್ಯ ನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಅವರು ಮಾಹಿತಿ ನೀಡಿದ್ದಾರೆ. ರಾಜ್ಯ ಸರ್ಕಾರದ ಆದೇಶದ ಪ್ರಕಾರ ಎನ್ ಆರ್ ಐ ಉಳಿಕೆ ಸೀಟುಗಳನ್ನು ಅದೇ ಎನ್ ಆರ್ ಐ ಶುಲ್ಕದಲ್ಲೇ ಆಡಳಿತ ಮಂಡಲಿ ಕೋಟಾದಡಿ ಹಂಚಿಕೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

2025ನೇ ಸಾಲಿನ ಆಯುಷ್ ಕೋರ್ಸುಗಳಿಗೆ ಸ್ಟೇ ವೇಕೆನ್ಸಿ ಸುತ್ತಿನ ಸೀಟು ಹಂಚಿಕೆಯನ್ನು ನಡೆಸುವ ಬಗ್ಗೆ ಕಳೆದ ನವೆಂಬರ್ 06-11-2025 ರ ಪ್ರಕಟಣೆ ಹೊರಡಿಸಲಾಗಿತ್ತು. 2025ರ ಆಗಸ್ಟ್ 02 ಸರ್ಕಾರದ ಆದೇಶದನ್ವಯ ಎನ್‌ಆರ್‌ಐ ಉಳಿಕೆ ಸೀಟುಗಳನ್ನು ಅದೇ ಎನ್‌ಆರ್‌ಐ ಶುಲ್ಕದಲ್ಲೇ ಆಡಳಿತ ಮಂಡಳಿ (Q) ಕೋಟಾದಡಿಯಲ್ಲಿ ಹಂಚಿಕೆ ಮಾಡುವದರಿಂದ ಎನ್‌ಆರ್‌ಐ ಸೀಟುಗಳಲ್ಲಿ ಆಸಕ್ತಿ ಇರುವ ಎಲ್ಲಾ ಅಭ್ಯರ್ಥಿಗಳು ಎನ್‌ಆರ್‌ಐ ಸೀಟುಗಳಿಗೆ ಇಚ್ಛೆಗಳನ್ನು ದಾಖಲಿಸಬಹುದು ಎಂದು ಅದರಲ್ಲಿ ಇಳಿಸಲಾಗಿದೆ.
ಸ್ಟೇ ವೇಕೆನ್ಸಿ ಸುತ್ತಿನಲ್ಲಿ ಎನ್‌ಆರ್‌ಐ ಸೀಟುಗಳಿಗೆ ಇಚ್ಛೆಗಳನ್ನು ದಾಖಲಿಸಲು ಅವಕಾಶ ನೀಡುವಂತೆ ಅಭ್ಯರ್ಥಿಗಳು ಮನವಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಸರ್ಕಾರದ ಆದೇಶದಂತೆ ಎನ್‌ಆರ್‌ಐ ಉಳಿಕೆ ಸೀಟುಗಳನ್ನು ಅದೇ ಶುಲ್ಕದಲ್ಲಿ ಆಡಳಿತ ಮಂಡಳಿ (Q) ಕೋಟದ ಅಡಿಯಲ್ಲಿ ಹಂಚಿಕೆ ಮಾಡುಲಾಗುವುದು. ಇದರಿಂದ ಈಗಾಗಲೇ ಆಯುಷ್ ಕಾಲೇಜುಗಳಲ್ಲಿ ಪ್ರವೇಶ ಪಡೆದವರಿಗೆ ಒಂದು ವೇಳೆ ಆಸಕ್ತಿ ಇದ್ದಲ್ಲಿ ಎನ್‌ಆರ್‌ಐ ಸೀಟುಗಳಿಗೆ ಇಚ್ಛೆಗಳನ್ನು ದಾಖಲಿಸಲು ಅವಕಾಶ ಸಿಕ್ಕಂತಾಗುತ್ತದೆ ಎಂದು ಕೆಇಎ ವಿವರಿಸಿದೆ. ಹೆಚ್ಚಿನ ಮಾಹಿತಿಗೆ ನೀವು https://cetonline.karnataka.gov.in/kea/indexnew ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.
ಸೀಟ್ ಮ್ಯಾಟ್ರಿಕ್ಸ್ ವಿವರ ಬಿಡುಗಡೆ
ಪಿಜಿನೀಟ್ 2025 (PGNEET 2025) ಸ್ನಾತಕೋತ್ತರ ವೈದ್ಯಕೀಯ ಕೋರ್ಸ್ ಗಳ ಪ್ರವೇಶಕ್ಕೆ ಸಂಬಂಧಿಸಿದಂತೆ ಸೀಟ್ ಮ್ಯಾಟ್ರಿಕ್ಸ್ ವಿವರಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ತನ್ನ ವೆಬ್ ಸೈಟ್ ನಲ್ಲಿ ಮಂಗಳವಾರ (ನವೆಂಬರ್ 12) ಪ್ರಕಟಿಸಿದೆ.
ವೈದ್ಯಕೀಯ ಶಿಕ್ಷಣ ಇಲಾಖೆ ಕೊಟ್ಟಿರುವ ಪಟ್ಟಿಯಲ್ಲಿ 4,007 ಸೀಟುಗಳು ಈ ಸಾಲಿನ ಸೀಟು ಹಂಚಿಕೆಗೆ ಲಭ್ಯ ಇವೆ. ಅಭ್ಯರ್ಥಿಗಳು ಸೇರಿದಂತೆ ಸಾರ್ವಜನಿಕರು ಇದನ್ನು ಗಮನಿಸಬಹುದು. ಇದರಲ್ಲಿ ಕ್ಲಿನಿಕಲ್, ಪ್ರೀ ಕ್ಲಿನಿಕಲ್ ಮತ್ತು ಪ್ಯಾರಾ ಕ್ಲಿನಿಕಲ್ ಗೆ ಸೇರಿದ ಸೀಟುಗಳು ಸೇರಿವೆ. ಸೀಟ್ ಮ್ಯಾಟ್ರಿಕ್ಸ್ ಗೆ ಸಂಬಂಧಿಸಿದ ಮಾಹಿತಿ ತಿಳಿಯಲು ನೀವು ಈ ಲಿಂಕ್ (https://cetonline.karnataka.gov.in/keawebentry456/pgetmed2025/KEA_Medical_CompleteLogReport_11112025kannada.pdf) ಮೇಲೆ ಕ್ಲಿಕ್ ಮಾಡಿ ಪಡೆಯಬಹುದು ಎಂದು ಎಚ್.ಪ್ರಸನ್ನ ಅವರು ತಿಳಿಸಿದ್ದಾರೆ.












Click it and Unblock the Notifications