NEET-PG 2024: ಮೊದಲ ಸುತ್ತಿನ ಸೀಟು ಹಂಚಿಕೆ: KEA ವೇಳಾಪಟ್ಟಿ ಪ್ರಕಟ
ಬೆಂಗಳೂರು, ನವೆಂಬರ್ 18: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಪ್ರಸಕ್ತ ಸಾಲಿನ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ-2024 (ಸ್ನಾತಕೋತ್ತರ- NEET-PG 2024) ಅಭ್ಯರ್ಥಿಗಳಿಗೆ ಸಿಹಿ ಸುದ್ದಿ ನೀಡಿದೆ. ಮೊದಲ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ ವಿವರ ಹಾಗೂ ವೇಳಾಪಟ್ಟಿಯನ್ನು ಸೋಮವಾರ ಬಿಡುಗಡೆ ಮಾಡಿದೆ. ಅಭ್ಯರ್ಥಿಗಳು ದಿನಾಂಕ ಸಮಯ ಗಮನಿಸಬೇಕಿದೆ.
ನಾಳೆ ನವೆಂಬರ್ 19ರಂದು ಮಂಗಳವಾರ ಮಧ್ಯಾಹ್ನ 2 ಗಂಟೆಯಿಂದ ನವೆಂಬರ್ 22ರ ಶುಕ್ರವಾರ ಸಂಜೆ 04 ಗಂಟೆವರೆಗೆ ಸೀಟು ಹಂಚಿಕೆ ಪ್ರಕ್ರಿಯೆ ನಡೆಯಲಿದೆ.

2024ನೇ ಸಾಲಿನ ಸ್ನಾತಕೋತ್ತರ ಪಿಜಿ ವೈದ್ಯಕೀಯ ಕೋರ್ಸುಗಳ ಪ್ರವೇಶಕ್ಕೆ ಸರ್ಕಾರವು ನೀಡಿರುವ ಸೀಟ್ ಮ್ಯಾಟ್ರಿಕ್ಸ್ ಮತ್ತು ಶುಲ್ಕದ ವಿವರಗಳನ್ನು ಪ್ರಾಧಿಕಾರದ ವೆಬ್‌ಸೈಟಿನಲ್ಲಿ ಅಪ್ಲೋಡ್ ಮಾಡಲಾಗಿದೆ. ಅಭ್ಯರ್ಥಿಗಳು ವೆಬ್‌ಸೈಟ್‌ಗೆ ಭೇಟಿ ನೀಡಿ ಮಾಹಿತಿ ಪಡೆಯಬೇಕು.
ಅರ್ಹ ಅಭ್ಯರ್ಥಿಗಳು ದಿನಾಂಕ 19-11-2024 ರ ಮಧ್ಯಾಹ್ನ 2.00 ರಿಂದ 22-11-2024 ಸಂಜೆ 4.00 ರವರೆಗೆ ಆದ್ಯತಾ ಕ್ರಮದಲ್ಲಿ ಇಚ್ಛೆ / ಆಯ್ಕೆಗಳನ್ನು ದಾಖಲಿಸಬಹುದಾಗಿದೆ. ಮೊದಲನೇ ಸುತ್ತಿನ ಸೀಟು ಹಂಚಿಕೆಯ ವೇಳಾಪಟ್ಟಿಗೆ ಹೀಗಿದೆ.
ನಿಗದಿಪಡಿಸಿರುವ ಶೈಕ್ಷಣಿಕೆ ಅರ್ಹತೆ / ಕಾಲೇಜುಗಳ ಪ್ರವೇಶ / ಸೀಟು ಹಂಚಿಕೆ ಇತ್ಯಾದಿಗಳು NMC, MCC, RGUHS, ಸರ್ಕಾರ, ಸಂಬಂಧಿಸಿದ ವಿಶ್ವವಿದ್ಯಾಲಯಗಳು, ಅಪೆಕ್ಸ್ ಸಂಸ್ಥೆಗಳು ಕಾಲ ಕಾಲಕ್ಕೆ ನಿಗದಿಡಿಸುವ ನಿಯಮಗಳಿಗೆ / ಅನುಮೋದನೆಗೆ / ಷರತ್ತಿಗೆ ಒಳಪಟ್ಟಿರುತ್ತವೆ ಎಂದು ರಾಜ್ಯ ಪರೀಕ್ಷಾ ಪ್ರಾಧಿಕಾರವು ತಿಳಿಸಿದೆ.
ಸಕ್ಷಮ ಪ್ರಾಧಿಕಾರವು ನಿಗದಿಪಡಿಸಿದ ಅರ್ಹತಾ ಮಾನದಂಡಗಳನ್ನು ಅಥವಾ ನಿಬಂಧನೆಗಳನ್ನು ಪೂರೈಸದ ಅಭ್ಯರ್ಥಿಯ ಪ್ರವೇಶವನ್ನು ಯಾವುದೇ ಸಮಯದಲ್ಲಿ ಹಿಂತೆಗೆದುಕೊಳ್ಳುವ ಹಕ್ಕನ್ನು ಕೆಇಎ ಹೊಂದಿರುತ್ತದೆ ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.
ಡಿಸೆಂಬರ್ 2ರ ತನಕ ಸೀಟ ಹಂಚಿಕೆ ಪ್ರಕ್ರಿಯೆ: ಅಂಶಗಳು
* ನಾಳೆಯಿಂದ ನವೆಂಬರ್ 22ರ ತನಕ ಇಚ್ಚೆ/ಆಯ್ಕೆಗಳನ್ನು ದಾಖಲಿಸಲಾಗುತ್ತದೆ. ನಂತರ ನವೆಂಬರ್ 23ರಂದು ಅಣಕು ಸೀಟು ಹಂಚಿಕೆ ಫಲಿತಾಂಶ ದಾಖಲಿಸಲಾಗುತ್ತದೆ.
* ನವೆಂಬರ್ 23 ಸೀಟು ಹಂಚಿಕೆಯಲ್ಲಿನ ಬದಲಾವಣೆಗೆ ಅವಕಾಶ ಇರಲಿದೆ.
* ನವೆಂಬರ್ 26ರಂದು ನೈಜ ಸೀಟು ಹಂಚಿಕೆಯ ಫಲಿತಾಂಶ ಬಿಡುಗಡೆ ಮಾಡಲಾಗುತ್ತದೆ.
* ನವೆಂಬರ್ 27ರಂದು ಸೀಟು ಆಯ್ಕೆ ಮಾಡಿಕೊಂಡು ಅಭ್ಯರ್ಥಿಗಳು ಆಯ್ಕೆ ಮಾಡಿಕೊಂಡಿದ್ದರ ಕುರಿತು ಸೂಕ್ತವಾದದ್ದರ ಕುರಿತು ಪರಿಣಾಮವನ್ನು ಗಮನಸಿಬೇಕು. ಅದೇ ದಿನ ಶುಲ್ಕ ಪಾವತಿಗೆ ಅವಕಾಶ ಇರುತ್ತದೆ.
* ನಂತರ ನವೆಂಬರ್ 28ರಿಂದ ಡಿಸೆಂಬರ್ 02ರವರೆಗೆ ಸೀಟು ಆಯ್ಕೆ ಮಾಡಿಕೊಂಡು ಅಭ್ಯರ್ಥಿಗಳು ಮೂಲ ದಾಖಲೆಗಳನ್ನು ಸಲ್ಲಿಸಬೇಕು. ಮಲ್ಲೇಶ್ವರಂನಲ್ಲಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಕಚೇರಿಯಲ್ಲಿ ಪ್ರವೇಶ ಪತ್ರ, ದಾಖಲೆ ಸ್ವೀಕರಿಸಲಾಗುತ್ತದೆ.
* ಡಿಸೆಂಬರ್ 4ರೊಳಗೆ ಆಯ್ಕೆ ಮಾಡಿಕೊಂಡು ಕಾಲೇಜು ಪ್ರವೇಶಕ್ಕೆ ಕೊನೆಯ ದಿನವಾಗಿರುತ್ತದೆ ಎಂದು ಪ್ರಾಧಿಕಾರವು ಪ್ರಕಟಣೆಯಲ್ಲಿ ತಿಳಿಸಿದೆ..












Click it and Unblock the Notifications