ಕ್ಯಾನ್ಸರ್ ಪೀಡಿತ ಬಾಲಕನಿಗೆ ನೆರವಿನ ಹಸ್ತ ಬೇಕಿದೆ

Written By:
Subscribe to Oneindia Kannada

ಮಂಗಳೂರು, ಜುಲೈ, 09: ಅರಳಬೇಕಾದ ಬಾಲಕನಿಗೆ ಕ್ಯಾನ್ಸರ್ ಮಹಾಮಾರಿ ಅಂಟಿಕೊಂಡಿದೆ. ಚಿಕಿತ್ಸೆಗೆ ಹಣವಿಲ್ಲದೇ ಪರದಾಡುತ್ತಿರುವ ಬಾಲಕನ ಕತೆ ಕೇಳಿದರೆ ಕಣ್ಣಲ್ಲಿ ನೀರು ಬರದಿರಲು ಸಾಧ್ಯವೇ ಇಲ್ಲ.

ಗಡಿಭಾಗದ ಕಾಸರಗೋಡಿನ ಸಲೀಂ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಅವರ ಏಳು ವರ್ಷದ ಮಗಗನಿಗೆ ಕ್ಯಾನ್ಸರ್ ಇದೆ ಎಂಬ ವಿಷಯ ಗೊತ್ತಾಗಿದ್ದೆ ಜರ್ಜರಿತರಾಗಿ ಹೋಗಿದ್ದಾರೆ.[ಬೀದರ್‌ನ ಈ ಬಾಲಕನ ಜೀವ ದಾನಿಗಳ ಕೈಯಲ್ಲಿದೆ]

5 ಜನರ ಕುಟುಂಬದ ಕಣ್ಮಣಿಯಾಗಿದ್ದ 7 ವರ್ಷದ ಬಾಲಕ ಶಾಜಾಗೆ ಕ್ಯಾನ್ಸರ್ ಅಮರಿಕೊಂಡಿದೆ. ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ಚೆಕ್ ಅಪ್ ಮಾಡಿಸಿ ವರದಿ ಪಡೆಯಲಾಗಿದೆ. ಬಾಲಕನಿಗೆ ಚಿಕಿತ್ಸೆ ಸಾಧ್ಯವಿದ್ದು ಗುಣ ಮಾಡಬಹುದು ಎಂದು ವೈದ್ಯರು ಹೇಳಿದ್ದಾರೆ.[ಕ್ಯಾನ್ಸರ್ ವಿರುದ್ಧ ಸಹೋದರನ ಸವಾಲ್!]

ಬಡ ತಂದೆಯಿಂದ ಚಿಕಿತ್ಸೆಗೆ ಬೇಕಾದ 20 ಲಕ್ಷ ರು, ಭರಿಸಲು ಸಾಧ್ಯವಿಲ್ಲ. ಆದರೆ ಬಾಲಕ ಬದುಕಿ ಬಾಳಬೇಕಿದೆ. ಈಗಾಗಲೇ ಸಾಲ ಮಾಡಿ ಆರು ಲಕ್ಷ ರು. ಗೂ ಅಧಿಕ ಹಣವನ್ನು ಖರ್ಚು ಮಾಡಿರುವ ತಂದೆ ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ.[ಮಾರಣಾಂತಿಕ ಕ್ಯಾನ್ಸರ್ ಮೆಟ್ಟಿನಿಂತ ಹಿರಿಯಜ್ಜನ ಯಶೋಗಾಥೆ]

ಬಾಲಕನ ಜೀವ ಉಳಿಸಲು ಸಾಧ್ಯವಿರುವುದು ದಾನಿಗಳಿಂದ ಮಾತ್ರ. ನೀವು ನೀಡುವ ಹಣ ಸಾಮಾಜಿಕ ಬದಲಾವಣೆಗೆ ನಾಂದಿಯಾಗಬಹುದು. ಬಾಲಕನ ನೆರವಿಗೆ ಧಾವಿಸಲು ಆನ್ ಲೈನ್ ಅಭಿಯಾನವನ್ನು ಆರಂಭ ಮಾಡಲಾಗಿದೆ. ನಿಮಗೆ ದಾನ ಮಾಡುವ ಮನಸ್ಸಿದ್ದರೆ ದಯವಿಟ್ಟು ಈ ಲಿಂಕ್ ಕ್ಲಿಕ್ ಮಾಡಿ..

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Saleem from Kasaragod used to work in a shop. He left his work to take care of his 7-year-old son, Shajah who is diagnosed with cancer. His family of 5 were in for a shock when they found out their little son has cancer. Shajah has an elder brother and a younger sister. Our support will save little Shajah.
Please Wait while comments are loading...