'ಕ್ರೆಡಾಯ್' ಕಾರವಾರ ಚಾಪ್ಟರ್ ಆರಂಭ
ಬೆಂಗಳೂರು, ಏಪ್ರಿಲ್ 12: ಕಾನ್ಫಿಡರೇಷನ್ ಆಫ್ ರಿಯಲ್ ಎಸ್ಟೇಟ್ ಡೆವಲಪರ್ಸ್ ಆಫ್ ಇಂಡಿಯಾ (ಕ್ರೆಡಾಯ್)ದ 9ನೇ ಚಾಪ್ಟರ್ ಕಾರವಾರದ ದಿ ಎಮರಾಲ್ಡ್ ಹೋಟೆಲ್ ನಲ್ಲಿ ಉದ್ಘಾಟನೆಗೊಂಡಿತು. 2012ರಲ್ಲಿ ಬಿಜಾಪುರ ಮತ್ತು ಗುಲ್ಬರ್ಗಾದಲ್ಲಿ ಕ್ರೆಡಾ ಚಾಪ್ಟರ್ ಆರಂಭವಾದ ಬೆನ್ನಲ್ಲೇ ಇದೀಗ ಕಾರವಾರವೂ ಕ್ರೆಡಾಯ್ ಕುಟುಂಬಕ್ಕೆ ಸೇರಿದಂತಾಗಿದೆ.
ಇಲ್ಲಿನ 20 ಕ್ಕೂ ಹೆಚ್ಚು ಡೆವಲಪರ್ ಗಳು 50 ಕ್ಕೂ ಹೆಚ್ಚು ನಿರ್ಮಾಣ ಕಾಮಗಾರಿ ಯೋಜನೆಗಳನ್ನು ಕೈಗೆತ್ತಿಕೊಂಡಿದ್ದಾರೆ. ಇಲ್ಲಿ ಕ್ರೆಡಾಯ್ ಕಾರ್ಯರೂಪಕ್ಕೆ ಬರುವ ಮೂಲಕ ಇಂತಹ ಅಭಿವೃದ್ಧಿ ಯೋಜನೆಗಳು ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತದೆ. ಇದೇ ರೀತಿ ಕ್ರೆಡಾಯ್ ರಾಜ್ಯದ ಇನ್ನೂ ಕೆಲವು ನಗರಗಳಲ್ಲಿ ಘಟಕಗಳನ್ನು ಸ್ಥಾಪಿಸುವ ಉದ್ದೇಶ ಹೊಂದಿದೆ.

ಕಾರವಾರದ ಗಿರಿಜಾಬಾಯಿ ಟೆಕ್ನಿಕಲ್ ಇನ್ಸ್ ಟಿಟ್ಯೂಟ್ ಪ್ರಾಂಶುಪಾಲರಾದ ಆರ್.ಎಸ್. ರಾಜೇಂದ್ರಕುಮಾರ್ ಅವರು ಮಾತನಾಡಿ, "ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಕಾರವಾರ ನಗರಕ್ಕೆ ಬಹುಮಹಡಿ ಕಟ್ಟಡಗಳ ಅಗತ್ಯವಿದೆ. ಈ ನಿಟ್ಟಿನಲ್ಲಿ ಗ್ರಾಹಕರ ಬಹುದಿನದ ಕನಸನ್ನು ನನಸು ಮಾಡುವ ಜವಾಬ್ದಾರಿ ಕ್ರೆಡಾಯ್ ಮೇಲಿದೆ" ಎಂದರು.
ಕಾರವಾರ ಕ್ರೆಡಾಯ್ ನೂತವ ಅಧ್ಯಕ್ಷ ಸ್ಯಾಮ್ಸನ್ ಡಿಸೋಜ ಅವರು ಮಾತನಾಡಿ, ಕ್ರೆಡಾಯ್ ಸಹಕಾರದಿಂದ ಇಲ್ಲಿನ ಗ್ರಾಹಕರ ಕನಸನ್ನು ನನಸು ಮಾಡುವ ಸಂಕಲ್ಪ ಮಾಡಿದ್ದೇವೆ ಎಂದು ಭರವಸೆ ನೀಡಿದರು.ಇದೇ ವೇಳೆ ಮಾತನಾಡಿದ ಕಾರವಾರ ಕ್ರೆಡಾಯ್‍ನ ಕಾರ್ಯದರ್ಶಿ ಕೃಷ್ಣಾನಂದ ಬಂಡೇಕರ್, ಕಾರವಾರ ಮತ್ತು ಸುತ್ತಮುತ್ತಲಿನಲ್ಲಿ ರಿಯಲ್ ಎಸ್ಟೇಟ್ ಉದ್ಯಮದ ಬೆಳವಣಿಗೆ ಬಗ್ಗೆ ಮಾಹಿತಿ ನೀಡಿದರು.
ಕಾರವಾರ ಕ್ರೆಡಾಯ್ ಅಧ್ಯಕ್ಷ (ಚುನಾಯಿತ) ಜಗದೀಶ್ ಬಾಬು ಮತ್ತು ಕಾರವಾರ ಕ್ರೆಡಾಯ್ ಮುಖ್ಯ ಕಾರ್ಯನಿರ್ವಣಾಧಿಕಾರಿ ಅನಿಲ್ ನಾಯಕ್ ಅವರು ಮಾತನಾಡಿ ಕ್ರೆಡಾಯ್ ಕಾರ್ಯ ಚಟುವಟಿಕೆಗಳ ಬಗ್ಗೆ ಬೆಳಕು ಚೆಲ್ಲಿದರು. (ಒನ್ಇಂಡಿಯಾ ಕನ್ನಡ)


Click it and Unblock the Notifications
