Get Updates
Get notified of breaking news, exclusive insights, and must-see stories!

ಅಭಿವೃದ್ಧಿಯತ್ತ ಕರ್ನಾಟಕದ ನಗರಗಳ ಹೊಸ ಹೆಜ್ಜೆ

ಬೆಂಗಳೂರು, ಭಾರತದ ಸಿಲಿಕಾನ್ ವ್ಯಾಲಿ ಎಂದೇ ಹೆಸರು ಗಳಿಸಿರುವ ನಗರ, ವಿಶ್ವದ ದೊಡ್ಡ ಐಟಿ ಕಂಪನಿಗಳಿಗೆ ಬೆಂಗಳೂರು ನೆಲೆಯಾಗಿದೆ. ನಗರದ ಆರ್ಥಿಕ ಬೆಳವಣಿಗೆ ದರ ಮತ್ತು ಹೆಚ್ಚಿನ ಉದ್ಯೋಗ ಅವಕಾಶಗಳು ನಗರದೆಡೆಗೆ ಹೆಚ್ಚಿನ ಜನರನ್ನು ಆಕರ್ಷಿಸುತ್ತಿದೆ. ಇದೆಲ್ಲ ಅಂಶಗಳಿಂದ ಬೆಂಗಳೂರು ರಾಷ್ಟ್ರೀಯ ಸ್ಮಾರ್ಟ್ ಸಿಟಿ ಮಿಷನ್ ಅಡಿಯಲ್ಲಿ ಆಯ್ಕೆಯಾಗಿದೆ.

ಕರ್ನಾಟಕದಲ್ಲಿ ನಗರ ಮೂಲಸೌಕರ್ಯವು ಪ್ರಗತಿ ಮತ್ತು ಅಭಿವೃದ್ಧಿಗೆ ಹೆಸರುವಾಸಿಯಾಗಿದೆ. ಮೂಲಸೌಕರ್ಯವೆಂದರೆ ಕೇವಲ ಕಟ್ಟಡಗಳು ಮತ್ತು ಉತ್ತಮ ರಸ್ತೆಗಳು ಮಾತ್ರವೇ ಅಲ್ಲ. ಸಮುದಾಯಗಳು ಅಭಿವೃದ್ಧಿ ಹೊಂದಿ, ಕನಸುಗಳನ್ನು ನನಸಾಗಿಸುವ ಸ್ಥಳಗಳ ನಿರ್ಮಾಣವಾಗಿದೆ.

Karnataka s Urban Infrastructure on the Rise Namma Metro Expansion and Smart City Initiatives

ನಮ್ಮ ಮೆಟ್ರೋ ಯೋಜನೆ

ನಮ್ಮ ಮೆಟ್ರೋ ಬೆಂಗಳೂರಿನ ಸೌಂದರ್ಯವನ್ನು ಹೆಚ್ಚಿಸಿದೆ. ಪ್ರಯಾಣದ ಸೌಕರ್ಯದ ಮಟ್ಟವನ್ನು ಕೂಡ ಹೆಚ್ಚಿಸಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮೆಟ್ರೊ ಯೋಜನೆಯ ಕಾಮಗಾರಿ ವೇಗವನ್ನು ಹೆಚ್ಚಿಸಿದೆ. 2014ರಲ್ಲಿ ದೇಶದಾದ್ಯಂತ 248 ಕಿ.ಮೀ ಇದ್ದ ಮೆಟ್ರೊ ರೈಲಿನ ಉದ್ದ 2022ರಲ್ಲಿ 791 ಕಿ.ಮೀ.ಗೆ ಏರಿಕೆಯಾಗಿದೆ. ಬೆಂಗಳೂರು ಮೆಟ್ರೊ ರೈಲು ಕಾರ್ಪೊರೇಷನ್ ಲಿಮಿಟೆಡ್‌ (ಬಿಎಂಆರ್‌ಸಿಎಲ್‌) ತನ್ನ ಜಾಲವನ್ನು ವಿಸ್ತರಿಸಿದೆ. ನೇರಳೆ ಮಾರ್ಗದ ಬೈಯಪ್ಪನಹಳ್ಳಿ-ಕೆಆರ್ ಪುರಂ ಮತ್ತು ಕೆಂಗೇರಿ-ಚಲ್ಲಘಟ್ಟ ಭಾಗಗಳ ಉದ್ಘಾಟನೆಯ ಬಳಿಕ 73.8 ಕಿ.ಮೀ.ಗೆ ವಿಸ್ತರಣೆಯಾಗಿದೆ. ಬೆಂಗಳೂರಿನಲ್ಲಿ 66 ನಿಲ್ದಾಣಗಳು ಸದ್ಯ ಕಾರ್ಯನಿರ್ವಹಸುತ್ತಿವೆ. 2014 ರಲ್ಲಿ ಕೇವಲ 7 ಕಿಮೀ ವಿಸ್ತಾರದಲ್ಲಿ ಪ್ರಾರಂಭವಾದ ನಮ್ಮ ಮೆಟ್ರೋ 12 ವರ್ಷಗಳನ್ನು ಪೂರೈಸಿದೆ. ಬೆಂಗಳೂರಿನ ಮೆಟ್ರೋ ಜಾಲವು ದೇಶದ ಎರಡನೇ ಅತಿ ಉದ್ದವಾದ ಜಾಲವಾಗಿದೆ.

ಬೆಂಗಳೂರು ಸ್ಯಾಟಲೈಟ್ ಟೌನ್ ರಿಂಗ್ ರೋಡ್ ಯೋಜನೆ

ಎನ್‌ಹೆಚ್‌ಎಐ ನಿರ್ಮಾಣ ಮಾಡುತ್ತಿರುವ 280.8 ಕಿಮೀ ಬೆಂಗಳೂರು ಸ್ಯಾಟಲೈಟ್ ಟೌನ್ ರಿಂಗ್ ರೋಡ್ ಯೋಜನೆ 4-6 ಲೇನ್ ಪ್ರವೇಶ-ನಿಯಂತ್ರಿತ ಎಕ್ಸ್‌ಪ್ರೆಸ್‌ವೇ ಆಗಿದೆ. ಇದು ಡಾಬಸ್‌ಪೇಟೆ, ದೊಡ್ಡಬಳ್ಳಾಪುರ, ದೇವನಹಳ್ಳಿ, ಸೂಲಿಬೆಲೆ, ಹೊಸಕೋಟೆ, ಸರ್ಜಾಪುರ, ಅತ್ತಿಬೆಲೆ, ಆನೇಕಲ್, ತಟ್ಟೆಕೆರೆ, ಕನಕಪುರ, ರಾಮನಗರ ಮತ್ತು ಮಾಗಡಿ ನಗರಗಳನ್ನು ಸಂಪರ್ಕಿಸುತ್ತದೆ. ಭಾರತಮಾಲಾ ಪರಿಯೋಜನಾ ಲಾಟ್-3 ಅಡಿಯಲ್ಲಿನ ಈ ಗ್ರೀನ್‌ಫೀಲ್ಡ್ ಎಕ್ಸ್‌ಪ್ರೆಸ್‌ವೇ ಬೆಂಗಳೂರು ನಗರದ ಸುತ್ತಲೂ ಬೈಪಾಸ್ ಆಗಿ ಕಾರ್ಯನಿರ್ವಹಿಸುತ್ತದೆ. ಇದನ್ನು 3 ಸಮಾನಾಂತರ ಹಂತಗಳಲ್ಲಿ ನಿರ್ಮಿಸಲಾಗುತ್ತಿದೆ.

ಸ್ಮಾರ್ಟ್ ಸಿಟಿ ಯೋಜನೆಗಳು

ಕೇಂದ್ರ ಸರ್ಕಾರದ ಸ್ಮಾರ್ಟ್‌ ನಗರ ಅಭಿಯಾನ ಕಾರ್ಯಸಾಧ್ಯವಾದ ವ್ಯವಹಾರ ಮಾದರಿಗಳನ್ನು ಅಭಿವೃದ್ಧಿಪಡಿಸುವಲ್ಲಿ ಪರಿಣಾಮಕಾರಿಯಾಗಿದೆ. ತಲಾ 1,000 ಕೋಟಿ ರೂ.ಗಳನ್ನು ನಿಗದಿಪಡಿಸುವ ಮೂಲಕ ಐದು ವರ್ಷಗಳಲ್ಲಿ ಆಯ್ದ ನಗರಗಳನ್ನು ಅಭಿವೃದ್ಧಿಪಡಿಸುವ ಗುರಿಯೊಂದಿಗೆ 2015 ರಲ್ಲಿ ಈ ಯೋಜನೆಯನ್ನು ಕೇಂದ್ರ ಸರ್ಕಾರ ಪ್ರಾರಂಭಿಸಿತು.

ಈ ಯೋಜನೆಗೆ ಕರ್ನಾಟಕದ ಮಂಗಳೂರು, ಬೆಂಗಳೂರು, ದಾವಣಗೆರೆ, ಬೆಳಗಾವಿ, ತುಮಕೂರು ಮತ್ತು ಶಿವಮೊಗ್ಗ ಸೇರಿ 7 ನಗರಗಳನ್ನು ಆಯ್ಕೆ ಮಾಡಲಾಗಿದೆ. ಒಟ್ಟು ₹1,71,044 ಕೋಟಿ ವೆಚ್ಚದಲ್ಲಿ 7,934 ಯೋಜನೆಗಳಿಗೆ ಅನುಮೋದನೆ ನೀಡಲಾಗಿದ್ದು, ₹1,10,794 ಕೋಟಿ ವೆಚ್ಚದಲ್ಲಿ 6,069 ಯೋಜನೆಗಳನ್ನು ಪೂರ್ಣಗೊಳಿಸಲಾಗಿದೆ. ಹೆಚ್ಚುವರಿಯಾಗಿ, ಒಟ್ಟು ₹60,250 ಕೋಟಿಗಳ 1,865 ಯೋಜನೆಗಳು ಜೂನ್ 2024 ರೊಳಗೆ ಪೂರ್ಣಗೊಳ್ಳಲಿವೆ.

ಸ್ಥಳೀಯ ವ್ಯವಹಾರಗಳಿಗೆ ಸಹಾಯ

ಕೇಂದ್ರ ಸರ್ಕಾರ ಬೆಂಗಳೂರು ಅಭಿವೃದ್ಧಿಗೆ ಅಪಾರ ಆಸಕ್ತಿ ವಹಿಸಿದೆ. ವಿಮಾನ ನಿಲ್ದಾಣದ ಸಂಪೂರ್ಣ ಬದಲಾವಣೆ ಮತ್ತು ದೇವನಹಳ್ಳಿಯಲ್ಲಿ ರೈಲ್ವೆ ಟರ್ಮಿನಲ್ ಅನ್ನು ನಿರ್ಮಾಣ ಮಾಡಿದ ನಂತರ, ಬೆಂಗಳೂರಿನ ಮೂಲಸೌಕರ್ಯವನ್ನು ಮರು ಅಭಿವೃದ್ಧಿ ಮಾಡಲು ಸಿದ್ಧವಾಗಿದೆ. ನಮ್ಮ ಮೆಟ್ರೋ ನೇರಳೆ ಮಾರ್ಗ ಸಂಪೂರ್ಣವಾದ ನಂತರ ಐಟಿ ಹಬ್‌ಗೆ ಸಂಪರ್ಕವನ್ನು ಹೆಚ್ಚಿಸಿದೆ.

ಬೆಂಗಳೂರಿನಲ್ಲಿ ಪ್ರತಿದಿನ ಸುಮಾರು 8 ಲಕ್ಷ ಜನರು ಮೆಟ್ರೋದಲ್ಲಿ ಪ್ರಯಾಣಿಸುತ್ತಾರೆ. ನಮ್ಮ ಮೆಟ್ರೋ ಎಂದೇ ಪ್ರಸಿದ್ಧವಾದ ಬೆಂಗಳೂರು ಮೆಟ್ರೋ, ಬೆಂಗಳೂರಿನ ಸ್ಕೈಲೈನ್‌ನ ಸೌಂದರ್ಯವನ್ನು ಹೆಚ್ಚಿಸುವುದಲ್ಲದೆ, ಪ್ರಯಾಣದ ಸೌಕರ್ಯದ ಮಟ್ಟವನ್ನು ಕೂಡ ಹೆಚ್ಚಿಸಿದೆ. ನಮ್ಮ ಮೆಟ್ರೋ ಬೆಂಗಳೂರು ನಗರಕ್ಕೆ ಪ್ರಮುಖ ಪರಿಸರ ಸ್ನೇಹಿ ಸಾರಿಗೆ ಸಂಪರ್ಕವಾಗಿ ಸೇರ್ಪಡೆಯಾಗಿದೆ. ಇದು ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುವಲ್ಲಿ ಗಮನಾರ್ಹ ಕೊಡುಗೆ ನೀಡುತ್ತದೆ. ಈ ಸ್ಮಾರ್ಟ್ ಸಿಟಿ ಯೋಜನೆಯ ವಿಶಾಲ ದೃಷ್ಟಿಯು ಜನದಟ್ಟಣೆ, ಟ್ರಾಫಿಕ್ ಜಾಮ್, ನೀರಿನ ಕೊರತೆ, ಬೀದಿ ದೀಪಗಳ ಕೊರತೆ ಸೇರಿದಂತೆ ಹಲವು ಸಮಸ್ಯೆಯನ್ನು ನಿವಾರಿಸುವುದಾಗಿದೆ. ಸ್ಮಾರ್ಟ್ ಸಿಟಿಯ ಮುಖ್ಯ ಉದ್ದೇಶಗಳು ನಗರವನ್ನು ಚಲನಶೀಲತೆ, ಆರ್ಥಿಕತೆ ಮತ್ತು ಮೂಲಸೌಕರ್ಯಗಳನ್ನು ಅಭಿವೃದ್ಧಿಗೊಳಿಸುವುದಾಗಿದೆ.

ಪ್ರಧಾನಿ ನರೇಂದ್ರ ಮೋದಿ ನಾಯಕತ್ವ

ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ನಾಯಕತ್ವದಲ್ಲಿ, ನಗರಗಳ ಮೂಲಸೌಕರ್ಯವು ಸುಸ್ಥಿರ ಅಭಿವೃದ್ಧಿ ಮತ್ತು ಆಧುನಿಕರಣಗೊಂಡಿವೆ. ಸ್ಮಾರ್ಟ್ ಸಿಟಿ ಮಿಷನ್‌ನಲ್ಲಿ ಬೆಂಗಳೂರಿನ ಸೇರ್ಪಡೆಯು ನಗರಾಭಿವೃದ್ಧಿಗೆ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಸರ್ಕಾರದ ಬದ್ಧತೆ ತೋರಿಸುತ್ತದೆ. ನಮ್ಮ ಮೆಟ್ರೋ ಮೂಲಕ ಸಾರ್ವಜನಿಕ ಸಾರಿಗೆಯನ್ನು ಸುಧಾರಣೆ ಮಾಡುವ ಮತ್ತು ಟ್ರಾಫಿಕ್ ಸಮಸ್ಯೆಯನ್ನು ಕಡಿಮೆ ಮಾಡುವ ಉದ್ದೇಶ ಹೊಂದಲಾಗಿದೆ. ಚಾಲ್ತಿಯಲ್ಲಿರುವ ಯೋಜನೆಗಳು ಮತ್ತು ಪ್ರಸ್ತಾವಿತ ವಿಸ್ತರಣೆಗಳು ನಗರದ ಹೆಚ್ಚಿನ ಪ್ರದೇಶಗಳನ್ನು ಸಂಪರ್ಕಿಸುವ ಗುರಿಯನ್ನು ಹೊಂದಿವೆ. ಪ್ರಯಾಣಿಕರಿಗೆ ವಿಶ್ವಾಸಾರ್ಹ, ಪರಿಣಾಮಕಾರಿ ಮತ್ತು ಪರಿಸರ ಸ್ನೇಹಿ ಸಾರಿಗೆ ಸೌಲಭ್ಯವನ್ನು ಒದಗಿಸುತ್ತವೆ. ಮೂಲಭೂತವಾಗಿ, ಬೆಂಗಳೂರು ನಗರ ಮೂಲಸೌಕರ್ಯಕ್ಕಾಗಿ ಅಭಿವೃದ್ಧಿ, ಸುಸ್ಥಿರತೆ ಮತ್ತು ಅಂತರ್ಗತ ಬೆಳವಣಿಗೆಗೆ ಆದ್ಯತೆ ನೀಡುವುದು ಮೋದಿ ಸರ್ಕಾರದ ಮುಂದಿನ ಉದ್ದೇಶವಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+