Get Updates
Get notified of breaking news, exclusive insights, and must-see stories!

Sigandur Bridge: ಅತೀ ಉದ್ದದ 'ಸಿಗಂದೂರು ಬ್ರಿಡ್ಜ್' ಲೋಕಾರ್ಪಣೆ: ಹೆಸರಿಡುವ ವಿಚಾರ ಕೋರ್ಟ್ ಅಂಗಳಕ್ಕೆ...

Sigandur Bridge News: ಮಲೆನಾಡಿನ ಜಿಲ್ಲೆ ಶಿವಮೊಗ್ಗದಲ್ಲಿ ಮತ್ತೊಂದು ಮಹಾತ್ವಾಕಾಂಕ್ಷೆಯ ಯೋಜನೆ ಇಂದು ಲೋಕಾರ್ಪಣೆಗೊಳ್ಳಲಿದೆ. ಶರಾವತಿ ಹಿನ್ನೀರಿನಲ್ಲಿ ನಿರ್ಮಿಸಲಾದ ಕರ್ನಾಟಕದ ಅತೀ ಉದ್ದದ ಹಾಗೂ ಭಾರತದ ಎರಡನೇ ದೊಡ್ಡ ಕೇಬಲ್ ಬ್ರಿಡ್ಜ್‌ ಅನ್ನು ಇಂದು ಕೇಂದ್ರ ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಅವರು ಉದ್ಘಾಟಿಸಿ, ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಲಿದ್ದಾರೆ. ಇದೇ ವೇಳೆ ಸೇತುವೆಗೆ ಹೆಸರಿಡುವ ವಿಚಾರದಲ್ಲಿ ಭಿನ್ನಾಭಿಪ್ರಾಯ ಉಂಟಾಗಿದೆ. ಈ ವಿಚಾರ ಕೋರ್ಟ್ ಮೆಟ್ಟಿಲೇರಿದೆ.

ಹೌದು, ಒಟ್ಟು 473 ಕೋಟಿ ವೆಚ್ಚದಲ್ಲಿ 2.44 ಕಿಲೋ ಮೀಟರ್ ಉದ್ದದ ಸೇತುವೆ ಇದಾಗಿದೆ. ಈ ಭಾಗದ ಜನರು, ಪ್ರವಾಸಿಗರು, ಚೌಡೇಶ್ವರಿ ಭಕ್ತರ ಕನಸು ಇಂದು ನನಸಾಗಿದೆ. ಲಾಂಜ್ ಮೂಲಕ ತೆರಳುತ್ತಿದ್ದ ಜನರು ಇಂದಿನಿಂದ ಸೇತುವೆ ಮೂಲಕ ನಿಶ್ಚಿಂತೆಯಿಂದ ಓಡಾಡಬಹುದಾಗಿದೆ. 740 ಮೀಟರ್ ಕೇಬಲ್ ಒಳಗೊಂಡ ರಾಜ್ಯದ ಒಳನಾಡು ಸೇತುವೆ ಇದಾಗಿದೆ. ಬೃಹತ್ ಕಾರ್ಯಕ್ರಮ ಆಯೋಜನೆಗೊಂಡಿದ್ದು, ವಿವಿಧ ನಾಯಕರ ಸಮ್ಮುಖದಲ್ಲಿ ಕೇಂದ್ರ ಸಚಿವರು ಲೋಕಾರ್ಪಣೆಗೊಳಿಸಲಿದ್ದಾರೆ.

Karnataka s longest Sigandur cable bridge inaugurated today controversy over naming it

ಸಿಂಗದೂರಿಗೆ ತೆರಳಲು ರಸ್ತೆ ಮಾರ್ಗ ಅನುಸರಿಸಿದರೆ 100 ಕಿಲೋ ಮೀಟರ್ ಹೋಗಬೇಕು. ಇಲ್ಲವೇ ಲಾಂಚ್‌ ಮೂಲಕ ತೆರಳಬೇಕಿತ್ತು. ಇದೀಗ ಶರಾವತಿ ನದಿ ಮೇಲೆ ಬ್ರಿಡ್ಜ್ ನಿರ್ಮಿಸಿದ್ದರಿಂದ ಸಾಕಷ್ಟು ಅನುಕೂಲವಾಗಿದೆ. ಈ ಯೋಜನೆ ಬಿಜೆಪಿ ನಾಯಕ ಬಿ.ಎಸ್.ಯಡಿಯೂರಪ್ಪ ಅವರ ಸತತ ಪ್ರಯತ್ನದಿಂದ ಆಗಿದೆ. ಹೀಗಾಗಿ ಈ ಬ್ರಿಡ್ಜ್‌ಗೆ ಅವರ ಹೆಸರು ಇಡುವಂತೆ ಆಗ್ರಹ ಜೋರಾಗಿದೆ. ಯಾರ ಹೆಸರಿಡಬೇಕು ಎಂಬ ಚರ್ಚೆ ಸಹ ಶುರುವಾಗಿದೆ.

ಸೇತುವೆಗೆ ಯಾರ ಹೆಸರು ಅಂತಿಮ?

ಸಿಂಗದೂರು ಬ್ರಿಡ್ಜ್‌ಗೆ 'ಸಿಗಂದೂರು ಚೌಡೇಶ್ವರಿ' ಎಂಬ ಹೆಸರು ಇಡುವಂತೆ ರಾಜ್ಯ ಸರ್ಕಾರಕ್ಕೆ ಭಾರತೀಯ ಜನತಾ ಪಕ್ಷ (ಬಿಜೆಪಿ) ಪರವಾಗಿ ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದು ಹೇಳಿದ್ದರು. ಇದೀಗ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಹೆಸರು ಇಡುವಂತೆ ಹರಿನಾಥ್ ರಾವ್ ಎಂಬುವವರು ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಯಡಿಯೂರಪ್ಪ ಅವರ ಕಾಲದಲ್ಲಿ ಅವರ ನಿರಂತರ ಪ್ರಯತ್ನದಿಂದ ಈ ಸೇತುವೆ ಜನರಿಗೆ ಧಕ್ಕುತ್ತಿದೆ. ಹೀಗಾಗಿ ಅವರ ಹೆಸರು ಇಡುವುದು ಸೂಕ್ತ ಎಂದು ಅವರು ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ಸದ್ಯ ಸೇತುವೆ ಲೋಕಾರ್ಪಣೆ ಆಗ ಜನಬಳಕೆಗೆ ಸಿಗುತ್ತಿದೆ. ಈ ಮಧ್ಯೆ ಯಾರ ಹೆಸರು ಅಂತಿಮಗೊಳ್ಳುತ್ತದೆ ಎಂಬ ಚರ್ಚೆ ಸೃಷ್ಟಿಯಾಗಿದೆ. ಕೋರ್ಟ್ ತಿರ್ಮಾನವೇ ಅಂತಿಮವಾಗಲಿದೆ. ಆ ಬಗ್ಗೆ ಕಾದು ನೋಡಬೇಕಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+