Vande Bharat Express: ಸಂಚಾರ ಆರಂಭಿಸಲಿರುವ ಬೆಂಗಳೂರು-ಬೆಳಗಾವಿ ವಂದೇ ಭಾರತ್ ರೈಲಿನ ಟಿಕೆಟ್ ದರ, ಮಾರ್ಗ
Vande Bharat Express: ಉತ್ತರ ಕರ್ನಾಟಕದ ಬಹುಬೇಡಿಕೆಯ ಬೆಂಗಳೂರು-ಬೆಳಗಾವಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರವು ಇದೇ ಭಾನುವಾರ ಆಗಸ್ಟ್ 10ರಂದು ಪ್ರಧಾನಿ ನರೇಂದ್ರ ಮೋದಿಯವರು ಚಾಲನೆ ನೀಡುವ ಮೂಲಕ ಆರಂಭವಾಗಲಿದೆ. ಕರ್ನಾಟಕದ 11ನೇ ವಂದೇ ಭಾರತ್ ರೈಲು ಇದಾಗಲಿದೆ. ಪ್ರಧಾನಿಯವರು ಇದು ಸೇರಿ ಹೊಸ ಮೂರು ವಂದೇ ಭಾರತ್ ರೈಲಗಳಿಗೆ ಹಾಗೂ ಬೆಂಗಳೂರು ಮೆಟ್ರೋ ರೈಲು ಹೊಸ ಮಾರ್ಗ ಮತ್ತು ಯೋಜನೆಗೆ ಗ್ರೀನ್ ಸಿಗ್ನಲ್ ಕೊಡಲಿದ್ದಾರೆ.
ಈ ಸಂಬಂಧ ಪ್ರಧಾನಿ ಭಾನುವಾರ ಬೆಂಗಳೂರಿಗೆ ಆಗಮಿಸಲಿದ್ದಾರೆ. ಕೆಎಸ್‌ಆರ್ ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಬೆಳಗಾವಿ ವಂದೇ ಭಾರತ್ ರೈಲು ಕಾರ್ಯಾಚರಣೆ ಆರಂಭಿಸಲಿದೆ. ಹಾಗಾದ್ರೆ ಇದು ಎಷ್ಟು ಜಿಲ್ಲೆಗಳನ್ನು ಹಾದು ಹೋಗಲಿದೆ, ಸಮಯ, ಮಾರ್ಗ ಮುಖ್ಯವಾಗಿ ಟಿಕೆಟ್ ದರ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ.

ತಮಿಳುನಾಡುಗ ಗಡಿಗೆ ಹೊಂದಿಕೊಂಡ ಕರ್ನಾಟಕದ ದಕ್ಷಿಣ ಭಾಗದಿಂದ ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡ ಕಿತ್ತೂರು ಕರ್ನಾಟಕವರೆಗೆ ಸಂಪರ್ಕಿಸುವ ಬೆಂಗಳೂರು-ಬೆಳಗಾವಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಒಟ್ಟು 06 ಜಿಲ್ಲೆಗಳ ಮಾರ್ಗವಾಗಿ ಸಾಗಲಿದೆ. ಇದರಿಂದ ಆಯಾ ಜಿಲ್ಲೆಗಳ ಪ್ರಯಾಣಿಕರಿಗೆ ಮಾತ್ರವಲ್ಲದೇ ಪ್ರವಾಸೋದ್ಯಮ, ಕೈಗಾರಿಕೆ, ಶೈಕ್ಷಣಿಕ ರಂಗದ ಅಭಿವೃದ್ಧಿಗೂ ಅನುಕೂಲವಾಗುತ್ತದೆ. ಪ್ರಯಾಣದ ಸಮಯ ತಗ್ಗುತ್ತದೆ. ಜನರಿಗೆ ಸುಧಾರಿತ ರೈಲು ಸೇವೆಯೊಂದು ಲಭ್ಯವಾಗುತ್ತದೆ.
ಹೊಸ ರೈಲಿನ ನಿಲುಗಡೆ ಎಲ್ಲೆಲ್ಲೆ?
ಬೆಂಗಳೂರು ಬಿಟ್ಟರೆ, ತುಮಕೂರು, ದಾವಣಗೆರೆ, ಹಾವೇರಿ, ಹುಬ್ಬಳ್ಳಿ, ಧಾರವಾಡ ಮಾರ್ಗವಾಗಿ ಬೆಳಗಾವಿ ಒಟ್ಟು 8.50 ಗಂಟೆಯ ಹಾದಿ ಕ್ರಮಿಸಿ ಗಮ್ಯ ಸ್ಥಳ ತಲುಪುತ್ತದೆ. ಬೆಂಗಳೂರು ಕೆಎಸ್‌ಆರ್ ರೈಲು ನಿಲ್ದಾಣವನ್ನು ಬೆಳಗ್ಗೆ 5.20 ಗಂಟೆಗೆ ಬಿಟ್ಟರೆ, ಮಧ್ಯಾಹ್ನ 1.50ಕ್ಕೆ ಬೆಳಗಾವಿ ತಲುಪುತ್ತದೆ. ಮರಳಿ ಮತ್ತೆ ಬೆಳಗಾವಿಯಿಂದ ಮಧ್ಯಾಹ್ನ 2.30ಗಂಟೆಗೆ ರಾತ್ರಿ 10.40ಕ್ಕೆ ಬೆಂಗಳೂರು ಕೆಎಸ್‌ಆರ್ ನಿಲ್ದಾಣಕ್ಕೆ ಬಂದು ಸೇರಲಿದೆ ಎಂದು ನೈಋತ್ಯ ರೈಲ್ವೆ ವಲಯದ ಅಧಿಕಾರಿಗಳು ವೇಳಾಪಟ್ಟಿ ಬಿಡುಗಡೆ ಮಾಡಿದ್ದರೆ.
ಬೆಂಗಳೂರಿನಿಂದ ಬೆಳಗಾವಿಗೆ ಟಿಕೆಟ್ ದರ ಎಷ್ಟಿದೆ?
* ಬೆಂಗಳೂರು- ಬೆಳಗಾವಿ ಟಿಕೆಟ್ ದರ :1264 ರೂಪಾಯಿ
* ಬೆಂಗಳೂರು-ಧಾರವಾಡ ಟಿಕೆಟ್ ದರ :1049 ರೂಪಾಯಿ
* ಬೆಂಗಳೂರು-ಹುಬ್ಬಳ್ಳಿ ಟಿಕೆಟ್ ದರ : 1090 ರೂಪಾಯಿ
* ಬೆಂಗಳೂರು-ಹಾವೇರಿ ಟಿಕೆಟ್ ದರ : 907 ರೂಪಾಯಿ
* ಬೆಂಗಳೂರು-ದಾವಣಗೆರೆ ಟಿಕೆಟ್ ದರ: 800 ರೂಪಾಯಿ
* ಬೆಂಗಳೂರು-ತುಮಕೂರು ಟಿಕೆಟ್ ದರ: 403 ರೂಪಾಯಿ
* ಬೆಂಗಳೂರು -ಯಶವಂತಪುರ ಟಿಕೆಟ್ ದರ: 344 ರೂಪಾಯಿ
ಪ್ರಧಾನಿ ಮೋದಿಯವರು ಬೆಂಗಳೂರು-ಬೆಳಗಾವಿ ರೈಲಿನ ಜೊತೆಗೆ ಅಮೃತಸರದಿಂದ ಶ್ರೀ ಮಾತಾ ವೈಷ್ಣೋದೇವಿ ಕತ್ರ ಹಾಗೀ ನಾಗ್ಪುರ (ಅಜ್ನಿ)- ಪುಣೆ ಮಾರ್ಗದ ಮತ್ತೆರಡು ಹೊಸ ವಂದೇ ಭಾರತ್ ರೈಲಿಗೂ ಚಾಲನೆ ನೀಡಲಿದ್ದಾರೆ.












Click it and Unblock the Notifications