Karnataka Rains: ಮುಂದಿನ 5 ದಿನ 17 ಜಿಲ್ಲೆಗಳಿಗೆ ಭರ್ಜರಿ ಮಳೆ, 'ಯೆಲ್ಲೋ ಅಲರ್ಟ್' ಘೋಷಣೆ
ಬೆಂಗಳೂರು, ಜೂನ್ 04: ಕರ್ನಾಟಕ ರಾಜ್ಯಕ್ಕೆ ಸಂಪೂರ್ಣವಾಗಿ ಮುಂಗಾರು ಮಳೆ ಪ್ರವೇಶವಾಗಿದೆ. ಇದರ ಬೆನ್ನಲ್ಲೆ ಭರ್ಜರಿ ಮಳೆ ಸುರಿಯುವ ಮುನ್ಸೂಚನೆ ನೀಡಿರುವ ಹವಾಮಾನ ಇಲಾಖೆಯು ಮುಂದಿನ 05 ದಿನಗಳ ಕಾಲ ಭಾರೀ ಮಳೆ ಬರುವ 17 ಜಿಲ್ಲೆಗಳಿಗೆ 'ಯೆಲ್ಲೋ ಅಲರ್ಟ್' ಎಚ್ಚರಿಕೆ ಘೋಷಿಸಿದೆ.
ಮೇ ಅಂತ್ಯಕ್ಕೆ ಕೇರಳ ಪ್ರವೇಶಿದ ಮುಂಗಾರು ಕರ್ನಾಟಕ ರಾಜ್ಯಾದ್ಯಂತ ಪಸರಿಸಿದ ಕಾರಣ, ಒಣ ಹವೆಯ ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಧಾರಾಕಾರ ಮಳೆ ನಿರೀಕ್ಷೆ ಇದೆ.

ಮುಂದಿನ ಐದು ದಿನಗಳ ಕಾಲ ಬಹುತೇಕ ಅರ್ಧ ರಾಜ್ಯಕಿಂತಲೂ ಹೆಚ್ಚಿನ ಭಾಗದಲ್ಲಿ ಭಾರೀ ಮಳೆ ಅಂದರೆ 06 ಸೆಂಟಿ ಮೀಡರ್‌ನಿಂದ 11 ಸೆಂಟಿ ಮೀಟರ್ ವರೆಗೆ ಮಳೆ ಆಗಲಿದೆ. ಕೆಲವು ಜಿಲ್ಲೆಗಳಲ್ಲಿ ನಿರಂತರ ಐದು ದಿನ ಮಳೆ ಬರದೆ, ದಿನ ಬಿಟ್ಟು ದಿನ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ರಾಜ್ಯವ್ಯಾಪಿ ಭಾರೀ ಮಳೆ ಎಚ್ಚರಿಕೆ
ಕರ್ನಾಟಕ ಕರಾವಳಿ ಭಾಗದಲ್ಲಿ ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ, ಉತ್ತರ ಒಳನಾಡು ಭಾಗದ ಜಿಲ್ಲೆಗಳಾದ ಬಾಗಲಕೋಟೆ, ಬೆಳಗಾವಿ, ಧಾರವಾಡ, ವಿಜಯಪುರ, ಹಾವೇರಿ, ಗದಗ, ಕೊಪ್ಪಳ, ಬೀದರ್, ರಾಯಚೂರು ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ ಮುಂದಿನ ಐದು ದಿನ ಗುಡುಗು, ಮಿಂಚು ಸಮೇತ ಅತ್ಯಧಿಕ ಮಳೆ ಆಗಲಿದೆ. ಹೀಗಾಗಿ ಇಷ್ಟು ಜಿಲ್ಲೆಗಳಿಗೆ ಐದು ದಿನ 'ಹಳದಿ ಎಚ್ಚರಿಕೆ' ಕೊಡಲಾಗಿದೆ.

ಇನ್ನೂ 17 ಜಿಲ್ಲೆಗಳನ್ನು ಹೊರತುಪಡಿಸಿದರೆ ಉಳಿದ 13 ಜಿಲ್ಲೆಗಳಲ್ಲಿ ಆಗಾಗ ಹಗುರದಿಂದ ಸಾಧಾರಣವಾಗಿ ಮಳೆ ಬರುವ ಸಾಧ್ಯತೆಗಳು ಇವೆ. ಇನ್ನೂ ಕೆಲವೆಡೆ ತುಂತುರು ಮಳೆ ಬರಬಹುದು. ಈ ಮೂಲಕ ರಾಜ್ಯವ್ಯಾಪಿ ಮುಂಗಾರು ಮಳೆಯ ಸಿಂಚನವಾಗಲಿದೆ. ಇದರಿಂದ ಉತ್ತರ ಒಳನಾಡಿನ ಜಿಲ್ಲೆಗಳ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.
ಬೆಂಗಳೂರಿಗೆ ಮೂರು ದಿನ ಮಳೆ ಬ್ರೇಕ್?
ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಮುಂದಿನ ಮೂರು ದಿನ ನೀಲಿ ಸ್ಚಚ್ಛ ಆಕಾಶ ಕಂಡು ಬರಲಿದೆ. ಮಹಾನಗರಕ್ಕೆ ಯಾವುದೇ ಮಳೆಯ ಮುನ್ಸೂಚನೆ ಸದ್ಯದವರೆಗೆ ಇಲ್ಲ. ಅಲ್ಪ ಮಟ್ಟಿಗೆ ಬಿಸಿಲಿನ ತಾಪಮಾನ ಏರಿಕೆ ಆಗುವ ಸಂಭವ ಇದೆ. ಇದರೊಂದಿಗೆ ಒಂದರೆಡು ಕಡೆಗಳಲ್ಲಿ ತುಂತುರು ಮಳೆ ಆಗಬಹುದು ಎನ್ನಲಾಗಿದೆ.
ಈ ವೇಳೆ ಗರಿಷ್ಠ ತಾಪಮಾನ 28-31 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ತಾಪಮಾನ 19-21 ಡಿಗ್ರಿ ಸೆಲ್ಸಿಯಸ್ ವರೆಗೆ ದಾಖಲಾಗುವ ಸಾಧ್ಯತೆಗಳು ಇವೆ ಎಂದು ಐಎಂಡಿ ಮುನ್ಸೂಚನಾ ವರದಿ ತಿಳಿಸಿದೆ.
ಇಂದು ಬುಧವಾರ ಬೆಂಗಳೂರಿನಲ್ಲಿ ಒಂದೆರಡು ಕಡೆಗಳಲ್ಲಿ ಸಾಮಾನ್ಯವಾಗಿ ಮಳೆ ಆಗಬಹುದು ಎನ್ನಲಾಗಿದೆ. ಉಳಿದಂತೆ ಬೆಳಗ್ಗೆಯಿಂದಲೇ ಜೋರು ಬಿಸಿಲಿನ ವಾತಾವರಣ ಕಂಡು ಬಂದಿದೆ. ಮುಂದಿನ ಮೂರು ದಿನ ಇದೇ ರೀತಿ ಹವಾಮಾನ ಇಲ್ಲಿ ಕಂಡು ಬರಲಿದೆ.
ಸದ್ಯ ಮಳೆಯಿಂದ ರಾಜ್ಯ ಜಲಾಶಯಗಳ ಸಂಗ್ರಹಣೆ, ಒಳಹರಿವು ಹೆಚ್ಚಾಗಿದೆ. ಈಗಾಗಲೇ ಕರ್ತನಾಟಕದಿಂದ ಮಿಳುನಾಡಿಗೆ ಕಾವೇರಿ ನೀರು ಹರಿಸಲಾಗುತ್ತಿದೆ. ಮಳೆಯಿಂದ ಕಬಿನಿ, ಹಾರಂಗಿ, ಕೆಆರ್‌ಎಸ್, ಲಿಂಗನಮಕ್ಕಿ ಸೇರಿದಂತೆ ರಾಜ್ಯದ ಪ್ರಮುಖ ಜಲಾಶಯಗಳು ತುಂಬಿವೆ.












Click it and Unblock the Notifications