ಮಳೆ.. ಮಳೆ.. ಈ ದಿನ ಮುಂಗಾರು ಮಳೆ ಭರ್ಜರಿ ಎಂಟ್ರಿ!
ಮಳೆ.. ಮಳೆ.. ಕರ್ನಾಟಕದಲ್ಲಿ ಭರ್ಜರಿ ಮಳೆ ಶುರುವಾಗಿದೆ. ಕಳೆದ 4-5 ತಿಂಗಳಿಂದಲೂ ಮಳೆಗಾಗಿ ಕಾದು ಕೂತಿದ್ದ ಕನ್ನಡಿಗರಿಗೆ ಮಳೆರಾಯ ಭರ್ಜರಿ ಸಿಹಿಸುದ್ದಿ ನೀಡಿದ್ದಾನೆ. ಹೀಗೆ ಎಲ್ಲೆಲ್ಲೂ ಮಳೆಯ ಅಬ್ಬರ ಶುರುವಾಗಿರುವ ಸಮಯದಲ್ಲೇ ಕನ್ನಡಿಗರಿಗೆ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ, ಅದು ಏನೆಂದರೆ ಶ್ರೀಘ್ರದಲ್ಲೇ ಮುಂಗಾರು ಮಳೆ ಕರ್ನಾಟಕಕ್ಕೆ ಎಂಟ್ರಿಯನ್ನ ಕೊಡಲಿದೆ!
ಮೇ 31ಕ್ಕೆ ಮುಂಗಾರು ಮಳೆಯ ಮಾರುತಗಳು ಕೇರಳ ರಾಜ್ಯಕ್ಕೆ ಎಂಟ್ರಿ ಕೊಡಲಿವೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಇಡೀ ಭಾರತದ ಮಳೆಯ ಪಾಲಿನಲ್ಲಿ ಶೇ. 70 ರಷ್ಟು ಮಳೆಯನ್ನ ಮುಂಗಾರು ಮಳೆ ಒಂದೇ ಸುರಿಸುತ್ತದೆ. ಹೀಗಾಗಿ ಮುಂಗಾರು ಮಳೆ ಕರ್ನಾಟಕ ಸೇರಿ ಇಡೀ ಭಾರತಕ್ಕೆ ಅತ್ಯಂತ ಮುಖ್ಯವಾಗಿದೆ. ಹೀಗಿದ್ದಾಗಲೇ 2023 ರಲ್ಲಿ ಮುಂಗಾರು ಮಳೆ ಕೈಕೊಟ್ಟು ಹೋಗಿತ್ತು. ಹೀಗಾಗಿ ಭೀಕರ ಬರ ಎದುರಾಗಿ ರೈತರು & ಜನ ನರಳಿದ್ದರು. ಆದ್ರೆ ಈಗ ಗುಡ್ ನ್ಯೂಸ್ ಸಿಗುತ್ತಿದ್ದು, ಮುಂಗಾರು ಮಳೆ ಅಬ್ಬರ ಗ್ಯಾರಂಟಿ ಆಗುತ್ತಿದೆ.

2024ರಲ್ಲಿ ಭರ್ಜರಿ ಮುಂಗಾರು ಮಳೆ ಬರಲಿದೆ ಎಂದು ಈಗಾಗಲೇ ಹವಾಮಾನ ತಜ್ಞರು ಮಾಹಿತಿ ನೀಡಿದ್ದರು. ಈಗ ಆ ಮಾಹಿತಿ ನಿಜವಾಗುತ್ತಿದ್ದು, ಮೇ 31ಕ್ಕೆ ಮುಂಗಾರು ಮಳೆ ಮಾರುತಗಳು ಕೇರಳಕ್ಕೆ ಎಂಟ್ರಿ ಕೊಡಲಿವೆ. ಹಾಗಾದ್ರೆ ಕರ್ನಾಟಕ್ಕೆ ಮುಂಗಾರು ಮಳೆ ಬರೋದು ಯಾವಾಗ? ಕರ್ನಾಟಕದ ಯಾವ ಜಿಲ್ಲೆಗಳಲ್ಲಿ ಮಳೆಯ ಅಬ್ಬರ ಶುರುವಾಗಲಿದೆ? ಸಂಪೂರ್ಣ ಮಾಹಿತಿ ತಿಳಿಯಲು ಮುಂದೆ ಓದಿ.
ಜೂನ್ 2 ಅಥವಾ 3ಕ್ಕೆ ಮುಂಗಾರು ಎಂಟ್ರಿ?
ಕರ್ನಾಟಕ ರಾಜ್ಯದ ಕರಾವಳಿ ಭಾಗಕ್ಕೆ ಮಾನ್ಸೂನ್ ಮಾರುತಗಳು ಅಂದ್ರೆ, ಮುಂಗಾರು ಮಳೆ ಮಾರುತಗಳು ಜೂನ್ 2 ಅಥವಾ 3ಕ್ಕೆ ಎಂಟ್ರಿ ಕೊಡುವ ನಿರೀಕ್ಷೆ ಇದೆ. ಹೀಗಾಗಿ ಹವಾಮಾನ ಇಲಾಖೆ ಅಧಿಕಾರಿಗಳು ಕೂಡ ಮುಂಗಾರು ಮಾರುತಗಳ ಚಲನವಲನ ಪರಿಶೀಲನೆ ಮಾಡಿ, ರೈತರಿಗೆ ಮಾಹಿತಿ ನೀಡುತ್ತಿದ್ದಾರೆ. ಈಗಾಗಲೇ ಪೂರ್ವ ಮುಂಗಾರು ಮಳೆ ಕರ್ನಾಟಕದಲ್ಲಿ, ಅಬ್ಬರಿಸಿ ಬೊಬ್ಬಿರಿಯುತ್ತಿದೆ. ಅದೇ ರೀತಿ ಮುಂಗಾರು ಮಳೆ ಕೂಡ ಕರ್ನಾಟಕದಲ್ಲಿ ಭಾರಿ & ಭರ್ಜರಿಯಾಗಿ ಬೀಳಲಿದೆ ಎನ್ನಲಾಗಿದೆ. ಆದ್ರೆ ಇದಕ್ಕಾಗಿ ಇನ್ನೂ ಎರಡು ವಾರ ಕಾಯಬೇಕು.
ಯಾವೆಲ್ಲಾ ನದಿಗಳು ತುಂಬುತ್ತಿವೆ?
ಆದರೆ ಈಗ ಮಳೆ ಆರಂಭ ಆರಂಭವಾದ ಹಿನ್ನೆಲೆ ಕಾವೇರಿ, ತುಂಗಾ, ಭದ್ರಾ, ಹೇಮಾವತಿ ನದಿಗಳೂ ಸೇರಿದಂತೆ ಕಪಿಲಾ, ನೇತ್ರಾವತಿ ಸೇರಿದಂತೆ ಹತ್ತಾರು ನದಿಗಳು ಈಗ ನಿಧಾನವಾಗಿ ತುಂಬಿಕೊಳ್ಳುತ್ತಿವೆ. ಅದರಲ್ಲೂ ಮಲೆನಾಡು ಭಾಗದಲ್ಲಿನ ನದಿಗಳಿಗೆ ಜೀವಕಳೆ ಬರುತ್ತಿದ್ದು, ಈ ಹಿನ್ನೆಲೆ ರೈತರು ನಿಟ್ಟುಸಿರು ಬಿಟ್ಟಿದ್ದಾರೆ. ಭರ್ಜರಿ ಮಳೆ ಆರಂಭವಾಗಿದ್ದು ಜನರಿಗೆ ಮಾತ್ರ ಅಲ್ಲ ಕಾಡಲ್ಲಿ ಇರುವ ಪ್ರಾಣಿಗಳಿಗೂ ಖುಷಿ ಆಗಿದೆ. ಯಾಕಂದ್ರೆ ನೀರು ಇಲ್ಲದೆ ಕರ್ನಾಟಕದಲ್ಲಿ ಕಾಡು ಪ್ರಾಣಿಗಳಿಗೆ ಕೂಡ ಸಾಕಷ್ಟು ಸಮಸ್ಯೆ ಆಗಿತ್ತು.












Click it and Unblock the Notifications