Rain Alert: ಮಳೆ.. ಮಳೆ.. ಕರ್ನಾಟಕದ ಈ ಜಿಲ್ಲೆಗಳಲ್ಲಿ 2 ವಾರ ಭರ್ಜರಿ ಮಳೆ!

ಮಳೆ ಇಲ್ಲದೆ ಕಂಗಾಲಾಗಿ ಕೂತಿದ್ದ ಕನ್ನಡಿಗರಿಗೆ ಇದೀಗ ಭರ್ಜರಿ ಮಳೆಯ ಸಿಂಚನ ಆಗಿದೆ. ವರುಣ ದೇವ ಅಬ್ಬರಿಸಿದ್ದಾನೆ. ಹಾಗೇ ಭಾರಿ ಮಳೆ ಕಂಡು ಕನ್ನಡಿಗರು ಖುಷಿಯಾಗಿದ್ದಾರೆ. ನಿನ್ನೆ ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಬಿದ್ದಿದೆ. ಈ ಸಮಯದಲ್ಲೇ ಮುಂದಿನ 2 ವಾರ ಕಾಲ ಕರ್ನಾಟಕದ ಈ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.

ಮಳೆ ಇಲ್ಲದೆ ಕರ್ನಾಟಕದ ಜನರು ಕಂಗಾಲಾಗಿ ಹೋಗಿದ್ದಾರೆ. ಹೀಗಾಗಿ ಮಳೆ ಯಾವಾಗಪ್ಪಾ ಬರುತ್ತೆ? ಅಂತಾ ದೇವರ ಮೊರೆ ಹೋಗಿದ್ದರು. ಹೀಗಾಗಿ ವರುಣ ದೇವ ಕೂಡ ಮಳೆಯನ್ನ ಕರುಣಿಸಿ, ಭಾರಿ ಮಳೆ ಸುರಿಸಲು ಆರಂಭಿಸಿದ್ದಾನೆ. ನಿನ್ನೆ ಕನ್ನಡಿಗರ ರಾಜಧಾನಿ ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಬಿದ್ದಿದೆ. ಹಾಗೇ ಮುಂದಿನ ಕೆಲ ದಿನಗಳ ಕಾಲ ಇದೇ ರೀತಿಯಾಗಿ ಮಳೆ ಬೀಳಲಿದೆ ಎನ್ನಲಾಗಿದೆ. ಮುಂದಿನ 24 ಗಂಟೆಯಲ್ಲಿ ಶುರುವಾಗಲಿರುವ ಮಳೆ, ಕರ್ನಾಟಕದ ಈ ಜಿಲ್ಲೆಗಳಲ್ಲಿ ಅಬ್ಬರಿಸುವುದು ಗ್ಯಾರಂಟಿ ಆಗಿದೆ.

Karnataka Will Receive Heavy Rain In May 1st And 2nd Week Of 2024

ನೀರಿಗಾಗಿ ಪರದಾಡುತ್ತಿದ್ದ ಜನ

ಬೆಂಗಳೂರು ಸೇರಿದಂತೆ ಕರ್ನಾಟಕದ ಬಹುತೇಕ ಜಿಲ್ಲೆಗಳಿಗೆ ಕಳೆದ 4 ತಿಂಗಳಿಂದ ಕುಡಿಯುವ ನೀರಿಗೂ ಕಷ್ಟವಾಗಿದೆ. ಯಾಕಂದ್ರೆ ಕರ್ನಾಟಕದಲ್ಲಿ ನೀರು ಪೂರೈಸುವ ಜಲಾಶಯ ಒಣಗುತ್ತಾ ಬರುತ್ತಿವೆ. ಹಾಗೇ ಅಂತರ್ಜಲ ಕೂಡ ಕುಸಿದು ಹೋಗಿದೆ ಹೀಗಾಗಿ ಬೇಸಿಗೆ ಆರಂಭ ಆಗುತ್ತಿದ್ದಂತೆ ಜನಕ್ಕೆ ನೀರು ಸಿಗದೆ ಸಾವಿರಾರು ರೂಪಾಯಿ ಹಣ ಕೊಟ್ಟು ಟ್ಯಾಂಕರ್ ನೀರನ್ನೂ ತರಿಸಿದ್ದರು. ಹೀಗಿದ್ದಾಗ ಮಳೆಗಾಗಿ ಪ್ರಾರ್ಥನೆ ಕೂಡ ಮಾಡುತ್ತಿದ್ದರು. ಈಗ ಭರ್ಜರಿ ಮಳೆ ಆರಂಭವಾಗಿದೆ.

ಯಾವ ಯಾವ ಜಿಲ್ಲೆಗೆ ಮಳೆ?

ಮೇ ತಿಂಗಳ 15ನೇ ತಾರೀಖಿನ ತನಕ ಅಂದ್ರೆ ಮುಂದಿನ 2 ವಾರಗಳ ಕಾಲ ಚಿಕ್ಕಮಗಳೂರು, ತುಮಕೂರು, ಚಿಕ್ಕಬಳ್ಳಾಪುರ, ಹಾಸನ, ರಾಮನಗರ, ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ, ದಕ್ಷಿಣ ಕನ್ನಡ, ಉಡುಪಿ, ಚಿತ್ರದುರ್ಗ ಜಿಲ್ಲೆಗಳಿಗೆ ಗುಡುಗು ಸಹಿತ ಭರ್ಜರಿ ಮಳೆ ಬೀಳಲಿದೆ ಎಂದು ಮುನ್ಸೂಚನೆ ನೀಡಲಾಗಿದೆ. ಇದರ ಜೊತೆಗೆ ಕೊಡಗು ಮತ್ತು ಮೈಸೂರು, ಚಾಮರಾಜನಗರ, ಬೀದರ್‌, ಕಲಬುರಗಿ, ಯಾದಗಿರಿ ಜಿಲ್ಲೆಗಳಲ್ಲಿ ಮುಂದಿನ ಎರಡು ವಾರಗಳ ಕಾಲ ಗುಡುಗು ಸಹಿತ ಭರ್ಜರಿ ಮಳೆ ಬೀಳುವುದು ಗ್ಯಾರಂಟಿ ಆಗಿದೆ.

ಮಳೆ ನೀರು ಸಂಗ್ರಹ ಮಾಡಿ

ಮನುಷ್ಯನ ಬದುಕಿಗೆ ಮೂಲ ಆಧಾರವೇ ನೀರು, ನೀರು ಇಲ್ಲದೆ ಮನುಷ್ಯನ ಜೀವನ ಊಹೆಗೂ ನಿಲುಕುವುದಿಲ್ಲ. ಹೀಗಾಗಿ ಜೀವಜಲ ಅಂತಾ ಕರೆಯುವ ನೀರನ್ನು ಮನುಷ್ಯ ಸೂಕ್ತ ರೀತಿಯಲ್ಲಿ ಸಂಗ್ರಹ ಮಾಡಿಕೊಳ್ಳಬೇಕು. ಹೀಗಿದ್ರೂ ಮನುಷ್ಯರು ಮಾತ್ರ ನೀರಿನ ಸದ್ಬಳಕೆ ಮಾಡಿಕೊಳ್ತಿಲ್ಲ. ಇದೇ ಕಾರಣಕ್ಕೆ ಮನುಷ್ಯ ಈಗ ಹನಿ ಹನಿ ನೀರಿಗೂ ಪರದಾಡುತ್ತಿದ್ದಾನೆ. ಹೀಗಿದ್ದಾಗ ತಕ್ಷಣಕ್ಕೇ ಎಚ್ಚೆತ್ತುಕೊಂಡು, ಮಳೆ ನೀರು ಸಂಗ್ರಹ ಮಾಡಿಕೊಂಡರೆ ಮುಂದಕ್ಕೆ ಇಂತಹ ಸಮಸ್ಯೆ ಬರಲ್ಲ ಎಂಬ ಮಾತು ಕೇಳಿಬರುತ್ತಿದೆ. ಯಾಕಂದ್ರೆ ಮಳೆಗಾಲದ ಆರಂಭಕ್ಕೆ ಇನ್ನು ಕೇವಲ 1 ತಿಂಗಳು ಬಾಕಿ ಇದೆ. ಹೀಗಾಗಿ ಮಳೆ ನೀರು ಸಂಗ್ರಹಕ್ಕೆ ಈಗಲಾದರೂ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಿ.

ನೀರು ವ್ಯರ್ಥವಾಗುವುದನ್ನು ತಪ್ಪಿಸಿ

ಮಳೆ ನೀರು ಅತ್ಯುತ್ತಮ ಜಲಮೂಲ ಎನ್ನಬಹುದು ಯಾಕಂದ್ರೆ ಮಳೆಗಾಲದಲ್ಲಿ ಬೀಳುವ ಭಾರಿ ಮಳೆಯನ್ನ ಸಂಗ್ರಹ ಮಾಡಿಕೊಂಡರೆ ನಿಮಗೆ ಉತ್ತಮ. ಇದಕ್ಕಾಗಿ ಹಲವು ದಾರಿ ಇದೆ. ನಿಮ್ಮ ಮನೆಯ ಮೇಲೆ ಮಳೆ ನೀರು ಸಂಗ್ರಹಕ್ಕೆ ಬೇಕಾದ ವ್ಯವಸ್ಥೆ ಮಾಡಿಕೊಳ್ಳಬಹುದು. ಇದರಿಂದ, ನಿಮ್ಮ ಮನೆಯು ಕೂಡ ತಂಪು ತಂಪು ಕೂಲ್ ಕೂಲ್ ಆಗಿ ಇರಲು ಸಾಧ್ಯ.

ಅಂತರ್ಜಲ ಮಟ್ಟ ಏರಿಕೆ ಮಾಡಿ

ಕರ್ನಾಟಕದಲ್ಲಿ ಎಲ್ಲೇ ಬೋರ್ ತೆಗೆದರೂ ನೀರು ಸರಿಯಾಗಿ ಸಿಗುತ್ತಿಲ್ಲ. ಇನ್ನು ನೀರು ಸಿಕ್ಕಿರುವ ಹಲವು ಬೋರ್‌ಗಳು ಈಗಾಗಲೇ ಬತ್ತಿ ಹೋಗಿದ್ದು, ಜನರು ಪರದಾಡುತ್ತಿದ್ದಾರೆ. ಹೀಗಾಗಿ ಇಂಗು ಗುಂಡಿ ನಿರ್ಮಾಣವನ್ನ ಮಾಡಿದರೆ ನಿಮಗೆ ನೀರಿನ ಸಮಸ್ಯೆ ಬಹುತೇಕ ಸರಿಯಾದಂತೆ. ಹೀಗಾಗಿ ಸೂಕ್ತವಾಗಿ ಅಂತರ್ಜಲ ಮರುಪೂರ್ಣ ಮಾಡಬೇಕು. ಈ ಮೂಲಕ ಬೋರ್ ನೀರಿನ ಸಮಸ್ಯೆಗು ಮುಕ್ತಿ ಸಿಗಲಿದೆ.

ಪ್ರಕೃತಿ ಮೇಲೆ ದೌರ್ಜನ್ಯ ನಡೆಸುತ್ತಿದ್ದರೆ...

ಮನುಷ್ಯ ಕ್ರೂರಿ ಆಗುತ್ತಿದ್ದು, ಪ್ರಕೃತಿ ವಿರುದ್ಧ ತನ್ನ ಕ್ರೂರ ನೀತಿಗಳನ್ನು ಅನ್ವಯಿಸುತ್ತಿದ್ದಾನೆ. ಇದೇ ಕಾರಣಕ್ಕೆ ಇದೀಗ ಮಳೆ ಸರಿಯಾದ ಸಮಯಕ್ಕೆ ಬರದ ಪರಿಸ್ಥಿತಿ ನಿರ್ಮಾಣ ಆಗಿದ್ದು, ಮುಂದಿನ ದಿನಗಳಲ್ಲಿ ಪರಿಸ್ಥಿತಿ ಮತ್ತಷ್ಟು ಕೈಮೀರಿ ಹೋಗುವ ಸಾಧ್ಯತೆ ದಟ್ಟವಾಗಿದೆ. ಈ ಹಿನ್ನೆಲೆಯಲ್ಲಿ ವಿಜ್ಞಾನಿಗಳು ಹಾಗೂ ತಜ್ಞರು ಕೂಡ ಎಚ್ಚರಿಕೆ ಸಂದೇಶ ರವಾನೆ ಮಾಡಿದ್ದು ಮುನ್ನೆಚ್ಚರಿಕೆ ಕೈಗೊಳ್ಳಲು ಸೂಚಿಸುತ್ತಿದ್ದಾರೆ. ಆದರೆ ಮನುಷ್ಯ ಮಾತ್ರ ತನ್ನ ದುರಾಸೆಯ, ಮತ್ತು ದುರ್ಬುದ್ಧಿಯ ಮಿತಿ ಮೀರಿದ್ದು ಸಮಸ್ಯೆಗೆ ದಾರಿ ಮಾಡಿಕೊಟ್ಟಿದೆ. ಹೀಗಾಗಿ ಮುಂದೆ ಮನುಷ್ಯರ ಬದುಕಿಗೆ ಇದು ಸಮಸ್ಯೆ ಎದನ್ನಲಾಗುತ್ತಿದೆ. ಪರಿಸರ ಸಂರಕ್ಷಕರು ಕೂಡ ಇದೇ ವಿಚಾರವಾಗಿ ಈಗ ಚರ್ಚೆ ಮಾಡುತ್ತಿದ್ದಾರೆ, ಹೀಗಾಗಿ ಇದೆಲ್ಲಾ ಏನಾಗುತ್ತೆ ಎಂಬ ಚಿಂತೆಯು ಹಬ್ಬಿದೆ.

ತಂಪು.. ತಂಪು.. ಕೂಲ್.. ಕೂಲ್..!

ಮಳೆ.. ಮಳೆ.. ಭರ್ಜರಿ ಮಳೆ ಬಂದಿದ್ದು, ಭೂತಾಯಿ & ಮನಸ್ಸು ಎರಡೂ ತಂಪಾಗಿದೆ. ಎಲ್ಲೆಲ್ಲೂ ಮಳೆಯ ಅಬ್ಬರ ಜೋರಾಗಿದೆ. ಕೆಲವೇ ಕೆಲವು ದಿನಗಳ ಹಿಂದೆ ಕರ್ನಾಟಕದಲ್ಲಿ ಎಲ್ಲಾ ಜಿಲ್ಲೆಗಳ ಜನರು ಭಾರಿ ಬಿಸಿಲು & ಬಿಸಿಯಾದ ಗಾಳಿಗೆ ನಲುಗಿ ಹೋಗಿದ್ದರು. ಮನೆ ಮೇಲೆ ಇರುವ ನೀರಿನ ಟ್ಯಾಂಕರ್ ಕೂಡ ಕರಗಿ ಹೋಗುವಷ್ಟು, ಮನೆಯಲ್ಲಿ ಬರುವ ನಲ್ಲಿ ನೀರು ಕೂಡ ಕುದಿಯುವಷ್ಟು ಬಿಸಿಲು ಇತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದ್ದು, ತಂಪು ತಂಪು ಕೂಲ್.. ಕೂಲ್.. ಆಗಿದೆ ನಮ್ಮ ಕರ್ನಾಟಕ. ಹಾಗಾದರೆ ಇನ್ನೂ ಎಷ್ಟು ದಿನಗಳ ಕಾಲ ವಾತಾವರಣ ಹೀಗೆ ಇರಲಿದೆ ಗೊತ್ತಾ?

ಮುಂಗಾರು ಮಳೆ ಅಬ್ಬರ ಶುರು!

ಮೇ 31ಕ್ಕೆ ಮುಂಗಾರು ಮಳೆಯ ಮಾರುತಗಳು ಕೇರಳ ರಾಜ್ಯಕ್ಕೆ ಎಂಟ್ರಿ ಕೊಡಲಿವೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಇಡೀ ಭಾರತದ ಮಳೆಯ ಪಾಲಿನಲ್ಲಿ ಶೇ. 70 ರಷ್ಟು ಮಳೆಯನ್ನ ಮುಂಗಾರು ಮಳೆ ಒಂದೇ ಸುರಿಸುತ್ತದೆ. ಹೀಗಾಗಿ ಮುಂಗಾರು ಮಳೆ ಕರ್ನಾಟಕ ಸೇರಿ ಇಡೀ ಭಾರತಕ್ಕೆ ಅತ್ಯಂತ ಮುಖ್ಯವಾಗಿದೆ. ಹೀಗಿದ್ದಾಗಲೇ 2023 ರಲ್ಲಿ ಮುಂಗಾರು ಮಳೆ ಕೈಕೊಟ್ಟು ಹೋಗಿತ್ತು. ಹೀಗಾಗಿ ಭೀಕರ ಬರ ಎದುರಾಗಿ ರೈತರು & ಜನ ನರಳಿದ್ದರು. ಆದ್ರೆ ಈಗ ಗುಡ್ ನ್ಯೂಸ್ ಸಿಗುತ್ತಿದ್ದು, ಮುಂಗಾರು ಮಳೆ ಅಬ್ಬರ ಗ್ಯಾರಂಟಿ ಆಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+