ಮುಂದಿನ 5 ದಿನ ಈ ಭಾಗದಲ್ಲಿ ಭರ್ಜರಿ ಮಳೆ!

ಮಳೆ ತನ್ನ ಆರ್ಭಟ ತೋರಿಸುತ್ತಿದೆ, ಎಲ್ಲೆಲ್ಲೂ ಮಳೆಯ ಬಗ್ಗೆಯೇ ಚರ್ಚೆ ನಡೆಯುತ್ತಿದೆ. ಈ ರೀತಿ ಮಳೆಯ ಅಬ್ಬರದ ನಡುವೆ ಮತ್ತೊಂದು ಸಿಹಿಸುದ್ದಿ ಇದೀಗ ಸಿಕ್ಕಿದ್ದು, ಮುಂದಿನ 5 ದಿನಗಳ ಕಾಲ ಕರ್ನಾಟಕದ ಈ ಪ್ರದೇಶಗಳಿಗೆ ಭರ್ಜರಿ ಮಳೆಯ ಸಿಂಚನ ಗ್ಯಾರಂಟಿ ಆಗಿದೆ. ಹಾಗಾದ್ರೆ ಯಾವೆಲ್ಲಾ ಜಿಲ್ಲೆಗಳಲ್ಲಿ ಭರ್ಜರಿ ಮಳೆ ಆಗಲಿದೆ? ಮುಂದೆ ಓದಿ.

ಮಳೆ ಬೇಕು, ಮಳೆ ಚೆನ್ನಾಗಿ ಬಂದರೆ ಅಲ್ವಾ ಮನುಷ್ಯರು ನೆಮ್ಮದಿಯಾಗಿ ಜೀವನ ಮಾಡೋಕೆ ಆಗೋದು? ಭಾರತದಲ್ಲಿ ಅದ್ರಲ್ಲೂ ಕರ್ನಾಟಕದಲ್ಲಿ ಪಶ್ಚಿಮ ಘಟ್ಟಗಳ ಕಾರಣಕ್ಕೆ ಉತ್ತಮವಾಗಿ ಮಳೆ ಬೀಳುತ್ತದೆ. ಆದರೂ ಮನುಷ್ಯ ಮಾಡಿಕೊಂಡ ತಪ್ಪುಗಳಿಗೆ ಮಳೆಯ ಮೋಡಗಳು ಕೂಡ ಕಳೆದ 4-5 ತಿಂಗಳು ನಾಪತ್ತೆ ಆಗಿದ್ದವು. ಪ್ರಕೃತಿ ಮೇಲೆ ಮನುಷ್ಯರು ದೌರ್ಜನ್ಯ ನಡೆಸುತ್ತಿರುವ ಕಾರಣಕ್ಕೆ ಹೀಗೆ ಆಗಿದೆ ಎಂದು ವಿಜ್ಞಾನಿಗಳು ಹೇಳಿದ್ದರು. ಹೀಗಿದ್ದಾಗಲೇ ಮತ್ತೆ ಭರ್ಜರಿಯಾಗಿ ಮಳೆ ಆರಂಭವಾಗಿದೆ. ಯಾವೆಲ್ಲಾ ಜಿಲ್ಲೆಗಳಲ್ಲಿ ಮುಂದಿನ 5 ದಿನ ಮಳೆ ಬರಲಿದೆ? ಮಾಹಿತಿಗಾಗಿ ಮುಂದೆ ಓದಿ.

Karnataka Will Receive Heavy Rain For Next 5 Days From 7th June 2024

ಈ ಜಿಲ್ಲೆಗಳಿಗೆ ಭಾರಿ ಮಳೆ!

ಈಗಿರುವ ಮಳೆ ಮುನ್ಸೂಚನೆ ಪ್ರಕಾರ ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು, ಮೈಸೂರು & ಉಡುಪಿ, ಚಾಮರಾಜನಗರ, ಮಂಡ್ಯ, ಮಂಗಳೂರು, ಉತ್ತರ ಕನ್ನಡ, ತುಮಕೂರು ಮತ್ತೆ ಹಾಸನ, ಚಿತ್ರದುರ್ಗ, ಬೆಳಗಾವಿ, ದಾವಣಗೆರೆ, ಬಳ್ಳಾರಿ ಜಿಲ್ಲೆಗಳಿಗೆ ಭರ್ಜರಿ ಮಳೆಯ ಬಗ್ಗೆ ಮುನ್ನೆಚ್ಚರಿಕೆ ನೀಡಲಾಗಿದೆ. ಹಾಗೇ ಉತ್ತರ ಕರ್ನಾಟಕದಲ್ಲೂ ಮಳೆ ಅಬ್ಬರ ತೋರಿಸಲಿದೆ ಎಂದು ಹೇಳಲಾಗಿದ್ದು, ಉತ್ತರ ಕರ್ನಾಟಕದ ವಿಜಯಪುರ, ಕಲಬುರಗಿ, ರಾಯಚೂರು ಸೇರಿ ಯಾದಗಿರಿ, ಬೀದರ್, ಬಾಗಲಕೋಟೆ, ಬೆಳಗಾವಿ, ಬಳ್ಳಾರಿ, ಕೊಪ್ಪಳ, ಧಾರವಾಡ, ಗದಗ ಜಿಲ್ಲೆಗಳಲ್ಲೂ ಮಳೆರಾಯ ಅಬ್ಬರಿಸಲಿದ್ದಾನೆ.

ಬೆಂಗಳೂರಿಗೆ ಕೂಡ ಭಾರಿ ಮಳೆ!

ರಾಜಧಾನಿ ಬೆಂಗಳೂರಲ್ಲಿ ಕಳೆದ 1 ವಾರದಿಂದ ನಿರಂತರವಾಗಿ ಮಳೆ ಬೀಳುತ್ತಿದೆ. ಹೀಗಾಗಿ, ಮುಂದಿನ ಕೆಲವು ದಿನಗಳ ಕಾಲ ಇದೇ ರೀತಿಯಾಗಿ ಮಳೆ ಅಬ್ಬರಿಸುವ ಮುನ್ಸೂಚನೆ ಇದೆ. ಹಾಗೇ ಮತ್ತೊಂದು ಕಡೆ ಬೆಂಗಳೂರಿನಲ್ಲಿ ಮಳೆಯಿಂದ ಎದುರಾಗಬಹುದಾದ ಸಮಸ್ಯೆಗಳ ಕುರಿತು ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ. ಮುಂದಿನ 24 ಗಂಟೆ ಅವಧಿಯಲ್ಲಿ ಭಾರಿ ಮಳೆ ಬರುವ ಸಾಧ್ಯತೆ ಇದೆ ಅಂತ ಮುನ್ನೆಚ್ಚರಿಕೆ ನೀಡಲಾಗಿದೆ. ಹೀಗಾಗಿ ಮನೆಯಿಂದ ಹೊರಗೆ ಹೋಗುವಾಗ ವೆದರ್ ರಿಪೋರ್ಟ್ ಪರಿಶೀಲನೆ ಮಾಡಿ ಹೊರಗೆ ಹೋರಟರೆ ಉತ್ತಮ. ಹಾಗೇ ಮಳೆ ಬರುವಾಗ ವಾಹನ ಚಾಲನೆ ಮಾಡುವುದು ಅಥವಾ ಮರಗಳ ಕೆಳಗೆ ನಿಲ್ಲುವುದು ಮಾಡಬೇಡಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+