ಮಳೆ.. ಭಾರಿ ಮಳೆ.. ಮುಂದಿನ 24 ಗಂಟೆ ರಣಮಳೆ!
ಮಳೆ ಬೀಳುತ್ತಿರುವ ಕಾರಣಕ್ಕೆ ಕರ್ನಾಟಕದ ಪ್ರತಿಯೊಂದು ಜಿಲ್ಲೆಯಲ್ಲಿ ಕೂಡ ಅಬ್ಬರದಿಂದ ಬಿತ್ತನೆ & ಕೃಷಿ ಚಟುವಟಿಕೆ ನಡೆಯುತ್ತಿದೆ. ಅದರಲ್ಲೂ ಕನ್ನಡಿಗರ ನೆಲದಲ್ಲಿ ಈ ರೀತಿಯಾಗಿ ಮಳೆ ಅಬ್ಬರಿಸುತ್ತಿರುವ ಕಾರಣಕ್ಕೆ, ಕನ್ನಡಿಗರು ಕೂಡ ಖುಷಿ ಖುಷಿಯಾಗಿದ್ದಾರೆ. ಹೀಗಿದ್ದಾಗ ಮತ್ತೆ ಮುಂದಿನ 5 ದಿನಗಳ ಕಾಲ ಭರ್ಜರಿಯಾಗಿ ವರುಣನ ಸಿಂಚನ ಆಗುವುದು ಗ್ಯಾರಂಟಿ ಆಗಿದೆ. ಹಾಗಾದ್ರೆ ಯಾವೆಲ್ಲಾ ಜಿಲ್ಲೆಗಳಲ್ಲಿ ಭರ್ಜರಿ ಮಳೆ ಬೀಳಲಿದೆ ಗೊತ್ತಾ? ಬನ್ನಿ ಪೂರ್ತಿ ಮಾಹಿತಿ ತಿಳಿಯೋಣ.
ಮುಂಗಾರು ಮಳೆ ಮೋಡಗಳು ಕರ್ನಾಟಕದ ಕಡೆಗೆ ನುಗ್ಗಿ ನುಗ್ಗಿ ಬರುತ್ತಿವೆ. ಹೀಗೆ ಕನ್ನಡ ನಾಡಿನಲ್ಲಿ ಭಾರಿ ಭರ್ಜರಿ ಮಳೆ ಬೀಳುತ್ತಿದೆ. ಕಳೆದ ಕೆಲವು ದಿನಗಳಿಂದ, ಮಳೆಯ ಅಬ್ಬರ ಬಲು ಜೋರಾಗಿದ್ದು. ಕನ್ನಡಿಗರು ಮಳೆಯ ಅಬ್ಬರಕ್ಕೆ ಖುಷಿಯಾಗಿದ್ದಾರೆ. ಇದೇ ರೀತಿಯಾಗಿ ಮುಂದಿನ 5 ದಿನಗಳ ಕಾಲ ಭರ್ಜರಿ ಮಳೆ ಬೀಳುತ್ತದೆ ಎಂದು ಹವಾಮಾನ ಇಲಾಖೆ ಇದೀಗ ವಾರ್ನಿಂಗ್ ಕೊಟ್ಟಿದೆ. ಅದರಲ್ಲೂ ಮುಂದಿನ 24 ಗಂಟೆ ಅವಧಿಯಲ್ಲಿ ಈ ಜಿಲ್ಲೆಗಳ ಜನರಿಗೆ ಮಳೆಯಲ್ಲೇ ಸ್ನಾನ ಆಗುವುದು ಗ್ಯಾರಂಟಿ. ಹೀಗಾಗಿ ರೆಡ್ ಅಲರ್ಟ್ ಘೋಷಣೆ ಆಗಿದೆ. ಆ ಜಿಲ್ಲೆಗಳು ಯಾವುವು ಗೊತ್ತಾ? ಮುಂದೆ ಓದಿ.

ಬಿರುಗಾಳಿ ಸಹಿತ ಮಳೆ ಗ್ಯಾರಂಟಿ!
ಈಗಿರುವ ಮಾಹಿತಿ ಪ್ರಕಾರ ಬೆಳಗಾವಿ ಜಿಲ್ಲೆ ಸೇರಿದಂತೆ, ಉತ್ತರ ಕನ್ನಡ, ಧಾರವಾಡದಲ್ಲಿ ಭರ್ಜರಿ ಮಳೆ ಬೀಳುವ ಬಗ್ಗೆ ಎಚ್ಚರಿಕೆ ನೀಡಲಾಗಿದೆ. ಹಾಗೇ ಗದಗ ಮತ್ತು ಕೊಪ್ಫಳ ಜಿಲ್ಲೆಗೂ ಇದೀಗ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ವಿಜಯಪುರ, ಬಾಗಲಕೋಟೆ, ಬಳ್ಳಾರಿ, ಹಾವೇರಿ, ಶಿವಮೊಗ್ಗ, ಉಡುಪಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ ಆಗಿದೆ. ಹೀಗಾಗಿ ಈ ಜಿಲ್ಲೆಗಳ ಜನರು ಮುನ್ನೆಚ್ಚರಿಕೆ ವಹಿಸಲು ಸೂಚನೆ ನೀಡಲಾಗಿದೆ. ಹಾಗೇ ಇನ್ನೂ ಕೆಲ ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಮಳೆಯ ಸಾಧ್ಯತೆ ಇದೆ.
50 ಕಿ.ಮೀ. ವೇಗದಲ್ಲಿ ಗಾಳಿ!
ಕರ್ನಾಟಕದ ಕರಾವಳಿ ಜಿಲ್ಲೆಗಳು ಸೇರಿದಂತೆ ಒಳನಾಡಿನ ಜಿಲ್ಲೆಗಳಲ್ಲಿ ಕೂಡ ಗಾಳಿ ಪ್ರಮಾಣ ಸುಮಾರು 50 ಕಿಲೋ ಮೀಟರ್ ಗರಿಷ್ಠ ಮಿತಿ ತಲುಪುವ ಭಯ ಇದ್ದು, ಮುನ್ನೆಚ್ಚರಿಕೆಯ ಕ್ರಮ ಕೈಗೊಳ್ಳಲು ಹವಾಮಾನ ಇಲಾಖೆ ಸೂಚಿಸಿದೆ. ಹೀಗೆ ಮುಂದಿನ 5 ದಿನಗಳ ಕಾಲವು ಕೂಡ ಭರ್ಜರಿ ಮಳೆ & ಬಿರುಗಾಳಿ ಕರ್ನಾಟಕದ ಹಲುವ ಜಿಲ್ಲೆಗಳನ್ನ ನರಳಿಸುವ ಕುರಿತು ಇದೀಗ ಮುನ್ನೆಚ್ಚರಿಕೆ ನೀಡಲಾಗಿದೆ.












Click it and Unblock the Notifications