ಕರ್ನಾಟಕ ಮುಂದಿನ ಪಾಕಿಸ್ತಾನ ಆಗಲಿದೆ: ನಾರ್ಥಿ ಪೋಸ್ಟ್ ವೈರಲ್!
ಕರ್ನಾಟಕದಲ್ಲಿ ಕನ್ನಡ ಮಾತನಾಡಬೇಕು ಅಂತ ಹೇಳುತ್ತಿದ್ದಂತೆಯೇ ಹಿಂದಿವಾಲಾಗಳು / ಕೆಲವು ಉತ್ತರ ಭಾರತೀಯರು ಕನ್ನಡಿಗರು ಬಾಯಿಗೆ ಬಂದಂತೆ ಕಮೆಂಟ್ ಮಾಡುವುದು ಹೆಚ್ಚಾಗಿದೆ. ಕರ್ನಾಟಕದಲ್ಲಿ ಕನ್ನಡಿಗರೇ ಸಾರ್ವಭೌಮ ಎಂದು ಪದೇ ಪದೇ ಕನ್ನಡಿಗರು ಬಲವಾಗಿ ಹೇಳುತ್ತಿದ್ದಾರೆ. ಆದರೆ, ಇದು ಕೆಲವು ನಾರ್ಥಿಗಳಿಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ವರ್ಷಗಳಿಂದ ಹಿಂದಿಯೇ ರಾಷ್ಟ್ರೀಯ ಭಾಷೆ ಅಂತ ಸುಳ್ಳು ಹೇಳಿಕೊಂಡು ಬಂದಿದ್ದರು. ಇದೀಗ ಭಾರತಕ್ಕೆ ಯಾವುದೇ ಭಾಷೆ ಇಲ್ಲ. ಹಿಂದಿ ರಾಷ್ಟ್ರೀಯ ಭಾಷೆಯಲ್ಲ ಎಂದು ಕನ್ನಡಿಗರು ಹಾಗೂ ದಕ್ಷಿಣ ಭಾರತೀಯರು ಬಲವಾಗಿ ಹೇಳುತ್ತಿದ್ದಾರೆ. ಕಳೆದ ಹಲವು ವರ್ಷಗಳಿಂದ ತಮಿಳಿಗರು ಹಾಗೂ ಕನ್ನಡಿಗರು ಹಿಂದಿ ವಿರುದ್ಧ ತೀವ್ರ ಅಭಿಯಾನವನ್ನು ಪ್ರಾರಂಭಿಸಿದ್ದಾರೆ. ತಮಿಳಿಗರಿಗೆ ಎದುರಾಗಿದ್ದ ವಿರೋಧ ಅಥವಾ ತಮಿಳಿಗರನ್ನು ಹೀಯಾಳಿಸುತ್ತಿದ್ದಂತೆಯೇ ನಾರ್ಥಿಗಳು ಇದೀಗ ಕನ್ನಡಿಗರನ್ನು ಹೀಯಾಳಿಸುತ್ತಿದ್ದಾರೆ.
ಬೆಂಗಳೂರು ಹಾಗೂ ಕರ್ನಾಟಕದಲ್ಲಿ ಹಿಂದಿ ಹೇರಿಕೆಯನ್ನು ವಿರೋಧಿಸಿ ಅಭಿಯಾನಗಳು ನಡೆಯುತ್ತಿರುವ ಸಂದರ್ಭದಲ್ಲಿಯೇ ಸೋಷಿಯಲ್ ಮೀಡಿಯಾದಲ್ಲಿ ಕನ್ನಡಿಗರ ವಿರುದ್ಧ ಬೇಕಾಬಿಟ್ಟಿ ಮೆಸೇಜ್ & ಕಮೆಂಟ್ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಇದೇ ರೀತಿಯ ಪೋಸ್ಟ್‌ವೊಂದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು. ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಇವರ ಸಮಸ್ಯೆ ಏನು, ನಮ್ಮ ನಾಡಿನಲ್ಲಿ ನಮ್ಮ ಭಾಷೆಯನ್ನು ಮಾತನಾಡಿ ಅಂತ ಹೇಳುತ್ತಿದ್ದಂತೆಯೇ ಇವರ ವರ್ತನೆಯಲ್ಲಿ ಇಷ್ಟೊಂದು ಬದಲಾಗುತ್ತಿರುವುದಾದರೂ ಯಾಕೆ ಅಂತ ಕನ್ನಡಿಗರು ಪ್ರಶ್ನೆ ಮಾಡುತ್ತಿದ್ದಾರೆ.

ಕರ್ನಾಟಕ ಮುಂದಿನ ಪಾಕಿಸ್ತಾನ ಆಗಲಿದೆ: ಕನ್ನಡ ಅಭಿಯಾನವನ್ನು ವಿರೋಧಿಸಿ ನಾರ್ಥಿಯೊಬ್ಬ ಮಾಡಿರುವ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇಂದ್ರಪ್ರೀತ್ ಸಿಂಗ್ ಎನ್ನುವವನು ಸೋಷಿಯಲ್ ಮೀಡಿಯಾದಲ್ಲಿ ಕರ್ನಾಟಕ ಮುಂದಿನ ಪಾಕಿಸ್ತಾನ ಆಗಲಿದೆ ಅಂತ ಪೋಸ್ಟ್ ಮಾಡಿದ್ದಾನೆ. ಗಾಯಕ ಸೋನು ನಿಗಮ್, ಕರ್ನಾಟಕದಲ್ಲಿ ಕನ್ನಡ ಹಾಡು ಹಾಡಿ / ಕನ್ನಡ ಹಾಡೊಂದನ್ನು ಹಾಡಿ ಅಂತ ಕನ್ನಡಿಗರು ಕೇಳಿದ್ದನ್ನು, ಇದೇ ಕಾರಣಕ್ಕೆ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರು ದಾಳಿ ಮಾಡಿದ್ದು ಅಂತ ಮಾತನಾಡಿದ್ದ. ಇದಕ್ಕೆ ಕನ್ನಡಿಗರಿಂದ ಭಾರೀ ವಿರೋಧ ವ್ಯಕ್ತವಾಗಿತ್ತು. ಅದಾದ ಮೇಲೆ ಕ್ಷಮೆ ಕೇಳಿದರೂ, ಉದ್ಧಟತನ ಪ್ರದರ್ಶನ ಮಾಡುವುದನ್ನ ಸೋನು ನಿಗಮ್ ಬಿಟ್ಟಿಲ್ಲ. ಇದೀಗ ಕೆಲವು ನಾರ್ಥಿಗಳು ಇದೇ ವರ್ತನೆಯನ್ನು ಪ್ರದರ್ಶಿಸುತ್ತಿದ್ದಾರೆ.
ಈ ರೀತಿ ಕರ್ನಾಟಕ ಮುಂದಿನ ಪಾಕಿಸ್ತಾನ ಆಗಲಿದೆ ಎನ್ನುವ ಪೋಸ್ಟ್ ಅನ್ನು ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ಅವರು, ನಮ್ಮ ನಾಡಲ್ಲಿ ನಮ್ಮ ಭಾಷೆ ಕೇಳಿದ್ರೆ.. ಕರ್ನಾಟಕವನ್ನ ಪಾಕಿಸ್ತಾನಕ್ಕೆ ಹೋಲಿಸಿ ಮಾತನಾಡೋ ಈ ದುರಹಂಕಾರಿಗಳಿಗೆ ನಮ್ಮ ಧಿಕ್ಕಾರ.😡
ಇದೆಂತ ಮನಸ್ಥಿತಿ. ನಾವು ಭಾಷೆ ಬಳಸಿ ಅಂತೀವಿ ಹೊರೆತು ಯಾವತ್ತೂ ಈ ರೀತಿ ಹೋಲಿಸಿ ಮಾತನಾಡಿಲ್ಲ. ನಮ್ಮನ್ನ ಗೌರವಿಸಿ ಅಂತೀವಿ ಅಷ್ಟೇ. ಕರ್ನಾಟಕ ಕರುಣೆಯ ಭೂಮಿ ಕಣ್ರಪ್ಪ. ನಮ್ಮ ಬೆಲೆ ನಿಮಗೆಲ್ಲಿ ಗೊತ್ತಾಗ್ಬೇಕು.❤️ ಅಂತ ಪೋಸ್ಟ್ ಮಾಡಿದ್ದಾರೆ.
ನಮ್ಮ ನಾಡಲ್ಲಿ ನಮ್ಮ ಭಾಷೆ ಕೇಳಿದ್ರೆ
— ರೂಪೇಶ್ ರಾಜಣ್ಣ(RUPESH RAJANNA) (@rajanna_rupesh) May 24, 2025
ಕರ್ನಾಟಕವನ್ನ ಪಾಕಿಸ್ತಾನಕ್ಕೆ ಹೋಲಿಸಿ ಮಾತನಾಡೋ ಈ ದುರಹಂಕಾರಿಗಳಿಗೆ ನಮ್ಮ ದಿಕ್ಕಾರ.😡
ಇದೆಂತ ಮನಸ್ಥಿತಿ.
ನಾವು ಭಾಷೆ ಬಳಸಿ ಅಂತೀವಿ ಹೊರೆತು ಯಾವತ್ತೂ ಈ ರೀತಿ ಹೋಲಿಸಿ ಮಾತನಾಡಿಲ್ಲ.
ನಮ್ಮನ್ನ ಗೌರವಿಸಿ ಅಂತೀವಿ ಅಷ್ಟೇ.
ಕರ್ನಾಟಕ ಕರುಣೆಯ ಭೂಮಿ ಕಣ್ರಪ್ಪ.
ನಮ್ಮ ಬೆಲೆ ನಿಮಗೆಲ್ಲಿ ಗೊತ್ತಾಗ್ಬೇಕು.❤️ pic.twitter.com/7Ol7iQvX2h
ಕನ್ನಡಿಗರು ಹೇಳಿದ್ದೇನು ?
ಜಗನ್ನಾಥ ಜಗ ಎನ್ನುವವರು, ನಿಯತ್ತಿಲ್ಲದ ನಾಯಿಗಳು ತಿನ್ನೋದಕ್ಕೆ ಅನ್ನವಿಲ್ಲದೆ ಇದ್ರು ದುರಂಕಾರಕ್ಕೇನು ಕಮ್ಮಿ ಇಲ್ಲ. ಕನ್ನಡಿಗರಲ್ಲಿ ಒಂದು ವಿನಂತಿ ಬೇರೆ ರಾಜ್ಯದವರಿಗೆ ಜಾಗ ಮಾರಬೇಡಿ ಆಮೇಲೆ ನಾವುಗಳು ಅವರ ಹತ್ತಿರ ಕೆಲಸ ಮಾಡಬೇಕಾಗುತ್ತೆ ಈ ವಿಚಾರದ ಬಗ್ಗೆ ಎಲ್ಲರೂ ಯೋಚಿಸಿ ಅಂತ ಹೇಳಿದ್ದಾರೆ.












Click it and Unblock the Notifications