ಹೆದ್ದಾರಿ ನಿರ್ಮಾಣದ ಸಮಯದಲ್ಲಿ ಮೇಲೆದ್ದು ಬಂತು ಚಿನ್ನ, ಬೆಳ್ಳಿ !ಯಾವ ಕಾಲದ ಖಜಾನೆಯೋ ಇದು

ನೂರಾರು ಚಿನ್ನ ಮತ್ತು ಬೆಳ್ಳಿ ನಾಣ್ಯಗಳು , ಆಭರಣಗಳು ಮತ್ತು ಸುಂದರವಾಗಿ ಕೆತ್ತಿದ ಮಡಿಕೆಗಳು ಸೇರಿದಂತೆ ಪ್ರಾಚೀನ ಸಂಪತ್ತಿನಿಂದ ತುಂಬಿರುವ ಸ್ಥಳವನ್ನು ಪುರಾತತ್ತ್ವಜ್ಞರು ಪತ್ತೆಹಚ್ಚಿದ್ದಾರೆ . ಮೋಟಾರು ಮಾರ್ಗ ನಿರ್ಮಾಣ ಯೋಜನೆಗೆ ಮುಂಚಿತವಾಗಿ ನಡೆಸಿದ ಸಮೀಕ್ಷೆಯ ಸಮಯದಲ್ಲಿ ಇವೆಲ್ಲವೂ ಪತ್ತೆಯಾಗಿದೆ. 62 ಎಕರೆಗ ಪ್ರದೇಶವನ್ನು ಒಳಗೊಂಡ ಜಾಗದಲ್ಲಿ ಇವೆಲ್ಲವೂ ಕಂಡು ಬಂದಿದೆ.

1,000ಕ್ಕೂ ಹೆಚ್ಚು ಆಭರಣಗಳು ಪತ್ತೆ:

ಈ ಮೂಲಕ 2,200 ವರ್ಷಗಳಷ್ಟು ಹಳೆಯದಾದ ಬೃಹತ್ ಸೆಲ್ಟಿಕ್ ವಸಾಹತನ್ನು ಸಂಶೋಧಕರು ಪತ್ತೆಹಚ್ಚಿದ್ದಾರೆ. ಹೆದ್ದಾರಿ ನಿರ್ಮಾಣದ ಕಾಮಗಾರಿಗೂ ಮುನ್ನ ನಡೆಸಿದ ಭೂ ಸಮೀಕ್ಷೆಯಲ್ಲಿ ಈ ಐತಿಹಾಸಿಕ ತಾಣ ಬೆಳಕಿಗೆ ಬಂದಿದೆ. ಈ ಐತಿಹಾಸಿಕ ತಾಣವು ಸುಮಾರು 62 ಎಕರೆಗಳಷ್ಟು ವಿಸ್ತಾರವಾಗಿದೆ. ಇದು ಬೊಹೆಮಿಯಾ ಪ್ರದೇಶದಲ್ಲೇ ಪತ್ತೆಯಾದ ಅತಿ ದೊಡ್ಡ ಸೆಲ್ಟಿಕ್ ಸಂಶೋಧನೆಗಳಲ್ಲಿ ಒಂದಾಗಿದೆ. ಇಲ್ಲಿ ನೂರಾರು ಚಿನ್ನ ಮತ್ತು ಬೆಳ್ಳಿ ನಾಣ್ಯಗಳು, ವಿಶಿಷ್ಟ ಮಡಿಕೆಗಳು ಹಾಗೂ ಬ್ರೂಚ್‌ಗಳು, ಬಳೆಗಳು, ಬೆಲ್ಟ್‌ಗಳು ಮತ್ತು ಗಾಜಿನ ಮಣಿಗಳು ಸೇರಿದಂತೆ 1,000ಕ್ಕೂ ಹೆಚ್ಚು ಆಭರಣಗಳು ಪತ್ತೆಯಾಗಿವೆ.

Gold Treasures

ಪ್ರಮುಖ ವ್ಯಾಪಾರ ಕೇಂದ್ರ :

ಇಲ್ಲಿ ಸಿಕ್ಕಿರುವ ಅಂಬರ್ ಮತ್ತು ಐಷಾರಾಮಿ ಮಡಿಕೆಗಳ ಅವಶೇಷಗಳು, ಇದು ಕೇವಲ ಸಾಮಾನ್ಯ ಹಳ್ಳಿಯಾಗಿರಲಿಲ್ಲ ಎನ್ನುವುದನ್ನು ಸ್ಪಷ್ಟವಾಗಿ ಹೇಳುತ್ತದೆ. ಈ ಊರು ಎರಡು ಸಾವಿರ ವರ್ಷಗಳ ಹಿಂದೆಯೇ ದೂರದ ಪ್ರದೇಶಗಳೊಂದಿಗೆ ಸಂಪರ್ಕ ಹೊಂದಿದ್ದ ಒಂದು ಪ್ರಮುಖ ಅಂತರ-ಪ್ರಾದೇಶಿಕ ವ್ಯಾಪಾರ ಮತ್ತು ಉತ್ಪಾದನಾ ಕೇಂದ್ರವಾಗಿತ್ತು ಎಂಬುದನ್ನು ಸಾಬೀತುಪಡಿಸುತ್ತವೆ.

ಆ ನಿಗೂಢ ಕಲ್ಲಿನ ಗೋಡೆಯಲ್ಲೇನಿತ್ತು? ಕಾಡಿನ ಮಧ್ಯೆ ಪತ್ತೆಯಾದ 598 ಚಿನ್ನದ ನಾಣ್ಯಗಳ ಹಿಂದಿನ ಅಸಲಿ ಕಥೆ ಇಲ್ಲಿದೆ
ಆ ನಿಗೂಢ ಕಲ್ಲಿನ ಗೋಡೆಯಲ್ಲೇನಿತ್ತು? ಕಾಡಿನ ಮಧ್ಯೆ ಪತ್ತೆಯಾದ 598 ಚಿನ್ನದ ನಾಣ್ಯಗಳ ಹಿಂದಿನ ಅಸಲಿ ಕಥೆ ಇಲ್ಲಿದೆ

ರಕ್ಷಣಾ ಕೋಟೆಗಳಿಲ್ಲ:

ಈ ತಾಣವನ್ನು ಇನ್ನಷ್ಟು ಕುತೂಹಲಕಾರಿಯನ್ನಾಗಿ ಮಾಡುವ ಅಂಶವೊಂದಿದೆ. ಅದೇನೆಂದರೆ ಈ ವಸಾಹತಿಗೆ ಯಾವುದೇ ಕೋಟೆ ಅಥವಾ ಭದ್ರತೆಯ ರಕ್ಷಣೆ ಇರಲಿಲ್ಲ. ಇಲ್ಲಿನ ಜನರು ಯುದ್ಧ ಅಥವಾ ರಕ್ಷಣೆಗೆ ಆದ್ಯತೆ ನೀಡದೆ, ಸಂಪೂರ್ಣವಾಗಿ ವ್ಯಾಪಾರ ವಹಿವಾಟಿನಲ್ಲೇ ತಮ್ಮನ್ನು ತೊಡಗಿಸಿಕೊಂಡಿದ್ದರು ಎಂಬುದನ್ನು ಇದು ತೋರಿಸುತ್ತದೆ. ಈ ತಾಣವು ಕ್ರಿ.ಪೂ 450 ರಿಂದ ಕ್ರಿ.ಪೂ 40 ರವರೆಗಿನ ಸೆಲ್ಟಿಕ್ ಸಂಸ್ಕೃತಿಯ ಉತ್ತುಂಗದ ಕಾಲಕ್ಕೆ ಸೇರಿದ್ದಾಗಿದೆ ಎನ್ನಲಾಗಿದೆ.

ಯುರೋಪ್ ಅನ್ನು ಬದಲಾಯಿಸಿದ ಸೆಲ್ಟಿಕ್ ಸಂಸ್ಕೃತಿ:

ಈ ವಸತಿ ಪ್ರದೇಶದ ಇತಿಹಾಸವು ಕ್ರಿ.ಪೂ. ಸುಮಾರು 450ರಿಂದ 40ರವರೆಗೆ ನಡೆದ ಲಾ ಟೆನ್ ಅವಧಿಯದ್ದು ಎನ್ನಲಾಗಿದೆ. ಈ ಯುಗವು ಸೆಲ್ಟಿಕ್ ಸಂಸ್ಕೃತಿಯ ಉದಯಕ್ಕಾಗಿ ಅತ್ಯಂತ ಪ್ರಸಿದ್ಧವಾಗಿದೆ. ಇಲ್ಲಿ ಪತ್ತೆಯಾಗಿರುವ ಸಂಕೀರ್ಣ ಲೋಹಕಲೆ, ಮಣ್ಣಿನ ಪಾತ್ರೆಗಳು ಮತ್ತು ಮಾನವ-ಸಮಾನ ವಿನ್ಯಾಸಗಳನ್ನು ಹೊಂದಿದ ಕಲಾಕೃತಿಗಳ ಮೂಲಕ ಇದನ್ನು ಗುರುತಿಸಬಹುದು.

ನಾಯಿಯ ಬೆನ್ನಟ್ಟಿ ಗುಹೆ ಪ್ರವೇಶಿಸಿದ ಬಾಲಕ: ಅಲ್ಲಿ ಪತ್ತೆಯಾಗಿದ್ದು 17,000 ವರ್ಷಗಳಷ್ಟು ಹಳೆಯ ಕಾಲದ ಆಸ್ತಿ
ನಾಯಿಯ ಬೆನ್ನಟ್ಟಿ ಗುಹೆ ಪ್ರವೇಶಿಸಿದ ಬಾಲಕ: ಅಲ್ಲಿ ಪತ್ತೆಯಾಗಿದ್ದು 17,000 ವರ್ಷಗಳಷ್ಟು ಹಳೆಯ ಕಾಲದ ಆಸ್ತಿ

ಇಲ್ಲಿ ವಾಸವಿದ್ದವರು ಯಾರು ?:

ಬೋಯಿ ಬುಡಕಟ್ಟು ಸಾಂಪ್ರದಾಯಿಕವಾಗಿ ಈ ಪ್ರದೇಶದೊಂದಿಗೆ ಸಂಬಂಧ ಹೊಂದಿದ್ದರೂ, ಆ ಸ್ಥಳದಲ್ಲಿ ಅವರ ಉಪಸ್ಥಿತಿಯನ್ನು ದೃಢೀಕರಿಸಲು ಯಾವುದೇ ನೇರ ಪುರಾವೆಗಳು ಸಿಕ್ಕಿಲ್ಲ. ಬೋಯಿ ಮತ್ತು ಬೊಹೆಮಿಯಾ ನಡುವಿನ ಸಂಪರ್ಕವು ಹೆಚ್ಚಾಗಿ ಐತಿಹಾಸಿಕ ಊಹೆಗಳನ್ನು ಆಧರಿಸಿದೆ. ಶಾಸನಗಳು ಅಥವಾ ಇತರ ಸ್ಪಷ್ಟ ಕುರುಹುಗಳು ಸಿಗದ ಕಾರಣ ಹೊಸದಾಗಿ ಪತ್ತೆಯಾದ ವಸಾಹತು ಪ್ರದೇಶದಲ್ಲಿ ಯಾವ ಸೆಲ್ಟಿಕ್ ಗುಂಪು ವಾಸಿಸುತ್ತಿತ್ತು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಅಂಬರ್‌ನ ಪ್ರಾಚೀನ ಸಾಮ್ರಾಜ್ಯ:

ಈ ವಸತಿ ಪ್ರದೇಶವು "ಅಂಬರ್ ರೂಟ್‌ ಕಾರಿಡಾರ್‌ ಪ್ರದೇಶದ ಪಕ್ಕದಲ್ಲಿದೆ. ಇದು ಬಾಲ್ಟಿಕ್ ಮತ್ತು ಉತ್ತರ ಸಮುದ್ರಗಳನ್ನು ಮಧ್ಯ ಯುರೋಪ್‌ಗೆ ಸಂಪರ್ಕಿಸಿದ ಪ್ರಮುಖ ವ್ಯಾಪಾರ ಮಾರ್ಗವಾಗಿತ್ತು. ಆ ಕಾಲದಲ್ಲಿ ಅತ್ಯಂತ ಮೌಲ್ಯಯುತವಾಗಿದ್ದ ಅಂಬರ್ ಮೂಲಕ ಬಹಳ ದೂರದ ಪ್ರದೇಶಗಳ ನಡುವೆ ವ್ಯಾಪಾರ ಮಾಡಲಾಗುತ್ತಿತ್ತು. ಈ ತಾಣದಲ್ಲಿ ಪತ್ತೆಯಾದ ಅಂಬರ್ ಮಣಿಗಳು ಮತ್ತು ಉತ್ತಮ ಗುಣಮಟ್ಟದ ಮಣ್ಣಿನ ಪಾತ್ರೆಗಳು, ಈ ವಸತಿ ಪ್ರದೇಶವು ಆ ಪ್ರಮುಖ ಮಾರ್ಗದಲ್ಲಿನ ಒಂದು ಮುಖ್ಯ ನಿಲ್ದಾಣವಾಗಿತ್ತೆಂದು ಸೂಚಿಸುತ್ತವೆ.

ಅಂಬರ್ ಸೇರಿದಂತೆ ಐಷಾರಾಮಿ ವಸ್ತುಗಳ ಸಮೃದ್ಧಿ ಈ ವಸತಿ ಪ್ರದೇಶದಲ್ಲಿ ಕಂಡುಬಂದಿರುವುದು ಅಂಬರ್ ವ್ಯಾಪಾರ ಮಾರ್ಗದ ಇತರ ಪರಿಚಿತ ತಾಣಗಳ ಲಕ್ಷಣಗಳಿಗೆ ಹೊಂದಿಕೆಯಾಗುತ್ತದೆ ಎಂದು ವಿಯೆನ್ನಾ ವಿಶ್ವವಿದ್ಯಾಲಯದ ಪುರಾತತ್ವಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇದರಿಂದ ಇಲ್ಲಿ ವಾಸಿಸುತ್ತಿದ್ದ ಜನರು ಕೇವಲ ವಸ್ತುಗಳ ಉತ್ಪಾದನೆಯಲ್ಲಿ ಮಾತ್ರವಲ್ಲ, ಯುರೋಪಿನ ವಿಶಾಲ ವ್ಯಾಪಾರ ಜಾಲಗಳಲ್ಲಿಯೂ ಸಕ್ರಿಯವಾಗಿ ಭಾಗವಹಿಸಿದ್ದರು ಎಂಬುದು ತಿಳಿದುಬರುತ್ತದೆ.

ಈ ಪುರಾತತ್ವದ ಅಮೂಲ್ಯ ಸಂಪತ್ತಿನ ಕುರಿತು ಹೆಚ್ಚಿನ ಉತ್ಖನನ ಮತ್ತು ವಿಶ್ಲೇಷಣೆಗಳು ಮುಂದುವರಿದಂತೆ, ಈ ಸೆಲ್ಟಿಕ್ ವಸತಿ ಪ್ರದೇಶವು ಹೇಗೆ ಕಾರ್ಯನಿರ್ವಹಿಸುತ್ತಿತ್ತು ಮತ್ತು ಎರಡು ಸಹಸ್ರಮಾನಗಳಿಗಿಂತಲೂ ಹೆಚ್ಚು ಕಾಲದ ಹಿಂದೆ ಅಲ್ಲಿ ವಾಸಿಸುತ್ತಿದ್ದ ಜನರ ಜೀವನ ಹೇಗಿತ್ತು ಎಂಬುದರ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಅರಿತುಕೊಳ್ಳಲು ಸಹಾಯ ಮಾಡುತ್ತದೆ.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+