Karnataka Weather: ಮಲೆನಾಡಿಗೆ ಗುಡುಗು ಸಹಿತ ಭಾರೀ ಮಳೆ! ಒಳನಾಡಿನ ಸಾಮಾನ್ಯ ಹಿಂಗಾರು ಮುನ್ನೆಚ್ಚರಿಕೆ

ಬೆಂಗಳೂರು: ಕರ್ನಾಟಕ ಪ್ರವೇಶಿಸಿದ ಬಳಿಕ ಆರಂಭದಲ್ಲೇ ಆರ್ಭಟಿಸಿದ್ದ ಹಿಂಗಾರು ಮಳೆಯು ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಸಕ್ರಿಯವಾಗಿತ್ತು. ಇದೀಗ ಮಲೆನಾಡು ಜಿಲ್ಲೆಗಳಲ್ಲಿ ಮತ್ತೆ ಭಾರೀ ಮಳೆ ಆಗಲಿದ್ದು, ಒಳನಾಡು ಮತ್ತು ಕರಾವಳಿ ಭಾಗದಲ್ಲಿ ಹಗುರ ಮಳೆ ಆಗಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ.

ಕರಾವಳಿ ಹಾಗೂ ಒಳನಾಡು ಭಾಗಗಳಲ್ಲಿ ಜೋರಾಗಿ ಸುರಿದಿದ್ದ ಹಿಂಗಾರು ತಾತ್ಕಾಲಿಕವಾಗಿ ದುರ್ಬಲವಾಗಿದೆ. ಇನ್ನೊಂದೆಡೆ ಹವಾಮಾನ ವೈಪರೀತ್ಯಗಳ ಬದಲಾವಣೆ, ಮಳೆಗೆ ಪೂರಕ ವಾತಾವರಣ ನಿರ್ಮಾಣವಾಗುವ ನಿರೀಕ್ಷೆ ಇದೆ. ಅಕ್ಟೋಬರ್ 22ರಿಂದ ಮಲೆನಾಡಿನ ಭಾಗಗಳಲ್ಲಿ ಸಾಧಾರಣದಿಂದ ಭಾರೀ ಮಳೆ ನಿರೀಕ್ಷೆ ಇದೆ.

Karnataka Weather

ಭಾರೀ ಮಳೆ; ಯೆಲ್ಲೋ ಅಲರ್ಟ್

ಚಿಕ್ಕಮಗಳೂರು, ಕೊಡಗಿನಲ್ಲಿ ಮೂರು ದಿನ, ಚಾಮರಾಜನಗರ, ಮೈಸೂರು ಮತ್ತು ಶಿವಮೊಗ್ಗ ಜಿಲ್ಲೆಗಳ ಭಾಗದಲ್ಲಿ ಒಂದು ದಿನ ಗರಿಷ್ಠ 115 ಮಿಲಿ ಮೀಟರ್‍‌ ನಷ್ಟು ಗುಡುಗು ಸಹಿತ ಭಾರೀ ಮಳೆ ಆಗುವ ಸಂಭವವಿದೆ, ಯೆಲ್ಲೋ ಅಲರ್ಟ್ ಕೊಡಲಾಗಿದೆ ಎಂದು ಹವಾಮಾನ ತಜ್ಞರು ಅಂದಾಜಿಸಿದ್ದಾರೆ.

ಮುಂದಿನ 2 ದಿನ ವ್ಯಾಪಕ ಮಳೆ

ಒಳನಾಡು ಜಿಲ್ಲೆಗಳಾದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಮೈಸೂರು, ರಾಮನಗರ, ತುಮಕೂರು, ಹಾಸನ, ದಾವಣಗೆರೆ, ಚಿಕ್ಕಮಗಳೂರು, ಚಾಮರಾಜನಗರ, ಶಿವಮೊಗ್ಗ, ಚಿತ್ರದುರ್ಗ ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ಮುಂದಿನ 2 ದಿನ ಗುಡುಗ, ಮಿಂಚು ಸಹಿತ ಸಾಮಾನ್ಯದಿಂದ ವ್ಯಾಪಕ ಮಳೆ ಸಾಧ್ಯತೆ ಇದೆ.

ಉತ್ತರ ಒಳನಾಡಿನ ಹಾವೇರಿ, ಧಾರವಾಡ ಬೆಳಗಾವಿ ಮೂರು ಜಿಲ್ಲೆಗಳಲ್ಲಿ ಇಂದು ಮಂಗಳವಾರ ಅಲ್ಲಲ್ಲಿ ಗುಡುಗು ಸಹಿತ ಹಗುರ ಮಳೆ ಸಂಭವವಿದೆ ಎಂದು ಹವಾಮಾನ ಇಲಾಕೆ ಮುನ್ಸೂಚನಾ ವರದಿಯಲ್ಲಿ ತಿಳಿಸಿದೆ.

ಬೆಂಗಳೂರು ಹವಾಮಾನ ಎಚ್ಚರಿಕೆ

ಬೆಂಗಳೂರು ನಗರದಲ್ಲಿ ದಿನವಿಡೀ ಬಿಸಿಲು ಕಂಡು ಬಂದರೂ ಕೆಲವೆಡೆ ಹಗುರ ಮಳೆ ಸಂಭವವಿದೆ. ಅಲ್ಲಲ್ಲಿ ಮೋಡ ಕವಿದ ಮಬ್ಬು ವಾತಾವರಣ ಕಂಡು ಬರಲಿದೆ. ನಗರಾದ್ಯಂತ ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ಆಸುಪಾಸು, ಕನಿಷ್ಠ 21 ಡಿಗ್ರಿ ಸೆಲ್ಸಿಯಸ್ ಕಂಡು ಬರುವ ಸಾಧ್ಯತೆ ಇದೆ.

ಉತ್ತಮ ಹಿಂಗಾರು ಆರಂಭ, ರೈತರಿಂದ ಬಿತ್ತನೆ, ಮಳೆಗೆ ವೇಟಿಂಗ್

ಮುಂಗಾರು ಮಳೆ ದುರ್ಬಲಗೊಂಡ ಬೆನ್ನಲ್ಲೇ, ಸಮುದ್ರ ಮಟ್ಟದಲ್ಲಿ ಹಾಗೂ ಭೂಮಿ ಮೇಲ್ಮೈನಲ್ಲಿ ಉತ್ತಮ ಹಾಗೂ ಪೂರಕ ವಾತಾವರಣ ಕಂಡು ಬಂದ ಹಿನ್ನೆಲೆಯಲ್ಲಿ ಉತ್ತಮ ಹಿಂಗಾರು ಮಳೆ ಪ್ರವೇಶವಾಗಿದೆ. ಈ ಕಾರಣದಿಂದ ಕರ್ನಾಟಕದ ವಿವಿಧ ಭಾಗಗಳಲ್ಲಿ ಜೋರು ಮಳೆ ದಾಖಲಾಯಿತು. ಬೆಂಗಳೂರಿನಲ್ಲಂತೂ ಕಳೆದ ಶನಿವಾರ ಪ್ರವಾಹ ವಾತಾವರಣ ನಿರ್ಮಾಣವಾಗಿತ್ತು. ಉಳಿದಂತೆ ಒಳನಾಡು ಜಿಲ್ಲೆಗಳಲ್ಲಿ ಜೋರು ಆಗುತ್ತಿದ್ದಂತೆ ರೈತರು ಬಿತ್ತನೆ ಆರಂಭಿಸಿದ್ದಾರೆ. ಈಗಾಗಲೇ ಜೋಳ, ಕಡಲೇ ಇನ್ನಿತರ ರಾಬಿ ಬೆಳೆ ಬಿತ್ತಿದ ರೈತರು ಮಳೆಗೆ ಕಾಯುತ್ತಿದ್ದಾರೆ. ಕೆಲವೆಡೆ ಅಷ್ಟಾಗಿ ಮಳೆ ಆಗದ ಹಿನ್ನೆಲೆ ಬಿತ್ತನೆಗೆ ಪೂರಕ ಮಳೆ ನಿರೀಕ್ಷಿಸಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+