Karnataka Rains: ರಾಜ್ಯಾದ್ಯಂತ ಮುಂದಿನ 3 ದಿನ ಹೀಟ್‌ವೇವ್ ಅಲರ್ಟ್: ಗರಿಷ್ಠ ತಾಪಮಾನ 39°C
ಬೆಂಗಳೂರು, ಮಾರ್ಚ್ 04: ಕರ್ನಾಟಕ ರಾಜ್ಯಾದ್ಯಂತ ಒಣಹವೆ ಮುಂದುವರಿದಿದೆ. ದಕ್ಷಿಣ ಒಳನಾಡಿನಲ್ಲಿ ಮಾತ್ರ ಬೆಳಗ್ಗೆ ಮಾತ್ರ ತಂಪು ವಾತಾವರಣ ಮುಂದುವರಿದಿದೆ. ಮಲೆನಾಡಿನ ಒಂದೆರಡು ಕಡೆಗಳಲ್ಲಿ ತುಂತುರು ಮಳೆ ಆಗಿದೆ. ಉಳಿದಂತೆ ಒಳನಾಡಿನಲ್ಲಿ ಉಷ್ಣ ಅಲೆ, ರಾತ್ರಿ ಸೆಕೆಯ ವಾತಾವರಣ ದಾಖಲಾಗುತ್ತಿದೆ. ಮಾರ್ಚ್ ಹಾಗೂ ಏಪ್ರಿಲ್ ತಿಂಗಳುಪೂರ್ತಿ ಇದೇ ರೀತಿ ಹವಾಮಾನ ಕಂಡು ಬರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮಾರ್ಚ್ 7ರವರೆಗೆ ಕರ್ನಾಟಕದ ಕರಾವಳಿ, ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳು ಸೇರಿದಂತೆ ರಾಜ್ಯಾದ್ಯಂತ ಒಣಹವೆ ಕಂಡು ಬರಲಿದೆ ಎಂದು ಎಚ್ಚರಿಕೆ ನೀಡಲಾಗಿದೆ. ಕಳೆದ ಕೆಲವು ದಿನಗಳ ಕಾಲ ಕರಾವಳಿಯ ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಹೀಟ್ ವೇವ್ ಕಾರಣಕ್ಕೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಆದರೆ ಮಂಗಳವಾರ ಯಾವುದೇ ಅಲರ್ಟ್ ನೀಡಿಲ್ಲ.

ಕರ್ನಾಟಕ ಗರಿಷ್ಠ ತಾಪಮಾನದ ಮಾಹಿತಿ
ಕಲಬುರಗಿಯಲ್ಲಿ ರಾಜ್ಯದ ಗರಿಷ್ಠ ತಾಪಮಾನ 39 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಈ ಜಿಲ್ಲೆಯಷ್ಟು ಉಷ್ಣಾಂಶ ಬೇರಾವ ಜಿಲ್ಲೆಯಲ್ಲೂ ಕಂಡು ಬಂದಿಲ್ಲ ಎನ್ನಲಾಗಿದೆ. ಉಳಿದಂತೆ ರಾಯಚೂರು, ಗದಗ, ವಿಜಯಪು ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ತಲಾ 36 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಮುಂದಿನ 5 ದಿನಗಳ #ಹವಾಮಾನ #ಮುನ್ಸೂಚನೆ ಮತ್ತು #ಎಚ್ಚರಿಕೆಗಳು: (ಮೂಲ: IMD)
— Karnataka State Natural Disaster Monitoring Centre (@KarnatakaSNDMC) March 4, 2025
ರಾಜ್ಯದ ಕರಾವಳಿ, ಮಲೆನಾಡು ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಇಂದು ಮತ್ತು ನಾಳೆ ಮೋಡ ಕವಿದ ವಾತಾವರಣದೊಂದಿಗೆ ಅಲ್ಲಲ್ಲಿ ತುಂತುರು ಮಳೆ, ಇನ್ನುಳಿದ ದಿನಗಳಲ್ಲಿ ಒಣ ಹವೆಯಿರುವ ಸಾಧ್ಯತೆಯಿದೆ. ಉತ್ತರ ಒಳನಾಡು ಜಿಲ್ಲೆಗಳಲ್ಲಿ ಒಣ ಹವೆಯಿರುವ ಸಾಧ್ಯತೆಯಿದ್ದು, pic.twitter.com/Ea9VT1koOc
ಹಾವೇರಿ 35 ಡಿ.ಸೆ., ಕೊಪ್ಪಳ 35 ಡಿ.ಸೆ., ಬೀದರ್ 35 ಡಿ.ಸೆ., ಧಾರವಾಡದಲ್ಲಿ 35 ಡಿಗ್ರಿ ಸೆಲ್ಸಿಯಸ್, ಚಿಂತಾಮಣಿ 34 ಡಿ.ಸೆ. ಮತ್ತು ಶಿವಮೊಗ್ಗದಲ್ಲಿ 34 ಡಿ.ಸೆ ಉಷ್ಣಾಂಶ ದಾಖಲಾಗಿದೆ. ಆಗುಂಬೆ, ಬೆಂಗಳೂರು ನಗರ 33, ಹಾಸನ 33, ಮೈಸೂರು 33, ಬೆಂಗಳೂರು ಕೆಐಎಎಲ್ ಗಳಲ್ಲಿ 33 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ಕಂಡು ಬಂದಿದೆ.
ಮಳೆ ಮುನ್ಸೂಚನೆ ಇಲ್ಲ
ಸದ್ಯ ಹಿಂದೂ ಮಹಾಸಾಗರ ಮತ್ತು ಮಾಲ್ಡಿವ್ಸ್ ಸಮುದ್ರ ಭಾಗದಲ್ಲಿ ಚಂಡಮಾರುತ ಪರಿಚಲನೆ ಕಂಡು ಬಂದಿದೆ. ಇದು ಸಮುದ್ರ ಮಟ್ಟದಿಂದ 5.4 ಕಿಲೋ ಮೀಟರ್ ಎತ್ತರದಲ್ಲಿದೆ. ಹವಾಮಾನದಲ್ಲಿನ ಒಂದಷ್ಟು ಬದಲಾವಣೆ ಕಾರಣದಿಂದ ಇತ್ತೀಚೆಗೆ ರಾಜ್ಯ ಒಳನಾಡು ಭಾಗಗಳಲ್ಲಿ ಮಳೆ ಆಗಿತ್ತು. ಆದರೆ ಸದ್ಯದ ವೈಪರಿತ್ಯಗಳಿಂದ ರಾಜ್ಯದ ಮೇಲೆ ಯಾವುದೇ ಮಳೆ, ಪ್ರತಿಕೂಲ ಪರಿಣಾಮ ಉಂಟಾಗುವುದಿಲ್ಲ ಎಂದು ಐಎಂಡಿ ತಿಳಿಸಿದೆ.












Click it and Unblock the Notifications