• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಾಜ್ಯ ಸರ್ಕಾರದ ಅನ್‌ಲಾಕ್ 5.0 ಮಾರ್ಗಸೂಚಿಯಲ್ಲಿ ಏನೇನಿದೆ?

|

ಬೆಂಗಳೂರು, ಅಕ್ಟೋಬರ್ 1: ಕೇಂದ್ರ ಗೃಹ ಸಚಿವಾಲಯವು ಅನ್‌ಲಾಕ್ 5 ರಮಾರ್ಗಸೂಚಿಗಳನ್ನು ಬುಧವಾರ ಪ್ರಕಟಿಸಿದ ಬಳಿಕ ಕರ್ನಾಟಕ ಸರ್ಕಾರ ಕೂಡ ಅನ್‌ಲಾಕ್ 5.0 ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

   ರಾಜ್ಯ ಸರ್ಕಾರ ಜಾರಿಗೊಳಿಸಿದ unlock 5.0 ಮಾರ್ಗಸೂಚಿಯಲ್ಲಿ ಏನಿದೆ | Oneindia Kannada

   ಕೇಂದ್ರ ಸರ್ಕಾರದ ಸೂಚನೆ ಅನ್ವಯ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ನಿರ್ದೇಶನದಂತೆ ಕಂಟೈನ್ಮೆಂಟ್ ವಲಯಗಳನ್ನು ಹೊರತುಪಡಿಸಿದ ವಲಯಗಳಲ್ಲಿ ಹೆಚ್ಚಿನ ಚಟುವಟಿಕೆಗಳನ್ನು ಆರಂಭಿಸಲು ಮತ್ತು ಕಂಟೈನ್ಮೆಂಟ್ ವಲಯಗಳಲ್ಲಿ ಲಾಕ್‌ಡೌನ್ ಅನ್ನು ಅ. 31ರವರೆಗೆ ವಿಸ್ತರಿಸಲು ಆದೇಶ ಹೊರಡಿಸಿದೆ.

   ಅನ್‌ಲಾಕ್ 5.0 ಬಿಡುಗಡೆ: ಚಿತ್ರಮಂದಿರ ತೆರೆಯಲು ಅನುಮತಿ

   ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯು ಶಾಲೆಗಳು ಮತ್ತು ತರಬೇತಿ ಸಂಸ್ಥೆಗಳ ಪುನರಾರಂಭಕ್ಕೆ ಸಂಬಂಧಿಸಿದಂತೆ ಅ. 15ರ ಬಳಿಕ ಹಂತಹಂತವಾಗಿ ನಿರ್ಧಾರ ತೆಗೆದುಕೊಳ್ಳಬಹುದಾಗಿದೆ. ಸಂಬಂಧಿತ ಶಾಲೆ/ಸಂಸ್ಥೆಯ ಆಡಳಿತ ಮಂಡಳಿ ಜತೆ ಸಮಾಲೋಚನೆ ನಡೆಸಿ, ಪರಿಸ್ಥಿತಿಗಳ ಮೌಲ್ಯಮಾಪನ ಮತ್ತು ಕೆಲವು ಷರತ್ತುಗಳ ಅಡಿ ನಿರ್ಧಾರ ತೆಗೆದುಕೊಳ್ಳಬಹುದು. ಆನ್‌ಲೈನ್/ದೂರ ಶಿಕ್ಷಣ ಕಲಿಕೆಗೆ ಆದ್ಯತಾನುಸಾರ ಅನುಮತಿ ಮುಂದುವರಿಸಬೇಕು ಮತ್ತು ಇದಕ್ಕೆ ಉತ್ತೇಜನ ನೀಡಬೇಕು ಎಂದು ಸೂಚಿಸಲಾಗಿದೆ. ಮುಂದೆ ಓದಿ.

   ಹಾಜರಿ ಕಡ್ಡಾಯವಲ್ಲ

   ಹಾಜರಿ ಕಡ್ಡಾಯವಲ್ಲ

   ಆನ್‌ಲೈನ್ ತರಗತಿಗಳನ್ನು ನಡೆಸುತ್ತಿರುವ ಶಾಲೆಗಳಲ್ಲಿ, ತರಗತಿಗಳಿಗೆ ಖುದ್ದು ಹಾಜರಾಗುವುದಕ್ಕಿಂತ ಆನ್‌ಲೈನ್ ತರಗತಿಗಳಿಗೇ ಹಾಜರಾಗುವುದರ ಬದಲು ಆನ್‌ಲೈನ್ ತರಗತಿಗಳಿಗೆ ಹಾಜರಾಗಲು ಆಯ್ಕೆ ಮಾಡಿಕೊಂಡರೆ ಅದಕ್ಕೆ ಅನುಮತಿ ನೀಡಬಹುದು.

   ಪೋಷಕರ ಲಿಖಿತ ಸಮ್ಮತಿ ಇದ್ದರೆ ಮಾತ್ರವೇ ವಿದ್ಯಾರ್ಥಿಗಳು ಶಾಲೆ ಅಥವಾ ಶಿಕ್ಷಣ ಸಂಸ್ಥೆಗಳಿಗೆ ಹಾಜರಾಗಬಹುದು. ತರಗತಿಗಳಲ್ಲಿ ಹಾಜರಾತಿಯನ್ನು ಕಡ್ಡಾಯಗೊಳಿಸುವಂತಿಲ್ಲ. ಇದು ಸಂಪೂರ್ಣವಾಗಿ ಪೋಷಕರ ಸಮ್ಮತಿಯ ಮೇರೆಗೆ ಅವಲಂಬಿತವಾಗಿರುತ್ತದೆ.

   ಎಸ್‌ಒಪಿ ಪಾಲನೆ ಕಡ್ಡಾಯ

   ಎಸ್‌ಒಪಿ ಪಾಲನೆ ಕಡ್ಡಾಯ

   ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜತೆ ಸಮಾಲೋಚಿಸಿ ಭಾರತ ಸರ್ಕಾರ ಹೊರಡಿಸಲಿರುವ ಮಾದರಿ ಕಾರ್ಯ ನಿರ್ವಹಣಾ ಪ್ರಕ್ರಿಯೆ (ಎಸ್‌ಒಪಿ) ಆಧಾರದಲ್ಲಿ ಅರೋಗ್ಯ ಹಾಗೂ ಸುರಕ್ಷತೆಯ ಮುನ್ನೆಚ್ಚರಿಕೆ ಕ್ರಮಗಳಿಗೆ ರಾಜ್ಯ ಸರ್ಕಾರ ಹಾಗೂ ಕೇಂದ್ರಾಡಳಿತ ಪ್ರದೇಶಗಳು ತಮ್ಮದೇ ಎಸ್‌ಒಪಿಯನ್ನು ಸಿದ್ಧಪಡಿಸಬೇಕು.

   ಅನ್‌ಲಾಕ್ 5: ಶಾಲೆಗಳ ಪುನರಾರಂಭ ಯಾವಾಗ? ಹೇಗೆ?

   ಶಾಲೆ ಪುನರಾರಂಭಿಸಲು ಅನುಮತಿ ಪಡೆದ ಸಂಸ್ಥೆಗಳು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಶಿಕ್ಷಣ ಇಲಾಖೆಗಳು ಹೊರಡಿಸುವ ಎಸ್‌ಒಪಿಯನ್ನು ಪಾಲನೆ ಮಾಡುವುದು ಕಡ್ಡಾಯವಾಗಿದೆ.

   ಉನ್ನತ ಶಿಕ್ಷಣ ಇಲಾಖೆ

   ಉನ್ನತ ಶಿಕ್ಷಣ ಇಲಾಖೆ

   ಉನ್ನತ ಶಿಕ್ಷಣ ಇಲಾಖೆಯು ಪರಿಸ್ಥಿತಿಯ ಮೌಲ್ಯ ಮಾಪನದ ಆಧಾರದಲ್ಲಿ ಗೃಹ ಸಚಿವಾಲಯದೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಕಾಲೇಜುಗಳು ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳನ್ನು ತೆರೆಯುವ ಸಮಯವನ್ನು ನಿರ್ಧರಿಸಲಿದೆ. ಆನ್‌ಲೈನ್ ಅಥವಾ ದೂರಶಿಕ್ಷಣ ಕಲಿಕೆಗೆ ಬೋಧನೆಯ ಆದ್ಯತೆಯನ್ನಾಗಿ ಮುಂದುವರಿಸಲು ಸಲಹೆ ನೀಡಲಾಗಿದೆ.

   ಪ್ರಯೋಗಾಲಯ ಮತ್ತು ಪ್ರಾಯೋಗಿಕ ಚಟುವಟಿಕೆಗಳ ಅಗತ್ಯವಿರುವ ವಿಜ್ಞಾನ ಮತ್ತು ತಂತ್ರಜ್ಞಾನ ಅಧ್ಯಯನ ವಿಷಯದಲ್ಲಿ ಸಂಶೋಧನಾ ಹತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಮಾತ್ರ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಅ. 15ರಿಂದ ಕೆಲವು ಅನುಮತಿಗಳನ್ನು ನೀಡಲಾಗುತ್ತದೆ.

   ಈಜುಕೊಳಕ್ಕೆ ಅನುಮತಿ

   ಈಜುಕೊಳಕ್ಕೆ ಅನುಮತಿ

   ಕ್ರೀಡಾಪಟುಗಳ ತರಬೇತಿಗೆ ಬಳಕೆಯಾಗುವಂತೆ ಅ. 15ರಿಂದ ಸ್ವಿಮ್ಮಿಂಗ್ ಪೂಲ್‌ಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ಇದಕ್ಕೆ ನಿರ್ದಿಷ್ಟ ಕಾರ್ಯಾಚರಣೆ ಪ್ರಕ್ರಿಯೆ (ಎಸ್‌ಒಪಿ)ಯನ್ನು ಕೇಂದ್ರ ಯುವಜನ ಸೇವೆ ಮತ್ತು ಕ್ರೀಡಾ ಸಚಿವಾಲಯ ಮತ್ತು ಕರ್ನಾಟಕ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗಳು ಬಿಡುಗಡೆ ಮಾಡಲಿದೆ.

   ಚಿತ್ರಮಂದಿರ ಓಪನ್

   ಚಿತ್ರಮಂದಿರ ಓಪನ್

   ಕಂಟೈನ್ಮೆಂಟ್ ವಲಯಗಳನ್ನು ಹೊರತುಪಡಿಸಿದ ಪ್ರದೇಶಗಳಲ್ಲಿ ಮಾತ್ರವೇ ಅಕ್ಟೋಬರ್ 15ರಿಂದ ರಂಗಮಂದಿರ, ಚಿತ್ರಮಂದಿರಗಳು, ಮಲ್ಟಿಪ್ಲೆಕ್ಸ್‌ಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ಆದರೆ ಅವುಗಳ ಆಸನ ಸಾಮರ್ಥ್ಯದ ಶೇ 50ರಷ್ಟು ಮಾತ್ರ ಭರ್ತಿ ಮಾಡಲು ಅವಕಾಶ ಕಲ್ಪಿಸಲಾಗಿದೆ. ಇದಕ್ಕೆ ಶೀಘ್ರದಲ್ಲಿಯೇ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಹಾಗೂ ರಾಜ್ಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮಾರ್ಗಸೂಚಿ ಬಿಡುಗಡೆ ಮಾಡಲಿವೆ.

   ಮನರಂಜನಾ ಉದ್ಯಾನ

   ಮನರಂಜನಾ ಉದ್ಯಾನ

   ವ್ಯಾಪಾರದಿಂದ ವ್ಯಾಪಾರ (ಬಿ2ಬಿ) ಪ್ರದರ್ಶನಗಳನ್ನು ಅ. 15ರಿಂದ ತೆರೆಯಲು ಅನುಮತಿ ನೀಡಲಾಗಿದೆ. ಇದಕ್ಕೆ ವಾಣಿಜ್ಯ ಇಲಾಖೆ ನಿಯಮಾವಳಿಗಳನ್ನು ಪ್ರಕಟಿಸಲಿದೆ. ಮನರಂಜನಾ ಉದ್ಯಾನಗಳು ಮತ್ತು ಅಂತಹ ಇತರೆ ಸ್ಥಳಗಳಲ್ಲಿ ಚಟುವಟಿಕೆ ಆರಂಭಿಸಬಹುದಾಗಿದೆ. ಇದಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಎಸ್‌ಒಪಿ ನೀಡಲಿದೆ.

   ಸಮಾರಂಭಗಳಿಗೆ ಅನುಮತಿ

   ಸಮಾರಂಭಗಳಿಗೆ ಅನುಮತಿ

   ಕಂಟೇನ್ಮೆಂಟ್ ಪ್ರದೇಶ ಹೊರತುಪಡಿಸಿ ಬೇರೆ ಸ್ಥಳಗಳಲ್ಲಿ ಗರಿಷ್ಠ 100 ಜನರ ಪರಿಮಿತಿಗೆ ಒಳಪಟ್ಟು ಸಾಮಾಜಿಕ, ಶೈಕ್ಷಣಿಕ, ಕ್ರೀಡೆ, ಮನರಂಜನೆ, ಸಾಂಸ್ಕೃತಿಕ, ಧಾರ್ಮಿಕ ಅಥವಾ ರಾಜಕೀಯ ಕಾರ್ಯಕ್ರಮ ಹಾಗೂ ಇತರೆ ಸಮಾರಂಭಗಳಿಗೆ ಅನುಮತಿ ನೀಡಲಾಗಿದೆ. ಅ. 15ರ ಬಳಿಕ ಈ ಚಟುವಟಿಕೆಗಳಿಗೆ ಬಿಬಿಎಂಪಿ ಅಥವಾ ಜಿಲ್ಲಾ ಪ್ರಾಧಿಕಾರಿಗಳು ಅನುಮತಿ ನೀಡಬಹುದು. ಒಳಾಂಗಣ ಸ್ಥಳಗಳಲ್ಲಿ 200 ಜನರ ಪರಿಮಿತಿಗೆ ಒಳಪಟ್ಟು ಸಭಾ ಭವನದ ಒಟ್ಟು ಸಾಮರ್ಥ್ಯದ ಶೇ 50ರಷ್ಟು ಮಾತ್ರ ಅವಕಾಶ ನೀಡಲಾಗುತ್ತದೆ.

   English summary
   Karnataka Unlock 5.0 Guidelines: What's allowed to open and what's remain closed.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X