ಜ.29ಕ್ಕೆ ಕರ್ನಾಟಕ ಸಾರಿಗೆ ನೌಕರರ ಮುಷ್ಕರ: ನಾಲ್ಕೂ ನಿಗಮದಿಂದ ಬೆಂಬಲ! ಬಸ್ ಸೇವೆಯಲ್ಲಿ ವ್ಯತ್ಯಯ, ಮುಖ್ಯಾಂಶಗಳು
ಬೆಂಗಳೂರು: ವೇತನ ಹೆಚ್ಚಳದ 38 ತಿಂಗಳ ಹಿಂಬಾಕಿ ಹಾಗೂ ವೇತನ ಪರಿಷ್ಕರಣೆ ಸೇರಿದಂತೆ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಎಲ್ಲ ನಾಲ್ಕು ಸಂಸ್ಥೆಗಳ ಸಾರಿಗೆ ನೌಕರರಿಂದ ಜನವರಿ 29ರಂದು ಮುಷ್ಕರ ನಡೆಯಲಿದೆ. ಈ ಹಿಂದೆ ಘೋಷಿಸಿದ್ದ ಮುಷ್ಕರವು ವಿವಿಧ ಕಾರಣಗಳಿಂದ ಮುಂದೂಡಿಕೆ ಆಗಿತ್ತು. ಇದೀಗ ಸರ್ಕಾರ ಯಾವುದೇ ರೀತಿಯಲ್ಲಿ ಸಕಾರಾತ್ಮಕವಾಗಿ ಸ್ಪಂದಿಸದ ಕಾರಣಕ್ಕೆ ರಾಜ್ಯವ್ಯಾಪಿ 'ಬೆಂಗಳೂರು ಚಲೋ' ಮುಷ್ಕರ ನಡೆಸುವುದಾಗಿ ನೌಕರರ ಸಂಘಟನೆ, ಸಮಿತಿಗಳು ಅಧಿಕೃವಾಗಿ ಘೋಷಿಸಿವೆ. ಇವರ ಬೇಡಿಕೆ ಏನೇನು, ಸರ್ಕಾರದ ಪ್ರತಿಕ್ರಿಯೆ, ಸಾರಿಗೆ ಇಲಾಖೆ ಆರ್ಥಿಕ ಸ್ಥಿತಿ, ಜನಾಭಿಪ್ರಾಯ, ಮುಷ್ಕರದ ಪೂರ್ಣ ವಿವರ, ಮುಖ್ಯಾಂಶಗಳು ಇಲ್ಲಿವೆ.
ರಾಜ್ಯ ಸರ್ಕಾರದೊಂದಿಗೆ ಸಾರಿಗೆ ನೌಕರರು ಈಗಾಗಲೇ ಕೆಲವು ಬಾರಿ ಮಾತುಕತೆ ನಡೆಸಿದ್ದಾರೆ. ಆದರೆ ಸರ್ಕಾರ ಭರವಸೆ ನೀಡಿತೇ ವಿನಃ ಬೇಡಿಕೆ ಈಡೇರಿಕೆಗೆ ಮುಂದಾಗಿಲ್ಲ. 2024 ಜನವರಿ 1ರಿಂದ ಜಾರಿಗೆ ಬರಬೇಕಿದ್ದ ವೇತನ ಪರಿಷ್ಕರಣೆ ಜಾರಿಗೆ ಬಂದಿಲ್ಲ. ವೇತನ ಹೆಚ್ಚಳ ಹಿಂಬಾಕಿ ಇದುವರೆಗೂ ನೌಕರರ ಕೈ ಸೇರಿಲ್ಲ. ಹೀಗಾಗಿ ನಾಲ್ಕು ಸಾರಿಗೆ ನಿಗಮಗಳ ನೌಕರರು ಪ್ರತಿಭಟನೆಯ ಹಾದಿ ಹಿಡಿದಿದ್ದಾರೆ. ಈ ಬಗ್ಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಮಾಜಿ ಉಪಾಧ್ಯಕ್ಷ ಡಾ.ಎಂ.ಆರ್. ವೆಂಕಟೇಶ್ ಅವರು ಮುಖ್ಯಮಂತ್ರಿಗಳಿಗೆ ಬಹಿರಂಗ ಪತ್ರ ಬರೆದಿದ್ದಾರೆ.

ನಾಲ್ಕು ನಿಗಮದ ನೌಕರರಿಂದ ಸಾರಿಗೆ ಮುಷ್ಕರ
ಪತ್ರದಲ್ಲಿ ಬಿಎಂಟಿಸಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC), ವಾಯವ್ಯ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (NWKRTC) ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (KKRTC) ನಿಗಮಗಳು ಒಟ್ಟಾರೆ ಸಾರಿಗೆ ಸೇವೆ ನೀಡುತ್ತಿವೆ. ಸರ್ಕಾರದ ಶಕ್ತಿ ಯೋಜನೆ ಜಾರಿಗೆ ಸಾರಿಗೆ ಸಂಸ್ಥೆಗಳ ಪ್ರತಿಯೊಬ್ಬ ನೌಕರರು ಶ್ರಮಿಸಿದ್ದಾರೆ. ಆದ್ದರಿಂದ ವೇತನ ಪರಿಷ್ಕರಣೆ, ಹಿಂಬಾಕಿ ನೀಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಬೇಕೆಂದು ಅವರು ಒತ್ತಾಯಿಸಿದರು. ಇದೂವರೆಗೂ ಕೋರಿದ ಮನವಿಗಳಿಗೆ ಸ್ಪಂದಿಸದ ಕಾರಣ ಪ್ರತಿಭಟನೆ ಅನಿವಾರ್ಯವೆಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ. ಈ ಮೂಲಕ ಜನವರಿ 29ರ ಮುಷ್ಕರಕ್ಕೆ ನಾಲ್ಕು ಸಾರಿಗೆ ನಿಗಮಗಳು ಒಪ್ಪಿರುವುದು ಬಹುತೇಕ ಖಚಿತವಾಗಿದೆ.
ಸ್ಪಂದಿಸದ ಸರ್ಕಾರ, ಮುಷ್ಕರವೊಂದೇ ದಾರಿ!
2025ರ ಆಗಸ್ಟ್ ತಿಂಗಳಲ್ಲಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ಉಪವಾಸ ಸತ್ಯಾಗ್ರಹಕ್ಕೆ ಮುಂದಾಗಿದ್ದರು. ಆದರೆ ಸರ್ಕಾರ ನೀಡಿದ ಭರವಸೆ, ಕರ್ನಾಟಕ ಹೈಕೋರ್ಟ್ ನೀಡಿದ್ದ ಆದೇಶದ ಮೇರೆಗೆ ಅಂದಿನ ಮುಷ್ಕರ ಮುಂದೂಡಿಕೆ ಆಗಿತ್ತು. ಕಳೆದ ದೀಪಾವಳಿ ಹಬ್ಬ ಹೊತ್ತಿಗೆ ಮತ್ತೆ ಮುಷ್ಕರಕ್ಕೆ ನೌಕರರು ಸಜ್ಜಾಗಿದ್ದರು. ಅಂದು KSRTC ವ್ಯವಸ್ಥಾಪಕ ನಿರ್ದೇಶಕರು ಮೌಖಿಕ ಭರವಸೆ ನೀಡಿದ್ದರು. ಚರ್ಚೆಗೆ 15 ದಿನಗಳ ಕಾಲಾವಕಾಶ ಕೋರಿದ್ದರು. ಈ ಹಿನ್ನೆಲೆ 38 ತಿಂಗಳ ಹಿಂಬಾಕಿ ಸಿಗುವುದೆಂಬ ಆಶಾಭಾವನೆಯಿಂದ ಮುಷ್ಕರವನ್ನು ಮತ್ತೆ ಕೈ ಬಿಡಲಾಗಿತ್ತು. ಆದರೆ ಸರ್ಕಾರ ಭರವಸೆ ನೀಡಿತೇ ವಿನಃ ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ ಎಂಬ ಕಾರಣಕ್ಕೆ ಆಕ್ರೋಶಗೊಂಡಿರುವ ಸಾರಿಗೆ ನೌಕರರು ಇದೀಗ ಮತ್ತೆ ಮುಷ್ಕರಕ್ಕೆ ಕರೆ ಕೊಟ್ಟಿದ್ದಾರೆ.
ಸಾರಿಗೆ ನಿಗಮಗಳ ಇಂದಿನ ಆರ್ಥಿಕ ಸ್ಥಿತಿಗತಿ
ಮಹಿಳೆಯರಿಗೆ ಉಚಿತ ಪ್ರಯಾಣ ನೀಡಿರುವ ಸರ್ಕಾರದ 'ಶಕ್ತಿ ಯೋಜನೆ'ಗೆ ಖರ್ಚಾಗುವ ಸಾವಿರಾರು ಕೋಟಿ ರೂಪಾಯಿಯನ್ನು ಸರ್ಕಾರವೇ ಭರಿಸುತ್ತದೆ. ಈ ಯೋಜನೆಯ ಸಾಕಾರಕ್ಕೆ ಎಲ್ಲ ಸಾರಿಗೆ ನೌಕರರು ಶ್ರಮಿಸಿದ್ದಾರೆ. ನಾಲ್ಕು ನಿಗಮಗಳ ಒಟ್ಟು ಸಾಲದ ಹೊರೆ 7000 ಕೋಟಿ ರೂಪಾಯಿಗೂ ಹೆಚ್ಚಿದೆ. ಇದರಲ್ಲಿ ಭವಿಷ್ಯ ನಿಧಿ ಹಾಗೂ ನಿವೃತ್ತ ನೌಕರರ ಸವಲತ್ತುಗಳ ಬಾಕಿಯೂ ಇದೆ. ನಿಗಮಗಳಿಗೆ ಶಕ್ತಿ ತುಂಬಿದ ನೌಕರರಿಗೆ ಶಕ್ತಿಯೇ ಇಲ್ಲದಂತಾಗಿದೆ. ಸಾರಿಗೆ ಇಲಾಖೆ ಲಾಭದಲ್ಲಿದೆ ಎಂದು ಸಚಿವರು, ಸರ್ಕಾರ ಪ್ರಮುಖ ಹೇಳುತ್ತಾರೆ. ಲಾಭದಲ್ಲಿದ್ದರೆ ನೌಕರರಿಗೆ ಹಂತ ಹಂತವಾಗಿ ಬಾಕಿ ನೀಡಬಹುದಿತ್ತು. ನೀಡದಿರುವುದನ್ನು ನೋಡಿದರೆ ಸಾರಿಗೆ ಇಲಾಖೆ ಆರ್ಥಿಕ ಸ್ಥಿತಿಗತಿ ಹದಗೆಟ್ಟಿದೆ ಎಂಬುದು ಗೊತ್ತಾಗುತ್ತದೆ.
ಜನವರಿ 29ರಂದು ಬಸ್ ಸಂಚಾರ ಇರಲ್ಲ?
ಸದ್ಯದ ಮಾಹಿತಿ ಪ್ರಕಾರ, ಪ್ರತಿ ಬಾರಿ ಮುಷ್ಕರ ನಡೆಸಿದಾಗಲೂ ಆಯಾ ನಿಗಮದ ಬಸ್‌ಗಳ ಕಾರ್ಯಾಚರಣೆ ಸ್ಥಗಿತಗೊಂಡಿರುತ್ತವೆ. ಈ ಬಾರಿ ನಾಲ್ಕು ನಿಗಮದ ನೌಕರರು ಮುಷ್ಕರ ನಡೆಸುವುದು ಬಹುತೇಕ ಖಚಿತವಾಗಿದೆ. ಈ ಹಿನ್ನೆಲೆಯಲ್ಲಿ ಅಂದು ಬೆಂಗಳೂರಲ್ಲಿ ಬಿಎಂಟಿಎಸ್ ಬಸ್, ಇತರ ಆಯಾ ಭಾಗಗಳಲ್ಲಿ ಕೆಎಸ್‌ಆರ್‌ಟಿಸಿ, ಕೆಕೆಆರ್‌ಟಿಸಿ ಹಾಗೂ ಎನ್‌ಡಬ್ಲುಕೆಆರ್‌ಟಿಸಿ ಬಸ್‌ಗಳ ಸಂಚಾರ ಇರುವುದಿಲ್ಲ. ಸಾರಿಗೆ ಸೇವೆಯಲ್ಲಿ ಅಸ್ತವ್ಯಸ್ತವಾಗಲಿದೆ. ಇದರಿಂದ ಸಾರ್ವಜನಿಕರಿಗೆ ದೈನಂದಿನ ಪ್ರಯಾಣಿಕರಿಗೆ ಸಾಕಷ್ಟು ತೊಂದರೆ ಉಂಟಾಗಲಿದೆ. ನಮ್ಮ ಮೆಟ್ರೋ, ಖಾಸಗಿ ವಾಹನಗಳ ಮೇಲಿನ ಅವಲಂಬನೆ ಹೆಚ್ಚಾಗಲಿದೆ. ಟ್ಯಾಕ್ಸಿ, ಖಾಸಗಿ ವಾಹನಗಳ ದರದಲ್ಲಿ ಏರಿಕೆ ಆಗುವ ನಿರೀಕ್ಷೆ ಇದೆ.
ಜನರ ಅಭಿಪ್ರಾಯ ಏನಿದೆ?
ಸಾರಿಗೆ ನೌಕರರಿಗೂ ಮನೆ, ಮಕ್ಕಳು ಕುಟುಂಬ ಇದೆ. ತಿಂಗಳುಗಟ್ಟಲೇ ವೇತನ ಹೆಚ್ಚಳ ಬಾಕಿ ಉಳಿಸಿಕೊಂಡರೇ ಹೇಗೆ ಎಂದು ಕೆಲವರು ನೌಕರರ ಪರ ಮಾತನಾಡಿದ್ದಾರೆ. ಇನ್ನು ಕೆಲವರು ಸರ್ಕಾರ ಸುಸೂತ್ರವಾಗಿ ಆಡಳಿತ ನಡೆಸಬೇಕು. ಮುಷ್ಕರಕ್ಕೆ ಅವಕಾಶ ನೀಡಬಾರದು. ಅವರ ಸಮಸ್ಯೆಗಳನ್ನು ಪರಿಹರಿಸಬೇಕು. ಇಲ್ಲವಾದರೆ ರಾಜ್ಯದ ಜನರಿಗೆ ತೊಂದರೆ ಆಗುತ್ತದೆ. ನಿತ್ಯ ವ್ಯಾಪಾರ ವಹೀವಾಟಿನ ಮೇಲೆ ಮುಷ್ಕರ ಪರಿಣಾಮ ಬೀರುತ್ತದೆ. ಮಕ್ಕಳ ವಿದ್ಯಾಭ್ಯಾಸಕ್ಕೆ, ಜನರ ಸಂಚಾರಕ್ಕೆ, ಉದ್ಯೋಗಿಗಳಿಗೆ ತೊಂದರೆ ಆಗುತ್ತದೆ. ಸರ್ಕಾರ ಎಚ್ಚೆತ್ತು ಸೂಕ್ತ ನಿರ್ಧಾರ ಕೈಗೊಳ್ಳುವಂತೆ ಸಾರ್ವಜನಿರಕು ಒತ್ತಾಯಿಸಿದ್ದಾರೆ.
ಮುಷ್ಕರದ ಮುಖ್ಯಾಂಶಗಳು
1. ಮುಷ್ಕರ ಎಲ್ಲಿ, ಯಾವಾಗ?: 2026 ಜನವರಿ 29ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ 'ಬೆಂಗಳೂರು ಚಲೋ' ಮುಷ್ಕರ ನಡೆಯಲಿದೆ. ಬೆಳಗ್ಗೆ 10ರಿಂದ ಸಂಜೆ 4ರವರೆಗೆ ಪ್ರತಿಭಟನೆ, ಸಾರಿಗೆ ಸೇವೆಯಲ್ಲಿ ಭಾರೀ ವ್ಯತ್ಯಯ.
2. ಮುಷ್ಕರ ಘೋಷಣೆ: ಬಿಎಂಟಿಸಿ ಮಾಜಿ ಉಪಾಧ್ಯಕ್ಷ, ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳು ಕ್ರಿಯಾ ಸಮಿತಿ, ಇತರರ ಒಕ್ಕೂಟ.
3. ನೌಕರರ ಬೇಡಿಕೆ: 38 ತಿಂಗಳ ವೇತನ ಹೆಚ್ಚಳದ ಹಿಂಬಾಕಿ ನೀಡುವುದು, ವೇತನ ಪರಿಷ್ಕರಣೆ ಮತ್ತಿತರ ಬೇಡಿಕೆಗಳ ಈಡೇರಿಕೆಗೆ ಆಗ್ರಹ.
4. ಮುಷ್ಕರಕ್ಕೆ ಬೆಂಬಲ: ಸಾರಿಗೆ ನೌಕರರ ಮುಷ್ಕರಕ್ಕೆ BMTC, KSRTC, KKRTC ಮತ್ತು NWKRTC ನೌಕರರಿಂದ ಬೆಂಬಲ.
5. ಸರ್ಕಾರದ ಸ್ಪಂದನೆ: ವರ್ಷಗಳಿಂದಲೂ ಹಿಂಬಾಕಿ, ವೇತನ ಪರಿಷ್ಕರಣೆ, ಸಮಾನ ವೇತನದಂತಹ ಬೇಡಿಕೆಗೆ ಮನವಿ ಸಲ್ಲಿಕೆ. ಉಪವಾಸ ಸತ್ಯಾಗ್ರಹ, ಮುಷ್ಕರ ಬಳಿಕವು ಸ್ಪಂದಿಸದ ಸರ್ಕಾರ. ಮತ್ತೆ ನಪ್ರತಿಭಟನೆ ಹಾದಿ ತುಳಿದ ನೌಕರರು.
-
IPL 2026: RCB ಫ್ಯಾನ್ಸ್ಗಾಗಿ ಬಿಎಂಟಿಸಿ ಬಸ್‌ಗಳ ಕಾರ್ಯಾಚರಣೆ, ಎಲ್ಲಿಂದ ಎಲ್ಲಿಗೆ? ಮಾರ್ಗ ಡಿಟೇಲ್ಸ್ -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ












Click it and Unblock the Notifications