Kantara: ಕರ್ನಾಟಕ ಸಾರಿಗೆ ಇಲಾಖೆಯಿಂದ ಮಾಲಿನ್ಯ ಬಗ್ಗೆ ವಿನೂತನ ಜಾಗೃತಿ: ಶಿವ-ಲೀಲಾ ಸಾಂಗ್ Video Viral
ಬೆಂಗಳೂರು, ಸೆಪ್ಟಂಬರ್ 04: ಕರ್ನಾಟಕ ಸೇರಿದಂತೆ ದೇಶದಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗುವುದರ ಜೊತೆಗೆ ವಾಯು ಮಾಲಿನ್ಯ ಕೂಡ ದಿನೇ ದಿನೆ ಹೆಚ್ಚಾಗುತ್ತದೆ. ವಾಹನಗಳು ಹೊರಸೂಸುವ ಹೊಗೆಯಿಂದ ಪರಿಸರದ ಜೊತೆಗೆ ಮನುಷ್ಯರ ಆರೋಗ್ಯ ಸಹ ಹದಗೆಡುತ್ತದೆ. ಇಂತಹ ವಾಯು ಮಾಲಿನ್ಯ ಬಗ್ಗೆ ಸರ್ಕಾರಗಳು ಜಾಗೃತಿ ಮೂಡಿಸುತ್ತಲೇ ಇವೆ. ಇದೀಗ ಕರ್ನಾಟಕ ರಾಜ್ಯ ಸಾರಿಗೆ ಇಲಾಖೆಯು ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರ 'ಕಾಂತಾರ' (Kantara) ಸಿನಿಮಾದ ಹಾಡನ್ನು ಬಳಸಿ ವಿನೂತನ ಜಾಗೃತಿ ಮೂಡಿಸಿದೆ. ಈ ವಿಡಿಯೋ ವೈರಲ್ ಆಗಿದೆ.
ಹೌದು, ಬೆಂಗಳೂರಿನಂತಹ ಅಪಾರ ವಾಹನಗಳು ಇರುವ ಮಹಾನಗರದಲ್ಲಿ ಹೊಗೆಯಿಂದ ನಿತ್ಯ ಜನ ಅನಾರೋಗ್ಯಕ್ಕೆ ತುತ್ತಾಗುವ ವಾತಾವರಣ ಇದೆ. ವಾಹನಗಳ ಇಂಜಿನ್ ಫಿಟ್ ಆಗಿ ಇಟ್ಟುಕೊಳ್ಳಿ, ಸಕಾಲಕ್ಕೆ ಆಗಾಗ ಎಮಿಷನ್ ಪರೀಕ್ಷೆ ಮಾಡಿಸುವ ನಿಯಮ ಇದ್ದರು ಜನ ಪಾಲಿಸುತ್ತಿಲ್ಲ. ಪರಿಸರದ ಬಗ್ಗೆ ಖ್ಯಾರೆ ಎನ್ನುತ್ತಿಲ್ಲ. ಹೀಗಿದ್ದಾಗ ಜನರು ಇಷ್ಟು ಪಡುವ ಹಾಡು, ಸಿನಿಮಾಗಳಿಂದ ಮೂಲಕವೇ ಹೊಸ ರೀತಿಯಲ್ಲಿ ಜನರಿಗೆ ಜಾಗೃತಿ ಮೂಡಿಸುವ ವಿಡಿಯೋವೊಂದನ್ನು ಸಾರಿಗೆ ಇಲಾಖೆ ಹಂಚಿಕೊಂಡಿದ್ದು, ವೈರಲ್ ಆಗುತ್ತಿದೆ.

ಕಾಂತಾರ ಸಿನಿಮಾದಲ್ಲಿ 'ಸಿಂಗಾರ ಸಿರಿಯೇ' ಎಂದು ಆರಂಭವಾಗುವ ಹಿಟ್ ಹಾಡು ಇತ್ತು. ಶಿವ ಮತ್ತು ಲೀಲಾಳ ರೋಮ್ಯಾಂಟಿಕ್ ಹಾಡು ಇದಾಗಿದ್ದು, ಇದನ್ನೆ ಬಳಸಿಕೊಂಡು ಸುಂದರ ವಿಡಿಯೋ ಮಾಡಿದ ಸಾರಿಗೆ ಇಲಾಖೆ ಸಾರ್ವಜನಿಕರ ಪರಿಸರ ಜಾಗೃತಿ ಸಂದೇಶ ರವಾನಿಸಿದೆ. ಇನ್ನು ಮುಂದಾದರು ವಾಹನ ಸವಾರರು ಎಚ್ಚರಿಕೆ ವಹಿಸಬೇಕು, ಪರಿಸರ ಕಾಳಜಿ ಮರೆಯಬೇಕೆಂಬುದು ಇಲಾಖೆಯ ಕಳಕಳಿಯಾಗಿದೆ.
ಈ ಜಾಗೃತಿ ಹಾಡಿನ ವಿಡಿಯೋದಲ್ಲೇನಿದೆ?
ವಿಡಿಯೋದಲ್ಲಿ ''ಶಿವ.... ನಿಮ್ಮ ವಾಹನದ ಹೊಗೆ ವಿಷಪೂರಿತವಾಗಿದೆ. ಹೀಗಿರುವಾಗ ನಿಮ್ಮ ಹೃದಯವನ್ನು ಲೀಲೆಗೆ ಅರ್ಪಿಸುವುದರಲ್ಲಿ ಅರ್ಥವೇನು?. ನಿಮ್ಮ ಬೈಕ್ ಅನ್ನು ಪರಿಸರ ಸ್ನೇಹಿಯಾಗಿ ಬದಲಾಯಿಸಿಕೊಳ್ಳಿ..ಶಿವ'' ಎಂದು ವಿಡಿಯೋದಲ್ಲಿ ಸಿಂಗಾರ ಸಿರಿಯೇ ಹಾಡಿನ ಮೂಲಕ ತಿಳಿಸಲಾಗಿದೆ. ''ನಿಮ್ಮ ವಾಹನವನ್ನು ಫಿಟ್ ಆಗಿರಿಸಿಕೊಳ್ಳಿ, ತನ್ಮೂಲಕ ಸ್ವಚ್ಛವಾದ ಸವಾರಿಗಳನ್ನಾಗಿ ಮಾಡಿ, ಪ್ರತಿಯೊಂದು ಹಾನಿಯನ್ನು ರಕ್ಷಿಸಿ'' ಎಂದು ಸಾರಿಗೆ ಇಲಾಖೆ ತಿಳಿಸಿದೆ.
ಅಂದರೆ ಹಾಡಿನಲ್ಲಿ ನಾಯಕ ಶಿವ RX 100 ಬೈಕ್ ಓಡಿಸುವಾಗ ನಾಯಕಿ ಲೀಲಾಳನ್ನು ಕೂರಿಕೊಂಡು ಹೋಗುವುದನ್ನು ತೋರಿಸಲಾಗಿದೆ. ಈ ವೇಳೆ ಬೈಕ್ ಭಾರೀ ಪ್ರಮಾಣದಲ್ಲಿ ಹೊಗೆ ಸೂಸುವುದನ್ನು ತೋರಿಸುತ್ತದೆ. ಅಲ್ಲದೇ ಪರಿಸರ, ದೈವ, ತಮ್ಮತನಕ್ಕಾಗಿ ಹೋರಾಡುವ ನಾಯಕ ಇದನ್ನು ಮರೆತರೆ ಹೇಗೆ ಎಂಬರ್ಥದಲ್ಲಿ ಸಾರಿಗೆ ಇಲಾಖೆ ತಿಳಿಸಿದೆ. ಈ ಮೂಲಕವರಾದರೂ ಜನರಿಗೆ ವಾಯುಮಾಲಿನ್ಯದ ಸ್ಪಷ್ಟ ಅರಿವು ಸಿಕ್ಕು, ವಾಹನಗಳನ್ನು ಪರಿಸರ ಸ್ನೇಹಿ ಆಗಿಸುತ್ತಾರೆ ಎಂಬ ಆಶಯ ಸಾರಿಗೆ ಇಲಾಖೆ ಹೊಂದಿದೆ.
#CleanAir #GoGreen #EcoFriendly #PollutionFree #SustainableLiving #PUCCheck #SaveEnvironment #DriveResponsibly #GreenFuture #EarthResponsibility #ClimateAction #AirQuality@CMofKarnataka @RLR_BTM @MORTHIndia pic.twitter.com/IJaS4gs5D8
— ಸಾರಿಗೆ ಇಲಾಖೆ ,Transport Department Karnataka (@tdkarnataka) September 4, 2025
ಬೈಕ್ ಮಾತ್ರವಲ್ಲದೇ, ಕಾರು ಇತರ ವಾಹನಗಳು, ಧೂಮಪಾನ, ಕಾರ್ಖಾನೆಗಳಿಂದಲೂ ವಾಯುಮಾಲಿನ್ಯ ಉಂಟಾಗುತ್ತದೆ. ಇದನ್ನು ಕಡಿಮೆ ಮಾಡುವ ಜೊತೆಗೆ ಪರಿಸರ ಕಾಳಜಿ ವಹಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ.












Click it and Unblock the Notifications